ನಿಯಮ ಉಲ್ಲಂಘಿಸಿದ 42 ಆಟೋ ವಶ

ಪೊಲೀಸರಿಂದ ವಿವಿಧ ದಾಖಲೆ-ಹೆಚ್ಚುವರಿ ಸೀಟ್ ಹಾಕಿರುವ ಪರಿಶೀಲನೆ•ಕಠಿಣ ಕ್ರಮದ ಎಚ್ಚರಿಕೆ

Team Udayavani, Jul 17, 2019, 9:59 AM IST

17-July-3

ದಾವಣಗೆರೆ: ಆಟೋ ವಶಪಡಿಸಿಕೊಂಡ ಪೊಲೀಸರು ಚಾಲಕರಿಗೆ ಎಚ್ಚರಿಕೆ ನೀಡಿದರು.

ದಾವಣಗೆರೆ: ಜಯದೇವ ವೃತ್ತ, ಜಗಳೂರು ಬಸ್‌ ನಿಲ್ದಾಣ, ಹಳೆ ಬಸ್‌ ನಿಲ್ದಾಣ…ದಲ್ಲಿ ಪೊಲೀಸರು ಮಂಗಳವಾರ 42 ಆಪೆ ಆಟೋ ವಶಕ್ಕೆ ತೆಗೆದುಕೊಂಡಿದ್ದಾರೆ.

ನಗರ ಪೊಲೀಸ್‌ ಉಪಾಧೀಕ್ಷಕ ಎಸ್‌.ಎಂ. ನಾಗರಾಜ್‌, ಬಡಾವಣಾ ಪಿಎಸ್‌ಐ ವೀರಬಸಪ್ಪ ಕುಸಲಾಪುರ, ದಕ್ಷಿಣ ಸಂಚಾರಿ ಪೊಲೀಸ್‌ ಠಾಣಾ ಪಿಎಸ್‌ಐ ಮಂಜುನಾಥ್‌ ಅರ್ಜುನ್‌ ಲಿಂಗಾರೆಡ್ಡಿ ನೇತೃತ್ವದಲ್ಲಿ ಜಯದೇವ ವೃತ್ತ, ಹಳೆ ಬಸ್‌ ನಿಲ್ದಾಣ ಮತ್ತು ಜಗಳೂರು ಬಸ್‌ ನಿಲ್ದಾಣದ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜಯದೇವ ವೃತ್ತದಲ್ಲಿ 32, ಜಗಳೂರು ಬಸ್‌ ನಿಲ್ದಾಣದಲ್ಲಿ 10 ಒಟ್ಟಾರೆ 42 ಆಪೆ ಆಟೋ ವಶಕ್ಕೆ ತೆಗೆದುಕೊಂಡರು.

ಬಡಾವಣಾ ಪೊಲೀಸ್‌ ಠಾಣಾ ಆವರಣದಲ್ಲಿ ಆಟೋಗಳ ಪರವಾನಿಗೆ, ಚಾಲಕರ ಚಾಲನಾ ಪತ್ರ ಒಳಗೊಂಡಂತೆ ಮತ್ತಿತರ ಅಗತ್ಯ ದಾಖಲೆ ಪರಿಶೀಲನೆ ನಡೆಸಿದರು.

ಎಲ್ಲಾ ಅಗತ್ಯ ದಾಖಲೆ ಹೊಂದಿದ್ದಂತಹ ಚಾಲಕರಿಗೆ ಹೆಚ್ಚುವರಿ ಸೀಟು ಹಾಕಿದ್ದಕ್ಕೆ 100 ರೂಪಾಯಿ ದಂಡ ವಿಧಿಸಿ, ಮುಂದೆ ನಿಗದಿತ ಸೀಟುಗಳಿಗಿಂತಲೂ ಹೆಚ್ಚಿನ ಸೀಟು ಹಾಕದಂತೆ ಎಚ್ಚರಿಕೆ ನೀಡಿದರು. ಪರವಾನಿಗೆ ಹಾಗೂ ಅಗತ್ಯ ದಾಖಲೆ ಇಲ್ಲದಂತಹ ಆಟೋಗಳನ್ನ ಸೀಜ್‌ ಮಾಡಿದರು.

ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್‌ ಉಪಾಧೀಕ್ಷಕ ಎಸ್‌.ಎಂ. ನಾಗರಾಜ್‌, ಪ್ರಯಾಣಿಕರ ಸುರಕ್ಷತೆ ಮತ್ತು ಹಿತದೃಷ್ಟಿಯಿಂದ ಜಿಲ್ಲಾ ರಕ್ಷಣಾಧಿಕಾರಿಯವರ ಸೂಚನೆ ಮೇರೆಗೆ ಜಯದೇವ ವೃತ್ತ, ಜಗಳೂರು ಬಸ್‌ ನಿಲ್ದಾಣ, ಹಳೆ ಬಸ್‌ ನಿಲ್ದಾಣ…ದಲ್ಲಿ ತಪಾಸಣೆ ನಡೆಸಿ, 42 ಆಪೆ ಆಟೋ ವಶಕ್ಕೆ ತೆಗೆದುಕೊಂಡಿದ್ದು, ಪರವಾನಿಗೆ ಇದ್ದಂತಹವರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳಿಸಲಾಗುವುದು. ಪರವಾನಿಗೆ ಇತರೆ ಅಗತ್ಯ ದಾಖಲೆ ಇಲ್ಲದಂತಹ ಆಟೋಗಳನ್ನ ಸೀಜ್‌ ಮಾಡಲಾಗುವುದು ಎಂದು ತಿಳಿಸಿದರು.

ಪರ್ಮಿಟ್ಗಿಂತಲೂ ಹೆಚ್ಚಿನ ಸೀಟು ಇದ್ದು ಅಪಘಾತ ಸಂಭವಿಸಿದಲ್ಲಿ ನ್ಯಾಯಾಲಯ ನೀಡುವ ಆದೇಶದಂತೆ ಆಟೋ ಚಾಲಕರು, ಮಾಲಿಕರೇ ದಂಡ ಪಾವತಿಸಬೇಕಾಗುತ್ತದೆ. ಕೆಲವೊಮ್ಮೆ 10 ಲಕ್ಷಕ್ಕೂ ಹೆಚ್ಚಿನ ದಂಡ ವಿಧಿಸಿದರೆ ಅಷ್ಟೊಂದು ಕಟ್ಟಲಿಕ್ಕೆ ಕೆಲವರಿಗೆ ಆಗುವುದೇ ಇಲ್ಲ. ಜೀವನ ನಿರ್ವಹಣೆಗೆ ಆಟೋ ಓಡಿಸುವರು ಭಾರೀ ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ನಿಯಮಗಳ ಪ್ರಕಾರ 3+1 ಸೀಟು ಮಾತ್ರ ಇರಬೇಕು. ಆದರೆ, ಅನೇಕ ಆಟೋಗಳಲ್ಲಿ ಅದಕ್ಕಿಂತಲೂ ಹೆಚ್ಚಿನ ಸೀಟು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅದು ನಿಯಮದ ಸ್ಪಷ್ಟ ಉಲ್ಲಂಘನೆ. ಯಾವುದೇ ಕಾರಣಕ್ಕೂ ಹೆಚ್ಚಿನ ಸೀಟು ವ್ಯವಸ್ಥೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಏನಾದರೂ ಹೆಚ್ಚಿನ ಸೀಟು ಇರುವುದು ಕಂಡು ಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಅನೇಕ ಆಟೋಗಳಲ್ಲಿ ಚಾಲಕರ ಅಕ್ಕ ಪಕ್ಕ ಎರಡು ಕಡೆ ಸೀಟು ಹಾಕಲಾಗುತ್ತದೆ. ಮುಂದೆ ಅದಕ್ಕೆ ಅವಕಾಶವೇ ನೀಡುವುದಿಲ್ಲ. ಚಾಲಕರ ಅಕ್ಕಪಕ್ಕದ ಸೀಟು ತೆಗೆಸಲಾಗುವುದು. ಆದಾಗ್ಯೂ ಸೀಟು ಹಾಕಿದ್ದು ಕಂಡು ಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಆಟೋಗಳ ಹಿಂಭಾಗದಲ್ಲಿ ಹೆಚ್ಚಿನ ಸೀಟು ಹಾಕುವುದು ತಪ್ಪಿಸಲು ಲಾಕಿಂಗ್‌ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗುವುದು ಎಂದರು.

