ದೇಶದ ಏಳಿಗೆಗಾಗಿ ಶ್ರಮಿಸಿ: ಪ್ರೊ| ಹಲಸೆ

ಜಿಲ್ಲೆಯೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ-ಧ್ವಜಾರೋಹಣ•ಸಮಾನತೆ-ಸಹೋದರತ್ವ ಬೆಳೆದರೆ ಸ್ವಾತಂತ್ರ್ಯ ಸಫಲ

Team Udayavani, Aug 16, 2019, 3:12 PM IST

16-Agust-34

ದಾವಣಗೆರೆ ವಿವಿ ಆವರಣದಲ್ಲಿ ಗುರುವಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೋಧಕ ಸಿಬ್ಬಂದಿ ಗಿಡ ನೆಟ್ಟ ಸಂದರ್ಭ.

ದಾವಣಗೆರೆ: ದಾವಿವಿಯಲ್ಲಿ ಕುಲಪತಿ ಪ್ರೊ. ಎಸ್‌.ವಿ.ಹಲಸೆ ಧ್ವಜಾರೋಹಣ ನೆರವೇರಿಸಿ, ಮಾತನಾಡಿ, ನಾವೀಗ ತಂತ್ರಜ್ಞಾನ ಯುಗದಲ್ಲಿದ್ದೇವೆ.ಅದಕ್ಕೆ ತಕ್ಕಂತೆ ಸೃಷ್ಟಿಯಾಗುವ ಹೊಸ ಸವಾಲುಗಳನ್ನು ಎದುರಿಸಲು ಎಲ್ಲರೂ ಸಜ್ಜಾಗಬೇಕಿದೆ. ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ದೇಶದ ಏಳಿಗೆ, ಉತ್ತಮ ಭವಿಷ್ಯಕ್ಕಾಗಿ ಪ್ರಾಮಾಣಿಕ ಪ್ರಯತ್ನದ ಅಗತ್ಯವಿದೆ. ಆ ಕಾರ್ಯ ನಮ್ಮ ವಿವಿಯಿಂದಲೇ ಪ್ರಾರಂಭವಾಗಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ವಿವಿ ಬೋಧಕ ಸಿಬ್ಬಂದಿಯಿಂದ ಗಿಡ ದತ್ತು ಪಡೆಯುವ ಕಾರ್ಯಕ್ಕೆ ಕುಲಪತಿಯವರು ಚಾಲನೆ ನೀಡಿದರು. ಪ್ರತಿ ಶಿಕ್ಷಕ ತಲಾ ಒಂದು ಗಿಡ ನೆಟ್ಟು, ಅದರ ಪಾಲನೆ, ಪೋಷಣೆ ಹೊಣೆ ಹೊರಲಿದ್ದು, ಆವರಣದಲ್ಲಿ 100ಕ್ಕೂ ಹೆಚ್ಚು ಗಿಡ ನೆಡಲಾಯಿತು.

ಕುಲಸಚಿವರಾದ ಪ್ರೊ.ಪಿ.ಕಣ್ಣನ್‌, ಪ್ರೊ.ಬಸವರಾಜ ಬಣಕಾರ, ಹಣಕಾಸು ಅಧಿಕಾರಿ ಪ್ರೊ. ಜೆ.ಕೆ.ರಾಜು, ಪ್ರೊ.ಲಕ್ಷ್ಮಣ್‌, ಪ್ರೊ.ಕೆ.ಬಿ.ರಂಗಪ್ಪ, ಪ್ರೊ. ಗಾಯತ್ರಿ ದೇವರಾಜ್‌, ಇತರರಿದ್ದರು.

