ಬೆಳ್ಳಿಹಬ್ಬ ಸಂಭ್ರಮದಲ್ಲಿ ಯೇನಪೊಯ ಡೆಂಟಲ್ ಕಾಲೇಜ್
Team Udayavani, Jul 23, 2017, 7:05 AM IST
ಮಂಗಳೂರು: ಸಮಾಜಪರ ಚಿಂತನೆಯ, ಬಹುಮುಖೀ ಸಾಧಕ ಯೇನಪೊಯ ಅಬ್ದುಲ್ಲ ಕುಂಞಿ ಅವರು ತಮ್ಮ ಅಧ್ಯಕ್ಷತೆಯ ದಿ ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ಸಂಸ್ಥೆಯನ್ನು 1991ರಲ್ಲಿ ಸ್ಥಾಪಿಸಿದರು. ಆ ಬಳಿಕದ ಶೈಕ್ಷಣಿಕ ಸಾಧನೆಯು ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದ ವಿಶೇಷವಾಗಿದೆ. ಈಗ ದಕ್ಷಿಣ ಕನ್ನಡದ ಪ್ರಪ್ರಥಮ
ಸ್ವಾಯತ್ತ ವಿಶ್ವವಿದ್ಯಾನಿಲಯ ಎಂಬ ಮನ್ನಣೆಗೆ ಸಂಸ್ಥೆಯ ಯೇನಪೊಯ ವಿಶ್ವವಿದ್ಯಾನಿಲಯ ಪಾತ್ರವಾಗಿದೆ.
ಯೇನಪೊಯ ಗ್ರೂಪ್‌ನ ಚೇರ¾ನ್ ಆಗಿ ಯೇನಪೊಯ ಮಹಮ್ಮದ್ ಕುಂಞಿ ಅವರು ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ.
ಸಂಸ್ಥೆಯ ಪ್ರಥಮ ಪ್ರತಿಷ್ಠೆಯ ಶಿಕ್ಷಣ ಸಂಸ್ಥೆ ಯೇನಪೊಯ ಡೆಂಟಲ್ ಕಾಲೇಜ್ ಸ್ಥಾಪನೆಯಾದದ್ದು 1992ರ ಆಗಸ್ಟ್‌ನಲ್ಲಿ
ವಿದ್ಯಾರ್ಥಿಗಳ ಪ್ರಥಮ ತಂಡ ಸೇರ್ಪಡೆಯಾಯಿತು. ಬೀಬಿ ಅಲಾಬಿ ರಸ್ತೆಯ ಜುಲೇಖಾ ಕಾಂಪ್ಲೆಕ್ಸ್‌ನಲ್ಲಿದ್ದ ಕಾಲೇಜು 1995ರಲ್ಲಿ ಕೊಡಿಯಾಲಬೈಲಿನಲ್ಲಿ ಆಸ್ಪತ್ರೆ ಸಂಕೀರ್ಣಕ್ಕೆ ಸ್ಥಳಾಂತರಗೊಂಡಿತು.ಈಗದೇರಳಕಟ್ಟೆಯ ವಿಸ್ತಾರ, ಆಕರ್ಷಕ ಕ್ಯಾಂಪಸ್‌ನಲ್ಲಿ ಕಾರ್ಯಾಚರಿಸುತ್ತಿದೆ. ಇದು ಸುತ್ತಲೂ ಹಸಿರಿನ, ಆಕರ್ಷಕ ವಾಸ್ತುಶೈಲಿಯ ಕಟ್ಟಡಗಳನ್ನು ಹೊಂದಿರುವ, ವಿದ್ಯಾರ್ಥಿಗಳ ಏಕಾಗ್ರತೆಯ ಅಧ್ಯಯನಕ್ಕೆ ಪೂರಕವಾದ 31.6 ಎಕರೆ ವಿಸ್ತಾರವಾದ ಕ್ಯಾಂಪಸ್ ಆಗಿದೆ.
8 ಅಂತಸ್ತುಗಳ ಕಾಲೇಜು ಕಟ್ಟಡ ಪ್ರಿ ಕ್ಲಿನಿಕಲ್ ಮತ್ತು ಕ್ಲಿನಿಕಲ್ ವಿಭಾಗಗಳ ಸಹಿತವಾಗಿದೆ. ಇಂಪ್ಲಾಂಟಾಲಜಿ ಮತ್ತು ಏಸ್ತೆಟಿಕ್ ಡೆಂಟಿಸ್ಟ್ರಿ ಯಲ್ಲಿ ಪದವೀಧರರಿಗೆ ತರಬೇತಿಗಾಗಿ ಅಡ್ವಾನ್ಸ್‌ಡ್ ಡೆಂಟಿಸ್ಟ್ರಿಯ ಕೇಂದ್ರವನ್ನು ಸ್ಥಾಪಿಸಲಾಗಿದೆ.
