ಜಲ ಸಂರಕ್ಷಣೆಯ ಕಾರ್ಯಕ್ಕೆ ಯುವಕ ಮಂಡಲ ಬೆಂಬಲ
Team Udayavani, Jan 13, 2018, 3:19 PM IST
ಸುಳ್ಯ : ಬಿರು ಬೇಸಗೆಯಲ್ಲಿಯು ಗುಡ್ಡದಿಂದ ಒರತೆ ರೂಪದಲ್ಲಿ ಒಸರುವ ನೀರು ಬುವಿಯೊಳಗೆ ಇಳಿದರೆ ಹೇಗೆ ಎಂಬ ಯೋಚನೆ ಮೂಡಿದ್ದ ಯುವಕರಿಗೆ. ಸದುದ್ದೇಶದ ಸಂಗತಿ ಎಂದು ಅದಕ್ಕೆ ಕೈ ಜೋಡಿ ಸಿದ್ದು ಕೃಷಿ ಕುಟುಂಬಗಳು. ಪರಿಣಾಮ ಕನಕಮಜಲಿನ ಕಾರಿಂಜೆಯಲ್ಲಿ ಗುಡ್ಡೆಯಿಂದ ಹರಿದು ಪೋಲಾಗುತ್ತಿದ್ದ ಜಲಧಾರೆ ಹೊಂಡದೊಳಗೆ ಇಂಗಿ ಅಂತರ್ ಜಲ ಹೆಚ್ಚಿಸುವ ಕಾಯಕವಿಲ್ಲಿ ಸದ್ದಿಲ್ಲದೇ ಸಾಗುತ್ತಿದೆ..!
ಕನಕಮಜಲು ಗ್ರಾಮದ ಕಾರಿಂಜೆ ಸಿಆರ್ಸಿ ಕಾಲನಿ ಗುಡ್ಡಭಾಗದಿಂದ ಸುರಂಗದ ಮೂಲಕ ಬೇಸಗೆ ಕಾಲದಲ್ಲಿಯು ನೀರಿನ ಒರತೆ ತಪ್ಪುವುದಿಲ್ಲ. ಸ್ಥಳೀಯ ಆರು ಕುಟುಂಬಗಳು ರಬ್ಬರ್ ತೋಟ¨ಕೆಳಭಾಗದ ಸುರಂಗದ ಬಳಿಯಿಂದ ಪೈಪ್ ಅಳವಡಿಸಿ, ಕೃಷಿ ತೋಟಕ್ಕೆ ಬೇಸಗೆ ಕಾಲದಲ್ಲಿ ನೀರು ಬಳಸಿಕೊಂಡದ್ದು ಇದೆ. 2 ವರ್ಷದ ಹಿಂದೆ ಎಲ್ಲ ಮನೆಗಳಿಗೆ ನೀರಿನ ಪ್ರತ್ಯೇಕ ವ್ಯವಸ್ಥೆ ಆದ ಅನಂತರ ಈ ನೀರು ಸದ್ಬಳಕೆ ಆಗುತ್ತಿರಲಿಲ್ಲ. ನೀರಿನ ಸಂರಕ್ಷಣೆ, ಸಣ್ಣ-ಸಣ್ಣ ಒಡ್ಡುಗಳು ಮೂಲಕ ಅಂತರ್ಜಲದ ಬಗ್ಗೆ ಗ್ರಾಮದಲ್ಲಿ ಜಾಗೃತಿ ಮೂಡಿಸುತ್ತಿದ್ದ ಕನಕಮಜಲು ಯುವಕ ಮಂಡಲಕ್ಕೆ ಈ ನೀರನ್ನು ಸದ್ಬಳಕೆ ಮಾಡುವ ಬಗ್ಗೆ ಯೋಚನೆ ಹೊಳೆಯಿತು. ಜತೆಗೆ ಈ ಹಿಂದೆ ನೀರು ಬಳಸುತ್ತಿದ್ದ ಆರು ಮನೆಯವರು ಮನಸ್ಸು ಮಾಡಿದರು. ಅದೀಗ ಯಶಸ್ಸು ಕಂಡಿದ್ದು, ಗುಡ್ಡದ ನೀರು ಹೊಂಡ ತುಂಬುತ್ತಿದೆ.