•ಜಿಲ್ಲಾ ಕಾಂಗ್ರೆಸ್‌ ಕಚೇರಿ: ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ ಧ್ವಜಾರೋಹಣ ನೆರವೇರಿಸಿದರು. ವಿಧಾನ ಪರಿಷತ್‌ ಸದಸ್ಯ ಅಬ್ದುಲ್ ಜಬ್ಟಾರ್‌, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ.ಶೆಟ್ಟಿ, ಕಾರ್ಯದರ್ಶಿ ಎ.ನಾಗರಾಜ್‌, ವಕ್ಫ್ ಮಂಡಳಿ ಅಧ್ಯಕ್ಷ ಮಹಮದ್‌ ಸಿರಾಜ್‌, ಕೆಎಸ್‌ಐಡಿಸಿ ಮಾಜಿ ಅಧ್ಯಕ್ಷ ಡಿ.ಬಸವರಾಜ್‌, ಇತರರು ಈ ಇದ್ದರು.

•ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಲ್ಲಿ ಪ್ರಾಂಶುಪಾಲ ತೂ.ಕ. ಶಂಕರಯ್ಯ ಧ್ವಜಾರೋಹಣ ನೆರವೇರಿಸಿದರು. ಪ್ರೊ| ಶಂಕರ ಶೀಲಿ, ಡಾ| ತಿಪ್ಪಾರೆಡ್ಡಿ, ಪ್ರೊ| ರಫಿ, ಪ್ರೊ| ಭೀಮಣ್ಣ ಸುಣಗಾರ, ಪ್ರೊ| ಲತಾ, ಪ್ರೊ| ಗೌರಮ್ಮ, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

•ಹಳೆಪೇಟೆ ಹಿರಿಯ ಪ್ರಾಥಮಿಕ ಶಾಲೆ: ಹಳೇಪೇಟೆಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 73ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‌ಕುಮಾರ್‌ ಧ್ವಜಾರೋಹಣ ನೆರವೇರಿಸಿ, ಸಂವಿಧಾನದ ಹೂದೋಟದಲ್ಲಿ ಬಹುತ್ವ ಭಾರತದ ಸ್ವಾತಂತ್ರ್ಯದ ಹೂಗಳು ಸದಾ ಅರಳಬೇಕಾಗಿದೆ. ಯುವ ಜನತೆಯಲ್ಲಿ ಸಮಾನತೆ, ಸೋದರತೆ ಮತ್ತು ಮಾನವೀಯ ಸಂಬಂಧಗಳನ್ನು ಬೆಳೆಸುವ ಮೂಲಕ ಸ್ವಾತಂತ್ರ್ಯವನ್ನು ಸಫಲಗೊಳಿಸಬೇಕಾಗಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಕೋಡುಬಾಳೆ ಚನ್ನಬಸಪ್ಪ, ಸದಸ್ಯ ಸಿ. ರಮೇಶ್‌, ಕೆ.ಎಂ. ಶೋಭಾ, ಕೋಮಲ, ಮಂಜುನಾಥ, ಚಂದ್ರಕಾಂತ, ಬಿ. ಬಸವರಾಜಪ್ಪ ಇತರರು ಇದ್ದರು.

•ಕನಕ ಸೆಂಟ್ರಲ್ ಸ್ಕೂಲ್: ಲೋಕಿಕೆರೆ ಗ್ರಾಮದ ಕನಕ ಸೆಂಟ್ರಲ್ ಸ್ಕೂಲ್ನಲ್ಲಿ ಗ್ರಾಮದ ಮುಖಂಡ ಮಾಳವ್ವರ ಹನುಮಂತಪ್ಪ ಧ್ವಜಾರೋಹಣ ನೆರವೇರಿಸಿದರು. ಕುಬೇರಪ್ಪ, ಷಣ್ಮುಖಪ್ಪ, ಕರಿಯಪ್ಪ, ನಾಗಪ್ಪ, ಮಾರುತಿ,ಮುಖ್ಯ ಶಿಕ್ಷಕಿ ಎಚ್.ಎಂ. ಪ್ರಿಯಾಂಕ, ಶಿಕ್ಷಕಿಯರಾದ ಜಿ.ಎ ಚ್. ರೇಖಾ, ಮಂಜುಳಾ, ಆಶಾ, ನೇತ್ರಾವತಿ, ಬಸ್ರಿತ್‌ ಸುಲ್ತಾನ್‌, ಸುಮಲತಾ, ಆಯಿಷ, ಸುಮಾ, ಸರಸ್ವತಿ, ದಾದಾಪೀರ್‌ ಇತರರು ಇದ್ದರು.

