ಉದಯವಾಣಿ; ಯುವ ಪ್ರಣಾಳಿಕೆ


Team Udayavani, Mar 23, 2019, 12:30 AM IST

young-s.jpg

ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ  ಉದಯವಾಣಿ ಯುವ ಮತದಾರರಿಂದ ಆಹ್ವಾನಿಸಿದ್ದ ಯುವ ಪ್ರಣಾಳಿಕೆಗೆ 550ಕ್ಕೂ  ಹೆಚ್ಚು ಮಂದಿ ತಮ್ಮ ಆಶಯಗಳನ್ನು ಕಳುಹಿಸಿದ್ದರು. ಅವೆಲ್ಲವುಗಳಲ್ಲಿನ ಆಯ್ದ  ಅಂಶಗಳನ್ನು ಪತ್ರಿಕೆಯು ಯುವ ಪ್ರಣಾಳಿಕೆಯಾಗಿ ಪ್ರಸ್ತುತಪಡಿಸುತ್ತಿದೆ. ಜನಪ್ರತಿನಿಧಿಗಳು ಯುವ ಜನತೆಯ ಈ ಆಶೋತ್ತರಗಳನ್ನು  ಗಮನಿಸಿ ಕಾರ್ಯನಿರತರಾಗಲಿ ಎಂಬುದೇ ಆಶಯ.

ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲಿ ಉನ್ನತ ವ್ಯಾಸಂಗ ಮಾಡಿದವರ ಸಂಖ್ಯೆ ಸಾಕಷ್ಟಿದ್ದು, ಅವರು ವಲಸೆ ಹೋಗುವುದನ್ನು ತಪ್ಪಿಸಲು ಬೃಹತ್‌ ಉದ್ಯಮ, ಸಾಫ್ಟ್ ವೇರ್‌ ಕಂಪೆನಿಗಳನ್ನು ಸ್ಥಾಪಿಸಬೇಕು. ಗ್ರಾಮೀಣ  ವಿದ್ಯಾರ್ಥಿಗಳಿಗೆ  ಸುಲಭವಾಗಿ ವೃತ್ತಿ ಶಿಕ್ಷಣದ ಅವಕಾಶ ಸಿಗುವಂತಾಗಬೇಕು. ಸರಕಾರದ ಯೋಜನೆ, ಸವಲತ್ತುಗಳ  ಮಾಹಿತಿ ಕೇಂದ್ರವು ಗ್ರಾ. ಪಂ.ನಲ್ಲಿ  ಸ್ಥಾಪನೆಯಾಗಬೇಕು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತರಬೇತಿ ಕೇಂದ್ರ ಸ್ಥಾಪನೆಯಾಗಬೇಕು.

ಮುಖ್ಯವಾಗಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕು. ಪ್ರತಿಯೊಬ್ಬ ವಿದ್ಯಾವಂತ ಪ್ರಜೆಗೂ ಅವರ ಯೋಗ್ಯತೆಗೆ ಅನುಸಾರವಾಗಿ ಉದ್ಯೋಗ ದೊರಕುವಂಥ ವಾತಾವರಣವನ್ನು ನಿರ್ಮಿಸಬೇಕು. 

ಯುವಜನರಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಆದ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚು ಕಂಪೆನಿಗಳನ್ನು ಸ್ಥಾಪಿಸಿ ಉದ್ಯೋಗ ಒದಗಿಸಬೇಕು. ಪ್ರತಿ ತಾಲೂಕುಗಳಲ್ಲಿಯೂ  ಸುಸಜ್ಜಿತ  ಉನ್ನತ ಮಟ್ಟದ ಗ್ರಂಥಾಲಯಗಳನ್ನು ಸ್ಥಾಪಿಸುವುದು.

ಬಡತನ  ರೇಖೆಗಿಂತ  ಕೆಳಗಿರುವ  ಕುಟುಂಬಗಳಿಗೆ ಮಾತ್ರ ಮೀಸಲು ಪದ್ಧತಿ ಅನ್ವಯಿಸಿ ತಿದ್ದುಪಡಿ ತರಬೇಕು.  ಎಲ್ಲ ಪ್ರತಿಭಾವಂತರಿಗೂ ಸಮಾನ  ಅವಕಾಶವನ್ನು  ಕಲ್ಪಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಯಲ್ಲಿ ಎಲ್ಲರ ಹಿತದೃಷ್ಟಿಗಾಗಿ ಸಿಸಿಟಿವಿ ಅಳವಡಿಸಬೇಕು. ಎಲ್ಲ ಹಳ್ಳಿಗಳಿಗೂ ಮೂಲ ಸೌಲಭ್ಯ ದೊರಕಬೇಕು.

