ದಂಡ ಜಾಸ್ತಿಯಾಯ್ತು..ಕಾಯ್ದೆ ರದ್ದುಪಡಿಸಿ..
ಸಂಚಾರಿ ನಿಯಮ ಪಾಲನೆಗೆ ವಿರೋಧವಿಲ್ಲ•ಮೋಟಾರ್ ವಾಹನ ಕಾಯ್ದೆ ಜನರನ್ನು ಶೋಷಿಸುವಂತಿದೆ
Team Udayavani, Sep 12, 2019, 11:18 AM IST
ದಾವಣಗೆರೆ: ನಾಗರಿಕ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಬುಧವಾರ ಹೊಸ ಮೋಟಾರು ವಾಹನ ಕಾಯ್ದೆ ಹೆಚ್ಚುವರಿ ದಂಡ ವಿರೋಧಿ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಸೆ.1 ರಿಂದ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯ ಅನ್ವಯ ಸಂಚಾರಿ ನಿಯಮಗಳ ಪಾಲನೆಗೆ ಯಾವುದೇ ರೀತಿಯ ಅಭ್ಯಂತರವೇ ಇಲ್ಲ. ಆದರೆ, ಸಂಚಾರಿ ನಿಯಮ ಉಲ್ಲಂಘನೆಗಾಗಿ ಹೆಚ್ಚುವರಿ ದಂಡ ವಿಧಿಸುವುದಕ್ಕೆ ಸಂಪೂರ್ಣ ವಿರೋಧ ಇದೆ ಎಂದು ಪದಾಧಿಕಾರಿಗಳು ತಿಳಿಸಿದರು.
ಹೊಸ ಮೋಟಾರು ವಾಹನ ಕಾಯ್ದೆಯಲ್ಲಿನ ದಂಡಗಳಿಂದ ಜನ ಸಾಮಾನ್ಯರಿಗೆ ಹೆಚ್ಚಿನ ಹೊರೆ ಆಗುತ್ತಿದೆ.
ಪ್ರತಿಯೊಂದು ಉಲ್ಲಂಘನೆಗೆ ಸಾವಿರಾರು ರೂಪಾಯಿ ದಂಡ ಇರುವುದರಿಂದ ಜನರು, ವಾಹನ ಸವಾರರು ಭಯ ಪಡುವಂತಾಗಿದೆ. ಮೂಗುಗಿಂತಲೂ ಮೂಗುತಿ ಭಾರ… ಎನ್ನುವಂತೆ ದಂಡ ಅಧಿಕವಾಗಿವೆ ಎಂದು ತಿಳಿಸಿದರು.
ಸರ್ಕಾರ ರೂಪಿಸುವಂತಹ ಯಾವುದೇ ಕಾಯ್ದೆಗಳಾಗಲಿ ಜನರನ್ನ ತಿದ್ದಬೇಕೇ ಹೊರತು ಶೋಷಣೆಗೆ ಒಳಪಡಿಸ ಬಾರದು, ಸುಲಿಗೆಗೆ ದಾರಿ ಮಾಡಿಕೊಡುವಂತಾಗಬಾರದು. ವಾಹನ ಸವಾರರಿಂದ ಅತೀ ಹೆಚ್ಚು ದಂಡ ವಸೂಲಿ ಮಾಡುವ ಮೂಲಕ ಸರ್ಕಾರವನ್ನ ನಡೆಸುವ ಇರಾದೆ ಹೊಸ ಮೋಟಾರು ವಾಹನ ಕಾಯ್ದೆಯ ಹಿಂದೆ ಏನಾದರೂ ಇದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುವಂತಿದೆ ಎಂದು ತಿಳಿಸಿದರು.