ಶೈಕ್ಷಣಿಕ ವಿಭಾಗಗಳು, 1000 ಹಾಸಿಗೆಯ ವೈದ್ಯಕೀಯ ಆಸ್ಪತ್ರೆ, ಸುಸಜ್ಜಿತ ಹಾಸ್ಟೆಲ್‌ಗಳು, ಸಿಬಂದಿಗೆ ವಸತಿಗೃಹಗಳು, ವಿಸ್ತಾರವಾದ ಆಟದ ಮೈದಾನ, ಆಧುನಿಕ ಒಳಾಂಗಣ ಕ್ರೀಡಾಂಗಣ, ಆಧುನಿಕ ಗ್ರಂಥಾಲಯ, ಸಂಶೋಧನಾ ಕೇಂದ್ರ, ಪ್ರಯೋಗಾಲಯ, ದಂತ ವೈದ್ಯಕೀಯ ಸಲಕರಣೆಗಳ ಮ್ಯೂಸಿಯಂ ಮುಂತಾದ ಎಲ್ಲ ಸೌಲಭ್ಯಗಳನ್ನು ಇಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ.
ವಿಶೇಷ ಮಾನ್ಯತೆಗಳು
ಯೇನಪೊಯ ವಿ.ವಿ.ಯ ವ್ಯಾಪ್ತಿಯ ಈ ಕಾಲೇಜಿಗೆ ಭಾರತೀಯ ದಂತ ವೈದ್ಯಕೀಯ ಮಂಡಳಿಯ ಮಾನ್ಯತೆ ಇದೆ. ಶೈಕ್ಷಣಿಕ ಮತ್ತು ಸಮಗ್ರ ಆಡಳಿತ ನಿರ್ವಹಣೆಗಾಗಿ ಐಎಸ್‌ಒ- 9001-2000 ಪ್ರಮಾಣಪತ್ರ ಪುರಸ್ಕಾರ ಪಡೆದಿದೆ. ಸಂಸ್ಥೆಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೆಲವು ಸೀಟ್‌ಗಳನ್ನು ನೀಡಲಾಗುತ್ತಿದೆ. ನ್ಯಾಕ್ ಎ ಗ್ರೇಡ್ ವಿಶೇಷ ಮಾನ್ಯತೆ ಈ ಡೆಂಟಲ್ ಕಾಲೇಜ್‌ಗೆ ಲಭಿಸಿದೆ.
ಡೆಂಟಲ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಸೈಯ್ಯದ್ ಮದನಿ ರೂರಲ್ ಹಾಸ್ಪಿಟಲ್ ಮತ್ತು ಜುಲೇಕಾ ಕ್ಯಾಂಪಸ್‌ನಲ್ಲಿ ಪೂರಕ ಗ್ರಾಮೀಣ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರೋಗಿಗಳಿಗೆ ಸಹಾಯಧನ ಸಹಿತ ಚಿಕಿತ್ಸೆ ಹಾಗೂ ನಗದುರಹಿತ ಚಿಕಿತ್ಸೆ ನೀಡಲಾಗುತ್ತಿದೆ.
ದ.ಕ., ಕಾಸರಗೋಡು ಜಿಲ್ಲೆಗಳಲ್ಲಿ ನಿರಂತರವಾಗಿ ಉಚಿತ ದಂತ ವೈದ್ಯಕೀಯ ಶಿಬಿರಗಳನ್ನು ನಡೆಸಲಾಗುತ್ತಿದೆ. ಸಂಸ್ಥೆಯು 2 ಸಂಚಾರಿ ಡೆಂಟಲ್ ವ್ಯಾನ್‌ಗಳನ್ನು ಹೊಂದಿದೆ. ಗ್ರಾಮೀಣ ಜನತೆಯ ಹಾಗೂ ಶಾಲಾ ಮಕ್ಕಳಿಗೆ ಉಚಿತ ದಂತ ವೈದ್ಯಕೀಯ ಶಿಬಿರ ಏರ್ಪಡಿಸಲಾಗುತ್ತಿದೆ. ಸಂಸ್ಥೆಯ ಬೋಧಕರು ಮತ್ತು ವಿದ್ಯಾರ್ಥಿಗಳು ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುತ್ತಿದ್ದಾರೆ; ಸಂಸ್ಥೆಯು ಸರ್ವ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದವರ ಆರೋಗ್ಯ ಸೇವೆಗೆ ಆದ್ಯತೆ ನೀಡುತ್ತಿದೆ. ಆಂಕಾಲಜಿ ಸೆಂಟರ್ ಸಹಿತ ಸೌಲಭ್ಯಗಳನ್ನೂ ರೂಪಿಸಿದೆ.
