ದಾವಣಗೆರೆಯಲ್ಲಿ ‘ಕರುಣೆಯ ಗೋಡೆ’ ನಾಳೆ ಉದ್ಘಾಟನೆ
ನಿಮಗೆ ಅಗತ್ಯವಿರದ ವಸ್ತು ಇಲ್ಲಿ ಬಿಡಿ, ಅಗತ್ಯವಿದ್ದರೆ ತೆಗೆದುಕೊಳ್ಳಿ.
Team Udayavani, Aug 14, 2019, 1:38 PM IST
ದಾವಣಗೆರೆ: ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಲಯನ್ಸ್ ಕ್ಲಬ್ ಪದಾಧಿಕಾರಿಗಳು.
ದಾವಣಗೆರೆ: ಸಾಮಾನ್ಯವಾಗಿ ಎಲ್ಲಾ ವರ್ಗದವರ ಮನೆಗಳಲ್ಲಿ ವಸ್ತುಗಳು ಅಗತ್ಯಕ್ಕಿಂತ ಹೆಚ್ಚಿರಲಿವೆ. ಅವುಗಳು ಚೆನ್ನಾಗಿದ್ದರೂ ಮನೆಯಲ್ಲಿಡಲಾಗದೇ, ಹೊರಗಡೆ ಎಸೆಯಲಾಗದೇ ಇಲ್ಲವೆ ಯಾರಿಗಾದರೂ ಕೊಡಬೇಕೆಂದಿದ್ದರೂ ಅವುಗಳನ್ನ ತೆಗೆದುಕೊಳ್ಳುವವರು ಮುಜಗರಪಟ್ಟುಕೊಳ್ಳಬಹುದು ಎಂಬ ಮನೋಭಾವ ಎಲ್ಲರಲ್ಲೂ ಸಹಜ. ಈ ಸಮಸ್ಯೆಗೆ ನಗರದ ಲಯನ್ಸ್ ಕ್ಲಬ್ ಸೂಕ್ತ ಪರಿಹಾರಕ್ಕೆ ವಿನೂತನ ವ್ಯವಸ್ಥೆಯನ್ನು ನಾಗರಿಕರಿಗೆ ಕಲ್ಪಿಸಲಿದೆ.
ವಿನೂತನ ವ್ಯವಸ್ಥೆ ಪ್ರಾಯೋಜಕರಾಗಿರುವ ಮಹಾನಗರಪಾಲಿಕೆ ಮಾಜಿ ಸದಸ್ಯ ದಿನೇಶ್ ಕೆ.ಶೆಟ್ಟಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೊಸ ಯೋಜನೆ ಬಗ್ಗೆ ಮಾತನಾಡಿ, ಜನರಿಗೆ ಅಗತ್ಯವಿಲ್ಲದ ಬಟ್ಟೆಗಳು, ಜಮಖಾನ, ಛತ್ರಿ, ಚಾಪೆ, ಚಪ್ಪಲಿ, ಪೆನ್ನು ಪೆನ್ಸಿಲ್, ಪುಸ್ತಕಗಳು, ಬ್ಯಾಗ್….ಹೀಗೆ ಹತ್ತು ಹಲವಾರು ಬಳಕೆಯ ವಸ್ತುಗಳನ್ನು ಜನನಿಬಿಡ ಸ್ಥಳಗಳಲ್ಲಿ ಇಟ್ಟರೆ ಅವುಗಳ ಅವಶ್ಯಕತೆ ಇರುವವರು ಯಾವುದೇ ಮುಜಗರ ಇಲ್ಲದೆ ತೆಗೆದುಕೊಂಡು ಹೋಗಬಹುದು. ಇದಕ್ಕಾಗಿ ಕರುಣೆಯ ಗೋಡೆ (ವಾಲ್ ಆಫ್ ಕೈಂಡ್‌ನೆಸ್) ಶೀರ್ಷಿಕೆಯಡಿ ನಿಮಗೆ ಅಗತ್ಯವಿಲ್ಲದಿರುವ ವಸ್ತುಗಳನ್ನು ಇಲ್ಲಿ ಬಿಡಿ! ಅಗತ್ಯ ಇರುವವರು ತೆಗೆದುಕೊಳ್ಳಿ! ಎಂಬ ಘೋಷವಾಕ್ಯದಡಿ ದಾವಣಗೆರೆ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಮುಂದಾಗಲಾಗಿದೆ ಎಂದರು.
ನಾಗರಿಕರು ನೀಡುವ ವಸ್ತುಗಳನ್ನು ಇರಿಸಲು ಪಿಜೆ ಬಡಾವಣೆಯ ಚರ್ಚ್ ಪಕ್ಕದ ಸೂಪರ್ ಮಾರ್ಕೆಟ್ ಹಾಗೂ ಪಿಬಿ ರಸ್ತೆಯ ರೇಣುಕಾ ಮಂದಿರ ಮುಂಭಾಗದಲ್ಲಿ ಕಪಾಟುಗಳ ವ್ಯವಸ್ಥೆ ಮಾಡಲಾಗುವುದು. ಸದ್ಯ ಈ ಕಡೆಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುವುದು. ನಾಲ್ವರು ಇದರ ನಿರ್ವಹಣೆ ಮಾಡಲಿದ್ದಾರೆ. ಈ ಪ್ರಯತ್ನ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ನಗರದ ವಿವಿಧೆಡೆ ಈ ಕೇಂದ್ರ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ಆ. 15ರಂದು ಮಧ್ಯಾಹ್ನ 12.30ಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಈ ವಿನೂತನ ಪ್ರಯತ್ನಕ್ಕೆ ಚಾಲನೆ ನೀಡಲಿದ್ದು, ಉದ್ಯಮಿ ಅಥಣಿ ವೀರಣ್ಣ, ಲಯನ್ಸ್ ಕ್ಲಬ್‌ನ ವೈ.ಬಿ.ಸತೀಶ್, ಡಾ| ಎ.ಎಂ.ಶಿವಕುಮಾರ್, ಉಮೇಶ್ ಶೆಟ್ಟಿ, ಜಿ.ನಾಗನೂರು, ಡಾ| ಬಿ.ಎಸ್.ನಾಗಪ್ರಕಾಶ್, ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಬಿ.ಸತೀಶ್, ಎಸ್.ವೆಂಕಚಾಚಲಂ, ಜೆ.ಎ.ವಿನಾಯಕ, ಎ.ನಾಗರಾಜ್, ಬೆಳ್ಳೂಡಿ ಶಿವಕುಮಾರ್, ಇತರರಿದ್ದರು.
ನಾಗರಿಕರು ಕಪಾಟುಗಳಲ್ಲಿ ವಸ್ತುಗಳನ್ನು ಇಡಲು ದಿನೇಶ್ ಕೆ.ಶೆಟ್ಟಿ (9845074179), ಬೆಳ್ಳೂಡಿ ಶಿವಕುಮಾರ್ (9448119815), ಶ್ರೀಕಾಂತ ಬಗರೆ (9886393695), ಪ್ರವೀಣ್ (9880055355) ಹಾಗೂ ಯುವರಾಜ್ (9945613469) ಇವರನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್ ಅರ್ಜಿ ತಿರಸ್ಕೃತ
Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.