•ನಿಂಚನ ಪಬ್ಲಿಕ್‌ ಶಾಲೆ: ನಿಟುವಳ್ಳಿಯ ನಿಂಚನ ಪಬ್ಲಿಕ್‌ ಶಾಲೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಎಸ್‌. ನಿಂಗಪ್ಪ ಧ್ವಜಾರೋಹಣ ನೆರವೇರಿಸಿ, ಲಕ್ಷಾಂತರ ಜನರ ತ್ಯಾಗ ಬಲಿದಾನದಿಂದ ಬಂದತಹ ಸ್ವಾತಂತ್ರ್ಯ ಇಂದು ಸ್ವಾರ್ಥದ ರಾಜಕೀಯಕ್ಕೆ ಬಲಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಚಿಗಟೇರಿ ಜಯಪ್ರಕಾಶ್‌, ಶಿಕ್ಷಕರಾದ ಲೋಕೇಶ್ವರಪ್ಪ, ಪಂಚಾಕ್ಷರಿ ಇತರರು ಇದ್ದರು.

•ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್: ಜಯನಗರ ಎ ಬ್ಲಾಕ್‌ನ ವಿದ್ಯಾನಿಕೇತನ ಪಬ್ಲಿಕ್‌ ಸ್ಕೂಲ್ನಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷಿ ಧ್ವಜಾರೋಹಣ ನೆರವೇರಿಸಿದರು. ಶಿಕ್ಷಣ ಸಂಯೋಜಕ ಪ್ರೊ| ಕೆ.ಬಿ. ಆನಂದ್‌, ಕಾರ್ಯದರ್ಶಿ ಮಂಜುನಾಥ್‌ ಹೆಗಡೆ, ಮುಖ್ಯ ಶಿಕ್ಷಕಿ ಆರ್‌. ಮೀನಾಕ್ಷಿ ಇತರರು ಇದ್ದರು. ಶೈಲಜಾ ಸ್ವಾಗತಿಸಿದರು. ಸಂಗೀತಾ ನಿರೂಪಿಸಿದರು.

•ದಾರುಲ್ ಅನಾಥಾಶ್ರಮ: ದಾರುಲ್ ಉಲೂಮ್‌ ರಜಾವುಲ್ ಮುಸ್ತಫಾ ವ ದಾರುಲ್ ಯಾತಾಮ(ಅನಾಥಾಶ್ರಮ) ಹಾಗೂ ಮವಲಾನ ಮೊಹಮ್ಮದ್‌ ಹನೀಫ್‌ ರಜಾ ಖಾದ್ರಿ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ನಡೆದ 73ನೇ ಸ್ವಾತಂತ್ರ್ಯ ದಿನಾಚರಣೆ ಯಲ್ಲಿ ಸಂಸ್ಥೆಯ ಪ್ರಾಶುಂಪಾಲ ಮೌಲಾನಾ ಮೊಹಮ್ಮದ್‌ ಅಲೇ ರಜಾ ಖಾದ್ರಿ ಧ್ವಜಾರೋಹಣ ನೆರವೇರಿಸಿದರು. ಹಾಫೀಜ್‌ ಅಮೀನ್‌ ರಜ್ವಿ, ಕಾರ್ಯದರ್ಶಿ ಖಾದರ್‌ ಬಾಷಾ, ಮೌಲಾನಾ ಮುಜಾಹಿದ್‌ ಖಾನ್‌, ಮೌಲಾನಾ ಸೈಯದ್‌ ಗೌಸ್‌, ಸಾಧಿಕ್‌, ರಫೀಕ್‌ ಇತರರು ಇದ್ದರು.

