ಜೀವನಾನುಭವ ಬರಹಕ್ಕಿಳಿಸಿದ ಸಾಹಿತಿ
ಹಿರಿಯ ಸಾಹಿತಿ ಟಿ. ಗಿರಿಜಾ ಸಂಸ್ಮರಣೆ•ಮಹಿಳೆ ಸಮಾಜದಲ್ಲಿ ಸ್ವಂತ ಅಸ್ತಿತ್ವ ರೂಪಿಸಿಕೊಳ್ಳಲಿ
Team Udayavani, Jul 8, 2019, 10:14 AM IST
ದಾವಣಗೆರೆ: ಹಿರಿಯ ಸಾಹಿತಿ ಟಿ. ಗಿರಿಜಾರವರ ಸಂಸ್ಮರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
ದಾವಣಗೆರೆ: ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕಾಣಿಕೆ ನೀಡಿರುವ ಹಿರಿಯ ಲೇಖಕಿ, ಕಾವ್ಯ ಕನ್ನಿಕೆ ಆಗಿರುವ ಟಿ. ಗಿರಿಜಾ ದೇವನಗರಿಯ ದೇವಕನ್ನಿಕೆಯಾಗಿ ಬೆಳಗಬೇಕು ಎಂದು ಸಾಹಿತಿ ಗಂಗಾಧರ್ ಬಿ.ಎಲ್. ನಿಟ್ಟೂರ್ ಆಶಿಸಿದ್ದಾರೆ.
ಭಾನುವಾರ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ವನಿತಾ ಸಾಹಿತ್ಯ ವೇದಿಕೆ, ವನಿತಾ ಸಮಾಜ ಸಹಯೋಗದಲ್ಲಿ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ ದತ್ತಿ ಕಾರ್ಯಕ್ರಮದ ಉದ್ಘಾಟನೆ ಹಾಗೂ ಹಿರಿಯ ಸಾಹಿತಿ ಟಿ. ಗಿರಿಜಾರವರ ಸಂಸ್ಮರಣೆಯಲ್ಲಿ ಹಿರಿಯ ಸಾಹಿತಿ ಟಿ. ಗಿರಿಜಾರವರ ಕೃತಿ ಅವಲೋಕನ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ತಮ್ಮ ಅಂಗವೈಕಲ್ಯದ ನಡುವೆಯೂ ಹಿರಿಯ ಸಾಹಿತಿ ಟಿ. ಗಿರಿಜಾರವರು 40ಕ್ಕೂ ಹೆಚ್ಚು ಕೃತಿಗಳನ್ನು ಕಾಣಿಕೆ ನೀಡುವ ಮೂಲಕ ಅವರು ಕಾವ್ಯ ಕನ್ನಿಕೆ ಎಂದೇ ಗುರುತಿಸಲ್ಪಡುತ್ತಿದ್ದಾರೆ ಎಂದರು.
ಟಿ.ಗಿರಿಜಾರವರ ಇಡೀ ಬದುಕು ಮತ್ತು ಸಾಹಿತ್ಯವನ್ನ ಅವಲೋಕಿಸಿದಾಗ ಅವರು ಸದಾ ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಚಿಂತನೆ ನಡೆಸುತ್ತಿದ್ದ ದಾದಿ ಮತ್ತು ದೀದಿ ಆಗಿದ್ದಾರೆ. ಮೂಲತಃ ಶುಶ್ರೂಷಕಿಯಾಗಿದ್ದ ಗಿರಿಜಾರವರು ದಾದಿಯಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಅನೇಕ ಲೇಖಕಿಯರ ಅಕ್ಕನಾಗಿ… ದೀದಿಯೂ ಆಗಿದ್ದಾರೆ. ಅವರು ಜೀವನ, ಅನುಭವವನ್ನು ಬರಹಕ್ಕೆ ತಂದ ಕಾರಣಕ್ಕಾಗಿಯೇ ಈಗಲೂ ಅವರನ್ನು ಸ್ಮರಿಸಲಾಗುತ್ತಿದೆ ಎಂದು ತಿಳಿಸಿದರು.
ಯುವ ಲೇಖಕರು, ಸಾಹಿತಿಯ ಬದುಕಿನ ದಾರಿ ಸಾಹಿತ್ಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಟಿ.ಗಿರಿಜಾ ತಮ್ಮ ಬದುಕಿನ ಅನುಭವವನ್ನು ಬರಹಕ್ಕೆ ಇಳಿಸಿದಂತಹ ಯಥಾರ್ತವಾದಿ ಎಂಬುದು ಅವರ 13 ಸಾಮಾಜಿಕ ಕಾದಂಬರಿ ಅವಲೋಕಿಸಿದಾಗ ತಿಳಿದು ಬರುತ್ತದೆ. ಅವರು ಸದಾ ಬದುಕಿಗಾಗಿ ತುಡಿತ ಹೊಂದಿದವರು ಮತ್ತು ಮಿಡಿದವರು ಎಂದು ಸ್ಮರಿಸಿದರು.
