ರಾಜಕಾರಣಿಗಳಿಂದ ಕೆಲಸ ತೆಗೆಯುವ ಯೋಗ್ಯತೆ ಯುವಜನತೆಗೆ ಬರಬೇಕು
Team Udayavani, May 6, 2018, 11:42 AM IST
ಮೂಡಬಿದಿರೆ: ‘ಪಗೆಲ್‌ಡ್ ಓಟುದಕಲ್ನ ಗೌಜಿ… ನನ ರಾತ್ರೆ ಆನಗ ಐಪಿಎಲ್ ಮ್ಯಾಚ್ ಸುರಾಪುಂಡು… ಸತ್ಯ ಪನ್ಪೆ ಅಣ್ಣ, ಇತ್ತೆ ದಿನ ಎಂಚ ಪೋಪುಂಡುಂದೇ ಗೊತ್ತಾಪುಜಿ’ ಎಂದು ಕೃಷಿ ಕೆಲಸದಲ್ಲಿ ನಿರತರಾಗಿದ್ದ ಮೆನ್ನಬೆಟ್ಟುವಿನ ಚಾರ್ಲಿ ತಮ್ಮ ಬಿಝೀ ಶೆಡ್ನೂಲ್‌ನ ನಡುವೆ ‘ಉದಯವಾಣಿ’ಯೊಂದಿಗೆ ಮಾತನಾಡಿದರು.
‘ಬಂದ ಎಲ್ಲ ಪಕ್ಷದವರಿಗೂ ನಿಮಗೇ ನನ್ನ ಮತ ಎಂದು ಭರವಸೆ ನೀಡಿದ್ದೇನೆ. ಕೆಲಸ ಮಾಡುತ್ತಾರೋ ಇಲ್ಲವೊ ಗೊತ್ತಿಲ್ಲ; ಆದರೆ ಮತ ಅಂತೂ ಚಲಾಯಿಸುತ್ತೇನೆ’ ಎಂದು ಕೀಟಲೆಯ ಮುಗುಳ್ನಗೆ ಬೀರುತ್ತಾರೆ ಅವರು.
‘ಉದಯವಾಣಿ’ ತಂಡ ಸಂಚಾರ ಸಮಾಚಾರದ ಮೂರನೇ ದಿನ ಬಟ್ಟಕೋಡಿ, ಪಂಜಿನಡ್ಕ, ಉಲ್ಲಂಜೆ, ಕೊಂಡೇಲ, ಕಟೀಲು, ಅಜಾರು ಕಡೆಗೆ ಸಾಗಿತು. ಮೂಲಸೌಕರ್ಯಗಳ ಬಗ್ಗೆ ಮಾತನಾಡುವ ಇಲ್ಲಿನ ಜನರು, ‘ನಮಗೆ ಪಕ್ಷ ಮುಖ್ಯವಲ್ಲ. ಚುನಾವಣೆಯಲ್ಲಿ ಗೆದ್ದ ಅನಂತರ ಕೆಲಸ ಮಾಡಬಹುದಾ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸುತ್ತೇವೆ’ ಎನ್ನುತ್ತಾರೆ.
ರಸ್ತೆ ಅಗೆದದ್ದು ಮಾತ್ರ
ಮೂಲ್ಕಿ- ಬಿ.ಸಿ. ರೋಡ್ ರಾಜ್ಯ ಹೆದ್ದಾರಿ ಅಭಿವೃದ್ಧಿ ನೆಪದಲ್ಲಿ ಮೂರುಕಾವೇರಿ ಸಮೀಪ ರಸ್ತೆ ಆಗೆದದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ‘ರಸ್ತೆ ತೂನಗ ಗೊತ್ತಾಪುಂಡತೆ ದಾದ ಅಭಿವೃದ್ಧಿ ಆತ್‌ಂಡ್ ಪಂದ್! ಬೇಗ ಮಲ್ತ್ ಬುಡ್ಪುನ ಬದಲ್ ಮುಲ್ಪ ಪೋಪುನಕ್ಲೆಗ್ ತೊಂದರೆ ಆಪಿಲೆಕ ಮಾಲೆªರ್. ನನ ಮರಿಯಲ ಬನ್ನಗ ಕೆಲವೆರೆಗ್ ಅಂದಾಜಿ ಆಪುಜಿ. ಅಭಿವೃದ್ಧಿ ಆವೊಡೆ, ಆಂಡ ಜನಕ್ಲೆಗ್ ತೊಂದರೆ ಆವರೆ ಬಲ್ಲಿ ಅತೇ’ ಎಂಬುದು ಇಲ್ಲಿನ ಶ್ರೀಧರ ಅವರ ಮಾತು.
ಮನವಿ ಮಾಡಿ ಸಾಕಾಯಿತು
ಡ್ರೈನೇಜ್ ನೀರು ಹೋಗುವುದು ಅಸಾಧ್ಯ ಎಂಬ ಪರಿಸ್ಥಿತಿ ಇತ್ತು. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ನಮ್ಮ ವ್ಯಾಪ್ತಿಯವರೇ ನೀರು ಸರಾಗ ಹರಿಯುವಂತೆ ನೋಡಿಕೊಂಡು ಪೈಪ್ ಅಳವಡಿಸಿದ್ದೇವೆ ಎನ್ನುತ್ತಾರೆ ಉಲ್ಲಂಜೆ ನಿವಾಸಿ ಪ್ರದೀಪ್.