•ಜೈನ್‌ ವಿದ್ಯಾಲಯ: ಪಿ.ಜೆ.ಬಡಾವಣೆಯಲ್ಲಿಯ ಜೈನ್‌ ವಿದ್ಯಾಲಯದಲ್ಲಿ ಕಾರ್ಯದರ್ಶಿ ಜೆ. ರಮೇಶ್‌ಕುಮಾರ್‌ ಧ್ವಜಾರೋಹಣ ನೆರವೇರಿಸಿ, ಒಗ್ಗಟ್ಟಿನಲ್ಲಿ ಬಲವಿದೆ. ಸಮಾಜದಲ್ಲಿ ಎಲ್ಲರೂ ಸಹಕಾರ ಮನೋಭಾವದಿಂದ ಬಾಳಬೇಕು ಎಂದರು. ಎಚ್. ರಮೇಶಕುಮಾರ, ಸುರೇಶಮಲ್ಜೈ ನ್‌, ಕುಮಾರ್‌ಗಾಂಧಿ, ಟ್ರಸ್ಟ್‌ ಸದಸ್ಯರು ಇದ್ದರು.

•ಸೋಮೇಶ್ವರ ವಿದ್ಯಾಲಯ: ನಿಟುವಳ್ಳಿಯ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ನಿವೃತ್ತ ಯೋಧ ಬೊಮ್ಮಲಿಂಗಯ್ಯ ಧ್ವಜಾರೋಹಣ ನೆರವೇರಿ ಸಿ, ಮಕ್ಕಳು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ ಹೋರಾಡುವವ‌ರಿಗೆ ಗೌರವ ಸಲ್ಲಿಸಬೇಕು ಎಂದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್‌, ಪ್ರಾಂಶುಪಾಲೆ ಎನ್‌. ಪ್ರಭಾವತಿ, ಆಡಳಿತಾಧಿಕಾರಿ ಹರೀಶ್‌ಬಾಬು ಇತರರು ಇದ್ದರು. ಟಿ.ಎಂ. ಸಮೃದ್ಧಿ ನಿರೂಪಿಸಿದರು.

•ಜಿಎಂ ತಾಂತ್ರಿಕ ವಿದ್ಯಾಲಯ: ಜಿ.ಎಂ.ತಾಂತ್ರಿಕ ಮಹಾವಿದ್ಯಾಲಯಲ್ಲಿ ಧ್ವಜಾರೋಹಣ ನೆರವೇರಿಸಿದ ಕಾಲೇಜಿನ ಪ್ರಾಂಶುಪಾಲ ಡಾ| ಪಿ. ಪ್ರಕಾಶ್‌, ಸ್ವಾತಂತ್ರ್ಯ ಹೋರಾಟ, ಸಂಘಟನೆಯ ಬಗ್ಗೆ ವಿವರಿಸಿದರು. ಬಯೋಟೆಕ್‌ ವಿಭಾಗದ ನಿರ್ಮಲ ಹೆಗ್ಡೆ, ಎಸ್‌.ಪಿ. ಬಿಂದು ಮಾತನಾಡಿದರು. ಅಡಳಿತಾಧಿಕಾರಿ ವೈ.ಯು. ಸುಭಾಶ್‌ಚಂದ್ರ, ಎಚ್.ಎಸ್‌. ಓಂಕಾರಪ್ಪ , ಜಿ.ಬಿ. ಅಜ್ಜಯ್ಯ ಇತರರು ಇದ್ದರು.

•ಸೋಷಿಯಲ್ ಸರ್ವಿಸ್‌: ಕರ್ನಾಟಕ ಸೋಷಿಯಲ್ ಸರ್ವಿಸ್‌ , ಆದರ್ಶ ಕಟ್ಟಡ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಧ್ಯಕ್ಷರಾದ ಮೊಹಮ್ಮದ್‌ ಹಯಾತ್‌, ರಹತ್‌ಅಲಿ ಧ್ವಜಾರೋಹಣ ನೆರವೇರಿಸಿದರು.

