ಶರವೇಗದ ಕಾಮಗಾರಿಗೆ ಕರಗುತ್ತಿದೆ ಪಶ್ಚಿಮ ಘಟ್ಟ!


Team Udayavani, Jun 1, 2017, 3:59 AM IST

Pipeline-31-5.jpg

ಮಂಗಳೂರು: ಪಶ್ಚಿಮ ಘಟ್ಟದಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆ ಅನುಷ್ಠಾನದ ವಿಚಾರದಲ್ಲಿ ಒಂದೆಡೆ ಕಾಮಗಾರಿ ಜನರ ನಿರೀಕ್ಷೆಗಳನ್ನು ಮೀರಿ ಶರವೇಗದಲ್ಲಿ ನಡೆಯುತ್ತಿದೆ. ಇನ್ನೊಂದೆಡೆ ಈ ಕಾಮಗಾರಿಯಿಂದಾಗಿ ಪಶ್ಚಿಮ ಘಟ್ಟದ ಪ್ರಾಕೃತಿಕ ಸಂಪತ್ತು ಕೂಡ ಅಷ್ಟೇ ವೇಗವಾಗಿ ಕರಗತೊಡಗಿದೆೆ! ಪಶ್ಚಿಮ ಘಟ್ಟದ ದಟ್ಟ ಅರಣ್ಯದೊಳಗೆ ನಡೆಯುತ್ತಿರುವ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿ ಯಾವ ರೀತಿ ನಡೆಯುತ್ತಿದೆ ಹಾಗೂ ಕಾಮಗಾರಿ ಪ್ರಗತಿ ಹೇಗಿದೆ; ಆ ಮೂಲಕ ತಮಗೆ ನೀರು ಪೂರೈಕೆ ಆಗುವುದಕ್ಕೆ ಇನ್ನೆಷ್ಟು ವರ್ಷ ಬೇಕು ಎನ್ನುವ ಕುತೂಹಲ ಈ ಯೋಜನೆ ಫಲಾನುಭವಿಗಳಾದ ಬಯಲು ಸೀಮೆ ಜಿಲ್ಲೆಗಳ ಜನರಲ್ಲಿದೆ. 

ಇನ್ನೊಂದೆಡೆ ಎತ್ತಿನಹೊಳೆ ಯೋಜನೆಯಿಂದಾಗಿ ಪಶ್ಚಿಮ ಘಟ್ಟದಲ್ಲಿ ಎಷ್ಟೊಂದು ಅರಣ್ಯ ನಾಶವಾಗುತ್ತಿದೆ, ಅದು ಭವಿಷ್ಯದಲ್ಲಿ ಅಪಾಯವುಂಟು ಮಾಡುವುದೇ ಎಂಬ ಆತಂಕ ಇತ್ತ ಪಶ್ಚಿಮ ಘಟ್ಟದ ನದಿ ಮೂಲಗಳ‌ನ್ನು ಅವಲಂಬಿಸಿಕೊಂಡಿರುವ ಕರಾವಳಿ ಭಾಗದ ಜನರಲ್ಲಿದೆ. ಒಂದು ಕಡೆ ಕುಡಿಯುವ ನೀರು ದೊರೆಯುವ ಮೂಲಕ ಬರಡು ಭೂಮಿ ಹಸನಾಗುವ ಆಶಾವಾದ ಇದ್ದರೆ ಇನ್ನೊಂದು ಕಡೆ ಫಸಲು ಭರಿತ ಭೂಮಿ ನೀರಿಲ್ಲದೆ ಬರಡಾಗುವ ಭೀತಿ ಸೃಷ್ಟಿಯಾಗಿದೆ.

ಸುಮಾರು 12,912.36 ಕೋಟಿ ರೂ. ವೆಚ್ಚದ ಈ ಎತ್ತಿನಹೊಳೆ ನೀರಾವರಿ ಯೋಜನೆಗೆ ಈಗಾಗಲೇ ರಾಜ್ಯ ಸರಕಾರದ ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದ್ದು, ವಿಶ್ವೇಶ್ವರಯ್ಯ ನೀರಾವರಿ ನಿಗಮ ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಎತ್ತಿನಹೊಳೆ ಯೋಜನೆಯಡಿ ಪಶ್ಚಿಮ ಘಟ್ಟದಲ್ಲಿ ಒಟ್ಟು ಎಂಟು ಕಡೆ ಅಂದರೆ ಎತ್ತಿನಹೊಳೆ (ನಾಲ್ಕು ಕಡೆ), ಕಾಡುಮನೆ ಹೊಳೆ (ಎರಡು ಕಡೆ), ಹೊಂಗದ ಹಳ್ಳ ಹಾಗೂ ಕೇರಿ ಹೊಳೆಗೆ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳ ಪೈಕಿ ಕೇರಿಹೊಳೆ ಹಾಗೂ ಹೊಂಗದಧಿಹಳ್ಳ ಡ್ಯಾಂ ಕೆಲಸ ಶೇ. 30ರಷ್ಟು ಪೂರ್ಣಗೊಂಡಿದೆ. ಇನ್ನು ಕಾಡುಧಿಮನೆ ಹೊಳೆ ಹಾಗೂ ಎತ್ತಿನ ಹಳ್ಳದ ಡ್ಯಾಂಗಳ ಕಾಮಗಾರಿ ಶೇ. 70ರಷ್ಟು ಮುಗಿದಿದೆ.