ಪ್ರಯಾಣಿಕರು ಸಹ ಆಟೋ ಹತ್ತುವ ಮುನ್ನ ಪರ್ಮಿಟ್ ಇದೆಯೇ ಇಲ್ಲವೇ ಒಳಗೊಂಡಂತೆ ಎಲ್ಲದರ ಬಗ್ಗೆ ಯೋಚನೆ ಮಾಡಬೇಕು. ಐದು ರೂಪಾಯಿ ಉಳಿಸಲು ಹೋಗಿ ಸಮಸ್ಯೆ ಮಾಡಿಕೊಳ್ಳಬಾರದು. ಒಂದೊಮ್ಮೆ ಅಪಘಾತವಾಗಿ ಗಾಯಗೊಂಡಲ್ಲಿ ಇಲ್ಲವೇ ಮರಣ ಹೊಂದಿದಲ್ಲಿ ಪರಿಹಾರವೇ ಸಿಗುವುದಿಲ್ಲ. ಪ್ರಯಾಣಿಕರಂತೆ ಆಟೋ ಚಾಲಕರು, ಮಾಲೀಕರು ಸಹ ತಮ್ಮ ಕುಟುಂಬಗಳ ಬಗ್ಗೆ ಯೋಚನೆ ಮಾಡಬೇಕು ಎಂದು ಸಲಹೆ ನೀಡಿದರು.

ಶ್ರೀರಾಮ ನಗರ, ಇಂಡಸ್ಟ್ರಿಯಲ್ ಏರಿಯಾಗಳಿಗೆ ನಗರ ಸಾರಿಗೆ ಬಸ್‌ ಸೌಲಭ್ಯ ಕಡಿಮೆ ಇರುವ ಕಾರಣಕ್ಕೆ ಅನಿವಾರ್ಯವಾಗಿ ಆಪೆ ಆಟೋಗಳನ್ನೇ ಅವಲಂಬಿಸಬೇಕಾಗಿದೆ ಎಂಬುದು ಗಮನಕ್ಕೆ ಬಂದಿದೆ. ಹೆಚ್ಚಿನ ಬಸ್‌ ಸೌಲಭ್ಯ ಒದಗಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳ ಮೂಲಕ ಕೆಎಸ್ಸಾರ್ಟಿಸಿಗೆ ಪತ್ರ ಬರೆಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಲವರು ವಾಹನಗಳನ್ನು ಮೊಬೈಲ್ ಹೋಟೆಲ್ನಂತೆ ಮಾಡಿಕೊಂಡಿರುವುದು ಕಂಡು ಬರುತ್ತಿದೆ. ಅದನ್ನ ಸಹ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಡಾವಣಾ ಪಿಎಸ್‌ಐ ವೀರಬಸಪ್ಪ ಕುಸಲಾಪುರ, ದಕ್ಷಿಣ ಸಂಚಾರಿ ಪೊಲೀಸ್‌ ಠಾಣಾ ಪಿಎಸ್‌ಐ ಮಂಜುನಾಥ್‌ ಅರ್ಜುನ್‌ ಲಿಂಗಾರೆಡ್ಡಿ ಇದ್ದರು.

ಆಟೋಗಳಲ್ಲಿ 3+1 ಸೀಟುಗಳಿಗೆ ಪರವಾನಿಗೆ ಪಡೆದುಕೊಂಡು ಅದಕ್ಕಿಂತಲೂ ಹೆಚ್ಚಿನ ಸೀಟು ಹಾಕಿಕೊಂಡು ಓಡಾಡುವುದು ತಪ್ಪು. ಒಂದೊಮ್ಮೆ ಯಾವುದೇ ರೀತಿಯ ಅವಘಡ ಸಂಭವಿಸಿದಲ್ಲಿ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಸೀಟುಗಳು ಇದ್ದರೆ ಪರಿಹಾರ ನೀಡುವುದು ಕಷ್ಟವಾಗುತ್ತದೆ. ಪ್ರಯಾಣಿಕರ ಸುರಕ್ಷತೆ ಮತ್ತು ಹಿತದೃಷ್ಟಿ ಅತೀ ಮುಖ್ಯ. ಹಾಗಾಗಿ ಈ ಕಾರ್ಯಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ನಿರಂತರವಾಗಿ ಕೈಗೊಳ್ಳಲಾಗುವುದು.
•ಎಸ್‌.ಎಂ. ನಾಗರಾಜ್‌,
ನಗರ ಪೊಲೀಸ್‌ ಉಪಾಧೀಕ್ಷಕ.

ಟಾಪ್ ನ್ಯೂಸ್

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.