ಯೋಗ್ಯತಾವಂತ, ಕಲೆಯ ಸಮಗ್ರ ಪ್ರಾವೀಣ್ಯದ ಪ್ರತಿನಿಧಿ


Team Udayavani, Feb 17, 2023, 7:07 AM IST

ಯೋಗ್ಯತಾವಂತ, ಕಲೆಯ ಸಮಗ್ರ ಪ್ರಾವೀಣ್ಯದ ಪ್ರತಿನಿಧಿ

ಬಲಿಪರು ಕೇವಲ ಯಕ್ಷಗಾನವಷ್ಟೇ ಅಲ್ಲ. ಭಾರತದ ಇಡೀ ರಂಗಭೂಮಿಯ ಸಾರ್ವಕಾಲಿಕ ಶ್ರೇಷ್ಠರಲ್ಲಿ ಅವರೂ ಒಬ್ಬರು.

ಕಾಸರಗೋಡಿನ ಪಡ್ರೆಯಲ್ಲಿ ಜನಿಸಿ ಅಜ್ಜ, ತಂದೆಯಿಂದ ಭಾಗವತಿಕೆ ಕಲಿತರು. ತಂದೆ ಕೂಡ ಒಳ್ಳೆಯ ವೇಷಧಾರಿ, ಭಾಗವತರೂ ಹೌದು. ಅಜ್ಜ ನಾರಾಯಣ ಬಲಿಪರು ಅಥವಾ ದೊಡ್ಡ ಬಲಿಪರು ದಂತಕಥೆ. ಅದನ್ನೇ ಇವರೂ ಉಳಿಸಿಕೊಂಡು ಬಂದರು. ನಾಲ್ಕಾಣೆ ಸಂಬಳದ ಸಂಗೀತ ಭಾಗವತನಿಂದ ತೊಡಗಿಸಿಕೊಂಡ ಅವರು ಅಖೀಲ ರಾಷ್ಟ್ರೀಯ ಮಟ್ಟದ ಪಾರಂಪರಿಕ ರಂಗಭೂಮಿ ಶ್ರೇಷ್ಠರಲ್ಲಿ ಒಬ್ಬರಾದರು.

ಯಕ್ಷಗಾನದ 80-90ರಷ್ಟು ಪ್ರಸಂಗ ಅವರಿಗೆ ಬಾಯಿಪಾಠವಿತ್ತು. ಯಕ್ಷಗಾನದ 50 ರಾಗಗಳಲ್ಲಿ ಹಿಡಿತ ಇತ್ತು. ಸಭಾಲಕ್ಷಣದಿಂದ ತೊಡಗಿ ವೀಳ್ಯ ತೆಗೆದುಕೊಳ್ಳುವವರೆಗೆ ರಂಗದ ಒಳಗೆ ಹೊರಗೆ, ಕಲಿಸುವಿಕೆ, ರಂಗಸ್ಥಳ ನಿರ್ವ ಹಣೆಯಲ್ಲಿ ಅವರು ಮಾಸ್ಟರ್‌. ಭಾಗವತ ಕೇವಲ ಹಾಡುಗಾರನಲ್ಲ. ರಾಗ, ತಾಳ, ಖಚಿತತೆ, ನಿಯಂತ್ರಣ, ಲಯ, ರಂಗಸ್ಥಳ ನಿರ್ವಹಣೆ ಎಲ್ಲವನ್ನೂ ಅರಿತಿದ್ದವರು. ಪೂರ್ವರಂಗ, ಪ್ರಸಂಗ, ಮೇಳದ ನಿಯ ಮಾವಳಿಗಳ ಸಮಗ್ರ ಜ್ಞಾನ ಅವರಿಗಿತ್ತು. ಭಾಗವತರ ಸ್ಥಾನಕ್ಕೆ ಬೇಕಾದ ಎಲ್ಲ ಅರ್ಹತೆ ಅವರಲ್ಲಿತ್ತು. ಅವರ ಏರುಸ್ವರ ಮರೆಯಲಾಗದ್ದು, ಅವರ ಯಕ್ಷಗಾನದ ಪದ್ಯ ಕೇಳುವಾಗ ಸಿಗುವ ಸಂಸ್ಕಾರವೇ ಬೇರೆ. ಎಲ್ಲ ಅರ್ಥದಲ್ಲಿ ಅವರು ಯಕ್ಷಗಾನದ ಧ್ವನಿಯಾಗಿದ್ದರು.

ಇಷ್ಟೆಲ್ಲ ಪಾಂಡಿತ್ಯವಿದ್ದರೂ ಅವರ ವ್ಯಕ್ತಿತ್ವ ಸರಳ. ಅವರ ಅಗಲುವಿಕೆ ಕಲಾನಿಧಿ ಯೊಂದು ಕಳೆದುಹೋದ ಹಾಗೆ.

ಕಲಾವಿದ ಇದ್ದರೆ ಹೀಗಿರಬೇಕು, ಸಾಧನೆ ಮಾಡಿದರೆ ಇಂತಿರಬೇಕು, ಅವರಿಗೆ ಬಂದ ಮನ್ನಣೆಯೆಲ್ಲವೂ ಕಡಿಮೆ, ಅವರ ವ್ಯಕ್ತಿತ್ವ ಆದಕ್ಕಿಂತ ದೊಡ್ಡದು. ಬಹಳ ಸರಳ, ಮುಗ್ಧ, ಬದುಕಲ್ಲಿ ಬಹಳ ಕಷ್ಟ ಉಂಡವರು. ಮೂಲತಃ ಕರಾಡ ಮರಾಠಿ ಮನೆ ಮಾತಿನವರು.