ಗಮನಾರ್ಹ ವಿಚಾರ ಅಂದರೆ ಪಶ್ಚಿಮ ಘಟ್ಟದಂತಹ ದಟ್ಟ ಅರಣ್ಯದಲ್ಲಿ ಶರವೇಗದಲ್ಲಿ ಕಾಮಗಾರಿ ನಡೆಸುವುದು ಅಷ್ಟೊಂದು ಸುಲಭವಿಲ್ಲ. ಈ ವಿಚಾರದಲ್ಲಿ ವಿಶ್ವೇಶ್ವರಯ್ಯ ನಿರಾವರಿ ನಿಗಮದ ಕೆಲಸ ಆಶ್ಚರ್ಯ ತರಿಸುತ್ತಿದೆ. ಏಕೆಂದರೆ ಜನ ನಡೆದುಕೊಂಡು ಹೋಗುವುದೇ ಕಷ್ಟ; ಅಂತಹ ದುರ್ಗಮ ಪ್ರದೇಶದಲ್ಲಿ ಗಜಗಾತ್ರದ ಪೈಪ್‌ಗ್ಳನ್ನು ಸಾಗಿಸಿ ಪ್ರಪಾತವಿದ್ದ ಕಡೆ ಅಣೆಕಟ್ಟು, ಸೇತುವೆಗಳನ್ನು ನಿರ್ಮಿಸುವುದು ಬಹುದೊಡ್ಡ ಸವಾಲಿನ ಕೆಲಸ.

ಹಿರಿದನಹಳ್ಳಿಯಿಂದ ಹರವನಹಳ್ಳಿಯವರೆಗೆ ಹೆಚ್ಚಾ ಕಡಿಮೆ 60 ಕಿ.ಮೀ. ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಇಷ್ಟೂ ವ್ಯಾಪ್ತಿಯ ಕಾಡಿನ ಅಲ್ಲಲ್ಲಿ ಬುಲ್ಡೋಜರ್‌, ಪೈಪ್‌ಗ್ಳೇ ಆಕ್ರಮಿಸಿಕೊಂಡಿವೆ. ಕಡಗರ ಹಳ್ಳಿ, ಆಲುಹಳ್ಳಿ, ಹಿರಿದನ ಹಳ್ಳಿ, ಹೆಬ್ಬಸಾಲೆ, ಕಾಡುಮನೆ ಹೊಳೆ, ಹೆಗ್ಗದ್ದೆ ಹೀಗೆ ಒಂದೊಂದು ಜಾಗಗಳಲ್ಲೂ ಕಾಮಗಾರಿ ಭರದಿಂದ ಸಾಗುತ್ತಿದೆ. ಮೂಲ ಸ್ವರೂಪವನ್ನೇ ಕಳೆದುಕೊಂಡಿರುವ ಈ ಜಾಗದಲ್ಲಿ ದೊಡ್ಡ ದೊಡ್ಡ ಗಾತ್ರದ ಪೈಪ್‌ಗ್ಳು ಮಾತ್ರ ಕಾಣಸಿಗುತ್ತಿವೆ.

ಕಳಪೆ ಕಾಮಗಾರಿ
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಬಹಳಷ್ಟು ಕಡೆಗಳಲ್ಲಿ ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿದೆ. ಅದರಲ್ಲಿಯೂ ಡ್ಯಾಂಗಳಿಂದ ಸಕಲೇಶಪುರದ ದೊಡ್ಡನಗರದವರೆಗೆ ಅಳವಡಿಕೆಯಾಗುತ್ತಿರುವ ಪೈಪ್‌ಲೈನ್‌ ನೋಡುವಾಗ ಕಾಟಾಚಾರಕ್ಕೆ ಈ ಕಾಮಗಾರಿ ನಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇಲ್ಲಿ ಒಟ್ಟು ನಾಲ್ಕು ಲೈನ್‌ಗಳಲ್ಲಿ ಸುಮಾರು 13 ಇಂಚು ಸುತ್ತಳತೆ ಪೈಪ್‌ಗ್ಳನ್ನು ಹಾಕಲಾಗುತ್ತಿದೆ. ಕೇರಿಹೊಳೆ, ಹೊಂಗದಹಳ್ಳ ಹಾಗೂ ಎತ್ತಿನಹೊಳೆ ಡ್ಯಾಂ ವ್ಯಾಪ್ತಿಯಲ್ಲಿ ಪೈಪ್‌ ಅಳವಡಿಸುವ ಕಾರ್ಯ ಈಗ ಭರದಿಂದ ನಡೆಯುತ್ತಿದೆ.