ಟಿ. ಗಿರಿಜಾರವರು ತಮ್ಮ ಭಿಕ್ಷುಕಿ… ಕಾದಂಬರಿಯಲ್ಲಿ ಭಿಕ್ಷುಕಿ ಪಾತ್ರವನ್ನು ಬಹಳ ಚೆನ್ನಾಗಿ ರೂಪಿಸಿದ್ದಾರೆ. ತಮ್ಮ ಮನೆಗೆ ದಿನ ನಿತ್ಯ ಬರುತ್ತಿದಂತಹ ಭಿಕ್ಷುಕಿಯ ಜೀವನ, ಸಂಕಷ್ಟ ತಿಳಿದುಕೊಂಡು ಕಾದಂಬರಿಯಲ್ಲಿ ತಾವೇ ಪಾತ್ರವಾಗಿ, ಕಥೆಯಾಗಿದ್ದಾರೆ. ಅಂತಹ ತನ್ಮಯತೆಯಿಂದ ಕೂಡಿದ ಬರಹ ಸದಾ ಸ್ಮರಣೆಯಲ್ಲಿ ಉಳಿಯುತ್ತದೆ ಎಂದು ತಿಳಿಸಿದರು.
ಟಿ.ಗಿರಿಜಾರವರ ಬದುಕು ತೆರೆದ ಪುಸ್ತಕ. ನೇರ, ನಿಷ್ಠುರವಾದಿಯಾಗಿದ್ದ ಅವರು ಐತಿಹಾಸಿಕ ಕಾದಂಬರಿಯ ರಚನೆಗಾಗಿ ತಮ್ಮ ಅಂಗವೈಕಲ್ಯವನ್ನೂ ಲೆಕ್ಕಿಸದೆ ಸ್ಥಳಕ್ಕೆ ತೆರಳಿ ಪ್ರತಿಯೊಂದು ಅಂಶವನ್ನು ಕಲೆ ಹಾಕಿದವರು. ಪ್ರತಿಯೊಂದನ್ನೂ ಸ್ಪಷ್ಟವಾಗಿ ಬರೆದಂತಹ ಸತ್ಯಶೋಧಕಿ, ಬೆಂಕಿಯ ನಡುವೆಯೂ ಸುವಾಸನೆ ಬೀರಿದಂತಹ ಬೆಂಕಿಯಲ್ಲಿನ ಹೂವಾದವರು ಎಂದು ಬಣ್ಣಿಸಿದರು.
ಟಿ. ಗಿರಿಜಾರವರ ಸಾಹಿತ್ಯಕ ಕೃಷಿ ಮುಂದಿನ ಪೀಳಿಗೆಯವರಿಗೂ ತಿಳಿಸುವಂತಹ ನಿಟ್ಟಿನಲ್ಲಿ ವನಿತಾ ಸಮಾಜ, ಸಾಹಿತ್ಯ ವೇದಿಕೆಯವರು ಗ್ರಂಥಾಲಯ ಪ್ರಾರಂಭಿಸಿ, ಗಿರಿಜಾರವರ ಕೃತಿಗಳ ಪರಿಚಯ ಮಾಡುವಂತಾಗಬೇಕು. ಉದಯೋನ್ಮುಖ ಲೇಖಕರು, ಕವಿ, ಸಾಹಿತಿಗಳ ಕೃತಿಗಳನ್ನೂ ಗ್ರಂಥಾಲಯದಲ್ಲಿ ದೊರೆಯುವ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಜಿಲ್ಲೆಯ ಹಿರಿಯ ಲೇಖಕಿ ಟಿ. ಗಿರಿಜಾರವರು ತಮ್ಮ ಅಂಗವೈಕಲ್ಯತೆ, ಸರ್ಕಾರಿ ಉದ್ಯೋಗ ನಿರ್ವಹಣೆಯ ನಡುವೆಯೂ ಸಾಹಿತ್ಯ ರಚನೆ ಮಾಡುವ ಮೂಲಕ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಯಾರು ತಮ್ಮನ್ನು ಸಾರ್ವಜನಿಕ ಕೆಲಸಕ್ಕೆ ಸಮರ್ಪಿಸಿಕೊಂಡಿರುತ್ತಾರೋ ಅಂತಹವರಿಗೆ ಸಾವು ಎಂಬುದೇ ಇಲ್ಲ. ಸದಾ ಸ್ಮರಣೀಯರು, ಚಿರಸ್ಥಾಯಿ ಆಗಿರುತ್ತಾರೆ ಎಂಬುದಕ್ಕೆ ಟಿ. ಗಿರಿಜಾ ಜ್ವಲಂತ ನಿದರ್ಶನ ಎಂದು ತಿಳಿಸಿದರು.
ಅವಿಭಕ್ತ ಕುಟುಂಬ ವ್ಯವಸ್ಥೆಯ ಮುಂದುವರೆದ ಭಾಗವೇ ರಾಜಕೀಯ. ಮನೆಯಂತೆ ಇಲ್ಲೂ ಜವಾಬ್ದಾರಿ, ಕೆಲಸ ಇರುತ್ತವೆ. ಜನಪ್ರತಿನಿಧಿಗಳಾದ ನಾವು ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತೇವೆ.ಮಹಿಳೆಯರು ಟಿವಿ ವ್ಯಾಮೋಹದಿಂದ ಹೊರ ಬಂದು ಸಮಾಜದಲ್ಲಿ ತಮ್ಮದೇ ಆದಂತಹ ಅಸ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕಿ ಡಾ| ಯಶೋಧಮ್ಮ ಬಿ. ರಾಜಶೇಖರಪ್ಪ, ಟಿ.ಎಸ್. ಶೈಲಜಾ, ವನಿತಾ ವೇದಿಕೆ ಅಧ್ಯಕ್ಷೆ ಎಸ್.ಎಂ. ಮಲ್ಲಮ್ಮ, ಕಾರ್ಯದರ್ಶಿ ಕೆ.ಎಚ್. ಸತ್ಯಭಾಮ ಇತರರು ಇದ್ದರು. ರುದ್ರಾಕ್ಷಿಬಾಯಿ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಸಂಧ್ಯಾ ಸುರೇಶ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.