ಪಿಎಚ್‌ಡಿ ಸಾಧನೆ: 2008ರಲ್ಲಿ ಆರಂಭವಾಗಿ, ಈವರೆಗೆ ದಂತ ವೈದ್ಯಕೀಯ ವಿಶೇಷದಲ್ಲಿ 11 ಮಂದಿ ಪಿಎಚ್‌ಡಿ ಪಡೆದಿದ್ದಾರೆ. 10 ಮಂದಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದಾರೆ. 2010ರಲ್ಲಿ ಕಾರ್ನಿಯೋಫೇಶಿಯಲ್ ಎನಾಮಲೀಸ್ ಸೆಂಟರ್ ಮತ್ತು ಮುಂದೆ ವಿವಿಧ ಸರ್ಟಿಫಿಕೇಶನ್ ಕೋರ್ಸ್‌ಗಳನ್ನು ಆರಂಭಿಸಲಾಗಿದೆ.
ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾ ಗಿರುವ, ಪ್ರತಿಷ್ಠಿತ ಅಂತಾರಾಷ್ಟ್ರೀಯ ದಂತ ವೈದ್ಯಕೀಯ ಸಂಸ್ಥೆಗಳ ಸಹಯೋಗ ಹೊಂದಿರುವ ಯೇನಪೊಯ ಡೆಂಟಲ್ ಕಾಲೇಜಿನ ಬೆಳ್ಳಿಹಬ್ಬದ ಸರಣಿಯ ಕಾರ್ಯಕ್ರಮಗಳು ಕಳೆದ ವರ್ಷ ಜುಲೈ 24ರಂದು ಆರಂಭವಾಗಿ, ಈಗ 24-7-2017ರಂದು ಬೆಳ್ಳಿಹಬ್ಬದ ಸಮಾರಂಭ ನಡೆಯುತ್ತಿದೆ.
ಶಿಕ್ಷಣದಿಂದ ಸಾಮಾಜಿಕ ಶಕ್ತಿ
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಶೈಕ್ಷಣಿಕವಾಗಿ ಸಶಕ್ತೀಕರಣಗೊಳಿಸುವ ಆಶಯ ದಿಂದ ದಿ ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ಸ್ಥಾಪನೆಯಾಯಿತೆಂದು ಸ್ಥಾಪಕ ಟ್ರಸ್ಟಿಗಳು ಹಾಗೂ ಯೇನಪೊಯ ವಿಶ್ವವಿದ್ಯಾಲಯದ ಚಾನ್ಸೆಲರ್ ಆಗಿರುವ ಯೇನಪೊಯ ಅಬ್ದುಲ್ಲ ಕುಂಞಿ ಅವರು ಹೇಳುತ್ತಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ರಾಷ್ಟ್ರೀಯ- ಅಂತಾರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರವಾಗಿರುವ ಅವರು ಶಿಕ್ಷಣ, ಕೈಗಾರಿಕೆ, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ನಡೆಸಿದ್ದಾರೆ. ಶಿಕ್ಷಣದಿಂದಲೇ ಸಾಮಾಜಿಕ ಶಕ್ತಿ ಎಂಬ ನೆಲೆಯಲ್ಲಿ ಅವರು ತಮ್ಮ ಶಿಕ್ಷಣ ಸಂಸ್ಥೆಗಳನ್ನು ರೂಪಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೆಲವು ಸೀಟ್‌ಗಳನ್ನು ಒದಗಿಸುತ್ತಿದ್ದಾರೆ. ಸ್ವಾಯತ್ತೆ ಮಾನ್ಯತೆ ಪಡೆದ ದ.ಕ. ಜಿಲ್ಲೆಯ ಪ್ರಥಮ ವಿವಿ- ಯೇನಪೊಯ ವಿವಿ ಆಗಿರುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.