ಎಲ್ಲ ಕ್ಷೇತ್ರಗಳಲ್ಲೂ  ಮಹಿಳೆಯರಿಗೆ ಪ್ರಾಧಾನ್ಯ ನೀಡಬೇಕು. ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಿ ಎಲ್ಲರಿಗೂ ಪ್ರೌಢಶಾಲಾ ಶಿಕ್ಷಣದವರೆಗೆ ಏಕರೀತಿಯ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕು. ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ಕಪಿಮುಷ್ಟಿಯಿಂದ ಮುಕ್ತಗೊಳಿಸಬೇಕು. ಸಾರಿಗೆ ವ್ಯವಸ್ಥೆಯಲ್ಲಿ ಆಳವಾಗಿ ಬೇರುಬಿಟ್ಟ ಭ್ರಷ್ಟಾಚಾರವನ್ನು ಕಿತ್ತೂಗೆಯಬೇಕು.

ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಶಿಸ್ತುಕ್ರಮ ಕೈಗೊಳ್ಳಬೇಕು. ಶಾಲಾ- ಕಾಲೇಜುಗಳ ಮೂಲಸೌಕರ್ಯ ಹೆಚ್ಚಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಬಸ್‌ ಪಾಸ್‌, ಶಿಷ್ಯವೇತನ ನೀಡಬೇಕು. ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು. ಸ್ಥಳೀಯ ವಾಗಿ ಕೈಗಾರಿಕೆ ಸ್ಥಾಪಿಸಬೇಕು. 

ನಿರುದ್ಯೋಗಿಗಳಿಗೆ ಮಾಸಿಕ ಭತ್ತೆ ನೀಡಿ ಸೋಮಾರಿಗಳನ್ನಾಗಿ ಮಾಡದೆ ತಮ್ಮ ಕ್ಷೇತ್ರದಲ್ಲಿನ ಸಂಪನ್ಮೂಲವನ್ನು ಬಳಸಿ ಉದ್ಯೋಗಿಗಳಾಗಿಸಲು ಪ್ರೋತ್ಸಾಹಿಸಬೇಕು. ರೈತರ ಸಾಲ ಮನ್ನಾಕ್ಕಿಂತ ಬಡ್ಡಿರಹಿತ ಸಾಲ ನೀಡಿ, ಬೆಳೆಗಳಿಗೆ 
ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು.

ಉದ್ಯೋಗದಲ್ಲಿನ ಮೀಸಲು ತೆಗೆದು ಎಲ್ಲ ಪ್ರತಿಭಾವಂತರಿಗೆ ಅವಕಾಶ ಒದಗಿಸಬೇಕು. ಸಣ್ಣ ಕೈಗಾರಿಕೆಗೆ ಹೆಚ್ಚು ಪ್ರಾಮುಖ್ಯ ದೊರೆಯಬೇಕು. ಕೃಷಿಯಲ್ಲಿನ ನೂತನ ತಂತ್ರಜ್ಞಾನ ಹಳ್ಳಿಯ ಮೂಲೆ ಮೂಲೆಗೆ ತಲುಪು ವಂತಾಗಬೇಕು. 

ಗ್ರಾಮದ ಹಲವು ಪ್ರದೇಶಗಳಲ್ಲಿ ಯಾವುದೇ ದೂರವಾಣಿ ಸಂಪರ್ಕದ ಸ್ಥಾವರಗಳಿಲ್ಲ.  ಈ ಸಮಸ್ಯೆ ನಿವಾರಣೆ ಯಾಗಬೇಕು. ಗ್ರಾಮದ ಸರಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನಿವಾರಿಸಬೇಕು. 

ಮುಖ್ಯವಾಗಿ ಯವಜನರಿಗೆ ಉದ್ಯೋಗ ಅವಕಾಶ ಮತ್ತು ಕೌಶಲಾಭಿ ವೃದ್ಧಿ ಒದಗಿಸಬೇಕು. ಗ್ರಾಮೀಣ ಭಾಗಕ್ಕೆ ಹೆಚ್ಚಿನ ಸಾರಿಗೆ ಸೌಲಭ್ಯ ಮತ್ತು ಸರಕಾರಿ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿ ಉತ್ತಮ ಆಡಳಿತ ನೀಡಬೇಕು. 

ಶೈಕ್ಷಣಿಕ ಸಾಲದ ಬಡ್ಡಿ ದರ ಹೆಚ್ಚಿದ್ದು, ಅದನ್ನು ಕಡಿತಗೊಳಿಸಬೇಕು. ಯುವಜನತೆಗೆ ಉದ್ಯೋಗ ತರಬೇತಿ, ಉದ್ಯೋಗ ಭದ್ರತೆ, ಆಯಾ ವಿದ್ಯೆ, ವೃತ್ತಿಗೆ ಸಮಾನ ಸಾಮಾಜಿಕ ಗೌರವದ ಉದ್ಯೋಗ ದೊರಕುವಂತೆ ಮಾಡಬೇಕು. 

