ಸಮಕಾಲೀನ ಸಮಸ್ಯೆಗಳಿಗೆ ಬಸವತತ್ವ ಪರಿಹಾರ
ಪ್ರವಚನ ಉದ್ಘಾಟನೆ ಸರಳವಾಗಿರುವ ವಚನಗಳನ್ನು ಓದುವ ಮೂಲಕ ಬದುಕಿನ ಮಾರ್ಗ ಕಂಡುಕೊಳ್ಳಬೇಕು
Team Udayavani, Aug 3, 2019, 3:25 PM IST
ದಾವಣಗೆರೆ: ವಿರಕ್ತ ಮಠದಲ್ಲಿ ಶುಕ್ರವಾರ ಸಂಜೆ ಕಲ್ಯಾಣ ದರ್ಶನ ಪ್ರವಚನ ಉದ್ಘಾಟನೆ.
ದಾವಣಗೆರೆ: ಸಮಕಾಲೀನ ಸಮಸ್ಯೆಗಳಾದ ದ್ವೇಷಾಸೂಯೆ, ಅಸಹಿಷ್ಣುತೆ, ಭ್ರಷ್ಟಾಚಾರ, ಜಾತಿಯತೆ, ಅಸಮಾನತೆ ಮತ್ತು ದುಶ್ಚಟ, ದುವ್ಯರ್ಸನಗಳಿಗೆ ಬಸವತತ್ವ ಅತ್ಯುತ್ತಮ ಪರಿಹಾರ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಪ್ರತಿಪಾದಿಸಿದ್ದಾರೆ.
109ನೇ ಶ್ರಾವಣ ಮಾಸದ ಪ್ರಯುಕ್ತ ಶುಕ್ರವಾರ ವಿರಕ್ತ ಮಠದಲ್ಲಿ ಪ್ರಾರಂಭವಾದ ಕಲ್ಯಾಣ ದರ್ಶನ ಪ್ರವಚನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ ಕಲ್ಯಾಣ ರಾಜ್ಯ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಸಮಾಜದಲ್ಲಿನ ಸರ್ವರಿಗೆ ಒಳಿತನ್ನು ಬಯಸುವುದೇ ಕಲ್ಯಾಣವಾಗಿದೆ. ವ್ಯಕ್ತಿಯ ಉದ್ಧಾರ ಮತ್ತು ಜಗತ್ತು, ಸಮಾಜ, ದೇಶದ ಪ್ರಗತಿಯೇ ಕಲ್ಯಾಣದ ಧ್ಯೇಯವಾಗಿದೆ ಎಂದು ತಿಳಿಸಿದರು.
ಮಹಾನ್ ದಾರ್ಶನಿಕ ಆಣ್ಣ ಬಸವಣ್ಣನವರು ಒಳಗೊಂಡಂತೆ ಎಲ್ಲಾ ಬಸವಾದಿ ಶರಣರ ಜೀವನವೇ ಆದರ್ಶ. ಅವರು ಕಂಡುಂಡಂತಹ ಅನುಭವವೇ ವಚನ ಸಾಹಿತ್ಯವಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರು ಅತೀ ಸರಳವಾಗಿ ಇರುವ ವಚನಗಳನ್ನು ಓದುವ ಮೂಲಕ ಬದುಕಿನ ಮಾರ್ಗ ಕಂಡುಕೊಳ್ಳಬೇಕು ಎಂದು ತಿಳಿಸಿದರು.
ಜಾತಿ, ವರ್ಗ, ವರ್ಣ, ಲಿಂಗಭೇದ, ವಯೋಭೇದ ಇಲ್ಲದ, ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು… ನೀಡುವ ಆದರ್ಶ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ. ಅಂತಹ ಪ್ರೇರಣೆ, ಸ್ಫೂರ್ತಿ, ಮಾರ್ಗದರ್ಶನ ನೀಡುವುದಕ್ಕಾಗಿಯೇ ಶ್ರಾವಣ ಮಾಸದಲ್ಲಿ ಪ್ರವಚನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಳು ತಿಳಿಸಿದರು.
ಕಲ್ಯಾಣ ದರ್ಶನ ಪ್ರವಚನ ಆಲಿಸುವುದರಿಂದ ಮನಸ್ಸು ಹಿರಿಯದಾಗುತ್ತದೆ. ಮನಸ್ಸು ವಿಶಾಲ ಆಗುತ್ತದೆ. ದ್ವೇಷ, ಸ್ವಾರ್ಥ, ಮತ್ಸರ, ಅಹಂಕಾರ ದೂರವಾಗುತ್ತವೆ ಎಂದು ತಿಳಿಸಿದರು.