ನೀರು ಇಂಗಿಸುವಿಕೆ
ಒರತೆ ಬೀಳುತ್ತಿದ್ದ ಸುರಂಗ ಸ್ಥಳದಲ್ಲಿ ಪೋಲಾಗಿ ಹರಿಯುತ್ತಿದ್ದ ನೀರನ್ನು ಭೂಮಿಗೆ ಹರಿಸುವ ಪೂರ್ವಭಾವಿ ಕಾರ್ಯವನ್ನು ಯುವಕ ಮಂಡಲದ ಸದಸ್ಯರು ಶ್ರಮದಾನ ಮೂಲಕ ಮಾಡಿದರು. ಕೆಲ ತಾಸಿನ ಕೆಲಸದಲ್ಲಿಯೇ ಅಲ್ಲಿ ನೀರು ಹರಿಯಲು ಸಜ್ಜಾಗಿತ್ತು. ಅಡಿಕೆ ತೋಟದೊಳಗಿನ ಹೊಂಡವನ್ನು ಆರು ಮನೆಯವರು, ಇತರರು ಸೇರಿ ದುರಸ್ತಿಗೊಳಿಸಿದ್ದಾರೆ. ಅನಂತರ ಪೈಪ್ ಅಳವಡಿಸಿ, 200 ಮೀ ದೂರದಲ್ಲಿನ ಹೊಂಡಕ್ಕೆ ನೀರು ಹರಿಸಲಾಗಿದೆ. ಹೊಂಡದಿಂದ ನೀರು ನೇರವಾಗಿ ಭೂಮಿಗೆ ಇಂಗುತ್ತಿದೆ. ಈಗಲೂ ಹೊಂಡದಲ್ಲಿ ಮುಕ್ಕಾಲು ಭಾಗದಷ್ಟು ನೀರು ನಿಂತಿದೆ ಎನ್ನುತ್ತಾರೆ ಜಯಪ್ರಸಾದ್ ಅವರು.
ಗುಡ್ಡದ ನೀರಿನ ಕಥೆ
ಕೆಲ ವರ್ಷಗಳ ಹಿಂದೆ ಈ ನೀರನ್ನು ತೋಟಕ್ಕೆ ಬಳಸಲಾಗುತಿತ್ತು. ಚಂದ್ರಶೇಖರ್, ಜಯಪ್ರಸಾದ್, ಕುಶಾಲಪ್ಪ, ಬಾಲಕೃಷ್ಣ, ನಾರಾಯಣ ಗೌಡ, ರುಕ್ಮಯ ಗೌಡ ಅವರು ನೀರು ಸಂಗ್ರಹಿಸಲು ತಮ್ಮ ತೋಟದಲ್ಲಿ 70 μàಟ್ ಉದ್ದ, 2 ಕೋಲು ಆಳದ ಹೊಂಡ ನಿರ್ಮಿಸಿದ್ದರು. ಗುಡ್ಡದ ಬಳಿಯಿಂದ ಪೈಪ್ ಮೂಲಕ ಈ ಹೊಂಡಕ್ಕೆ ನೀರು ಹರಿದು ಬರುತ್ತಿತ್ತು. ಅನಂತರ ಆರು ಮಂದಿ, ತಲಾ ಒಬ್ಬರಂತೆ ವಾರಕ್ಕೆ ಒಂದು ದಿನ ಈ ಹೊಂಡದಿಂದ ನೀರನ್ನು ತೋಟಕ್ಕೆ
ಬಳಸುತ್ತಿದ್ದರು. ಎಲ್ಲ ಮನೆಗಳಲ್ಲಿ ಕೃಷಿ ತೋಟಕ್ಕೆ ನೀರಿನ ಪರ್ಯಾಯ ವ್ಯವಸ್ಥೆ ಆದ ಕಾರಣದಿಂದ, ಎರಡು ವರ್ಷದಿಂದ ಗುಡ್ಡದ ನೀರನ್ನು ಬಳಸುತ್ತಿಲ್ಲ.
