ಬೃಹತ್ ಗಾತ್ರದ ಮೀನು ರಕ್ಷಿಸಿದ ಯುವಕರು
Team Udayavani, Apr 12, 2018, 11:14 AM IST
ಮಂಗಳೂರು: ಸಮುದ್ರ ತೀರಕ್ಕೆ ಅಲೆಗಳಲ್ಲಿ ತೇಲಿ ಬಂದ ದೊಡ್ಡ ಗಾತ್ರದ ಮೀನನ್ನು ಇಬ್ಬರು ಯುವಕರು ರಕ್ಷಣೆ ಮಾಡಿ ಪುನಃ ಸಮುದ್ರಕ್ಕೆ ಸೇರಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ.
ಈ ಘಟನೆ ಯಾವ ಬೀಚ್ನಲ್ಲಿ ನಡೆದಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ವೀಡಿಯೋದಲ್ಲಿ ಬ್ಯಾರಿ ಭಾಷೆ ಮಾತ ನಾಡುತ್ತಿರುವುದು ಕೇಳಿಬರುತ್ತಿರುವ ಹಿನ್ನೆಲೆ ಯಲ್ಲಿ ಈ ಘಟನೆ ನಡೆದದ್ದು ಕರಾವಳಿ
ಪ್ರದೇಶದ ಯಾವುದಾದರೊಂದು ಬೀಚ್ನಲ್ಲಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ದೊಡ್ಡ ಗಾತ್ರದ ಮೀನೊಂದು ಸಮುದ್ರ ತೀರಕ್ಕೆ ಬಂದು ಒದ್ದಾಡುತ್ತಿದ್ದ ದೃಶ್ಯ ವೀಡಿಯೋದಲ್ಲಿ ಕಾಣುತ್ತಿದ್ದು, ಇಬ್ಬರು ಯುವಕರು ಸತತ ನಾಲ್ಕೈದು ಬಾರಿ ಪ್ರಯತ್ನಪಟ್ಟರೂ ಮೀನನ್ನು ಸಮುದ್ರಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ. ಅದೇ ಸಮಯದಲ್ಲಿ ದೊಡ್ಡ ಪ್ರಮಾಣದ ಅಲೆಯೊಂದು ಬಂದಿದ್ದರಿಂದ ಮತ್ತು ಈ ಯುವಕರ ಸತತ ಪ್ರಯತ್ನದಿಂದಾಗಿ ಮೀನು ಸಮುದ್ರಕ್ಕೆ ಮರಳಿ ಸೇರಿತು.
ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಉಳ್ಳಾಲ ಸಮುದ್ರ ತೀರದ ಜೀವರಕ್ಷಕ ಈಜುಗಾರ ಮೋಹನ್ ಕುಮಾರ್ ಉಳ್ಳಾಲ “ಕಳೆದ ಮೂರು ದಿನಗಳ ಹಿಂದೆ ಉಳ್ಳಾಲ ಸಮುದ್ರ ತೀರದಲ್ಲಿ ಮೀನೊಂದು ಸಾವನ್ನಪ್ಪಿತ್ತು. ಆದರೆ ಈ ಮೀನಿಗೆ ಹೋಲಿಸಿದರೆ ವಿಡಿಯೋದಲ್ಲಿ ವೈರಲ್ ಆದ ಮೀನಿನ ಗಾತ್ರ ತುಂಬಾ ದೊಡ್ಡದಿದೆ. ಉಳ್ಳಾಲ ಬೀಚ್ ಪರಿಸರದಲ್ಲಿ ಈ ಘಟನೆ ನಡೆದ ಬಗ್ಗೆ ಮಾಹಿತಿಯಿಲ್ಲ’ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.