ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ
ಡೋರ್ ಹಾಕದೇ ಚಲಿಸುವ ನಗರ ಸಾರಿಗೆ, ಶಾಲಾ ವಾಹನಗಳ ವಿರುದ್ಧ ಕ್ರಮಕ್ಕೆ ಡಿಸಿ ಸೂಚನೆ
Team Udayavani, Jun 26, 2019, 9:48 AM IST
ದಾವಣಗೆರೆ: ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಡಿಸಿ ಜಿ.ಎನ್.ಶಿವಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠ ಆರ್.ಚೇತನ್, ಜಿಪಂ ಸಿಇಒ ಬಸವರಾಜೇಂದ್ರ ಇತರರು ಭಾಗವಹಿಸಿದ್ದರು.
ದಾವಣಗೆರೆ: ರಸ್ತೆ ಸುರಕ್ಷತಾ ಕ್ರಮ ಅನುಸರಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಈ ಬಗ್ಗೆ ಮಾತನಾಡಿದ ಅವರು, ಡೋರ್ ಹಾಕದೇ ಬಸ್ ಚಲಾಯಿಸುವವರು ಹಾಗೂ ರಸ್ತೆ ಸುರಕ್ಷತಾ ಕ್ರಮ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಳಿಸಿದರು.
ನಗರ ಸಾರಿಗೆ ಬಸ್‌ಗಳಲ್ಲಿ ಆಟೋಮ್ಯಾಟಿಕ್ ಡೋರ್ ವ್ಯವಸ್ಥೆ ಇದ್ದರೂ ಚಾಲಕರು ಡೋರ್ ಕ್ಲೋಸ್ ಮಾಡುತ್ತಿಲ್ಲ. ಈ ಬಗ್ಗೆ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸೂಕ್ತ ಆದೇಶ ಹೊರಡಿಸಿ ಕ್ರಮ ಕೈಗೊಳ್ಳಬೇಕು. ಡೋರ್ ಹಾಕದ ಖಾಸಗಿ ಬಸ್‌ಗಳನ್ನು ಆರ್‌ಟಿಒ ವಶಪಡಿಸಿಕೊಂಡು ಕ್ರಮ ಜರುಗಿಸಬೇಕು ಹಾಗೂ ಮತ್ತು ಡೋರ್ ಹಾಕದ ಸ್ಕೂಲ್ ಬಸ್‌ಗಳ ಅನುಮತಿ ರದ್ದುಪಡಿಸಬೇಕೆಂದು ಅವರು ಹೇಳಿದರು.
ಮಹಾನಗರಪಾಲಿಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪೂವಯ್ಯ ಮಾತನಾಡಿ, ಕಳೆದ ಬಾರಿಯ ಸಭೆಯಲ್ಲಿ ಚರ್ಚಿಸಿದಂತೆ ಪಾಲಿಕೆ ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬೀದಿ ದೀಪಗಳ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದಾಗ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ವಾರ್ಡ್‌ವಾರು ರಸ್ತೆ ಗುಂಡಿ (ಟಾರ್ ಪ್ಯಾಚ್)ಗಳ ಮಾಹಿತಿ ನೀಡಿ ಎಂದು ಕೇಳಿದಾಗ ಎಇಇ ಉತ್ತರಿಸಲಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಹಾಜರಾದರೆ ಅವರಿಗೆ ಮಾಹಿತಿ ತಿಳಿದಿರುತ್ತದೆ. ಅನ್ಯರಿಗೆ ನಿಯೋಜಿಸಿದರೆ ಸಭೆ ಸಫಲವಾಗುವುದಿಲ್ಲವೆಂದು ಎಸ್ಪಿ ಹೇಳಿದರು.
ಮುಂದುವರಿದು ಮಾತನಾಡಿದ ಆರ್. ಚೇತನ್, ಜಿಲ್ಲೆಯಲ್ಲಿ ಅಪಘಾತಗಳು ಸಂಭವಿಸುವಂತಹ ಸ್ಥಳಗಳನ್ನು ಪೊಲೀಸ್ ಇಲಾಖೆ ಪರಿಶೀಲಿಸಿ, ಒಟ್ಟು 37 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದೆ. ಇದರಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸಬಹುದಾದಂತಹ 10 ಸ್ಥಳಗಳಿವೆ. ಈ ಬ್ಲಾಕ್ ಸ್ಪಾಟ್‌ಗಳನ್ನು ಸರಿಪಡಿಸಲು ಅಂದಾಜು ಯೋಜನಾ ದರದ ಪಟ್ಟಿ ತಯಾರಿಸಲಾಗಿದ್ದು, ಪಿಡಬ್ಲು ್ಯಡಿ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಪಿಡಬ್ಲ್ಯೂಡಿ ಟೆಕ್ನಿಕಲ್ ಅಸಿಸ್ಟೆಂಟ್ ಮಾತನಾಡಿ, ಬ್ಲಾಕ್ ಸ್ಪಾಟ್ ಸರಿಪಡಿಸಲು 30.87 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಟೆಂಡರ್ ಆಗಿದೆ ಎಂದಾಗ, ಎಲ್ಲೆಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಮಾಹಿತಿ ನೀಡಿ ಎಂದು ಎಸ್ಪಿ ಕೇಳಿದರು. ಜಿಪಂ ಸಿಇಓ ಎಚ್.ಬಸವರಾಜೇಂದ್ರ, ಕಾಮಗಾರಿ ನಡೆಯುವ ಸ್ಥಳಗಳ ಮ್ಯಾಪ್‌ನೊಂದಿಗೆ ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಬರಬೇಕು ಎಂದು ಸೂಚಿಸಿದರು.
