ಸುಂದರ-ಹಸಿರು ನಗರ ನಿರ್ಮಾಣ
ಉದ್ಯಮಿಗಳು-ಸಂಸ್ಥೆಗಳ ನೆರವು•ಚಿಗಟೇರಿ ಆಸ್ಪತ್ರೆ ಉದ್ಯಾನವನ ಸ್ವಚ್ಛತೆ-ವನಮಹೋತ್ಸವ
Team Udayavani, Jul 31, 2019, 10:08 AM IST
ದಾವಣಗೆರೆ: ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಸಸಿ ನೆಟ್ಟರು.
ದಾವಣಗೆರೆ: ದಾವಣಗೆರೆಯ ಹಸಿರೀಕರಣ ಮತ್ತು ಸೌಂದರ್ಯಿಕರಣ ರೂಪುರೇಷೆಯಂತೆ ಹಲವಾರು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ತಿಳಿಸಿದ್ದಾರೆ.
ಮಂಗಳವಾರ ಜಿಲ್ಲಾ ಚಿಗಟೇರಿ ಆಸ್ಪತ್ರೆ ಉದ್ಯಾನವನದಲ್ಲಿ ಮಹಾರಾಜ ಸೋಪ್ಸ್ ಸಿಬ್ಬಂದಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾವಣಗೆರೆಯಲ್ಲಿ ಪರಿಸರ ಸ್ನೇಹಿ, ಹಸರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು.
ದಾವಣಗೆರೆಯ ಹಸಿರೀಕರಣ ಮತ್ತು ಸೌಂದರ್ಯಿಕರಣಕ್ಕೆ ಕೈಗಾರಿಕೋದ್ಯಮಿಗಳು ಇತರರಿಗೆ ಜಿಲ್ಲಾಡಳಿತ ಮಾಡಿರುವ ಮನವಿಗೆ ಅನೇಕರು ಸ್ಪಂದಿಸಿದ್ದಾರೆ. ದಾವಣಗೆರೆಯ ಹಸಿರೀಕರಣ ಮತ್ತು ಸೌಂದರ್ಯಿಕರಣಕ್ಕೆ ಮುಂದಾಗಿದ್ದಾರೆ. ಮಹಾರಾಜ ಸೋಪ್ಸ್ ಇಂಡಸ್ಟ್ರಿಸ್‌ನವರು ಜಿಲ್ಲಾ ಚಿಗಟೇರಿ ಆಸ್ಪತ್ರೆ ಪಾರ್ಕ್‌ಗಳ ಪುನಶ್ಚೇತನ ಮಾಡುತ್ತಿದ್ದಾರೆ. ಪಾರ್ಕ್ ಗಳ ಸ್ವಚ್ಛತೆ, ನಂತರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.
ಹಸಿರೀಕರಣ ಮತ್ತು ಸೌಂದರ್ಯಿಕರಣಕ್ಕೆ ಸಾಕಷ್ಟು ಕೈಗಾರಿಕೋದ್ಯಮಿಗಳು ಉತ್ಸುಕತೆ ತೋರುತ್ತಿದ್ದಾರೆ. ಅವರ ಪರಿಸರ ಪ್ರೇಮ, ಸಾಮಾಜಿಕ ಕಳಕಳಿ ಇತರರಿಗೆ ಪ್ರೇರಣೆ. ಬೇರೆಯವರು ಸಹ ಹಸಿರೀಕರಣ ಮತ್ತು ಸೌಂದರ್ಯಿಕರಣಕ್ಕೆ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಕೈಗಾರಿಕೆ, ಉದ್ದಿಮೆಗಳು ತಮ್ಮ ಲಾಭದಲ್ಲಿನ ಶೇ.2 ರಷ್ಟನ್ನು ಸಾಮಾಜಿಕ ಸೇವಾ ಕಾರ್ಯಕ್ಕೆ ಮೀಸಲಿಡುತ್ತಾರೆ. ಆ ಹಣವನ್ನು ಇಂತಹ ರಚನಾತ್ಮಕ ಕಾರ್ಯಕ್ರಮಕ್ಕೆ ಬಳಕೆ ಮಾಡುತ್ತಾರೆ. ಮಹಾರಾಜ ಸೋಪ್ಸ್ ಇಂಡಸ್ಟ್ರಿಸ್‌ನವರು ಅದೇ ರೀತಿ ಹಸಿರೀಕರಣ ಮತ್ತು ಸೌಂದರ್ಯಿಕರಣಕ್ಕೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಿದ್ದಾರೆ. ಪಾರ್ಕ್‌ಗಳ ಸ್ವಚ್ಛತೆ, ಗಿಡ ನೆಡುವ ಜೊತೆಗೆ ನಿರ್ವಹಣೆಯನ್ನೂ ಮಾಡುವರು ಎಂದು ತಿಳಿಸಿದರು.
ಮಹಾರಾಜ ಸೋಪ್ಸ್ ಇಂಡಸ್ಟ್ರಿಸ್ ಮಾಲೀಕ ಡಾ| ರವಿರಾಜ್ ಮಾತನಾಡಿ, ಜಿಲ್ಲಾ ಚಿಗಟೇರಿ ಆಸ್ಪತ್ರೆ ಮುಂಭಾಗದ ಪಾರ್ಕ್‌ಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು. 250 ಸಿಬ್ಬಂದಿ ಪಾರ್ಕ್ ಸ್ವಚ್ಛತೆ ಮಾಡಿದ್ದಾರೆ. ಪಾರ್ಕ್‌ನಲ್ಲಿ ಹೆಚ್ಚಾಗಿ ಹೂವಿನ ಗಿಡಗಳನ್ನು ನೆಡಲಾಗುವುದು. ಜಿಲ್ಲಾಡಳಿತದ ಆಶಯದಂತೆ ನಿರ್ವಹಣೆ ಮಾಡಲಾಗುವುದು ಎಂದು ತಿಳಿಸಿದರು.
ಮಹಾರಾಜ ಸೋಪ್ಸ್ ಇಂಡಸ್ಟ್ರಿಸ್‌ನಿಂದ ಸಾಕಷ್ಟು ಸಹಾಯ ಮಾಡಲಾಗುತ್ತಿದೆ. ಈಗ ಜಿಲ್ಲಾ ಆಸ್ಪತ್ರೆ ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದೆಯೂ ನಿರ್ವಹಣೆಗೆ ಅವಕಾಶ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತೇವೆ. ಕೆಲವಾರು ಕಡೆ ಒಂದು ಹಂತದ ನಂತರ ನಿರ್ವಹಣೆಗೆ ಅವಕಾಶವೇ ನೀಡುವುದಿಲ್ಲ. ಆ ರೀತಿ ಆಗುವುದು ಬೇಡ ಎಂದರು.
ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್, ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ನೀಲಾಂಬಿಕೆ, ನಿವಾಸಿ ವೈದ್ಯಾಧಿಕಾರಿ ಡಾ| ಎಚ್.ಡಿ. ವಿಶ್ವನಾಥ್, ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್. ದೇವರಮನೆ, ಕೆ.ಟಿ. ಗೋಪಾಲಗೌಡ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Udupi; ಗೀತಾರ್ಥ ಚಿಂತನೆ 134: ಮನುಷ್ಯ ದೇಹದೊಳಗೆ ಯಾವ ಜೀವವೂ ಇರಬಹುದು
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
PM Modi: ಒಂದೂವರೆ ವರ್ಷದಲ್ಲಿ 10 ಲಕ್ಷ ಸರಕಾರಿ ಉದ್ಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.