ಸೊÌàದ್ಯೋಗಕ್ಕೆ ಪ್ರೋತ್ಸಾಹ ನೀಡುವುದು.  ಉನ್ನತ ವ್ಯಾಸಂಗಕ್ಕೆ ಸರಕಾರ ಬಡ್ಡಿ ರಹಿತ ಸಾಲ ನೀಡ‌ಬೇಕು. ಅಮಲುಪದಾರ್ಥಗಳಿಗೆ ಕಡಿವಾಣ ಹಾಕಿ, ಕೌನ್ಸೆಲಿಂಗ್‌ ಕೇಂದ್ರಗಳ ಮೂಲಕ ಯುವಜನರು ದಾರಿ ತಪ್ಪದಂತೆ ನೋಡಿಕೊಳ್ಳಬೇಕು. 

ಪ್ರತಿ ಕ್ಷೇತ್ರದಲ್ಲೂ ಯುವ ಸದನವನ್ನು ನಿರ್ಮಿಸಿ ಪ್ರತಿ ತಿಂಗಳೂ ಸ್ಥಳೀಯ ಯುವ ಜನರ ಹಾಗೂ ಸ್ಥಳೀಯರ ಸಮಸ್ಯೆ ಕುರಿತು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು.  ಸೋಶಿಯಲ್‌ ನೆಟÌರ್ಕಿಂಗ್‌ನಲ್ಲಿ  ಕ್ಷೇತ್ರದ  ಕಾರ್ಯವೈಖರಿ ಪ್ರಕಟಿಸಬೇಕು. 

ರೈತ ಬೆಳೆದ ಕೃಷಿ ಉತ್ಪನ್ನ‌ ನೇರವಾಗಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಹಳ್ಳಿಯ ಹೆಣ್ಣು ಮಕ್ಕಳು ಆರ್ಥಿಕವಾಗಿ ಸದೃಢ ವಾಗುವ ವ್ಯವಸ್ಥೆಯಾಗಬೇಕು. ಯುವ ಜನತೆಗೆ ಸ್ವ ಉದ್ಯೋಗ ಬಗ್ಗೆ ಮಾಹಿತಿ ಕೊಡಬೇಕು. 

ಕ್ರೀಡೆಗಳಿಗೆ ಉತ್ತೇಜನ ನೀಡಿ, ಯುವ ಜನರನ್ನು ಅಂತರ್ಜಾಲದ ಮಾಯೆಯಿಂದ ಪಾರು ಮಾಡಬೇಕು. ಕ್ರೀಡಾಪಟುಗಳಿಗೆ ಸೌಲಭ್ಯಗಳನ್ನು ಒದಗಿಸಬೇಕು. ಸಂಚಾರದಲ್ಲಿ ಶಿಸ್ತು ಮೂಡಿಸಿ, ಟ್ರಾಫಿಕ್‌ ಜಾಮ್‌ ನಿಯಂತ್ರಿಸಬೇಕು. 

ಯುವ ಜನತೆಗೆ ಸ್ವಂತ ಉದ್ಯೋಗಕ್ಕೆ ಉತ್ತೇಜನ, ಕ್ಲಪ್ತ ಸಮಯದಲ್ಲಿ ಸಾಲ ಸಿಗುವಂತೆ ಮಾಡಬೇಕು. ಪ್ರತಿಭಾ ಪಲಾಯನಕ್ಕೆ ತಡೆ ಹಾಕಿ, ಸಂಶೋಧನೆಗೆ ಮಹತ್ವ ಕೊಡಬೇಕು. ದೇಶಾದ್ಯಂತ ಸಂಶೋಧನ ಕೇಂದ್ರ ಸ್ಥಾಪಿಸಬೇಕು.

ಯುವಕರನ್ನು ಕೃಷಿಯತ್ತ ಆಕರ್ಷಿಸಲು ಜಿಲ್ಲಾ ಮಟ್ಟದಲ್ಲಿ ಕೃಷಿ ಕಾಲೇಜುಗಳನ್ನು ಸ್ಥಾಪಿಸಬೇಕು. ಕೃಷಿಯಲ್ಲಿ ಆಧುನಿಕತೆಯನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು. 

ಮೀಸಲಾತಿ ಬೇಡ, ವಿದ್ಯಾರ್ಹತೆಗೆ ತಕ್ಕುದಾದ ಉದ್ಯೋಗ ನೀಡಬೇಕು. ಭ್ರಷ್ಟಾಚಾರ ಮತ್ತು ಮಾದಕ ವಸ್ತುಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು. ಜನಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆ ಇರಬೇಕು. 

