ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಗೆ ಧಮಾಕಾ
•2019ರ ಚುನಾವಣೆಯಲ್ಲಿ ಐತಿಹಾಸಿಕ ಸಾಧನೆ•ಶೇ. 50ಕ್ಕಿಂತ ಹೆಚ್ಚು ಮತಗಳಿಕೆ•ಪ್ರಾಬಲ್ಯ ಹೆಚ್ಚಳ
Team Udayavani, May 27, 2019, 10:24 AM IST
ರಾ.ರವಿಬಾಬು
ದಾವಣಗೆರೆ: 2019ರ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಅಂತರದಲ್ಲಿ ಜಯಿಸುವ ಮೂಲಕ ಸತತ ನಾಲ್ಕನೇ ಬಾರಿ ದಾಖಲೆಯ ಜಯ ಸಾಧಿಸಿರುವ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಶೇ. 50ಕ್ಕಿಂತಲೂ ಹೆಚ್ಚಿನ ಮತ ಪಡೆಯುವ ಮೂಲಕ ಮತ್ತೂಂದು ಸಾಧನೆ ಮಾಡಿದ್ದಾರೆ.
ಕಳೆದ ಏ.23 ರಂದು ನಡೆದ ಚುನಾವಣೆಯಲ್ಲಿ ಚಲಾವಣೆಗೊಂಡ 11,92,293(ಅಂಚೆ ಮತ ಹೊರತುಪಡಿಸಿ) ಮತಗಳಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಶೇ. 54.77ರ ಪ್ರಮಾಣದಲ್ಲಿ 6,51,353 ಮತ ಪಡೆದಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಶೇ.40.58 ಪ್ರಮಾಣದಲ್ಲಿ 4,82,683 ಮತ ಗಳಿಸಿದ್ದಾರೆ. ಇದೇ ಮೊದಲ ಬಾರಿಗೆ ಒಟ್ಟಾರೆ ಮತಗಳಿಕೆ ಪ್ರಮಾಣ ಶೇ.50 ದಾಟಿರುವುದು ಬಿಜೆಪಿಯ ಪ್ರಾಬಲ್ಯವನ್ನು ತೋರಿಸುತ್ತದೆ.
ವಿಧಾನಸಭಾ ಕ್ಷೇತ್ರವಾರು ಗಮನ ಹರಿಸಿದರೆ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಎಲ್ಲಾ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲೂ ಶೇ.50 ಮತ್ತು ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಮತ ಪಡೆಯುವ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ವಿರುದ್ಧ ಮೇಲುಗೈ ಸಾಧಿಸಿದ್ದಾರೆ.
•ಜಗಳೂರು: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಚಲಾವಣೆಗೊಂಡಿರುವ 1,39,178 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ್ ಶೇ. 52.41ರ ಪ್ರಮಾಣದಲ್ಲಿ 72,948 ಮತ ಪಡೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಶೇ.40.93ರ ಪ್ರಮಾಣದಲ್ಲಿ 56,968 ಮತ ಪಡೆಯಲಷ್ಟೇ ಶಕ್ತರಾಗಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಗಳೂರು ಕ್ಷೇತ್ರದಲ್ಲಿ ಚಲಾವಣೆಗೊಂಡಿದ್ದ 1,29,325 ಮತಗಳ ಪೈಕಿ ಶೇ. 46.76ರ ಪ್ರಮಾಣದಲ್ಲಿ 60,480, ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಶೇ. 45.29 ಪ್ರಮಾಣದಲ್ಲಿ 58,578 ಮತ ಪಡೆದಿದ್ದರು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಬಿಜೆಪಿಯ ಮತಗಳಿಕೆ ಪ್ರಮಾಣ ಹೆಚ್ಚಾಗಿದೆ.
•ಹರಪನಹಳ್ಳಿ: ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚಲಾಯಿಸಿದ 1,54,686 ಮತಗಳ ಪೈಕಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಶೇ. 53.80 ರ ಪ್ರಮಾಣದಲ್ಲಿ 83,226 ಮತ ಪಡೆದಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ 61,210 (ಶೇ.39.57) ಮತ ಗಳಿಸಿದ್ದಾರೆ.
