“ಝೀಬ್ರಾ ಕ್ರಾಸಿಂಗ್’ ಇಲ್ಲದೆ ಪಾದಚಾರಿಗಳ ಪರದಾಟ
ಅಪಾಯಕಾರಿಯಾದ ಜಂಕ್ಷನ್‌ಗಳು; ರಸ್ತೆ ದಾಟುವುದು ಸವಾಲು
Team Udayavani, Jan 9, 2023, 7:30 AM IST
ಮಹಾನಗರ: ನಗರದ ಹಲವೆಡೆ ಫುಟ್‌ಪಾತ್‌ಗಳ ನಿರ್ಮಾಣ, ಅಭಿವೃದ್ಧಿಯಾಗಿ ಪಾದಚಾರಿಗಳಿಗೆ ಅನುಕೂಲವಾಗಿದೆ. ಆದರೆ ಪ್ರಮುಖ ಜಂಕ್ಷನ್‌ಗಳಲ್ಲಿ, ಮುಖ್ಯವಾಗಿ ಕೆಲವು ಸಿಗ್ನಲ್‌ಗಳ ಸಮೀಪದಲ್ಲಿ ಝೀಬ್ರಾ ಕ್ರಾಸಿಂಗ್‌ಗಳು ಇಲ್ಲದೆ ಪಾದಚಾರಿಗಳು ತೀರಾ ಅಪಾಯ ಕಾರಿಯಾಗಿ ರಸ್ತೆ ದಾಟುವಂತಾಗಿದೆ.
ವಾಹನ ಮತ್ತು ಜನಸಂಚಾರ ಅಧಿಕವಿ ರುವ ಪಿವಿಎಸ್ ಜಂಕ್ಷನ್, ಲಾಲ್‌ಬಾಗ್ ಜಂಕ್ಷನ್ ಹಾಗೂ ಹಂಪನಕಟ್ಟೆ ಜಂಕ್ಷನ್‌ಗಳಲ್ಲಿ ಸಿಗ್ನಲ್ ವ್ಯವಸ್ಥೆ ಇದೆ. ಆದರೆ ಹಂಪನಕಟ್ಟೆ ಹೊರತುಪಡಿಸಿ ಇತರ ಎರಡು ಜಂಕ್ಷನ್‌ಗ ಳಲ್ಲಿಯೂ ಝೀಬ್ರಾ ಕ್ರಾಸಿಂಗ್‌ನ ಬಣ್ಣ (ಕಪ್ಪು, ಬಿಳಿ) ಅಳಿಸಿ ಹೋಗಿದೆ. ಕೆಲವೆಡೆ ಝೀಬ್ರಾ ಕ್ರಾಸಿಂಗ್‌ನ ಕುರುಹು ಕೂಡ ಇಲ್ಲ!
ಜ್ಯೋತಿ, ನಂತೂರು ಜಂಕ್ಷನ್‌ಗಳು ಮತ್ತು ಈ ಹಿಂದಿನ ಎ.ಬಿ. ಶೆಟ್ಟಿ ವೃತ್ತ ಇದ್ದ ಸ್ಥಳಗಳಲ್ಲಿ ಕೂಡ ಝೀಬ್ರಾ ಕ್ರಾಸಿಂಗ್ ಕಾಣಿಸುತ್ತಿಲ್ಲ. ಈ ಪೈಕಿ ಪಿವಿಎಸ್ ಸಿಗ್ನಲ್ ಸ್ಥಳ ಪಾದಚಾರಿಗಳಿಗೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಕೊಂಡು ಅಪಾಯಕಾರಿಯಾಗಿ ರಸ್ತೆದಾಟು ತ್ತಿದ್ದಾರೆ. ಹಿರಿಯ ನಾಗರಿಕರು, ಮಕ್ಕಳು ಪರದಾಡಬೇಕಾದ ಸ್ಥಿತಿ ಇದೆ. ಸಂಚಾರಿ ಪೊಲೀಸರೇ ರಸ್ತೆ ದಾಟಿಸಬೇಕಾದ ಸ್ಥಿತಿ ಉಂಟಾಗಿದೆ.