‘ಅಭಿವೃದ್ಧಿ ಆಗಿದೆ; ಇನ್ನೂ ಆಗಬೇಕಿದೆ. ಅಭಿವೃದ್ಧಿ ಕೆಲಸ ಆಗಲಿಲ್ಲ ಎಂದು ಮತ ಬಹಿಷ್ಕಾರ ಮಾಡುವುದು ಒಳ್ಳೆಯ ಲಕ್ಷಣವಲ್ಲ. ಮತದಾರರಿಗೆ ಯಾರೂ ಸರಿ ಕಾಣದಿದ್ದರೆ ನೋಟಾ ಇದೆಯಲ್ಲ. ಒಟ್ಟಿನಲ್ಲಿ ಎಲ್ಲರೂ ಮತದಾನ ಮಾಡಬೇಕು’ ಎನ್ನುವುದು ಶಿಕ್ಷಕಿ ಕಾವ್ಯಾ ಅವರ ಚುನಾವಣ ಜಾಗೃತಿಯ ಮಾತು.
ಜವನೆರೆಗ್ ಬುದ್ಧಿ ಬರೊಡು!
‘ವೋಟುದಕ್ಲೆಗ್ ತಿಕ್ಕುನೇ ಜವನೆರ್. ಕಾಂಡೇಡ್ಡ್ ಬಯ್ಯಮುಟ್ಟ ಅಕಲ್ನ ಪಿರ ತಿರ್ಗುನ ಬದಲ್ ಕೆಲಸೊಗ್ ಪೋಯೆರ್‌ಡ ಆಕಲ್ನ ಇಲ್ಲದಕ್ಲೆಗ್ ಆಂಡಲಾ ಅನುಕೂಲ ಆವತೇ…’ (ಚುನಾವಣೆ ಸಮಯದಲ್ಲಿ ಪಕ್ಷದವರಿಗೆ ಸಿಗುವುದೇ ಯುವಕರು. ಅವರ ಹಿಂದೆ ದಿನಪೂರ್ತಿ ಅಲೆದಾಡುವ ಬದಲು ಉದ್ಯೋಗಕ್ಕೆ
ಹೋದರೆ ಮನೆಯವರಿಗೂ ಅನುಕೂಲ ಅಲ್ಲವೇ) ಎಂಬುದು ಬಸ್ಸು ನಿರ್ವಾಹಕ ಸಂದೀಪ್ ಅವರ ಹಿತನುಡಿ. ಅವರ ಮಾತುಗಳಲ್ಲಿ ಯುವಕರ ಬಗ್ಗೆ ಕಾಳಜಿ ಇತ್ತು. ಯುವ ಸಮುದಾಯ ದಾರಿ ತಪ್ಪಬಾರದು ಎಂಬ ಮುಂದಾಲೋಚನೆಯೂ ವ್ಯಕ್ತವಾಯಿತು. ಮತದಾನಕ್ಕಿಂತಲೂ ಯುವಕರು ಬದಲಾಗಬೇಕು, ಜನ ಪ್ರತಿನಿಧಿಗಳಿಂದ ಕೆಲಸ ಮಾಡಿಸುವ ಯೋಗ್ಯತೆ ಯುವಕರಿಗೆ ಬರಬೇಕು ಎಂದು ಅವರು ಹೇಳಿದಾಗ ಹೌದೆನಿಸಿತು.
ಆಶ್ವಾಸನೆಗಳು ಈಡೇರಲಿ
ಪಕ್ಷ, ಜಾತಿ, ನೋಡಿ ಮತ ಹಾಕುವುದಕ್ಕಿಂತ ಅಭಿವೃದ್ಧಿ ಕೆಲಸ ಮಾಡುವ ಸಾಮರ್ಥ್ಯ ವಿರುವಂತಹ ಯೋಗ್ಯ ವ್ಯಕ್ತಿಯನ್ನು ಆರಿಸುತ್ತೇನೆ. ಜನಪ್ರತಿನಿಧಿ ಅಂದಮೇಲೆ ಜನಸಾಮಾನ್ಯರೊಂದಿಗೆ ಬೆರೆಯಬೇಕು- ಚುನಾವಣೆ ಸಮಯದಲ್ಲಿ ಮಾತ್ರ ಅಲ್ಲ; ಯಾವಾಗಲೂ. ಚುನಾವಣೆ ಸಮಯದಲ್ಲಿ ಕೊಟ್ಟ ಆಶ್ವಾಸನೆಗಳು ಈಡೇರಿದರೆ ಮಾತ್ರ ನಾವು ಚಲಾಯಿಸಿದ ಮತ ಸಾರ್ಥಕ.
– ಅಶ್ವಿನ್, ಕಾಪಿಕಾಡು
ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.