ಮಂಗಳೂರಿನಲ್ಲೂ ಡ್ರಗ್ಸ್ ಬಳಕೆ ಹೆಚ್ಚಳ ಶಂಕೆ: ಯುವತಿಯರೂ ಡ್ರಗ್ಸ್‌ ಪೆಡ್ಲರ್‌ಗಳ ಗುರಿ?

ಪಾರ್ಟಿ ಡ್ರಗ್ಸ್‌ ಬಳಕೆ ಹೆಚ್ಚಳ ಶಂಕೆ

Team Udayavani, Jan 6, 2022, 1:18 PM IST

ಯುವತಿಯರೂ ಡ್ರಗ್ಸ್‌ ಪೆಡ್ಲರ್‌ಗಳ ಗುರಿ? ಮಂಗಳೂರಿನಲ್ಲೂ ಪಾರ್ಟಿ ಡ್ರಗ್ಸ್‌ ಬಳಕೆ ಹೆಚ್ಚಳ ಶಂಕೆ

ಮಂಗಳೂರು: ಕಾಲೇಜು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಮಾದಕ ದ್ರವ್ಯ ದಂಧೆ ನಡೆಯುತ್ತಿರುವುದನ್ನು ನಗರ ಪೊಲೀಸರು ಈಗಾಗಲೇ ಪತ್ತೆ ಹಚ್ಚಿದ್ದು ಇದೀಗ ವಿದ್ಯಾರ್ಥಿನಿ ಯರು/ಯುವತಿಯರನ್ನು ಕೂಡ ಗುರಿಯಾ ಗಿಸಲಾಗುತ್ತಿದೆಯೇ ಎಂಬ ಅನುಮಾನ ಬಲವಾಗಿದೆ.

ಮಗಳಿಗೆ ಡ್ರಗ್ಸ್‌ ನೀಡಿ ನಿರಂತರ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಕೆಲವು ದಿನಗಳ ಹಿಂದೆ ಬಿಜೈಯ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿರುವುದು ಪೊಲೀಸರಲ್ಲಿನ ಶಂಕೆಗೆ ಇನ್ನಷ್ಟು ಪುಷ್ಟಿ ನೀಡಿದೆ.

ಕಾಲೇಜು ವಿದ್ಯಾರ್ಥಿನಿಯರು ಡ್ರಗ್ಸ್‌ ಸೇವಿಸಿ ಸಿಕ್ಕಿಬಿದ್ದಿರುವ ಪ್ರಕರಣ ದಾಖಲಾಗಿಲ್ಲ. ಆದರೆ ಕೆಲವರು ಜಾಲಕ್ಕೆ ಸಿಲುಕಿರುವ ಸಾಧ್ಯತೆಗಳಿವೆ. ಅನೇಕ ಮಂದಿ ಹೆತ್ತವರಿಗೆ ಮಕ್ಕಳ ಚಟದ ಬಗ್ಗೆ ತಿಳಿದಿರುವುದಿಲ್ಲ. ಇನ್ನು ಕೆಲವರಿಗೆ ಮಾಹಿತಿ ಇದ್ದರೂ ಅಸಹಾಯಕರಾಗಿರುತ್ತಾರೆ. ಡ್ರಗ್ಸ್‌ ಚಟಕ್ಕೆ ಬಿದ್ದವರು ಸಕಾಲದಲ್ಲಿ ಸೂಕ್ತ ಚಿಕಿತ್ಸೆ, ಸಮಾಲೋಚನೆಗೆ ಒಳಗಾಗದ ಪರಿಣಾಮ ಹೊರಬರಲಾಗುತ್ತಿಲ್ಲ ಎನ್ನುತ್ತಾರೆ ಪೊಲೀಸರು. ಪಾರ್ಟಿ ಡ್ರಗ್ಸ್‌, ಸಿಂಥೆಟಿಕ್‌ ಡ್ರಗ್ಸ್‌ ಗಳ ಬಳಕೆ ಕೂಡ ಮಂಗಳೂರಿನಲ್ಲಿ ಯಥೇತ್ಛವಾಗಿ ನಡೆಯುತ್ತಿರುವ ಸಾಧ್ಯತೆ ಇದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರೀ ಡ್ರಗ್ಸ್‌ ವಶ
ನಗರ ಪೊಲೀ ಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 2021ರಲ್ಲಿ ಡ್ರಗ್ಸ್‌ ಸೇವನೆ, ಮಾರಾಟಕ್ಕೆ ಸಂಬಂಧಿಸಿದಂತೆ 328 ಪ್ರಕರಣಗಳನ್ನು ದಾಖಲಿಸಿಕೊಂಡು 492 ಮಂದಿಯನ್ನು ಬಂಧಿಸಲಾಗಿದೆ. ಗಾಂಜಾ, ಎಂಡಿಎಂಎ ಟ್ಯಾಬ್ಲೆಟ್‌, ಕೊಕೇನ್‌, ಹೆರಾಯ್ನ, ಎಂಡಿಎಂಎ ಪೌಡರ್‌, ಎಲ್‌ಎಸ್‌ಡಿ ಸ್ಟಾಂಪ್ಸ್‌ ಸೇರಿದಂತೆ 85 ಲ.ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಹಿಂದೂ ಮಹಿಳೆಯರ ಟಾರ್ಗೆಟ್‌ ಮಾಡುತ್ತಿದ್ದ ಜಾಲ ಬಯಲಿಗೆ