ಝೀಬ್ರಾ ಕ್ರಾಸಿಂಗ್ ಸುರಕ್ಷಿತ
ಸಿಗ್ನಲ್‌ಗಳಿರುವ ಸ್ಥಳಗಳು ಸಹಿತ ಜಂಕ್ಷನ್‌ಗಳಲ್ಲಿ ಸುರಕ್ಷಿತವಾಗಿ ರಸ್ತೆ ದಾಟಲು ಝೀಬ್ರಾ ಕ್ರಾಸಿಂಗ್ ಅತೀ ಅವಶ್ಯ. ಸಿಗ್ನಲ್‌ಗಳಿರುವ ಜಂಕ್ಷನ್‌ಗಳಲ್ಲಿ ಪಾದಚಾರಿಗಳ ಸಂಚಾರಕ್ಕೆಂದೇ ನಿರ್ದಿಷ್ಟ ಕಾಲಾವಕಾಶ ನೀಡಲಾಗುತ್ತದೆ. ಆ ವೇಳೆ ಝೀಬ್ರಾ ಕ್ರಾಸಿಂಗ್‌ನಲ್ಲಿ ಸುರಕ್ಷಿತವಾಗಿ ರಸ್ತೆ ದಾಟಲು ಸಾಧ್ಯವಿರುತ್ತದೆ. ಸಿಗ್ನಲ್‌ನಲ್ಲಿ ವಾಹನಗಳಿಗೆ ಕೆಂಪು ದೀಪ ತೋರಿಸಿದಾಗ ವಾಹನಗಳು ಝೀಬ್ರಾ ಕ್ರಾಸಿಂಗ್ ಸ್ಥಳದಿಂದ ಹಿಂದಕ್ಕೆ ನಿಲ್ಲಿಸಬೇಕಾದುದು ನಿಯಮ. ಆದರೆ ಝೀಬ್ರಾ ಕ್ರಾಸಿಂಗ್ ಬಣ್ಣ ಕಳೆದುಕೊಂಡಿರುವ ಸ್ಥಳಗಳಲ್ಲಿ ವಾಹನಗಳು ಝೀಬ್ರಾ ಕ್ರಾಸಿಂಗ್ ಸ್ಥಳವನ್ನು ಕೂಡ ದಾಟಿ ಮುಂದೆ ಬಂದಿರುತ್ತವೆ. ಇದರಿಂದಾಗಿ ಜನ ರಸ್ತೆ ದಾಟಲು ಸ್ಥಳವೇ ಸಿಗುತ್ತಿಲ್ಲ. ಸಿಗ್ನಲ್ ಲೈಟ್‌ಗಳು ಇಲ್ಲದ ಜಂಕ್ಷನ್‌ಗಳಲ್ಲಿಯೂ ಝೀಬ್ರಾ ಕ್ರಾಸಿಂಗ್ ಮಾರ್ಕ್ ಅತೀ ಅಗತ್ಯ. ಝೀಬ್ರಾ ಕ್ರಾಸಿಂಗ್ ಇದ್ದರೆ ವಾಹನ ಚಾಲಕರು ವಾಹನದ ವೇಗ ತಗ್ಗಿಸುತ್ತಾರೆ. ಇದು ನಿಯಮ ಕೂಡ ಹೌದು. ಆಗ ರಸ್ತೆ ದಾಟುವವರಿಗೆ ಅಪಾಯ ಕಡಿಮೆ.
ಪಾಲಿಕೆಯ ಗಮನಕ್ಕೆ
ಸಿಗ್ನಲ್‌ಗಳು ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ಝೀಬ್ರಾ ಕ್ರಾಸಿಂಗ್ ಗುರುತಿನ ಬಣ್ಣ ಅಳಿಸಿ ಹೋಗಿರುವ ಬಗ್ಗೆ ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಗೆ ತಿಳಿಸಲಾಗಿದೆ. ಪಾಲಿಕೆಯವರು ಶೀಘ್ರ ಕೆಲಸ ನಡೆಸುವ ನಿರೀಕ್ಷೆ ಇದೆ.
-ಗೀತಾ ಕುಲಕರ್ಣಿ, ಎಸಿಪಿ, ಸಂಚಾರ ವಿಭಾಗ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.