ಕಾನೂನು ಪಾಲನೆ ಮಾಡುವುದು ಎಲ್ಲರ ಆದ್ಯ ಕರ್ತವ್ಯ. ಆದರೆ, ಅದೇ ಕಾನೂನು ಜನರಿಗೆ ಹೊರೆ, ಶೂಲದಂತೆ ಆಗಬಾರದು. ಹೊಸ ಮೋಟಾರು ವಾಹನ ಕಾಯ್ದೆ, ಅದರಲ್ಲಿನ ದಂಡಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ, ಒಂದು ವರ್ಷದ ನಂತರ ಜಾರಿಗೆ ತರಬಹುದಿತ್ತು. ಅದನ್ನು ಬಿಟ್ಟು ತರಾತುರಿಯಲ್ಲಿ ಏಕಾಏಕಿ ಜಾರಿಗೆ ತರುವ ಮೂಲಕ ಜನರಲ್ಲಿ ಭಯ ಉಂಟು ಮಾಡುವಂತಾಗಬಾರದು ಎಂದು ತಿಳಿಸಿದರು.
ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಯಾವುದೇ ರಾಜ್ಯ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆ ಜಾರಿ ಮಾಡಿಲ್ಲ. ಆದರೆ, ಕರ್ನಾಟಕ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆ ಜಾರಿ ಮಾಡಿರುವುದು ಸರಿಯಲ್ಲ. ಅತ್ಯಂತ ಅವೈಜ್ಞಾನಿಕವಾಗಿರುವ ಹೊಸ ಮೋಟಾರು ವಾಹನ ಕಾಯ್ದೆಯ ಬಗ್ಗೆ ಮರುಪರಿಶೀಲನೆ ನಡೆಸಿ, ಕೂಡಲೇ ರಾಜ್ಯ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆಯನ್ನ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಸಮಿತಿಯ ದಿನೇಶ್ ಕೆ. ಶೆಟ್ಟಿ, ಎಚ್.ಕೆ. ರಾಮಚಂದ್ರಪ್ಪ, ಎ. ನಾಗರಾಜ್, ಬಿ.ಎನ್. ಮಲ್ಲೇಶ್, ಕೆ.ಜಿ. ಯಲ್ಲಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್‌ಧ, ಮುಸ್ತಾಕ್ ಅಹಮ್ಮದ್, ಸೈಯದ್ ಸೈಪುಲ್ಲಾ, ಎಚ್.ವಿ. ಮಂಜುನಾಥಸ್ವಾಮಿ, ಸಿಎ ಉಮೇಶ್‌ಶೆಟ್ಟಿ, ರಾಧೇಶ್ ಜಂಬಗಿ, ಆವರಗೆರೆ ಚಂದ್ರು, ಎಂ.ಎಸ್. ರಾಮೇಗೌಡ, ಆಟೋ ಕಾಲೋನಿ ಕಲ್ಲೇಶಪ್ಪ,ಶ್ರೀಕಾಂತ್ ಬಗರೆ, ಸೋಮಲಾಪುರದ ಹನುಮಂತಪ್ಪ, ಡಿ.ಎನ್. ಜಗದೀಶ್, ಎಲ್.ಎಂ. ಸಾಗರ್, ಆವರಗೆರೆ ವಾಸು, ಇ. ಶ್ರೀನಿವಾಸ್, ಎನ್.ಟಿ. ಬಸವರಾಜ್, ಗದಿಗೇಶ್ ಪಾಳೇದ್, ಸುರೇಶ್, ಶಿವಕುಮಾರ್, ಪಳನಿಸ್ವಾಮಿ, ಯುವರಾಜ್, ಮುಜಾಹಿದ್ ಪಾಷಾ, ಪ್ರಸನ್ನ ಬೆಳಕೇರಿ ಇತರರು ಇದ್ದರು.
ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿಯವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಕೆ ಮುನ್ನ ಹೊಸ ಮೋಟಾರು ವಾಹನ ಕಾಯ್ದೆ ಹೆಚ್ಚುವರಿ ದಂಡ ವಿರೋಧಿ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಜೆ. ಬಣಕಾರ್ ಜೊತೆ ಸಭೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.