ಹಾಸ್ಟೆಲ್‌ಗ‌ಳಿಗೂ ಪೂರೈಕೆ?
ಕೆಲವು ಕಾಲೇಜು ಹಾಸ್ಟೆಲ್‌ಗ‌ಳಲ್ಲಿಯೇ ವಿದ್ಯಾರ್ಥಿಗಳು ಮಾದಕ ದ್ರವ್ಯ ಚಟಕ್ಕೆ ಒಳಗಾಗುತ್ತಾರೆ. ಅನಂತರ ಅವರದ್ದೇ ಗುಂಪು ಸೃಷ್ಟಿಯಾಗುತ್ತದೆ. ಹೆಣ್ಣು-ಗಂಡು ಭೇದವಿಲ್ಲ. ಇಂಥವರನ್ನು ಸೆಳೆದು ಖಾಯಂ ಗಿರಾಕಿ ಮಾಡಿಕೊಳ್ಳಲು ಪೆಡ್ಲರ್‌ಗಳು ಸಂಚು ರೂಪಿಸಿರುತ್ತಾರೆ ಎನ್ನುತ್ತಾರೆ ಪೊಲೀಸರು.

ಒಟ್ಟು ಡ್ರಗ್ಸ್‌ ವ್ಯಸನಿಗಳಲ್ಲಿ ಶೇ. 40ರಷ್ಟು ಯುವತಿಯರು ಇರುವುದು ವರದಿಗಳಿಂದ ಗೊತ್ತಾಗಿದೆ. ಪಾರ್ಟಿ ಡ್ರಗ್ಸ್‌ ಬಗ್ಗೆ ಯುವಜನರ ಆಕರ್ಷಣೆ ಆತಂಕಕಾರಿ. ಗೋವಾದಲ್ಲಿದ್ದ ಪಾರ್ಟಿ ಡ್ರಗ್ಸ್‌ ಮಂಗಳೂರಿನಲ್ಲಿಯೂ ಸಿಗುತ್ತಿರುವ ಅನುಮಾನವಿದೆ. 18ಕ್ಕಿಂತ ಕಡಿಮೆ ವಯಸ್ಸಿನವರು ಕೂಡ ಡ್ರಗ್ಸ್‌ ಚಟ ಹತ್ತಿಸಿಕೊಂಡಿದ್ದಾರೆ. ವ್ಯಸನಿಗಳು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಹೊರಬರಲು ಸಾಧ್ಯ. ಇದಕ್ಕಿಂತ ಹೆಚ್ಚಾಗಿ ಯಾವುದೇ ಕಾರಣಕ್ಕೆ ಡ್ರಗ್ಸ್‌ ಚಟಕ್ಕೆ ಬೀಳದಂತೆ ಯುವಜನತೆ ಎಚ್ಚೆತ್ತುಕೊಳ್ಳುವುದು ಅತ್ಯಗತ್ಯ.
– ಗುರುಪ್ರಸಾದ್‌,
ಆಪ್ತ ಸಮಾಲೋಚಕರು, “ಬಾರ್ಕ್‌’ ಮಂಗಳೂರು

ಹಲವು ವಿದ್ಯಾರ್ಥಿಗಳ ಬಂಧನ
ನ. 12ರಿಂದ ಡಿ. 6ರವರೆಗೆ ನಗರದಲ್ಲಿ ಗಾಂಜಾ ಸೇವನೆ ಆರೋಪದಲ್ಲಿ 25ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದು ಅವರಲ್ಲಿ 16 ಮಂದಿ ಕಾಲೇಜು ವಿದ್ಯಾರ್ಥಿಗಳು. ಜೂನ್‌ನಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿಯೋರ್ವ ಸೆರೆಯಾಗಿದ್ದ. ಹೈಡ್ರೋವೀಡ್‌ ಗಾಂಜಾ ಮಾರಾಟ ಪ್ರಕರಣದಲ್ಲಿ ವೈದ್ಯ ವಿದ್ಯಾರ್ಥಿನಿಯನ್ನು ಬಂಧಿಸಿದ್ದರು. 2013ರಲ್ಲಿ ವಿದ್ಯಾರ್ಥಿನಿಯೋರ್ವಳು ಡ್ರಗ್ಸ್‌ ಚಟದಿಂದ ಹೊರಬರಲಾಗದೆ ನೇಣಿಗೆ ಶರಣಾಗಿದ್ದಳು.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

11

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

6

Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ

3

Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್‌ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.