ಜಿ.ಪಂ., ತಾ.ಪಂ. ಕ್ಷೇತ್ರವಾರು ವಿಂಗಡನೆ ಪೂರ್ಣ: ಕರಡು ಪಟ್ಟಿ ಶೀಘ್ರ ಪ್ರಕಟ
ಕ್ಷೇತ್ರಗಳ ಸಂಖ್ಯೆ ಏರಿಳಿತ :ಜನಸಂಖ್ಯೆ ಅಧಾರದಲ್ಲಿ ಪ್ರಾತಿನಿಧ್ಯ
Team Udayavani, Jun 30, 2022, 6:30 AM IST
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ಜನಸಂಖ್ಯೆ ಅಧಾರದಲ್ಲಿ ಮರು ವಿಂಗಡಿಸುವ ಕಾರ್ಯ ಪೂರ್ಣಗೊಂಡಿದ್ದು ಹೊಸ ಪಟ್ಟಿ ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಸಲ್ಲಿಕೆಯಾಗಿದೆ. ಆಯೋಗ ರಾಜ್ಯವಾರು ಕರಡು ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸುವ ನಿರೀಕ್ಷೆ ಇದೆ.
ರಾಜ್ಯ ಚುನಾವಣ ಆಯೋಗ ಎಲ್ಲ ಜಿ.ಪಂ., ತಾ.ಪಂ.ಗಳ ಕ್ಷೇತ್ರ ಹಾಗೂ ಸದಸ್ಯರ ಸಂಖ್ಯೆಯನ್ನು ಅಂತಿಮಗೊಳಿಸಿ ಮಾ. 24ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು. ಆದರೆ ಈ ಹಂತದಲ್ಲಿ ರಾಜ್ಯ ಸರಕಾರ ಜನಸಂಖ್ಯೆ ಆಧಾರದ ಮೇಲೆ ಪ್ರತಿಯೊಂದು ತಾ.ಪಂ. ಮತ್ತು ಜಿ.ಪಂ.ಗೆ ಚುನಾಯಿಸಬೇಕಾದ ಒಟ್ಟು ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಲು ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ರಚನೆ ಮಾಡಿದ ಹಿನ್ನೆಲೆಯಲ್ಲಿ ಇದು ಸ್ಥಗಿತಗೊಂಡಿತ್ತು. ಆಯೋಗದ ನಿರ್ದೇಶನದಂತೆ ಇದೀಗ ಜಿ.ಪಂ. ಹಾಗೂ ತಾ.ಪಂ. ಕ್ಷೇತ್ರಗಳನ್ನು ಪುನರ್ ವಿಂಗಡಿಸಲಾಗಿದೆ.
ಕ್ಷೇತ್ರಗಳ ಸಂಖ್ಯೆಗಳಲ್ಲಿ ಏರಿಳಿತ
ಪುನರ್ ವಿಂಗಡನೆಯಂತೆ ಮಾರ್ಚ್‌ನಲ್ಲಿ ಪ್ರಕಟಿಸಿದ ಕ್ಷೇತ್ರಗಳ ಸಂಖ್ಯೆಗೆ ಹೋಲಿಸಿದರೆ ಏರಿಳಿತವಾಗಿದೆ. ಹೊಸ ಮಾರ್ಗಸೂಚಿಯಂತೆ 40,000 ಜನಸಂಖ್ಯೆಗೆ 1 ಜಿ.ಪಂ. ಕ್ಷೇತ್ರದಂತೆ ನಿಗದಿಪಡಿಸಲಾಗಿದೆ. ತಾ.ಪಂ.ನಲ್ಲಿ ಪ್ರತೀ 10,000 ಜನಸಂಖ್ಯೆಗೆ 1 ತಾ.ಪಂ. ಸ್ಥಾನ ನಿಗದಿಪಡಿಸಲಾಗಿದೆ. ಕ್ಷೇತ್ರದ ಒಟ್ಟು ಜನಸಂಖ್ಯೆ 2 ಲಕ್ಷ ಇದ್ದರೆ 19 ಸ್ಥಾನಗಳು, 2.39 ಲಕ್ಷ ಇದ್ದರೆ 20 ಸ್ಥಾನ ದೊರಕುತ್ತವೆ.
ಹೊಸದಾಗಿ ಆಗಿರುವ ಕ್ಷೇತ್ರ ಪುನರ್ ವಿಂಗಡನೆಯಲ್ಲಿ ದ.ಕ. ಜಿ.ಪಂ.ನಲ್ಲಿ 35 ಹಾಗೂ 9 ತಾ.ಪಂ.ಗಳಲ್ಲಿ ಒಟ್ಟು 126 ಸ್ಥಾನಗಳು ನಿಗದಿಯಾಗುತ್ತವೆ. 2016ರಲ್ಲಿ ದ.ಕ. ಜಿ.ಪಂ.ನ ಸದಸ್ಯ ಸಂಖ್ಯೆ 36ರ ಆಗಿತ್ತು. ಇದು 2022ರ ಪುನರ್‌ವಿಂಗಡನೆ ವೇಳೆ 42ಕ್ಕೇರಿತ್ತು. ಇದೀಗ ಸೀಮಾ ಆಯೋಗದ ಪುನರ್‌ವಿಂಗಡನೆಯಲ್ಲಿ 35ಕ್ಕಿಳಿದಿದೆ. 5 ತಾ.ಪಂ.ಗಳಿಗೆ 2016ರ ಚುನಾವಣೆ ಸಂದರ್ಭ 136 ಕ್ಷೇತ್ರಗಳಿದ್ದವು. 2022ರ ಪುನರ್ ವಿಂಗಡನೆಯಲ್ಲಿ ಹೊಸ 4 ತಾ.ಪಂ.ಗಳು ಸೇರಿ 9 ತಾ.ಪಂ.ಗಳ ಒಟ್ಟು ಒಟ್ಟು 118ಕ್ಕೆ ಇಳಿಕೆಯಾಗಿತ್ತು. ಇದೀಗ ಹೊಸ ವಿಧಾನಸಭಾವಾರು ಪುನರ್‌ವಿಂಗಡನೆಯಲ್ಲಿ 126ಕ್ಕೇರಿದೆ.
ಉಡುಪಿ ಜಿ.ಪಂ.ನ 2016ರ ಚುನಾವಣೆ ಸಂದರ್ಭ ಇದ್ದ 26 ಕ್ಷೇತ್ರಗಳ ಸಂಖ್ಯೆ 2022ರ ಪುನರ್‌ವಿಂಗಡನೆಯಲ್ಲಿ 30ಕ್ಕೇರಿತ್ತು. ಹೊಸ ಪುನರ್‌ವಿಂಗಡನೆಯಲ್ಲಿ ಮತ್ತೆ 26 ಇಳಿಕೆಯಾಗಲಿದೆ. 3 ತಾ.ಪಂ.ಗಳಿಗೆ 2016ರ ಚುನಾವಣೆ ಸಂದರ್ಭ ಒಟ್ಟು 97 ಕ್ಷೇತ್ರಗಳಿದ್ದವು. 2022ರ ಪುನರ್‌ವಿಂಗಡನೆಯಲ್ಲಿ 7 ತಾ.ಪಂ.ಗಳ ಒಟ್ಟು ಸದಸ್ಯ ಸಂಖ್ಯೆ 86ಕ್ಕೆ ಇಳಿದಿತ್ತು. ಇದೀಗ ಹೊಸ ಪುನರ್ ವಿಂಗಡನೆಯಲ್ಲಿ 95ಕ್ಕೆ ಏರಿಕೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.