ಗಜ ಗಾತ್ರದ ಈ ಪೈಪ್‌ಗ್ಳನ್ನು ಒಂದಕ್ಕೊಂದು ವೆಲ್ಡಿಂಗ್‌ ಮಾಡಿ ಜೋಡಿಸುತ್ತಿರುವುದು ನೋಡಿದರೆ, ಅದರಲ್ಲಿ ನೀರು ಹರಿಯುವ ಬಗ್ಗೆಯೇ ಅನುಮಾನ ಮೂಡುತ್ತಿದೆ. ಏಕೆಂದರೆ ಪೈಪ್‌ಗ್ಳನ್ನು ಮಣ್ಣಿನಡಿ ಮುಚ್ಚುವ ಮುನ್ನ ನೀರಿನ ಸೋರಿಕೆ ಬಗ್ಗೆ ಯಾವುದೇ ತಪಾಸಣೆ ಮಾಡುತ್ತಿಲ್ಲ. ಅಷ್ಟೇ ಅಲ್ಲ, ಹಾಕಿರುವ ಪೈಪ್‌ಗ್ಳಿಗೆ ಗಟ್ಟಿ ಅಡಿಪಾಯವೇ ಇಲ್ಲ! ಮಳೆಗಾಲದಲ್ಲಿ ಪಶ್ಚಿಮ ಘಟ್ಟದಲ್ಲಿ ಬೀಳುವ ನೀರಿನ ರಭಸಕ್ಕೆ ಮಣ್ಣಿನ ಜತೆಗೆ ಇಡೀ ಪೈಪ್‌ಗ್ಳೇ ಕೊಚ್ಚಿಕೊಂಡು ಹೋಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. 

ವಿಶ್ವೇಶ್ವರಯ್ಯ ನೀರಾವರಿ ನಿಗಮದವರು ಇದ್ಯಾವುದರ ಬಗ್ಗೆಯೂ ಗಮನಹರಿಸಿದಂತಿಲ್ಲ. ಬದಲಿಗೆ ಆದಷ್ಟು ಬೇಗ ಪೈಪ್‌ಗ್ಳ ಅಳವಡಿಕೆ ಹಾಗೂ ಎತ್ತಿನಹೊಳೆ ಕಾಮಗಾರಿ ಪೂರ್ಣಗೊಳಿಸುವ ತರಾತುರಿಯಲ್ಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಒಂದು ಹಂತದ ಕಾಮಗಾರಿ ಮುಗಿಸಿ ಬಯಲು ಸೀಮೆ ಜಿಲ್ಲೆಗಳ ಮತದಾರರನ್ನು ಓಲೈಸುವ ಬಹುದೊಡ್ಡ ತಂತ್ರ ಈ ಇದರ ಹಿಂದೆ ಅಡಗಿರುವುದು ಸ್ಪಷ್ಟವಾಗುತ್ತಿದೆ.

