ಇಂದು ವಿಶ್ವ ಸಾಗರ ದಿನಾಚರಣೆ : ಕಡಲು ಮಾಲಿನ್ಯರಹಿತವಾಗಿರಲಿ


Team Udayavani, Jun 8, 2018, 2:10 AM IST

ocean-day-7-6.jpg

ಸಮುದ್ರ ಮಾಲಿನ್ಯ ತಡೆಗಟ್ಟಲು ಮತ್ತು ಆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂ. 8ರಂದು ವಿಶ್ವ ಸಾಗರ ದಿನ ಆಚರಿಸಲಾಗುತ್ತದೆ. ಮಂಗಳೂರು ವ್ಯಾಪ್ತಿಯ ಕಡಲ ಕಿನಾರೆ ಮತ್ತು ಕಡಲಿನಲ್ಲಿ ಮಾಲಿನ್ಯ ನಿಯಂತ್ರಿಸುವ ಕುರಿತು ಸಾರ್ವಜನಿಕರು, ಪ್ರವಾಸಿಗರು, ಸ್ಥಳೀಯರು ಎಚ್ಚೆತ್ತೆಕೊಳ್ಳಲಿ ಎಂಬುದು ಈ  ಸುದಿನ ಸಾಂದರ್ಭಿಕ ವರದಿಯ ಉದ್ದೇಶ.

ಮಹಾನಗರ: ಇಂದು (ಜೂ. 8) ವಿಶ್ವ ಸಾಗರ ದಿನ. ಸಮುದ್ರ ಮಾಲಿನ್ಯ ತಡೆಗಟ್ಟುವ ನೆಲೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ದೇಶದೆಲ್ಲೆಡೆ ಸ್ವಚ್ಛ ಸುಂದರ ಭಾರತ ನಿರ್ಮಾಣದ ಗುರಿ ಹೊಂದಿರುವಾಗಲೇ, ನಮ್ಮ ನೆರೆಯ ಸಮುದ್ರವನ್ನು ಕೂಡ ಸ್ವಚ್ಛ ಹಾಗೂ ಮಾಲಿನ್ಯ ರಹಿತವಾಗಿ ರೂಪಿಸುವ ಮಹಾನ್‌ ಸಂಕಲ್ಪ ನಮ್ಮದಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಉಡುಪಿ ಜಿಲ್ಲೆಯ ಶಿರೂರು ತನಕ ಹೆಚ್ಚಾ ಕಡಿಮೆ 168 ಕಿ.ಮೀ. ಉದ್ದದ ಕರಾವಳಿ ತೀರವಿದೆ. ಈ ಪೈಕಿ, ಉಳ್ಳಾಲ, ಸೋಮೇಶ್ವರ, ಪಣಂಬೂರು, ಸಸಿಹಿತ್ಲು, ಕಾಪು, ಮಲ್ಪೆ, ಮರವಂತೆ ಸೇರಿದಂತೆ ಹಲವು ಭಾಗಗಳು ಪ್ರವಾಸೋದ್ಯಮದ ಮೂಲಕವೇ ಪ್ರಸಿದ್ಧಿ ಪಡೆದಿವೆ. ಕಡಲಿನ ಸೌಂದರ್ಯವೇ ಇಲ್ಲಿ ಪ್ರವಾಸಿಗರ ಸ್ವರ್ಗವಾಗಿದೆ.

ಸ್ವಚ್ಛ ಕಡಲು ಆದ್ಯತೆಯಾಗಲಿ
ಸ್ವಚ್ಛ ಕಡಲು ನಮ್ಮ ಆದ್ಯತೆಯಾಗಬೇಕು. ಕಡಲಿನ ದಡವೂ ಸ್ವಚ್ಛವಾಗಬೇಕು. ಕಡಲಿನಲ್ಲಿ ಸಂಚರಿಸುವ ಮೀನುಗಾರಿಕಾ ದೋಣಿಗಳು ಸಮುದ್ರ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಬೇಕಿದೆ. ಈಗ ಮೀನುಗಾರಿಕಾ ದೋಣಿಗಳು ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ ಇನ್ನಷ್ಟು ಪರಿಪೂರ್ಣ ಜಾಗೃತಿ ಮೂಡಬೇಕಿದೆ. ಬೋಟುಗಳು ಮಾಲಿನ್ಯ ರಹಿತವಾಗಿ ಮೀನುಗಾರಿಕೆಗೆ ನಡೆಸಿದರೆ ದೊಡ್ಡ ಆತಂಕವನ್ನು ನಿವಾರಿಸಿದಂತಾಗುತ್ತದೆ. ಇನ್ನು ನವಮಂಗಳೂರು ಬಂದರಿಗೆ ಆಗಮಿಸುವ ಬೃಹತ್‌ ಗಾತ್ರದ ಹಡಗುಗಳು ಕೂಡ ಇದೇ ಮಾದರಿಯನ್ನು ಅನುಸರಿಸಬೇಕು. 

