ನವ ಭಾರತ ನಿರ್ಮಿಸೋಣ
ದೇಶದ ಭವ್ಯ ಇತಿಹಾಸ ತಿಳಿಸುವ ಮೂಲಕ ಯುವಕರಲ್ಲಿ ದೇಶಭಕ್ತಿ ಮೂಡಿಸಿ•ನಂ.1 ಜಿಲ್ಲೆಯಾಗಿಸಲು ಯತ್ನ
Team Udayavani, Aug 16, 2019, 10:07 AM IST
ದಾವಣಗೆರೆ: ಸಮಾರಂಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಲಾಯಿತು.
ದಾವಣಗೆರೆ: ಪ್ರತಿಯೊಬ್ಬರು ನಾಡು, ದೇಶ ನನ್ನದು ಎಂಬ ಭಾವನೆಯೊಂದಿಗೆ ಸರ್ವತೋಮುಖ ಅಭಿವೃದ್ಧಿಯ ಹೊಸ ಭಾರತದ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಮನವಿ ಮಾಡಿದ್ದಾರೆ.
ಗುರುವಾರ ಜಿಲ್ಲಾ ಕ್ರೀಡಾಂಗಣದಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ಅವರು, ನಮ್ಮ ಹೆಮ್ಮೆಯ ರಾಷ್ಟ್ರಕವಿ ಕುವೆಂಪುರವರು ಹೇಳಿದಂತೆ, ನನ್ನದು ಭಾಷೆ, ನನ್ನದು ನಾಡು, ನನ್ನದು ದೇಶ… ಎಂಬ ಮನೋಭಾವ ಎಲ್ಲರೂ ಮೈಗೂಡಿಸಿಕೊಂಡು. ನನ್ನ ದೇಶ ಎಂಬ ಕಿಚ್ಚಿನೊಂದಿಗೆ ದೇಶದ ಅಭಿವೃದ್ಧಿ ಮಾಡೋಣ ಎಂದು ತಿಳಿಸಿದರು.
ಹರಪ್ಪ, ಮೊಹಿಂಜೋದಾರೋನಂತಹ ಪ್ರಾಚೀನ, ಉತ್ಕೃಷ್ಟ ಸಂಸ್ಕೃತಿ ಭಾರತೀಯರದ್ದು. ಅಂತಹ ಉನ್ನತ ಸಂಸ್ಕೃತಿಯ ಬಗ್ಗೆ ನಮ್ಮ ಯುವಜನಾಂಗಕ್ಕೆ ಸರಿಯಾಗಿ ತಿಳಿಸದೇ ಇರುವ ಕಾರಣಕ್ಕೆ ದೇಶಭಕ್ತಿ, ದೇಶದ ಬಗೆಗೆ ಬದ್ಧತೆ ಕಂಡು ಬರುತ್ತಿಲ್ಲ. ನಮ್ಮ ಯುವಜನಾಂಗಕ್ಕೆ ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ, ಭವ್ಯ ಇತಿಹಾಸ ತಿಳಿಸುವ ಮುಖೇನ ಅವರಲ್ಲೂ ದೇಶಭಕ್ತಿ ಮೂಡಿಸುವಂತಾಗಬೇಕು ಎಂದು ಆಶಿಸಿದರು.
ನಮ್ಮ ಮಕ್ಕಳು ವೈದ್ಯರು, ಇಂಜಿನಿಯರ್ ಆಗಬೇಕು ಎಂದು ಬಯಸುವ ಪೋಷಕರು ದೇಶದ ಇತಿಹಾಸ, ಸಂಸ್ಕೃತಿ, ಪರಂಪರೆ ಇತರೆ ಆಯಾಮಗಳ ಬಗ್ಗೆ ತಿಳಿಸುತ್ತಲೇ ಇಲ್ಲ. ವೈದ್ಯರು, ಇಂಜಿನಿಯರ್ ಮಾತ್ರವಲ್ಲ, ಇನ್ನೂ ಅನೇಕ ಕ್ಷೇತ್ರದಲ್ಲಿ ಮಕ್ಕಳು ಉನ್ನತ ಸ್ಥಾನಕ್ಕೆ ಏರುವಂತಾಗಬೇಕು. ಅಂತಹ ಪ್ರೇರಣೆ, ಪ್ರೋತ್ಸಾಹದಾಯಕ ವಾತಾರವರಣವನ್ನು ಪೋಷಕರು ಒದಗಿಸಿಕೊಡಬೇಕು ಎಂದು ಸಲಹೆ ನೀಡಿದರು.
