ನೊಂದವರು-ಬಡವರ ಸೇವೆ ಪುಣ್ಯದ ಕೆಲಸ

•ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್‌ ಪ್ರದಾನ•ದುಡ್ಡಿನ ಹಿಂದೆ ಹೋಗುತ್ತಿರುವ ಆಧುನಿಕ ಜಗತ್ತು: ವಿಷಾದ

Team Udayavani, Jul 29, 2019, 10:02 AM IST

29-July-2

ದಾವಣಗೆರೆ: ಸಾಧಕರಿಗೆ ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್‌-2019 ಪ್ರಶಸ್ತಿಯನ್ನು ಗಣ್ಯರು ಪ್ರದಾನ ಮಾಡಿದರು.

ದಾವಣಗೆರೆ: ನೊಂದವರು, ಬಡವರ ಸೇವೆ ಮಾಡುವುದು ಪುಣ್ಯದ ಕೆಲಸ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ರೀಚ್4ಕಾಜ್‌ ಟೆಕ್ನಾಲಜಿ, ಗೋ ಗ್ರೀನ್‌ ಸಂಸ್ಥೆ ಸಹಯೋಗದಲ್ಲಿ ನಡೆದ ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್‌-2019 ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಸಿದವರು, ನೊಂದವರು, ರೋಗಿಗಳಿಗೆ, ಬಡವರಿಗೆ, ಶೋಷಿತರಿಗೆ, ನಿರ್ಗತಿಕರಿಗೆ ದಾನ, ಸೇವೆ ಮಾಡುವರೋ ಅವರಿಗೆ ತೃಪ್ತಿ, ನೆಮ್ಮದಿ ಸಿಗುತ್ತದೆ ಎಂದರು.

ಮನುಷ್ಯನಿಗೆ ತೃಪ್ತಿ ಎನ್ನುವುದೇ ಇಲ್ಲ, ಎಷ್ಟು ಇದ್ದರೂ ಸಾಲದು. ಕೆಲವರು ಆಸ್ತಿ ಮಾಡಬೇಕು. ಹೆಚ್ಚಿನ ಹಣ ಗಳಿಸಬೇಕು, ದೊಡ್ಡ ಮನೆ ಕಟ್ಟಿಸಬೇಕು ಹೀಗೆ ಹಲವಾರು ಯೋಚನೆಯಲ್ಲೇ ಕಾಲ ಕಳೆಯುತ್ತಾರೆ. ರಾಜಕಾರಣದಲ್ಲಿ ಎಂದಿಗೂ ತೃಪ್ತಿ ಎನ್ನುವುದೇ ಇಲ್ಲ. ಯಾರು ಸಮಾಜಮುಖೀಯಾಗಿ, ನೊಂದವರ, ಶೋಷಿತರ, ಬಡವರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೋ ಅವರು, ಜೀವನದಲ್ಲಿ ಯಾರು ತನಗೋಸ್ಕರ ಬದುಕದೇ ನೊಂದವರ ಕಣ್ಣೀರು ಒರೆಸುವರೋ ಅವರಿಗೆ ಬದುಕಿನಲ್ಲಿ ತೃಪ್ತಿ ಸಿಗುತ್ತದೆ ಎಂದು ತಿಳಿಸಿದರು.

ಬಸವಣ್ಣ, ಬುದ್ಧ, ಗಾಂಧಿಧೀಜಿ, ಅಂಬೇಡ್ಕರ್‌, ಮದರ್‌ ತೆರೆಸಾರಂತಹ ದಾರ್ಶನಿಕರು ಇನ್ನೊಬ್ಬರ ಕಷ್ಟಗಳನ್ನು ಗಮನಿಸಿ ಮಾನವೀಯತೆ ಮೆರೆದು ಹೆಸರಾಗಿದ್ದಾರೆ. ಅಂತಹವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ಡಾ| ಎಚ್.ಎಸ್‌. ಮಂಜುನಾಥ್‌ ಕುರ್ಕಿ ಮಾತನಾಡಿ, ಆಧುನಿಕ ಜಗತ್ತು ದುಡ್ಡಿನ ಹಿಂದೆ ಹೋಗುತ್ತಿದ್ದು, ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ರೀಚ್4ಕಾಜ್‌ ಟೆಕ್ನಾಲಜಿ ಲಿಮಿಟೆಡ್‌ನ‌ಂತಹ ಸರ್ಕಾರೇತರ ಸಂಸ್ಥೆಗಳು ಇಂತಹ ಸಮಾಜಮುಖೀ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಸಂತಸ ವ್ಯಕ್ತಪಡಿಸಿದರು.

ಸ್ವಯಂ ಸೇವಾ ಸಂಸ್ಥೆಗಳು ನೊಂದ ಜೀವಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯ ನಿರ್ವಹಿಸುತ್ತಿವೆ. ಎಲೆ ಮರೆಯಕಾಯಿಯಂತೆ ಸೇವಾ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆ, ವ್ಯಕ್ತಿಗಳನ್ನು ಗುರುತಿಸಿ ಇಲ್ಲಿ ಸನ್ಮಾನಿಸುತ್ತಿರುವುದು ಮಾದರಿಯಾಗಿದೆ ಎಂದರು.

