“ಹಸಿರೇ ಉಸಿರು’ ಯಕ್ಷಗಾನ ಪ್ರದರ್ಶನ
Team Udayavani, Jul 14, 2019, 5:23 AM IST
ಮಹಾನಗರ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಅರಣ್ಯ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನ್ ಹಾಲ್‌ನಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚರಣೆ 2019 ಮತ್ತು ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಹಸಿರೇ ಉಸಿರು’ ಯಕ್ಷಗಾನ ಪ್ರದರ್ಶನಗೊಂಡಿತು.
ಪರಿಸರ ನಾಶದಿಂದ ಆಗುವ ಅನಾಹುತ, ಪರಿಸರ ಮಾಲಿನ್ಯಕ್ಕೆ ಕಾರಣಗಳೇನು? ನಮ್ಮ ಸುತ್ತಮುತ್ತಲಿನ ಪರಿಸರವನ್ನು ಹೇಗೆ ಉಳಿಸಿ ಬೆಳೆಸಬಹುದು ಎಂಬ ಸಂದೇಶವನ್ನು “ಹಸಿರೇ ಉಸಿರು’ ಯಕ್ಷಗಾನದ ಮೂಲಕ ಸಾದರಪಡಿಸಲಾಯಿತು.
ಕದ್ರಿ ನವನೀತ ಶೆಟ್ಟಿ ಅವರ ಪರಿಕಲ್ಪನೆಯಡಿ ಡಾ| ದಿನಕರ ಎಸ್. ಪಚ್ಚನಾಡಿ ಅವರು ಪ್ರಸಂಗ ರಚಿಸಿದ್ದಾರೆ. ಭಾಗವತಿಕೆಯಲ್ಲಿ ಭವ್ಯಶ್ರೀ ಕುಲ್ಕುಂದ, ಮದ್ದಲೆಯಲ್ಲಿ ಕುಸುಮಾಕರ ಮುಡಿಪು, ಚೆಂಡೆಯಲ್ಲಿ ರೋಹಿತ್ ಉಚ್ಚಿಲ, ಚಕ್ರತಾಳದಲ್ಲಿ ನಿತೀಶ್ ಶೆಟ್ಟಿ ಬೋಳೂರು ಸಹಕರಿಸಿದರು.
ವೃಕ್ಷಕನಾಗಿ ಡಾ| ದಿನಕರ ಎಸ್. ಪಚ್ಚನಾಡಿ ಹಾಗೂ ಲತಾಂಗಿಯಾಗಿ ಅರುಣ್ ಕೋಟ್ಯಾನ್ ಅವರು ಪ್ರಧಾನ ಪಾತ್ರ ನಿರ್ವಹಿಸಿದರು. ಶರತ್ ಪಣಂಬೂರು, ಗುರುರಾಜ್ ಕಾಳಿಕಾಂಬಾ, ಪೂರ್ಣೇಶ್ ಆಚಾರ್ಯ, ಅರುಣ್ ಕೋಟ್ಯಾನ್, ಶೈಲೇಶ್ ಬೈಕಂಪಾಡಿ, ಸಾತ್ವಿಕ್ ಕುಮಾರ್, ಕಿರಣ್ ಕುಮಾರ್ ಇತರ ಪಾತ್ರ ನಿರ್ವಹಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರಾದ ಪಿಯೂಷ್ ಎಲ್. ರೋಡಿಗ್ರಸ್, ಎಂ. ವೆಂಕಟರಾಮು, ಹನುಮಗೌಡ ಮರಕಲ್, ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್ ಸ್ಮರಣಿಕೆ ನೀಡಿ ಕಲಾವಿದರನ್ನು ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.