ಸಂಚಾರಿ ನಿಯಮ ಪಾಲನೆಗೆ ಯಮ ವೇಷಧಾರಿಯ ಜಾಗೃತಿ
Team Udayavani, Jul 22, 2018, 11:41 AM IST
ಮಹಾನಗರ: ಕೆಂಪು ದೀಪ ಉರಿದಾಗ ರಸ್ತೆ ದಾಟಬೇಡಿ..ಸಂಚಾರಿ ಜಾಗೃತೆಯ ಕುರಿತು ಅಲ್ಲಲ್ಲಿ ಅಳವಡಿಸಿರುವ ಬೋರ್ಡ್‌ಗಳನ್ನು ಸರಿಯಾಗಿ ಗಮನಿಸಿ ಚಲಿಸಿ..ಒಟ್ಟಾರೆ ನಿಯಮ ಪಾಲನೆ ಮಾಡಿ..ಇಲ್ಲವಾದಲ್ಲಿ ಯಮ ಕಾಯುತ್ತಲೇ ಇರುತ್ತಾನೆ..ಹೀಗೊಂದು ಸಂದೇಶ ಹೊತ್ತ ವಿಶಿಷ್ಟ ಕಾರ್ಯಕ್ರಮವನ್ನು ನಗರದ ಪಶ್ಚಿಮ ಸಂಚಾರಿ ವಿಭಾಗದ ಪೊಲೀಸರು ಮಾಡುತ್ತಿದ್ದಾರೆ.
ಸಂಚಾರಿ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಲು ರಸ್ತೆಯಲ್ಲೇ ಓಡಾಡಿದ ಯಮ ವೇಷಧಾರಿ ಹೆಲ್ಮೆಟ್ ಹಾಕದವರು, ತ್ರಿಬಲ್ ರೈಡಿಂಗ್ ಮಾಡಿದವರು, ರೆಡ್ ಸಿಗ್ನಲ್ ಆರುವ ಮೊದಲೇ ವಾಹನ ಚಲಾಯಿಸಿದವರಿಗೆ ನಿಯಮ ಪಾಲನೆಯ ಎಚ್ಚರಿಕೆ ನೀಡಿ ಗಮನ ಸೆಳೆದರು. ಯಮನಂತೆಯೇ ಗಧೆ ಹಿಡಿದು, ವೇಷ ಧರಿಸಿಕೊಂಡ ಈ ವ್ಯಕ್ತಿಯ ಚಲನವಲನ ನಗರದಲ್ಲಿ ಕುತೂಹಲಕ್ಕೆ ಕಾರಣವಾಯಿತು.
ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಗರ ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯು ಜುಲೈ ಮಾಸವನ್ನು ಸಂಚಾರ ನಿಯಮ ತಿಳಿವಳಿಕೆ ಮಾಸ ಎಂಬುದಾಗಿ ಆಚರಿಸುತ್ತಿದೆ. ಈಗಾಗಲೇ ಸಂಚಾರಿ ನಿಯಮ ಪಾಲನೆ ಸಂಬಂಧ ಶಾಲಾ ಕಾಲೇಜುಗಳಲ್ಲಿ ಮಾಹಿತಿ, ಬೀದಿನಾಟಕ ಆಯೋಜಿಸಲಾಗಿದೆ. ಅದರ ಭಾಗವಾಗಿ ಯಮ ವೇಷಧಾರಿಯ ಮುಖಾಂತರ ಅರಿವು ಮೂಡಿಸುವ ಕೆಲಸವನ್ನು ಶನಿವಾರ ಮಾಡಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.