ಉಪ್ಪಿನಂಗಡಿ ಯೋಗ ಶಿಕ್ಷಕನಿಂದ ವಿಯೆಟ್ನಾಂನಲ್ಲಿ ಯೋಗ ತರಬೇತಿ
Team Udayavani, Jun 23, 2018, 11:11 AM IST
ಉಪ್ಪಿನಂಗಡಿ: ಭಾರತದ ಯೋಗ ಇಂದು ವಿಶ್ವದೆಲ್ಲೆಡೆ ಮಾನ್ಯತೆಗೆ ಒಳಗಾಗುತ್ತಿದ್ದರೆ, ಇನ್ನೊಂದೆಡೆ ಭಾರತೀಯ ಯೋಗ ಶಿಕ್ಷಕರಿಗೆ ವಿಶ್ವದೆಲ್ಲೆಡೆ ಬೇಡಿಕೆ ಇದೆ. ದೂರದ ವಿಯೆಟ್ನಾಂ ದೇಶದಲ್ಲಿ ಭಾರತೀಯ ಯುವ ಯೋಗ ಶಿಕ್ಷಕ ದಂಪತಿ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಉಪ್ಪಿನಂಗಡಿ ಪರಿಸರದ ಬಾಲಕೃಷ್ಣ ಗೌಡ ಕಳೆದ 3 ವರ್ಷಗಳಿಂದ ವಿಯೆಟ್ನಾಂ ದೇಶದಲ್ಲಿ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ಅವರು ಉಪ್ಪಿನಂಗಡಿ ಪರಿಸರದ ಯೋಗ ಶಿಕ್ಷಕಿ ಚೈತ್ರಾ ಅವರನ್ನು ವಿವಾಹವಾಗಿ ವಿಯೆಟ್ನಾಂಗೆ ಕರೆದೊಯ್ದಿದ್ದು, ಅಲ್ಲಿ ಅವರಿಬ್ಬರೂ ವಿಯೆಟ್ನಾಂ ಪ್ರಜೆಗಳಿಗೆ ಯೋಗ ಶಿಕ್ಷಣವನ್ನು ನೀಡುತ್ತಿದ್ದಾರೆ.
ಅಲ್ಲಿನ ಜನತೆ ವಿಶ್ವ ಯೋಗ ದಿನವನ್ನು ಸಂಭ್ರಮದಿಂದ ಎದುರು ನೋಡಿದ್ದು, ವಿಯೆಟ್ನಾಂ ರಾಜಧಾನಿ ಹಾನೋಯಿ ಹಾಗೂ ಹಾಯಿಫಾಂಗ್ ಎಂಬಲ್ಲಿ ಸಾವಿರಾರು ಜನರು ಯೋಗದ ಪೂರ್ವ ಅಭ್ಯಾಸ ಮಾಡಿದ್ದು, ವಿಶ್ವ ಯೋಗ ದಿನದಂದು ಅಲ್ಲಿನ ಜನ ಸಂಭ್ರಮದಿಂದ ಭಾಗವಹಿಸಿದ್ದಾರೆ ಎಂದು ಬಾಲಕೃಷ್ಣ ಗೌಡ ಪತ್ರಿಕೆಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.