ಅಪಾಯಕ್ಕೆ ಸಿಲುಕಿದ ಹಗಡುಗಳ ತೆರವು ಶೀಘ್ರವಾಗಲಿ
ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿ ನೀರಿನಲ್ಲಿ ಮುಳುಗುವ ದೋಣಿ, ಹಡಗು ತೆರವು ಮಾಡುವ ಕಾರ್ಯ ಕೂಡ ಆದಷ್ಟು ಬೇಗನೇ ಆಗಬೇಕು. ಯಾಕೆಂದರೆ, ಇತ್ತೀಚೆಗೆ ಕರಾವಳಿ ವ್ಯಾಪ್ತಿಯಲ್ಲಿ ನಡೆದ ಕೆಲವು ಹಡಗು ದುರಂತ ಘಟನೆಯಲ್ಲಿ ಮೊದಲಿಗೆ ಅದರಲ್ಲಿನ ತೈಲ ಸೋರಿಕೆಯಾಗಿ ನೀರಿಗೆ ಸೇರ್ಪಡೆಗೊಂಡ ಘಟನೆ ನಡೆದಿತ್ತು. ಇದೇ ನೀರು ಮೀನಿಗೆ ದೊರೆತು ಮತ್ತೆ ಅದು ಮನುಷ್ಯ ದೇಹ ಸೇರುವ ಅಪಾಯವೂ ಇದೆ. ಹೀಗಾಗಿ ಕಡಲಿನಲ್ಲಿ ಸ್ವಚ್ಛತೆ ಹಾಗೂ ಸಂರಕ್ಷಣೆ ಕುರಿತಾಗಿ ವಿಶೇಷ ಒತ್ತು ನೀಡಬೇಕಾದ ಆವಶ್ಯಕತೆ ಇದೆ.

ಸಮುದ್ರ ತೀರವೂ ಸ್ವಚ್ಛವಾಗಿರಲಿ
ಕರಾವಳಿಯ ಸಮುದ್ರ ತೀರಗಳು ಪ್ರವಾಸೋದ್ಯಮದ ಮುಖ್ಯ ತಾಣಗಳು. ಇಲ್ಲಿಗೆ ದೂರದೂರಿನಿಂದ ಜನರು ಆಗಮಿಸುತ್ತಾರೆ. ತಾಸುಗಟ್ಟಲೆ ಸಮುದ್ರ ತೀರದಲ್ಲಿ ಕಾಲ ಕಳೆಯುವ ಜನರು ತಿಂಡಿ – ತಿನಿಸು ತಿಂದು ಸಮುದ್ರ ದಡದಲ್ಲಿ ಹಾಕಿ ಹೋಗುವವರೂ ಇದ್ದಾರೆ. ಕೆಲವರಂತೂ ಇನ್ನೂ ಸ್ವಲ್ಪ ಮುಂದೆ ಹೋಗಿ ಸಮುದ್ರದ ನೀರಿಗೆ ಹಾಕುತ್ತಾರೆ. ಇಂತಹ ಚಟುವಟಿಕೆಗಳಿಗೆ ಮೊದಲು ಕಡಿವಾಣ ಬೀಳಬೇಕಿದೆ. ಬೀಚ್‌ ಗಳನ್ನು ಸ್ವಚ್ಛವಾಗಿಡುವ ಮೂಲಕ ಸಾಗರವನ್ನು ನಾವೇ ಸ್ವಚ್ಛವಾಗೊಡೋಣ.

‘ಪ್ಲಾಸ್ಟಿಕ್‌ ತ್ಯಾಜ್ಯ ತಡೆ, ಸುರಕ್ಷಿತ ಸಾಗರಕ್ಕೆ ಪ್ರೇರಣೆ’
‘ಪ್ಲಾಸ್ಟಿಕ್‌ ತ್ಯಾಜ್ಯ ತಡೆ ಹಾಗೂ ಸುರಕ್ಷಿತ ಸಾಗರಕ್ಕೆ ಪ್ರೇರಣೆ’ ಎನ್ನುವ ಘೋಷ ವಾಕ್ಯದೊಂದಿಗೆ ಈ ಬಾರಿ ಸಾಗರವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸಿ ಸುಸ್ಥಿರ ಸಾಗರ ಸಂರಕ್ಷಣೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

2008ರಿಂದ ವಿಶ್ವ ಸಾಗರ ದಿನಾಚರಣೆ
ವಿಶ್ವ ಸಾಗರ ದಿನವನ್ನು ಮೊದಲಿಗೆ 1992ರಲ್ಲಿ ಅನ್‌ ಅಫೀಶಿಯಲ್‌ ಆಗಿ ಹಲವು ದೇಶಗಳಲ್ಲಿ ಎನ್‌.ಜಿ.ಒ. ಹಾಗೂ ಸಂಘ ಸಂಸ್ಥೆಗಳ ಮುಖಾಂತರ ಆಚರಿಸಲಾಯಿತು. ಅನಂತರ ವಿಶ್ವದಾದ್ಯಂತ ಸುಮಾರು 2,000 ಸಂಸ್ಥೆಗಳು ವಿಶ್ವ ಸಾಗರ ದಿನವನ್ನು ಪ್ರಚಾರ ಪಡಿಸುವ ಮೂಲಕ ವಿಶ್ವ ಸಂಸ್ಥೆಯ ಮನ್ನಣೆ ಪಡೆಯುವುದಕ್ಕೋಸ್ಕರ ಮೂರು ವರ್ಷಗಳ ಕಾಲ ಬೇಡಿಕೆ ಚಳುವಳಿಯ ರೀತಿಯಲ್ಲಿ ಈ ದಿನವನ್ನು ಆಚರಿಸಿದರು. ಇದರ ಫ‌ಲವಾಗಿ ವಿಶ್ವ ಸಂಸ್ಥೆ 2008ರಂದು ಇದಕ್ಕೆ ಅಂಗೀಕಾರವನ್ನಿಟ್ಟು ಜೂ. 8ರಂದು ವಿಶ್ವ ಸಾಗರ ದಿನವನ್ನಾಗಿ ಎಲ್ಲ ದೇಶಗಳಲ್ಲಿ ಆಚರಿಸುವ ಮೂಲಕ ಸಾಗರ ಸಂರಕ್ಷಣೆ ಕಾರ್ಯವನ್ನು ಮಾಡಲಾಗುತ್ತಿದೆ.

— ದಿನೇಶ್‌ ಇರಾ

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

sand 1

Padubidri: ಮರಳು ಅಕ್ರಮ ಸಾಗಾಟ; ವಶ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.