ಯುಬಿಡಿಟಿ ಕಾಲೇಜಿ ಸಹಾಯಕ ರಿಜಿಸ್ಟ್ರಾರ್ ಎಚ್.ಆರ್. ರಂಗನಾಥಸ್ವಾಮಿ, ಯುಬಿಡಿಟಿ ಕಾಲೇಜಿನ ಮುಂದೆ ಇರುವ ಟ್ಯಾಕ್ಸಿ ಸ್ಟಾ ್ಯಂಡ್‌ನಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದೆ. 2011ರಿಂದಲೇ ಟ್ಯಾಕ್ಸಿ ಸ್ಟಾ ್ಯಂಡ್ ಬೇರೆಡೆ ಸ್ಥಳಾಂತರಿಸುವಂತೆ ಮನವಿ ಮಾಡುತ್ತಾ ಬರಲಾಗಿದೆ ಎಂದು ಸಭೆ ಗಮನ ಸೆಳೆದರು.
ಎಸ್ಪಿ ಮತ್ತು ಡಿಸಿ, ಟ್ಯಾಕ್ಸಿ ಸ್ಟಾ ್ಯಂಡ್ ಸ್ಥಳಾಂತರಿಸಿದ ನಂತರ ಬೀದಿ ಬದಿ ವ್ಯಾಪಾರಿಗಳು ಅಥವಾ ಇನ್ನಿತರೆ ನಿಲ್ದಾಣ ಆಗದಂತೆ ಭದ್ರತೆ ಮಾಡಿಕೊಳ್ಳುವುದಾದರೆ ಟ್ಯಾಕ್ಸಿ ಮಾಲೀಕರಿಗೂ ಅನುಕೂಲಕರವಾಗುವ ಪಕ್ಕದ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದರು.
ಮೂರು ಮತ್ತು ನಾಲ್ಕು ಚಕ್ರಗಳ ಸರಕು ಸಾಗಣಿಕೆ ವಾಹನಗಳ ನಿಲುಗಡೆಗೆ ನಿಲ್ದಾಣವಿಲ್ಲದೇ ಪರದಾಡುವ ಸ್ಥಿತಿ ಇದ್ದು, ನಗರದಲ್ಲಿ ಸೂಕ್ತ ಸ್ಥಳದಲ್ಲಿ ನಿಲುಗಡೆಗೆ ಜಾಗವನ್ನು ಗುರುತಿಸಿಕೊಡಬೇಕು. ಶಾಮನೂರು, ರಾಮನಗರ ಕಡೆಯಿಂದ ಕಡಿಮೆ ದರದಲ್ಲಿ ಓಡಾಡುತ್ತಿರುವ ಆಪೆ ಆಟೋಗಳನ್ನು ನಿಲ್ಲಿಸಬೇಕೆಂದು ಸಂಘದವರು ಮನವಿ ಮಾಡಿದರು.
ಸಿಇಒ ಎಚ್. ಬಸವರಾಜೇಂದ್ರ, ನಗರ ಹೊರ ವಲಯದಲ್ಲಿ ಯಾರ್ಡ್ ಮಾಡಿಕೊಂಡು ಫೋನ್ ಕಾಲ್ ಮೂಲಕ ಅಡೆಂಡ್ ಮಾಡಬಹುದೆಂದು ಸಲಹೆ ನೀಡಿದಾಗ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್, ಪದ್ಮಾಂಜಲಿ ಟಾಕೀಸ್ ಮುಂಭಾಗದಲ್ಲಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬಹುದು ಎಂದು ಹೇಳಿದರು.
ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಫುಲ್ಲಾ, ಪಿ.ಬಿ ರಸ್ತೆಯ ಬಿಎಸ್‌ಎನ್‌ಎಲ್ ಬಳಿ ಫ್ಲೈಓವರ್‌ನಿಂದ ಟ್ರಾಫಿಕ್ ಸಮಸ್ಯೆ ಇನ್ನೂ ಹೆಚ್ಚಾಗಿದೆ. ಸಿಗ್ನಲ್ಗಳನ್ನು ಯಾರೂ ಸರಿಯಾಗಿ ಅನುಸರಿಸುತ್ತಿಲ್ಲ. ಇಲ್ಲಿ ದಿನನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೇ ಇವೆ. ಹಾಗಾಗಿ ವಾಹನಗಳ ವೇಗ ನಿಯಂತ್ರಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಹರಿಹರ-ದಾವಣಗೆರೆ ಸಂಚರಿಸುವ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳು ಕೆಎಸ್ಸಾರ್ಟಿಸಿ ಬಸ್‌ಸ್ಟಾ ್ಯಂಡ್‌ಗೆ ಹೋಗದೇ ಗಾಂಧಿ ಸರ್ಕಲ್ನಿಂದಲೇ ತಿರುಗಿಸಿಕೊಂಡು ಬರುವುದರಿಂದ ಅಲ್ಲಿ ವಾಹನ ಮತ್ತು ಜನದಟ್ಟನೆ ಹೆಚ್ಚಿರುತ್ತದೆ. ಅದನ್ನು ನಿಯಂತ್ರಿಸಲು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದವರೆಗೆ ಹೋಗಿ ಬರಬೇಕು. ಲಾರಿ ಮತ್ತು ಬಸ್‌ಗಳಲ್ಲಿ ಹೆಚ್ಚು ಲೈಟ್ ಅಳವಡಿಸಿ ಓಡಿಸುತ್ತಿರುವುದರಿಂದಲೂ ಅಪಘಾತ ಹೆಚ್ಚಿವೆ ಎಂದು ಶ್ರೀಕಾಂತ್ ಹೇಳಿದಾಗ, ಡಿಸಿ ಮತ್ತು ಎಸ್‌ಪಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆರ್‌ಟಿಒಗೆ ಸೂಚಿಸಿದರು.
ಎಸ್‌ಪಿ ಆರ್.ಚೇತನ್ ಮಾತನಾಡಿ, ಶಾಮನೂರು ರಸ್ತೆಯಲ್ಲಿರುವ ಗುಂಡಿಗೆ ಮಣ್ಣು ಹಾಕಲು ಕಳೆದ ಸಭೆಯಲ್ಲಿ ತಿಳಿಸಲಾಗಿತ್ತು. ಹರಿಹರ-ಹೊನ್ನಾಳಿ ರಸ್ತೆಯಲ್ಲಿ ರಸ್ತೆಗಿಂತ ಅರ್ಧ ಅಡಿ ಟಾರ್ ರಸ್ತೆ ಎತ್ತರವಿದ್ದು, ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳೆರಡೂ ಕೆಳಗೆ ಇಳಿಸಲು ಆಗದೇ ಹೆಚ್ಚಿನ ಅಪಘಾತ ಸಂಭವಿಸುತ್ತಿದೆ. ಪಿಡಬ್ಲು ್ಯಡಿಯವರು ಕೂಡಲೇ ಇಲ್ಲಿ ಮಣ್ಣು ಹಾಕಿಸಿ ಸಮತಟ್ಟಾಗಿಸಬೇಕೆಂದರು.
ಜಿಲ್ಲಾ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಹಿಂದಿನ ಸಮಿತಿ ಸಭೆಯಲ್ಲಿ ಚರ್ಚಿಸಿದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೇರಿದಂತೆ ಈ ಬಾರಿ ಚರ್ಚಿತವಾಗುವ ವಿಷಯಗಳ ಬಗ್ಗೆ ಕ್ರಮ ವಹಿಸಲು ಡಿಸಿ ಸೂಚಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಹಾಜರಾಗದಿದ್ದಕ್ಕೆ ಪ್ರತಿಕ್ರಿಯಿಸಿದ ಡಿಸಿ ಸಂಬಂಧಿಸಿದ ಅಧಿಕಾರಿಗಳು ಹಾಜರಾಗದಿದ್ದ ಮೇಲೆ ಸಭೆ ನಡೆಸಿ ಏನು ಪ್ರಯೋಜನವಿಲ್ಲ. ಗೈರು ಹಾಜರಾದವರಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದರು.
ನಗರ ಸಾರಿಗೆ ಬಸ್‌ಗಳಲ್ಲಿ ಆಟೋಮ್ಯಾಟಿಕ್ ಡೋರ್ ವ್ಯವಸ್ಥೆ ಇದ್ದರೂ ಚಾಲಕರು ಡೋರ್ ಕ್ಲೋಸ್ ಮಾಡುತ್ತಿಲ್ಲ. ಈ ಬಗ್ಗೆ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸೂಕ್ತ ಆದೇಶ ಹೊರಡಿಸಿ ಕ್ರಮ ಕೈಗೊಳ್ಳಬೇಕು. ಡೋರ್ ಹಾಕದ ಖಾಸಗಿ ಬಸ್‌ಗಳನ್ನು ಆರ್‌ಟಿಒ ವಶಪಡಿಸಿಕೊಂಡು ಕ್ರಮ ಜರುಗಿಸಬೇಕು ಹಾಗೂ ಮತ್ತು ಡೋರ್ ಹಾಕದ ಸ್ಕೂಲ್ ಬಸ್‌ಗಳ ಅನುಮತಿ ರದ್ದುಪಡಿಸಬೇಕು.
•ಜಿ.ಎನ್.ಶಿವಮೂರ್ತಿ,
ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.