ಬಸವಾದಿ ಶರಣರ ಬಯಕೆಯಂತೆ ಕಾಯಕ ಜೀವಿಗಳಾಗಿ
ಕಾಯಕ ಸತ್ಯ-ಶುದ್ಧವಾಗಿರಲಿ
Team Udayavani, May 23, 2019, 4:31 PM IST
ದಾವಣಗೆರೆ: ಯಶೋಧಮ್ಮ ರಾಮೇಶ್ವರ ಅವರಿಗೆ ಕಾಯಕ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಾವಣಗೆರೆ: ಕಾಯಕವೇ ಕೈಲಾಸ… ಎಂಬ ಬಸವಾದಿ ಶರಣರ ಕಾಯಕಪ್ರಜ್ಞೆಯನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಚಾರ್ಯೆ ಪ್ರೊ| ಟಿ. ನೀಲಾಂಬಿಕೆ ಆಶಿಸಿದ್ದಾರೆ.
ಬುಧವಾರ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ವಿಶ್ವ ಕಾಯಕ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಕಾಯಕ ಪ್ರಜ್ಞೆ ಜಾಗ್ರತಗೊಳಿಸಬೇಕಾಗಿದೆ ಎಂದರು.
ಪ್ರತಿಯೊಬ್ಬರು ಜೀವನಕ್ಕಾಗಿ ಕೆಲಸ ಮಾಡಬೇಕು. ಆ ಕೆಲಸ ಪರಿಶುದ್ಧತೆಯಿಂದ ಕೂಡಿರಬೇಕು. ಬದುಕಲಿಕ್ಕೆ ಬದುಕ ಮಾಡಬೇಕು ಎನ್ನುವ ಮೂಲಕ ಬಸವಾದಿ ಶರಣರು ಕಾಯಕದ ಮಹತ್ವ ಸಾರಿದರು. ಬಸವಾದಿ ಶರಣರಲ್ಲಿ ಅನೇಕ ಶರಣರು ಸತ್ಯ, ಶುದ್ಧ ಕಾಯಕಯೋಗಿಗಳಾಗಿದ್ದರು. ಆ ಮೂಲಕ ಶರಣರು ಕಾಯಕಕ್ಕೆ ಮಹತ್ವ ತಂದರು ಎಂದು ತಿಳಿಸಿದರು. ಶರಣ ಭಾಷೆಯಲ್ಲಿ ಕಾಯಕ- ಬದುಕಿಗೆ ವಿಶಾಲ ಅರ್ಥ ಇದೆ. ಪ್ರತಿಯೊಬ್ಬರಿಗೂ ಬದುಕಲು ಬದುಕು ಮಾಡಬೇಕು. ಇದು ಯಾಂತ್ರಿಕತೆಯಿಂದ ಕೂಡಿರದೆ ಆತ್ಮತೃಪ್ತಿಯಿಂದ ಕೂಡಿರಬೇಕು ಎಂಬುದನ್ನ ಶರಣರು ಬಯಸುವರು. ನಾವೆಲ್ಲರೂ ಬಸವಾದಿ ಶರಣರ ಬಯಕೆಯಂತೆ ಕಾಯಕ ಜೀವಿಗಳಾಗಬೇಕು ಎಂದು ತಿಳಿಸಿದರು.
ಬಸವಾದಿ ಶರಣರನ್ನು ಅವರ ಕಾಯಕದಿಂದ ಗುರುತಿಸುವ ಪರಂಪರೆ ಇತ್ತು. ಆದರೆ, ಪ್ರಸ್ತುತ ಇದು ಜಾತಿ ಹಿನ್ನೆಲೆ ಪಡೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.
