![Mysuru: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ](https://www.udayavani.com/wp-content/uploads/2025/02/mysuru-415x295.jpg)
![Mysuru: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ](https://www.udayavani.com/wp-content/uploads/2025/02/mysuru-415x295.jpg)
Team Udayavani, Jan 29, 2025, 11:18 AM IST
ಮಂಗಳೂರು: ಮಿತ್ರಸಂಸ್ಥೆ ಯುವಶಕ್ತಿ ದುರ್ಗಾಪುರ ನೇತೃತ್ವದಲ್ಲಿ ಯುವಶಕ್ತಿ ಸೇವಾಪಥ ದಕ್ಷಿಣ ಕನ್ನಡದ ಮೂರನೇ ವರ್ಷದ ಯುವಸೇವಾಸಂಭ್ರಮ ಕಾರ್ಯಕ್ರಮ ಯಕ್ಷಸಭಾಭವನ ದುರ್ಗಾಪುರ ಕಿನ್ಯಾದಲ್ಲಿ ಜರಗಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನ ಭಂಡಾರ ಮನೆ ಬೆಳರಿಂಗೆ ಕಿನ್ಯಾ ಇದರ ಆಡಳಿತ ಮೊಕ್ತೇಸರರಾದ ಬಾಬು ಶ್ರೀ ಶಾಸ್ತ ಕಿನ್ಯಾ ವಹಿಸಿದ್ದರು
ಶ್ರೀ ರಾಜ ಬೆಳ್ಚಪ್ಪಾಡ ಅಣ್ಣ ದೈವ ಪಾತ್ರಿ ಶ್ರೀ ಕ್ಷೇತ್ರ ಉದ್ಯಾವರ ಮಾಡ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.
ಅಂಬಾವನ ಧರ್ಮ ಶಿಕ್ಷಣ ಕೇಂದ್ರ ತೊಕ್ಕೊಟ್ಟು ಇದರ ಇದರ ಪ್ರಧಾನ ಸಂಚಾಲಕರಾದ ಡಾ.ಅರುಣ್ ಉಳ್ಳಾಲ್ ಪ್ರಧಾನ ಭಾಷಣ ಮಾಡಿ ಕೇವಲ 3 ವರ್ಷಗಳಲ್ಲಿ ಸಮಾಜಕ್ಕೆ ಒಂದು ಕೋಟಿಗೂ ಹೆಚ್ಚು ಅರ್ಪಿಸಿದ ಸೇವಾ ಪಥದ ಕಾರ್ಯ ಅಭಿನಂದನದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕರಾದ ಜಯಪ್ರಕಾಶ್ ತಲಪಾಡಿ ಹಾಗೂ ನಾರಾಯಣ ಕುಂಪಲ, ವಿಜಯಕುಮಾರ್ ರೈ ಕುಂಬ್ಳೆರವರನ್ನು ಸನ್ಮಾನಿಸಲಾಯಿತು.ಸೇವಾಸಂಸ್ಥೆಗಳನ್ನು ಹಾಗೂ ಮಿತ್ರಸಂಸ್ಥೆಗಳನ್ನು ಗೌರವಿಸಲಾಯಿತು..
20 ಫಲಾನುಭವಿಗಳಿಗೆ 5 ಲಕ್ಷ ರೂ ಸೇವಾನಿಧಿ ಹಸ್ತಾಂತರಿಸಲಾಯಿತು.ಕಾರ್ಯಕರ್ತ ಕ್ಷೇಮನಿಧಿಗೆ ರೂ 49,000 ಸಮರ್ಪಿಸಲಾಯಿತು.
ಆಂಬುಲೆನ್ಸ್ ಲೋಕಾರ್ಪಣೆ
ಯುವಶಕ್ತಿ ಕಾರ್ಯಕರ್ತ ರಘು ಎಕ್ಕೂರುರವರ “ಧನಶ್ರೀ ಆಂಬುಲೆನ್ಸ್ ” ಗಣ್ಯರ ಸಮ್ಮುಖ ಲೋಕಾರ್ಪಣೆ ಮಾಡಲಾಯಿತು .
ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ (ರಿ.) ದುರ್ಗಾಪುರ ಕಿನ್ಯಾ ಅಧ್ಯಕ್ಷರಾದ ಮೋಹನ್ ದಾಸ್ ಎ, ಡಾ.ದಿವ್ಯಾ ಶೆಟ್ಟಿ ಮಂಗಳೂರು, ಫ್ರೆಂಡ್ಸ್ ಕೊಲ್ಯದ ಸ್ಥಾಪಕ ಅಧ್ಯಕ್ಷ ಅಶ್ವಿನ್ ಕೊಲ್ಯ, ಯುವಶಕ್ತಿ ರಕ್ತನಿಧಿ ಇದರ ದಯಾನಂದ ಭಟ್ ಕಾಸರಗೋಡು, ಯುವಶಕ್ತಿ ದುರ್ಗಾಪುರದ ಪ್ರಮುಖರಾದ ಪಾರ್ಥಸಾರಥಿ ಕಿನ್ಯಾ, ಯುವಶಕ್ತಿ ಕಡೇಶಿವಾಲಯ( ರಿ) ಅಧ್ಯಕ್ಷರಾದ ದೇವಿಪ್ರಸಾದ್ ಬೇಂಗದಡಿ, ಯುವಶಕ್ತಿ ಸೇವಾ ಪಥದ ಪ್ರಮುಖರಾದ ಜಯರಾಜ್ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಮೇಶ್ ಆಳ್ವ ದೇವೀಪುರ ಸ್ವಾಗತಿಸಿ ರಾಜೇಂದ್ರ ಶೆಟ್ಟಿ ತಟ್ಟಾಜೆ ವಂದಿಸಿದರು. ದುರ್ಗಾಪ್ರಸಾದ್ ಅಮೈ ಹಾಗೂ ಮಲ್ಲಿಕಾ ಅಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಯುವಶಕ್ತಿ ತಂಡದಿಂದ ಇಲ್ಲಿಯವರೆಗೆ 1 ಕೋಟಿ 18 ಲಕ್ಷ ರೂ ಗಳನು ಸಮಾಜಕ್ಕೆ ಸಮರ್ಪಣೆಯಾಗಿದ್ದು ಯುವಶಕ್ತಿ ರಕ್ತನಿಧಿಯ ಮೂಲಕ 15,000+ ಯುನಿಟ್ ರಕ್ತ ಆಸ್ಪತ್ರೆಗಳಿಗೆ ಪೂರೈಕೆಯಾಗಿದೆ
ಈ ಸಂಭ್ರಮದ ಸಲುವಾಗಿ ಸಂತೃಪ್ತಿ ಎನ್ನುವ ಹೆಸರಿನಿಂದ ಕಡೇಶಿವಾಲಯ ಪ್ರಾಥಮಿಕ ಶಾಲೆಗೆ ಕೊಠಡಿಗಳನ್ನು ನಿರ್ಮಿಸಲಾಗಿದ್ದು,ಫೆಬ್ರವರಿ 15 ರಂದು ಶಾಲೆಗೆ ಹಸ್ತಾಂತರ ಮಾಡಲಾಗುವುದು.ಇದರ ಜೊತೆಗೆ ರಕ್ತದಾನ ಶಿಬಿರ ಹಾಗೂ ಸಂಜೆ ಸಭೆ ಸನ್ಮಾನ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Weather Change: ಹವಾಮಾನ ತೀವ್ರ ಬದಲಾವಣೆ: ಕೆಮ್ಮು, ಶೀತ, ಜ್ವರ ಆತಂಕ
Robbery Case: ಮೂಡುಬಿದಿರೆ ಅಳಿಯೂರು; ಹಾಡ ಹಗಲೇ ಚಿನ್ನಾಭರಣ ದರೋಡೆ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ
Mysuru: ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆಗೆ ಶರಣು… ಸ್ಥಳದಲ್ಲಿ ಡೆ*ತ್ ನೋಟ್ ಪತ್ತೆ
NR Pura: ಭದ್ರಾ ನದಿಯಲ್ಲಿ ಈಜಲು ಹೋಗಿ ನೀರು ಪಾಲಾದ ಯುವಕ… ಮುಂದುವರೆದ ಶೋಧ ಕಾರ್ಯ
Dharwad: ದಾಂಪತ್ಯದಲ್ಲಿ ಅನ್ಯೋನ್ಯವಾಗಿದ್ದ ಹಿರಿಯ ದಂಪತಿಗಳು ಸಾವಿನಲ್ಲೂ ಒಂದಾದರು
Mudigere: ಸುತ್ತಿಗೆಯಿಂದ ತಲೆಗೆ ಹೊಡೆದು ಅತ್ತೆಯ ಹತ್ಯೆ… ಅಳಿಯ ಪರಾರಿ, ಪೊಲೀಸರಿಂದ ಶೋಧ
Shivamogga: ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದು ಕಿಡ್ನಾಪ್… ಹಣಕ್ಕೆ ಡಿಮಾಂಡ್
You seem to have an Ad Blocker on.
To continue reading, please turn it off or whitelist Udayavani.