2014ರ ಚುನಾವಣೆಯಲ್ಲಿ 1,45,032 ಮತಗಳಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಶೇ.51.01 ಪ್ರಮಾಣದಲ್ಲಿ 73,990 ಮತ ಪಡೆದಿದ್ದರೆ. ಕಾಂಗ್ರೆಸ್ ಶೇ. 26.25 ಪ್ರಮಾಣದಲ್ಲಿ 38,081 ಮತ ಪಡೆದಿತ್ತು. ಬಿಜೆಪಿ ಕಳೆದ ಚುನಾವಣೆ ಗಿಂತಲೂ ಈ ಬಾರಿಯ ಚುನಾವಣೆಯಲ್ಲಿ ಶೇ.2.79 ರಷ್ಟು ಮತಗಳನ್ನು ವೃದ್ಧಿಸಿಕೊಂಡಿದೆ.
•ಹರಿಹರ: ಕಾಂಗ್ರೆಸ್ ಶಾಸಕರಿರುವ ಹರಿಹರ ಕ್ಷೇತ್ರದಲ್ಲಿ ಚಲಾವಣೆಗೊಂಡಿರುವ 1,54,895 ಮತಗಳ ಪೈಕಿ ಜಿ.ಎಂ. ಸಿದ್ದೇಶ್ವರ್ ಶೇ. 52.15 ರ ಪ್ರಮಾಣದಲ್ಲಿ 80,779 ಮತ ಗಳಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಶೇ. 43.39 ರ ಪ್ರಮಾಣದಲ್ಲಿ 67,215 ಮತ ಗಳಿಸಿದ್ದಾರೆ.
2014 ರ ಚುನಾವಣೆಯಲ್ಲಿ ಹರಿಹರದಲ್ಲಿ ಚಲಾವಣೆಯಾಗಿದ್ದ 1,45,845 ಮತಗಳಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಶೇ.41.50 ಪ್ರಮಾಣದಲ್ಲಿ 60,529 ಮತ ಪಡೆದಿದ್ದರು. ಕಾಂಗ್ರೆಸ್ ಶೇ.48.06 ರಂತೆ 70,101 ಮತ ಗಳಿಸಿತ್ತು. ಕಳೆದ ಬಾರಿ ಲೀಡ್ ಕಳೆದುಕೊಂಡಿದ್ದ ಈ ಕ್ಷೇತ್ರದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ.
ದಾವಣಗೆರೆ ಉತ್ತರ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಗೊಂಡಿರುವ 1,60,064 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ್ ಶೇ.65.23 ರಷ್ಟು ಅಂದರೆ 1,04,480 ಮತ ಪಡೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಶೇ. 31.47ರ ಪ್ರಮಾಣದಲ್ಲಿ 50,374 ಮತ ಮಾತ್ರ ಪಡೆದಿದ್ದಾರೆ.
2014ರ ಚುನಾವಣೆಯಲ್ಲಿ 1,48,025 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ್ ಶೇ. 55.01ರ ಪ್ರಮಾಣದಲ್ಲಿ 58,427 ಮತ ಪಡೆದಿದ್ದರೆ. ಕಾಂಗ್ರೆಸ್ ಶೇ.39.47ರ ಪ್ರಮಾಣದಲ್ಲಿ 58,427 ಮತ ಗಳಿಸಿತ್ತು. ಈ ಬಾರಿ ಇಲ್ಲಿ ಬಿಜೆಪಿ ಭರ್ಜರಿ ಸಾಧನೆ ತೋರಿದೆ.
•ದಾವಣಗೆರೆ ದಕ್ಷಿಣ: ಅಲ್ಪಸಂಖ್ಯಾತ ಮತದಾರರ ಬಾಹುಳ್ಯದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆ ಆಗಿರುವ 1,37,603 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ್ ಶೇ. 51.42 ರ ಪ್ರಮಾಣದಲ್ಲಿ 70,765 ಮತ ಪಡೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಶೇ. 45.27 ರ ಪ್ರಮಾಣದಲ್ಲಿ 62,294 ಮತ ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.