ಕಾಡಿಗೆ ಕಾಡೇ ನಾಶ!
ಎತ್ತಿನಹೊಳೆಯಿಂದ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಪೂರೈಕೆ ಮೊದಲ ಆದ್ಯತೆಯಾಗಿರಬೇಕಾದರೆ ಪಶ್ಚಿಮ ಘಟ್ಟದ ಜಲ ಮೂಲಗಳಿಗೆ ಹಾಗೂ ಅರಣ್ಯ ಸಂಪತ್ತಿಗೆ ಹಾನಿಯಾಗದಂತೆ ಎಚ್ಚರದಿಂದ ಕಾಮಗಾರಿ ಕೈಗೊಳ್ಳಬೇಕಾದ ಬಹುದೊಡ್ಡ ಹೊಣೆಗಾರಿಕೆಯೂ ನೀರಾವರಿ ನಿಗಮದ ಮೇಲಿತ್ತು. ಆದರೆ ಎತ್ತಿನಹೊಳೆ ವಿಚಾರದಲ್ಲಿ ಆ ರೀತಿಯ ಕಾಳಜಿ ಅಲ್ಲಿ ಕಾಣಿಸುತ್ತಿಲ್ಲ. ಹಲವು ಕಡೆ ಅನಗತ್ಯವಾಗಿ ಮರಗಳನ್ನು ಕಡಿದು ಹಾಕಲಾಗಿದೆ. ಸೇತುವೆಗಳ ನಿರ್ಮಾಣಕ್ಕಾಗಿ ನದಿಗಳ ನೈಸರ್ಗಿಕ ಹರಿಯುವಿಕೆಯನ್ನೇ ಬದಲಿಸಲಾಗಿದೆ. ಸೌಂದರ್ಯಭರಿತ ಕಾಡು ಬುಲ್ಡೋಜರ್‌ ದಾಳಿಗೆ ನಡುಗುತ್ತಿದೆ. ಹೇಗಿದ್ದ ಪಶ್ಚಿಮಘಟ್ಟ ಹೇಗಾಯಿತು ಎನ್ನುವ ಉದ್ಗಾರ ಇದನ್ನು ಕಂಡಾಗ ಧ್ವನಿಸಬಹುದು. ಅಷ್ಟರ ಮಟ್ಟಿಗೆ ಕಾಡು ನಾಶವಾಗಿದೆ.

ಕಣಿವೆ ಮುಚ್ಚಲು ಬೆಟ್ಟ – ಗುಡ್ಡಗಳೇ ಬಲಿ !
ಎತ್ತಿನಹೊಳೆ ಡ್ಯಾಂ ಸಮೀಪ ಒಂದು ಕಡೆ ಪೈಪ್‌ ಅಳವಡಿಕೆಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ಬಗ್ಗೆ ಕಾರ್ಮಿಕರಲ್ಲಿ ವಿಚಾರಿಸಿದಾಗ, ‘ನೋಡಿ ಈ ಬೆಟ್ಟದ ತುದಿಯಿಂದ ಅಲ್ಲಿ ಕಾಣುವ ಬೆಟ್ಟಕ್ಕೆ ಪೈಪ್‌ ಹಾಕಬೇಕಿದೆ. ಆದರೆ ಮಧ್ಯದಲ್ಲಿ ಇಷ್ಟು ದೊಡ್ಡ ಪ್ರಪಾತವಿರುವ ಕಾರಣ ಏಕಾಏಕಿ ಪೈಪ್‌ ಹಾಕಲು ಸಾಧ್ಯವಿಲ್ಲ. ಆದ್ದರಿಂದ ಈ ಬೆಟ್ಟದಿಂದ ಆ ಬೆಟ್ಟದ ನಡುವಣ ಪ್ರದೇಶಕ್ಕೆ ಮಣ್ಣು ತಂದು ಹಾಕಿ ಸಮತಟ್ಟುಗೊಳಿಸಬೇಕಿದೆ’ ಎಂದರು. ಹಾಗಾದರೆ ಇಷ್ಟೊಂದು ಮಣ್ಣು ಎಲ್ಲಿಂದ ತರುತ್ತೀರಿ? ಎಂಬ ಪ್ರಶ್ನೆಗೆ ಪಕ್ಕದ‌ ಮತ್ತೂಂದು ಬೆಟ್ಟದತ್ತ ಕೈತೋರಿಸಿದರು!

– ದಿನೇಶ್‌ ಇರಾ
– ಚಿತ್ರ: ಸತೀಶ್ ಇರಾ

ಎತ್ತಿನ ಹೊಳೆ ನೈಜ ದರ್ಶನ – 3
ಇದನ್ನೂ ಓದಿ:
►Part 1►ವೋಟ್‌ಬ್ಯಾಂಕ್‌ಗೆ ಎತ್ತಿನಹೊಳೆ ಫಲಾನುಭವಿಗಳು-ಸಂತ್ರಸ್ತರು ಬಲಿಪಶು?: http://bit.ly/2rV5cex
►Part 2►ಪಶ್ಚಿಮಘಟ್ಟದೊಳಗೊಂದು ಕಾಂಕ್ರೀಟ್‌ ರಸ್ತೆ ಇದು ಎತ್ತಿನಹೊಳೆ ಮಹಾತ್ಮೆ: http://bit.ly/2qGLP49

ಟಾಪ್ ನ್ಯೂಸ್

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-

Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ

9-someshwara

Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಅಪ್ರಾಪ್ತ ಬಾಲಕಿಯ ಅತ್ಯಾ*ಚಾರ: ಗರ್ಭಪಾತ ಪ್ರಕರಣ ಅಪರಾಧಿಗೆ 20 ವರ್ಷ ಜೈಲು

ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

BJP-waqf-Protest

BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.