ದಾವಣಗೆರೆ ವಿರಕ್ತ ಮಠದಲ್ಲಿ 109 ವರ್ಷಗಳ ಹಿಂದೆ ಶ್ರೀ ಜಯದೇವ ಜಗದ್ಗುರುಗಳು, ಮೃತ್ಯುಂಜಯ ಅಪ್ಪಗಳು, ಹರ್ಡೇಕರ್ ಮಂಜಪ್ಪ ಶ್ರಾವಣ ಮಾಸದ ಪ್ರವಚನ ಪ್ರಾರಂಭಿಸಿದರು. ಶ್ರಾವಣ ಮಾಸದಲ್ಲಿ ಒಳ್ಳೆಯ ವಿಚಾರ ಕೇಳಬೇಕು ಎನ್ನುವುದು ಪ್ರವಚನದ ಮೂಲ ಉದ್ದೇಶ. ಶ್ರವಣ… ಎಂದರೆ ಕೇಳುವುದು. ಹಾಗಾಗಿಯೇ ಶ್ರಾವಣ ಮಾಸದಲ್ಲಿ ಒಳ್ಳೆಯ ವಿಚಾರ ಕೇಳುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ದಾವಣಗೆರೆಯ ವಿರಕ್ತ ಮಠದಲ್ಲಿ 1911 ರಲ್ಲಿ ಪ್ರಾರಂಭವಾಗಿರುವ ಶ್ರಾವಣ ಮಾಸದಲ್ಲಿನ ಪ್ರವಚನ ಕಾರ್ಯಕ್ರಮ ಇಂದಿಗೂ ನಡೆದುಕೊಂಡು ಬರುತ್ತಿದೆ. ಇಡೀ ದೇಶಕ್ಕೆ ಇಂತಹ ಕಾರ್ಯಕ್ರಮ ಪ್ರಚುರ ಪಡಿಸಿದ ಕೀರ್ತಿ ಶ್ರೀಮಠಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.
ಈಗ ಅನೇಕರು ಸದಾ ಟಿವಿಗಳ ಮುಂದೆ ಕುಳಿತು ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಮರೆಯುತ್ತಿದ್ದಾರೆ. ಟಿವಿ ಎಂಬ ಮಾಯೆ ಎಲ್ಲವನ್ನೂ ನುಂಗಿದೆ. ಟಿವಿ ಬಿಟ್ಟು ಪ್ರವಚನ ಕೇಳುವುದರಿಂದ ಜೀವನಕ್ಕೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಶ್ರಾವಣ ಮಾಸದ ಅಂಗವಾಗಿ ಪ್ರತಿ ದಿನ ಸಂಜೆ 6.30 ರಿಂದ ನಡೆಯುವ ಪ್ರವಚನ ಕಾರ್ಯಕ್ರಮಕ್ಕೆ ಆಗಮಿಸಿ, ಪ್ರವಚನ ಕೇಳಬೇಕು ಎಂದು ತಿಳಿಸಿದರು.
ಮಹಲಿಂಗಪುರದ ಆಧ್ಯಾತ್ಮಿಕ ಚಿಂತಕ ಚನ್ನಬಸವ ಗುರೂಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಅತ್ಯಂತ ಉತ್ಕೃಷ್ಟ ಮಾರ್ಗದರ್ಶನ ನೀಡಿದರು. ವಚನ ಸಾಹಿತ್ಯ ಹೃದಯವನ್ನ ಮುಟ್ಟುವಂತಹ ಸಾಹಿತ್ಯ. ಬದುಕಿಗೆ ಉತ್ತಮ ಮಾರ್ಗದರ್ಶನ ನೀಡುವ ವಚನಗಳ ಅಭ್ಯಾಸ ಮಾಡಬೇಕು. ಬದುಕಿನ ಕೃತಾರ್ಥತೆ ಪಡೆಯಬೇಕು ಎಂದು ತಿಳಿಸಿದರು.
ನಾಯಕನಹಟ್ಟಿಯ ಅನುಭಾವಿ ಪ.ಮ. ಗುರುಲಿಂಗಯ್ಯ, ರೇಷ್ಮೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್, ದಾವಣಗೆರೆ ಅರ್ಬನ್ ಬ್ಯಾಂಕ್ ನಿರ್ದೇಶಕ ಮಂಜುನಾಥ್ ಬೆಳ್ಳೊಡಿ, ಎಂ. ದೊಡ್ಡಪ್ಪ, ರೇಖಾ ಎಂ.ಸಿ. ರಾಜು, ಎಂ. ಜಯಕುಮಾರ್, ಎಂ.ಕೆ. ಬಕ್ಕಪ್ಪ, ಹಾಸಭಾವಿ ಕರಿಬಸಪ್ಪ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.