ಸ್ವಾತಂತ್ರ್ಯಪೂರ್ವದಲ್ಲಿ ಭಾರತದಲ್ಲಿನ 565 ಸಂಸ್ಥಾನಗಳ ರಾಜ್ಯ, ರಾಜರು ನಡುವಿನ ದ್ವೇಷ, ಅಸೂಯೆಯನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡ ಬ್ರಿಟೀಷರು ದೇಶವನ್ನೇ ಆಳಿದರು. 1857ರಲ್ಲಿ ಮೊಟ್ಟ ಮೊದಲ ಬಾರಿಗೆ ಬ್ರಿಟೀಷ್ ವಿರೋಧಿ ಚಳವಳಿ ಪ್ರಾರಂಭವಾಯಿತು. ಲಕ್ಷಾಂತರ ಜನರ ಹೋರಾಟ, ಬಲಿದಾನದ ನಂತರ 1947ರ ಆ. 15 ರಂದು ಸ್ವಾತಂತ್ರ್ಯ ಪಡೆಯಲಾಯಿತು. ಆ ನಂತರ ಭಾರತ ಶಿಕ್ಷಣ, ಆರೋಗ್ಯ, ತಂತ್ರಜ್ಞಾನ… ಎಲ್ಲಾ ಆಯಾಮದಲ್ಲಿ ವಿಶ್ವವೇ ನಿಬ್ಬೆರಗಾಗುವಂತೆ ಅಭಿವೃದ್ಧಿ ಸಾಧಿಸುತ್ತಿದೆ. ಸೈಕಲ್ನಲ್ಲಿ ಉಪಗ್ರಹ ತೆಗೆದುಕೊಂಡು ಹೋಗುವ ಕಾಲದಲ್ಲಿದ್ದ ಭಾರತ ಬಾಹ್ಯಕಾಶ ಕ್ಷೇತ್ರದಲ್ಲಿ ಒಂದೇ ಕ್ಷಣಕ್ಕೆ 101 ಉಪಗ್ರಹ ಉಡಾವಣೆ ಮಾಡುವಷ್ಟು ಬೆಳೆದು ನಿಂತಿದೆ ಎಂದು ಶ್ಲಾಘಿಸಿದರು.
ಭಾರತ ಮುಂದುವರೆಯುತ್ತಿರುವ ದೇಶ ಎನ್ನಲಾಗುತ್ತದೆ. ಅಮೆರಿಕಾ ಭಾರತ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ಇದೆ ಎಂದು ಹೇಳಿದೆ. ಏನೇ ಆಗಲಿ, ನಮ್ಮ ಮಕ್ಕಳಲ್ಲಿನ ಪ್ರತಿಭೆಯನ್ನ ಹೆಕ್ಕಿ ತೆಗೆದು, ಒಳ್ಳೆಯ ಅವಕಾಶ, ವಾತಾವರಣ ಕಲ್ಪಿಸಿಕೊಡುವ ಮೂಲಕ ಇನ್ನಷ್ಟು ಬಲಿಷ್ಠ, ಸಶಕ್ತ ಭಾರತ ನಿರ್ಮಾಣ ಮಾಡೋಣ ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯ ಸಹ ಅಭಿವೃದ್ಧಿ ಪಥದಲ್ಲಿದ್ದು, ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯನ್ನು ನಂಬರ್ ಒನ್ ಜಿಲ್ಲೆಯನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಕೈಗಾರಿಕೆ ವಲಯದಲ್ಲಿ ಉತ್ತಮ ಅಭಿವೃದ್ಧಿ ಆಗುತ್ತಿದೆ. ಒಟ್ಟು 1,850 ಕೈಗಾರಿಕೆ ನೋಂದಣಿಯಾಗಿವೆ. 505 ಕೋಟಿ ಬಂಡವಾಳ ಹೂಡಿಕೆಯಾಗಿದೆ. 13,200 ಜನರು ಕೆಲಸ ಪಡೆದಿದ್ದಾರೆ. ಇನ್ನೂ 15 ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಬರಲಿವೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ದಾವಣಗೆರೆ ಜಿಲ್ಲೆಯ ಜನರ ನೆರವು ಅವಿಸ್ಮರಣೀಯ. ಜಿಲ್ಲಾಡಳಿತ ಸದಾ ಅಭಾರಿ ಆಗಿದೆ. ಜಿಲ್ಲೆಯ ಪ್ರಗತಿ ಮತ್ತು ಸ್ವಾತಂತ್ರ್ಯ ಹೋರಾಟದ ಹಾದಿಯನ್ನ ಸ್ಮರಿಸುತ್ತಾ ಪ್ರಸ್ತುತ ಸವಾಲುಗಳನ್ನ ಸಮರ್ಥವಾಗಿ ಸ್ವೀಕರಿಸುತ್ತಾ, ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ದೇಶವನ್ನ ಬಲಪಡಿಸೋಣ ಎಂದು ಆಶಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ಎ. ರವೀಂದ್ರನಾಥ್, ವಿಧಾನ ಪರಿಷತ್ತು ಸದಸ್ಯ ಕೆ. ಅಬ್ದುಲ್ ಜಬ್ಟಾರ್, ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್ ಇತರೆ ಜನಪ್ರತಿನಿಧಿ, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಬಸವರಾಜಪ್ಪ, ಶಿವಲಿಂಗಸ್ವಾಮಿ, ನೀಲಪ್ಪ, ಸಿದ್ದರಾಮಪ್ಪ, ಬಾಳೆಹೊಲದ ಮರುಳಸಿದ್ದಪ್ಪ, ಕಲ್ಯಾಣಪ್ಪ ನ್ಯಾಮತಿ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಇಲಾಖಾ ಸಿಬ್ಬಂದಿ ಅತ್ಯಾಕರ್ಷಕ ಪಥಸಂಚಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.