ಅವರಿಗೆ ಉತ್ತಮ ಎಂಬ ಪದ ಬಳಕೆ ಮಾಡಬಾರದು. ಸಜ್ಜನಿಕೆ, ಕಲಾವಂತಿಕೆ, ಪಾಂಡಿತ್ಯ, ಪ್ರಾವೀಣ್ಯ, ಎಲ್ಲದರಲ್ಲೂ ಅಸಾಧಾರಣ ಪ್ರತಿಭೆ. ಸರ್ವಾಂಗಶ್ರೇಷ್ಠರು. ಅಂತಹವರು ಎಷ್ಟು ಕಾಲ ಇದ್ದರೂ ಬೇಕು. ನಮಗಾಗಿರುವ ದುಃಖವನ್ನು ಹೇಳಲು ಶಬ್ದಗಳಿಲ್ಲ, ಅಂಥದ್ದು ಇನ್ನೊಂದಿಲ್ಲ. ಅದೊಂದು ರತ್ನ, ವಜ್ರ, ಚಿನ್ನ.

ಅವರ ಭಾಗವತಿಕೆಯ ಶುದ್ಧ ಶೈಲಿ, ಸಂಚಾರ, ಅಳತೆ ಶ್ರೀಮಂತ. ತೆಂಕುತಿಟ್ಟಿನ ಪ್ರಾತಿನಿಧಿಕ ಭಾಗವತಿಕೆ ಅವರದ್ದು. ಸಾಹಿತ್ಯವೂ ಶುದ್ಧ ಅವರಿದ್ದರೆ ರಂಗಸ್ಥಳಕ್ಕೆ ಉಠಾವು. ಅವರ ಹಾಡು ಆಲಿಸುವುದು ಸಲೀಸು. ದೇಶದ ಹಳೆಯ ತರಹದ ಸಂಗೀತವನ್ನು ಉಳಿಸಿದ ಪುಣ್ಯಾತ್ಮರು.

ಪಾರ್ತಿಸುಬ್ಬನ ಪದ್ಯಗಳನ್ನು ಮೂಲ ಸ್ವರೂಪದಲ್ಲೇ ಬಾಯ್ದೆರೆ ಮಾಡಿದ್ದರು, ಹಾಡುತ್ತಿದ್ದರು. ಪಂಚವಟಿ, ಚೂಡಾಮಣಿ, ನಳದಮಯಂತಿ, ದೇವಿಮಹಾತೆ¾, ಗದಾ ಯುದ್ಧ, ಮುಂತಾದ ಪ್ರಸಂಗಗಳ ಅವರ ಹಾಡುಗಳೆಲ್ಲವೂ ಶ್ರೇಷ್ಠ. ಅವರೂ 25-30 ಪೌರಾಣಿಕ ಪ್ರಸಂಗಗಳನ್ನು ಬರೆದಿದ್ದಾರೆ. ಪೌರಾಣಿಕವನ್ನೇ ಬರೆದಿದ್ದಾರೆ. ಅವರ ಬರಹಗಳು ಜಯಲಕ್ಷ್ಮಿ ಹೆಸರಿನಲ್ಲಿ ಸಮಗ್ರ ಬಲಿಪ ಸಂಪುಟವಾಗಿ ಬಂದಿದೆ. ಡಾ| ನಾಗವೇಣಿ ಮಂಚಿಯವರು ಬಲಿಪ ಗಾನಯಾನ ಎಂಬ ಕೃತಿ ಬರೆದಿದ್ದಾರೆ.

ನನಗೆ ಅವರೊಂದಿಗೆ 40 ವರ್ಷಗಳ ಒಡನಾಟ. ದೊಡ್ಡ ಸ್ಮೃತಿ ಅದು. ಬಲಿಪರ 75ನೇ ವರ್ಷಕ್ಕೆ ಡಾ| ಮೋಹನ ಅಳ್ವರು, ಶ್ರೀಪತಿ ಭಟ್ಟರು ಮತ್ತಿತರರು ಸೇರಿಕೊಂಡು ಬಲಿಪ ಅಮೃತ ಭವನ ಎಂದು ನಿರ್ಮಿಸಿದೆವು,

ಬಲಿಪರ ವ್ಯಕ್ತಿತ್ವ ರಂಗಸ್ಥಳದಲ್ಲಿ ಪುನಃ ಮೂಡಿಬರಲಿ. ಅವರ ಛಾಪು ಈಗ ಹೆಚ್ಚು ಬೇಕು, ಯಕ್ಷರಂಗ ಬೇರೆ ಬೇರೆ ಕಡೆ ಸಾಗುವ ಕಾಲದಲ್ಲಿ ನಿಯಂತ್ರಕ ರೇಖೆಯಾಗಿ ಲಗಾಮು, ಕಡಿವಾಣವಾಗಿ, ಮುಂದೆ ರಂಗಸ್ಥಳದ ಒಂದು ಕಂಬವಾಗಿ ಪೀಠವಾಗಿ, ಬೆಳಕಾಗಿ, ಸ್ವರವಾಗಿ, ಯೋಗ್ಯತಾವಂತ ಕಲೆಯ ಸಮಗ್ರ ಪ್ರಾವೀಣ್ಯದ ಪ್ರತಿನಿಧಿಯಾಗಿ ಬಲಿಪರು ಯಾವಾಗಲೂ ನಮ್ಮ ಮನಸ್ಸಿನಲ್ಲಿರುತ್ತಾರೆ. ಆ ಬಲಿಪ ಚೈತನ್ಯವು ತೆಂಕುತಿಟ್ಟನ್ನು, ಯಕ್ಷಗಾನವನ್ನು ಕಾಪಾಡುತ್ತದೆ, ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

sand 1

Padubidri: ಮರಳು ಅಕ್ರಮ ಸಾಗಾಟ; ವಶ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.