ಹದಿನೈದಕ್ಕೂ ಅಧಿಕ ಕಟ್ಟ
ಗ್ರಾಮದಲ್ಲಿ ಅಂದಾಜು ಹದಿನೈದಕ್ಕೂ ಅಧಿಕ ನೀರು ಸಂರಕ್ಷಣೆಯ ಒಡ್ಡುಗಳಿವೆ. ಈ ವರ್ಷ ಅಕ್ಕಿಮಲೆ, ಕಾರಿಂಜ, ಕೊರಂಬಡ್ಕ, ಪಂಜಿಗುಡ್ಡೆಯಲ್ಲಿ ನೀರಿಂಗಿಸುವ ಕಾರ್ಯದಲ್ಲಿ ಕನಕಮಜಲು ಯುವಕ ಮಂಡಲ ಸಹಕಾರ ನೀಡಿದೆ. ಕಾಪಿಲದಲ್ಲಿ ಯೋಜನೆ ಕೈಗೆತ್ತಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಉಳಿದ ಕಡೆಗಳಲ್ಲಿ ಜನರೇ ಸ್ವಯಂ ಪ್ರೇರಿತರಾಗಿ ಕಟ್ಟ ಕಟ್ಟಿದ್ದು ಇದೆ. ಸರಕಾರದ ಅನುದಾನ ಬಳಸಿಯು ನಿರ್ಮಾಣ ಆಗಿದೆ. ಅಲ್ಲೆಲ್ಲಾ ಜಲ ಸಂರಕ್ಷಣೆ ಕಾರ್ಯ ಪ್ರಗತಿಯಲ್ಲಿದೆ.
ಅಗತ್ಯ ಕಾರ್ಯ
ನೀರಿನ ಸಮಸ್ಯೆ ಪರಿಹಾರಕ್ಕೆ ಕೊಳವೆಬಾವಿ ಶಾಶ್ವತ ಪರಿಹಾರ ಅಲ್ಲ. ಬದಲಿಗೆ ಹರಿದು ಹೋಗುವ ನೀರನ್ನು ಮತ್ತೆ ಬುವಿಗಿಳಿಸುವ, ಅದನ್ನು ಬಳಸುವ ಪ್ರಯತ್ನ ಆಗಬೇಕು. ಅದಕ್ಕೆ ಯುವಕ ಮಂಡಲ ಬೆಂಬಲ ನೀಡಿದೆ. ಮುಂದಿನ
ವರ್ಷ ಜಲಜಾಗೃತಿಯ ನಿಟ್ಟಿನಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಉದ್ದೇಶ ಹೊಂದಲಾಗಿದೆ.
- ಸಂತೋಷ್ ಕುಮಾರ್ ನೆಡೀಲು,
ಅಧ್ಯಕ್ಷರು, ಯುವಕ ಮಂಡಲ, ಕನಕಮಜಲು
ಜಾಗೃತಿ ಕಾರ್ಯ
ಮೂರು ಬಾರಿ ಜಲತಜ್ಞ ಶ್ರೀಪಡ್ರೆ, ಒಂದು ಬಾರಿ ನೋಡೆಲ್ ಅಧಿಕಾರಿ ಸುಧಾಕರ್ ಅವರ ಉಪಸ್ಥಿತಿಯಲ್ಲಿ ನೀರು ಸಂರಕ್ಷಿಸುವ ಬಗ್ಗೆ ಕಾರ್ಯಾಗಾರ ಗ್ರಾಮದಲ್ಲಿ ನಡೆದಿದೆ. ನಾವಿಲ್ಲಿ ಜಾಗೃತಿ ಮೂಡಿಸುವುದಷ್ಟೆ. ಇಲ್ಲಿ ನಾವೇ ಮಾಡಿದ್ದೇವೆ ಅನ್ನುವುದಲ್ಲ. ಎಲ್ಲರಲ್ಲಿ ನೀರಿನ ಸಂರಕ್ಷಣೆಯ ಬಗ್ಗೆ ಮನಸ್ಥಿತಿ ಮೂಡಲಿ ಅನ್ನುವುದು ನಮ್ಮ ಮುಖ್ಯ ಉದ್ದೇಶ.
– ಲಕ್ಷ್ಮೀನಾರಾಯಣ ಕಜೆಗದ್ದೆ
ಮಾಜಿ ಅಧ್ಯಕ್ಷ, ಯುವಕ ಮಂಡಲ
ಕನಕಮಜಲು
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.