ದೇಶದಲ್ಲಿ ಮೋದಿ ಪರ ಅಲೆ ಇದೆ ಎನ್ನುವುದು ಭ್ರಮೆ
ಹರಿಹರದಲ್ಲಿ ಮಾಜಿ ಸಚಿವ ಜಯಚಂದ್ರ ವಾಗ್ಧಾಳಿ
Team Udayavani, Apr 22, 2019, 11:25 AM IST
ಹರಿಹರ: ನಗರದಲ್ಲಿ ಭಾನುವಾರ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಪರ ನಡೆದ ರೋಡ್ ಶೋದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿದರು.
ಹರಿಹರ: ನಗರದಲ್ಲಿ ಭಾನುವಾರ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಪರ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಬೃಹತ್ ರೋಡ್ ಶೋ ನಡೆಸಿದರು.
ನಂತರ ನಡೆದ ಸಭೆಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ದೇಶದಲ್ಲಿ ಮೋದಿ ಪರ ಅಲೆ ಇದೆ ಎನ್ನುವುದು ಭ್ರಮೆ. 60 ವರ್ಷ ಸುಭದ್ರ ಸರಕಾರ ನೀಡಿದ ಕಾಂಗ್ರೆಸ್‌ನಿಂದಾಗಿ ಬಡತನ ನಿರ್ಮೂಲನೆ, ಆಣೆಕಟ್ಟು ನಿರ್ಮಾಣ, ತಂತ್ರಜ್ಞಾನ, ವಿಜ್ಞಾನ, ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳ ಪ್ರಗತಿಯಾಗಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವುದು ಕಾಂಗ್ರೆಸ್ಸಿಗರೇ ಹೊರತು ಕೋಮುವಾದಿ ಬಿಜೆಪಿಯವರಲ್ಲ ಎಂದು ಟೀಕಿಸಿದರು.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಅನೇಕ ಸರ್ಜಿಕಲ್ ದಾಳಿ ನಡೆದಿವೆ. ವಾಜಪೇಯಿಯವರು ಇಂದಿರಾ ಧೈರ್ಯವನ್ನು ದುರ್ಗಿ ಎಂದು ಶ್ಲಾಘಿಸಿದ್ದರು. ಆದರೆ ಒಂದೆರಡು ಸರ್ಜಿಕಲ್ ದಾಳಿ ಮಾಡಿ ಅದನ್ನೇ ದೊಡ್ಡ ಸಾಧನೆ ಎಂದು ಮೋದಿ, ಬಿಜೆಪಿಯವರು ಬಿಂಬಿಸಿ ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಜನರು ಈಗ ಜಾಗೃತರಾಗಿದ್ದಾರೆ. ಬಿಜೆಪಿಗರ ಮಾತಿನ ಸೆಳೆತಕ್ಕೆ ಒಳಗಾಗದೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಶಾಸಕ ಎಸ್.ರಾಮಪ್ಪ ಮಾತನಾಡಿ, ಸರಳತೆ ಹಾಗೂ ಬಡತನದ ಅರಿವು ಇರುವ ಮೈತ್ರಿ ಅಭ್ಯರ್ಥಿ ಎಚ್.ಬಿ.ಮಂಜಪ್ಪ ತಳಮಟ್ಟದಿಂದ ಬೆಳೆದು ಬಂದವರು.ಇವರನ್ನು ಸಂಸತ್‌ಗೆ ಕಳಿಸಿದರೆ ಜನಸಾಮಾನ್ಯರ ಧ್ವನಿ ದೆಹಲಿಗೆ ತಲುಪುತ್ತದೆ ಎಂದರು. ಅಭ್ಯರ್ಥಿ ಎಚ್.ಬಿ. ಮಂಜಪ್ಪ ಮಾತನಾಡಿದರು.
ಪಕ್ಕೀರಸ್ವಾಮಿ ಮಠದಿಂದ ಶಿವಮೊಗ್ಗ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ದೇವಸ್ಥಾನ ರಸ್ತೆ, ದೊಡ್ಡಿ ಬೀದಿ, ಮಧ್ಯಮ ಗುಡಿ ರಸ್ತೆ, ಹಳೆ ಪಿ.ಬಿ.ರಸ್ತೆ, ಗಾಂದಿ ವೃತ್ತ, ಶೋಭಾ ಟಾಕೀಸ್ ರಸ್ತೆ, ಜೆ.ಸಿ.ಬಡಾವಣೆ, ಮೂಲಕ ರೋಡ್ ಶೋ ಸಾಗಿತು.
ಮುಖಂಡರಾದ ಜಲಜಾ ನಾಯಕ್, ಬಿ. ರೇವಣಸಿದ್ದಪ್ಪ, ಶಂಕರ್ ಖಟಾವ್‌ಕರ್, ಕೆ. ಮರಿದೇವ, ಮಾಜಿ ಉಪಕುಲಪತಿ ಡಾ| ಎಚ್.ಮಹೇಶ್ವರಪ್ಪ, ಎಸ್.ಎಂ. ವಸಂತ್, ರಮೇಶ್ ಬಿ.ಎನ್., ಸಿ.ಎನ್. ಹುಲಿಗೇಶ್, ರಾಜಕುಮಾರ್, ರಹಮತ್ ಉರ್ ರಹಮಾನ್, ಬಿ. ಚಿದಾನಂದಪ್ಪ, ಎಲ್.ಬಿ. ಹನುಮಂತಪ್ಪ, ಎಂ.ಬಿ.ಆಬಿದ್ ಅಲಿ, ಸೈಯದ್ ನಜೀರ್ ಅಹ್ಮದ್, ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
MUST WATCH
ಹೊಸ ಸೇರ್ಪಡೆ
Jharkhand Polls: ಬುಡಕಟ್ಟು ರಾಜ್ಯದಲ್ಲಿ ಅಧಿಕಾರದತ್ತ ಇಂಡಿಯಾ ಒಕ್ಕೂಟ; ಬಿಜೆಪಿಗೆ ಹಿನ್ನಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.