2014 ರ ಚುನಾವಣೆಯಲ್ಲಿ ಮತದಾನಗೊಂಡಿದ್ದ 1,25,767 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ್ ಶೇ.41.99 ಪ್ರಮಾಣದಲ್ಲಿ 52,822 ಮತ ಪಡೆದಿದ್ದರೆ. ಕಾಂಗ್ರೆಸ್ ಶೇ. 51.11 ಪ್ರಮಾಣದಲ್ಲಿ 64,295 ಮತ ಪಡೆದಿತ್ತು.
ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಗಮನಾರ್ಹ ಸಾಧನೆ ತೋರಿದೆ.
ಮಾಯಕೊಂಡ: ಈ ಮೀಸಲು ಕ್ಷೇತ್ರದಲ್ಲಿ 1,48,190 ಮತಗಳಲ್ಲಿ ಬಿಜೆಪಿಯ ಜಿ.ಎಂ. ಸಿದ್ದೇಶ್ವರ್ ಶೇ.54.62 ಪ್ರಮಾಣದಲ್ಲಿ 80,955 ಮತ ಪಡೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಶೇ. 40.17 ಪ್ರಮಾಣದಲ್ಲಿ 59,534 ಮತ ಪಡೆದಿದ್ದಾರೆ.
2014 ಚುನಾವಣೆಯಲ್ಲಿ 1,39,363 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ್ ಶೇ.41.50 ಪ್ರಮಾಣದಲ್ಲಿ 57,864 ಮತ ಪಡೆದಿದ್ದರೆ. ಕಾಂಗ್ರೆಸ್ ಶೇ.46.08 ರ ಪ್ರಮಾಣದಲ್ಲಿ 64,229 ಮತ ಪಡೆದಿತ್ತು.
ಚನ್ನಗಿರಿ: ಚನ್ನಗಿರಿ ಕ್ಷೇತ್ರದಲ್ಲಿ ಚಲಾವಣೆಗೊಂಡಿರುವ 1,44,382 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ್ ಶೇ.54.26 ಪ್ರಮಾಣ ದಲ್ಲಿ 78,343 ಮತ ಪಡೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಶೇ. 40.60 ಪ್ರಮಾಣದಲ್ಲಿ 58,651 ಮತ ಗಳಿಸಿದ್ದಾರೆ.
2014ರ ಚುನಾವಣೆಯಲ್ಲಿ ಚಲಾವಣೆಗೊಂಡಿದ್ದ 1,04,472 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ್ ಶೇ. 60.78 ಪ್ರಮಾಣದಲ್ಲಿ 63,496 ಮತ ಗಳಿಸಿದ್ದರು. ಕಾಂಗ್ರೆಸ್ ಶೇ. 59.96 ಪ್ರಮಾಣದಲ್ಲಿ 62,638 ಮತ ಗಳಿಸಿತ್ತು.
ಹೊನ್ನಾಳಿ: ಹೊನ್ನಾಳಿಯಲ್ಲಿ ಈ ಬಾರಿಯ ಚುನಾವಣೆಯಲ್ಲಿ ಚಲಾವಣೆಗೊಂಡಿರುವ 1,53,164 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ್ ಶೇ.51.96 ಪ್ರಮಾಣದಲ್ಲಿ 79,587 ಮತ ಪಡೆದಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ಶೇ.43.40ರಂತೆ 66,482 ಮತ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ.
ಕಳೆದ ಲೋಕಸಭಾ ಚುನಾವಣೆಲ್ಲಿ 1,39,386 ಮತಗಳಲ್ಲಿ ಜಿ.ಎಂ. ಸಿದ್ದೇಶ್ವರ್ ಶೇ.50.15 ಪ್ರಮಾಣದಲ್ಲಿ 69,911 ಮತ ಪಡೆದಿದ್ದರು. ಕಾಂಗ್ರೆಸ್ ಶೇ.44.70 ಪ್ರಮಾಣದಲ್ಲಿ 62,313 ಮತ ಗಳಿಸಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.