ಖಾಸಿಂ, ಮೊಹಮ್ಮದ್‌ ಬಿಲಾಲ್ ಇತರರು ಇದ್ದರು. ಸಿಹಿ ವಿತರಣೆ ಮಾಡಲಾಯಿತು.

•ಜ್ಞಾನ ಸಾಗರ್‌ ಕಾಲೇಜು: ಲಕ್ಷ್ಮಿ ಲೇಔಟ್‌ನ ಜ್ಞಾನ ಸಾಗರ್‌ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ತಜ್ಞ ಬಸವರಾಜ್‌ ಸಾಗರ್‌ ಧ್ವಜಾರೋಹಣ ನೆರವೇರಿಸಿದರು. ಪ್ರಾಚಾರ್ಯ ಎಂ.ಆರ್‌. ರಮೇಶ್‌, ಎ. ಆಂಜಿನಪ್ಪ, ಹರೀಶ್‌, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

•ಅನ್‌ಮೋಲ್ ಸ್ಕೂಲ್: ಶಿರಮಗೊಂಡನಹಳ್ಳಿಯ ಅನ್‌ಮೋಲ್ ವಿದ್ಯಾಸಂಸ್ಥೆಯಲ್ಲಿ ಈಚೆಗೆ ಅಮೆರಿಕಾದಲ್ಲಿ ನಡೆದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಾಂಬೋರಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಎಂ.ಆರ್‌. ಐಶ್ವರ್ಯ ಧ್ವಜಾರೋಹಣ ನೆರವೇರಿಸಿದರು. ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಜಿ. ದಿನೇಶ್‌ ಅಧ್ಯಕ್ಷತೆ ವಹಿಸಿದ್ದರು. ಡಿ. ರವೀಂದ್ರ, ಲತಾ ರವೀಂದ್ರ, ಎಸ್‌. ಚಿದಾನಂದ್‌, ಯು. ಕೊಟ್ರೇಶ್‌, ಎಸ್‌. ಉಮೇಶ್‌ ಇತರರು ಇದ್ದರು.

•ಬಾಪೂಜಿ ಸಿಬಿಎಸ್‌ಇ ಶಾಲೆ: ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲಮಾಧ್ಯಮ (ಸಿ.ಬಿ.ಎಸ್‌.ಇ.) ಶಾಲೆಯಲ್ಲಿ ನಿವೃತ್ತ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ರವಿನಾರಾಯಣ್‌ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ನಿರ್ದೇಶಕ ಕೆ. ಇಮಾಂ, ಸ್ವಾತಂತ್ರ್ಯ ದಿನ ಎಲ್ಲಾ ಜಾತಿ, ಧರ್ಮದವರೂ ಆಚರಿಸುವ ರಾಷ್ಟ್ರೀಯ ಹಬ್ಬ ಎಂದರು. ಕೆ. ತರುಣ್‌,ಹೃದ್ವಿ, ಮ್ರಿತ್ತಿಕಾ, ಶುಭಾಂಗ್‌ ವಲವಾಲ್ಕರ್‌ ಮಾತನಾಡಿದರು. ಸುಮಂಗಲ, ಎಲ್ಸಿ ಲೂಯಿಸ್‌, ಸುಮಾ ಕುಲಕರ್ಣಿ, ಸ‌ಮರೇಂದ್ರ ಪಾಣಿಗ್ರಹಿ, ಸಿ.ಮಂಜಪ್ಪ ಇತರರು ಇದ್ದರು.

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Suside-Boy

Brahamavara: ಹಾರಾಡಿ: ಬಾವಿಗೆ ಹಾರಿ ಆತ್ಮಹ*ತ್ಯೆ

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.