ಚನ್ನಗಿರಿಯ ಶ್ರೀ ಕೇದಾರಲಿಂಗ ಶಾಂತವೀರ ಸ್ವಾಮೀಜಿ, ಸಂಸ್ಥೆಯ ಸಿಇಒ ರಾಘವ್‌ ಶೆಟ್ಟಿ, ಡಾ| ಕಲೀಂ ಷರೀಫ, ಎಂಡಿ ಜೆ.ಆರ್‌. ಮಂಜುನಾಥ, ನಿರ್ದೇಶಕ ಆರ್‌.ಶಿವಕುಮಾರ್‌, ರಾಯಭಾರಿ ವಾಣಿ ಕೇಶವ್‌, ಡಾ| ಸುರೇಶ ಹನಗವಾಡಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿಮಹೇಶ್‌, ಮಹಾನಗರ ಪಾಲಿಕೆ ಮಾಜಿ ಸದಸ್ಯ ದಿನೇಶ ಕೆ. ಶೆಟ್ಟಿ, ಪೋಪಟ್ಲಾಲ್ ಜೈನ್‌, ಮಂಜುಳಾ ಬಸವಲಿಂಗಪ್ಪ, ಕಾರ್ಯಕ್ರಮ ಸಂಯೋಜಕ ಶ್ರೀ ಕಾಂತ ಬಗರೆ, ರೋಟರ್ಯಾಕ್ಟ್ ನ ಮಾನಸ, ಶೃತಿ ಕಬ್ಬೂರು, ಕೆ.ಎನ್‌. ಸುರೇಶ, ಮಹಮ್ಮದ್‌ ಗೌಸ್‌, ಚೇತನಕುಮಾರ, ಪ್ರವೀಣಕುಮಾರ, ಶ್ರೀ ಧರ, ಗಿರಿಧರ, ಜ್ಯೋತಿ ಹಿರೇಮs್ ಇತರರು ಇದ್ದರು.

ವನಿತಾ ಸಮಾಜ, ಅಂಗವಿಕಲ ಆಶಾಕಿರಣ ಟ್ರಸ್ಟ್‌, ಹಿಮೋಫಿಲಿಯಾ ಸೊಸೈಟಿ, ಕರುಣಾಜೀವ ಕಲ್ಯಾಣ ಟ್ರಸ್ಟ್‌, ರಶ್ಮಿ ಬಾಲಕಿಯರ ವಸತಿ ಶಾಲೆ, ಸಂವೇದ ಟ್ರಸ್ಟ್‌, ಯೋಗ ಸ್ಪಂದನ ಮತ್ತು ವನಿತಾ ಯೋಗ ಕೇಂದ್ರ, ಸಂಕಲ್ಪ ವಿಕಲಚೇತನ ಶಾಲೆ, ಜನಸಾಮಾನ್ಯರ ಸೇವಾ ಸಂಸ್ಥೆ, ದೇವನಗರಿ ಗ್ರೀನ್‌ ಪ್ಲಾನೆಟ್, ರಿದ್ಧಿ-ಸಿದ್ಧಿ ಫೌಂಡೇಷನ್‌, ವೈಯಕ್ತಿಕ ವಿಭಾಗದಲ್ಲಿ ಗಿರೀಶ ದೇವರಮನಿ, ಚನ್ನಬಸವ ಶೀಲವಂತ್‌, ಕೆ.ಟಿ. ಗೋಪಾಲಗೌಡ, ಮಾಧವಿ ಗೋಪಾಲಕೃಷ್ಣ, ಆರ್‌.ಬಿ. ಪ್ರವೀಣ್‌ಕುಮಾರ್‌ಗೆ ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್‌-2019 ಪ್ರದಾನ ಮಾಡಲಾಯಿತು.

ಟಾಪ್ ನ್ಯೂಸ್

Air-bus-295

Military Aircraft Unit: ಗುಜರಾತಲ್ಲಿ ತಯಾರಾಗಲಿದೆ ದೇಸಿ ಏರ್‌ಬಸ್‌

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಸೂಚನೆ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಸೂಚನೆ

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು

Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

Paris Masters: ರೋಹನ್‌ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ

Paris Masters: ರೋಹನ್‌ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

road-mishap-11

Karkala: ಕಾರ್‌ ಡೋರ್‌ಗೆ ಢಿಕ್ಕಿ ವ್ಯಕ್ತಿಗೆ ಗಾಯ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಸೂಚನೆ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಸೂಚನೆ

11

Gangolli: ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪತ್ತೆ

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Air-bus-295

Military Aircraft Unit: ಗುಜರಾತಲ್ಲಿ ತಯಾರಾಗಲಿದೆ ದೇಸಿ ಏರ್‌ಬಸ್‌

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

road-mishap-11

Karkala: ಕಾರ್‌ ಡೋರ್‌ಗೆ ಢಿಕ್ಕಿ ವ್ಯಕ್ತಿಗೆ ಗಾಯ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಸೂಚನೆ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಸೂಚನೆ

11

Gangolli: ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.