ಹೆಮ್ಮರಗಳ ನಾಶಕ್ಕೆ ಕಡಿವಾಣ ಹಾಕಬೇಕು. ಸರಕಾರಿ ಶಾಲೆಗಳಲ್ಲಿ ಉತ್ತಮ ಇಂಗ್ಲಿಷ್‌ ಅಧ್ಯಾಪಕರು, ಗ್ರಂಥಾಲಯ, ಮೂಲಸೌಕರ್ಯ ಕಲ್ಪಿಸಬೇಕು. ಸಮಾಜ ಸೇವೆಗೆ ಮುಂದಾಗುವ ಯುವ ಸಂಘಟನೆಗಳಿಗೆ ಪ್ರೋತ್ಸಾಹ ದೊರೆಯಬೇಕು. 

ಎಲ್ಲ ಧರ್ಮಗ್ರಂಥಗಳ ಬೋಧನೆಯನ್ನು ಶಾಲೆಗಳ ಪಠ್ಯದಲ್ಲಿ ಸೇರಿಸಬೇಕು. ಖಾಸಗಿ ಶಾಲೆಗಳಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು. ಸೈನಿಕ ನಿಧಿಗೆ ಎಲ್ಲರೂ ಹಣ ನೀಡುವಂತಾಗಬೇಕು.

ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು. ಬಿಪಿಎಲ್‌ ಕಾರ್ಡ್‌ದಾರರ ಉನ್ನತ ಶಿಕ್ಷಣಕ್ಕೆ ಶುಲ್ಕ ರಿಯಾಯಿತಿ ನೀಡಬೇಕು. ಗಂಭೀರ ಕಾಯಿಲೆಗಳಿಗೆ  5 ಲಕ್ಷ ರೂ. ತನಕ ಚಿಕಿತ್ಸಾ ವೆಚ್ಚ ಭರಿಸಬೇಕು.

ರೈತರಿಗೆ ಶೇ. 50 ಸಬ್ಸಿಡಿ ದರದಲ್ಲಿ ಅಗತ್ಯ ಕೃಷಿ ಉಪಕರಣ, ಗೊಬ್ಬರ ವಿತರಣೆ ಆಗಬೇಕು. “ಒಂದು ಮನೆಗೆ – ಒಂದು ಉದ್ಯೋಗ’ ಯೋಜನೆ ಜಾರಿಯಾಗಬೇಕು. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಸರಕಾರವೇ ಭರಿಸಬೇಕು. 

ಪ್ರಾಥಮಿಕ ಶಿಕ್ಷಣದಿಂದಲೇ ಏಕರೂಪ ಶಿಕ್ಷಣ (ಕೇಂದ್ರೀಯ ವಿದ್ಯಾಲಯ ಮಾದರಿ) ಸಿಗುವಂತಾಗಲು ಪ್ರಣಾಳಿಕೆ ರೂಪಿಸಬೇಕು. ಪದವಿಯಲ್ಲಿ ವೃತ್ತಿ ಆಧರಿತ ಶಿಕ್ಷಣಕ್ಕೆ ಒತ್ತು, ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕು. 

ಉದ್ಯೋಗದಿಂದ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ಸಾಧ್ಯ. ಆ ನಿಟ್ಟಿನಲ್ಲಿ ಸಣ್ಣ-ಮಧ್ಯಮ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ಯುವ ಸ್ಟಾರ್ಟ್‌ ಅಪ್‌ಗ್ಳಿಗೆ ಒತ್ತು ಹಾಗೂ ಸೌಲಭ್ಯಗಳನ್ನು ನೀಡಬೇಕು.

ಅರಣ್ಯ ಸಂರಕ್ಷಣೆ, ಹಣ್ಣಿನ ಗಿಡಗಳ ಪೋಷಣೆಗೆ ಆದ್ಯತೆ ನೀಡಬೇಕು. ಕಾಡ್ಗಿಚ್ಚಿನಿಂದ ಅರಣ್ಯಗಳನ್ನು ರಕ್ಷಿಸಲು ನಿಗಾ ವಹಿಸಬೇಕು. ಶಾಲೆ-ಕಾಲೇಜುಗಳಲ್ಲಿ ಅರಣ್ಯ ಸಂರಕ್ಷಣೆಗೆ ತರಬೇತಿ ನೀಡಬೇಕು. 

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

Puttur: ಮಾದಕ ಪದಾರ್ಥ ಸೇವಿಸಿ ಅನುಚಿತ ವರ್ತನೆ… ಇಬ್ಬರ ಬಂಧನ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.