ಪ್ರತಿಯೊಬ್ಬರಲ್ಲಿ ಧನವಂತರು, ಆಸ್ತಿವಂತರು ಆಗಬೇಕು ಎಂಬ ಆಸೆ ಸಾಮಾನ್ಯ. ಶ್ರೀಮಂತರಾಗಲಿಕ್ಕೆ ಸಾಕಷ್ಟು ಮಾರ್ಗಗಳಿವೆ. ಸತ್ಯ, ಪರಿಶುದ್ಧ ಕಾಯಕದಿಂದಾಗಿಯೇ ಶ್ರೀಮಂತರಾಗಬೇಕೇ ಹೊರತು ಇನ್ನೊಬ್ಬರದನ್ನು ಕಸಿದು ಆಗುವುದಲ್ಲ. ನಾವು ಮಾಡುವಂತಹ ಯಾವುದೇ ಉದ್ಯೋಗದಲ್ಲಿ ಪಾವಿತ್ರ್ಯತೆ ಹೊಂದಿರಬೇಕು. ನಿರ್ಲಕ್ಷ್ಯ ಮನೋಭಾವನೆಗೆ ಅವಕಾಶವೇ ನೀಡಬಾರದು ಎಂದು ಸಲಹೆ ನೀಡಿದರು.
ಬಸವ ಬಳಗದ ಮುಖಂಡ ವಿ. ಸಿದ್ದರಾಮಣ್ಣ ಮಾತನಾಡಿ, ಶರಣ ಸಾಹಿತ್ಯ ಎಂದರೆ ಮೂಢನಂಬಿಕೆ, ಕಂದಾಚಾರ, ಸಾಮಾಜಿಕ ಅನಿಷ್ಟ… ಎಂಬ ಕತ್ತಲೆಯನ್ನು ಕಳೆಯುವಂತಹ ಮಹಾನ್ ಬೆಳಕು. ಜಾತಿ, ಮತ, ವರ್ಗ ರಹಿತವಾದುದು ಎಂದು ತಿಳಿಸಿದರು.
ಇಷ್ಟಲಿಂಗ ಪೂಜೆಗೆ ಲಿಂಗ, ಜಾತಿಯ ಪ್ರಶ್ನೆ ಬರುವುದಿಲ್ಲ. ಇಷ್ಟಲಿಂಗ ಪೂಜೆ ಅಜ್ಞಾನಿಗಳಿಗೆ ಸುಜ್ಞಾನ ಹರಿಸುವಂಥದ್ದು. ಇಷ್ಟಲಿಂಗ ಪೂಜೆ ಮೂಲಕ ಬಸವಣ್ಣ ಪ್ರತಿಯೊಬ್ಬರಲ್ಲೂ ದೇವರಾಗುವ ಶಕ್ತಿ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಕಾಯಕ ಶರಣಶ್ರೀ… ಪ್ರಶಸ್ತಿ ಪುರಸ್ಕೃತೆ ಯಶೋಧಮ್ಮ ರಾಮೇಶ್ವರ ಮಾತನಾಡಿ, ರೈತರು ಕೆಲಸಗಾರರ ಮೇಲೆ ಅವಲಂಬನೆಯಾಗದೆ ಶ್ರಮವಹಿಸಿ ಕೆಲಸ ಮಾಡಿದಾಗ ಉಳಿತಾಯ ಮಾಡಬಹುದು. ಕೃಷಿ ಇಲಾಖೆಯ ಬೆಳೆ ವರ್ಗೀಕರಣ ಪದ್ಧತಿ ಸರಿಯಲ್ಲ. ಗುಣಮಟ್ಟದ ಬೆಳೆ ಮಾರಾಟವಾಗುತ್ತದೆ. ಆದರೆ, ಸ್ವಲ್ಪ ಕಡಿಮೆ ಗುಣಮಟ್ಟದ ಬೆಳೆ ಉಳಿದುಕೊಳ್ಳುತ್ತದೆ. ಇದನ್ನು ಯಾರು ಖರೀದಿಸುತ್ತಾರೆ ಎಂದು ಪ್ರಶ್ನಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಎಚ್.ಎನ್.ನಿರಂಜನ್, ನಿರ್ಮಲ ಸೋಮಶೇಖರ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.