ಅಂಧರ ಬಾಳಿಗೆ ಬೆಳಕಾಗಲು ಸಂಕಲ್ಪ

davanagere news

Team Udayavani, Nov 8, 2021, 2:42 PM IST

davanagere news

ದಾವಣಗೆರೆ: ಪವರ್‌ ಸ್ಟಾರ್‌ ದಿ| ಪುನೀತ್‌ ರಾಜಕುಮಾರ್‌ ತಮ್ಮಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆಲಕ್ಷಾಂತರ ಜನರಿಗೆ ಪ್ರೇರಣೆಯಾಗಿದ್ದು, ಜಿಲ್ಲೆಯಲ್ಲಿಯೂ ಅನೇಕಜನ ತಮ್ಮ ನೇತ್ರಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಲುಮುಂದಾಗಿದ್ದಾರೆ.

ತಾವು ಈ ಲೋಕ ತ್ಯಜಿಸಿದರೂ ತಮ್ಮ ಕಣ್ಣುಗಳು ಬೇರೆಯವರಿಗೆದೃಷ್ಟಿಯಾಗಿ ಈ ವಿಶ್ವವನ್ನು ನೋಡಲಿ ಎಂಬ ವಿಶಾಲಭಾವನೆಯೊಂದಿಗೆ ಜಿಲ್ಲೆಯಲ್ಲಿ ನೂರಾರು ಜನ ತಮ್ಮ ನೇತ್ರಗಳನ್ನುದಾನ ಮಾಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ 338 ಮಂದಿ ತಮ್ಮನಯನಗಳನ್ನು ದಾನ ಮಾಡಿ ಜಗತ್ತನ್ನು ನೋಡಲಾಗದ 650ಕ್ಕೂ ಹೆಚ್ಚು ಜನರಿಗೆ ದೃಷ್ಟಿ ನೀಡಿದ್ದಾರೆ. 2016-17ರಲ್ಲಿ 51 ಜನ,2017-18ರಲ್ಲಿ 82 ಜನ, 2018-19ರಲ್ಲಿ 77 ಜನ 2019-20ರಲ್ಲಿ116 ಜನ ಹಾಗೂ ಪ್ರಸಕ್ತ ವರ್ಷ ಈವರೆಗೆ 12 ಜನ ನೇತ್ರದಾನಮಾಡಿ ಮಹಾದಾನಿಗಳೆನಿಸಿದ್ದಾರೆ.

ಇತ್ತೀಚೆಗೆ ಸೆಲೆಬ್ರಿಟಿಗಳು,ಗಣ್ಯರು ಹೆಚ್ಚೆಚ್ಚು ನೇತ್ರದಾನ ಮಾಡುತ್ತಿದ್ದಂತೆ ಅಭಿಮಾನಿಗಳುಸಹ ನೇತ್ರದಾನದತ್ತ ಚಿತ್ತ ಹರಿಸಿದ್ದಾರೆ. ಜಿಲ್ಲೆಯಲ್ಲಿ ಅತ್ಯಾಧುನಿಕಸೌಲಭ್ಯವುಳ್ಳ ಬಹುತೇಕ ಎಲ್ಲ ಕಣ್ಣಿನ ಆಸ್ಪತ್ರೆಗಳಲ್ಲಿ ಕಣ್ಣುಗಳನ್ನುಕಸಿ ಮಾಡುವ ವ್ಯವಸ್ಥೆ ಇದೆ. ಆದರೆ, ಮೃತ ವ್ಯಕ್ತಿಗಳ ದೇಹದಿಂದಕಣ್ಣುಗಳನ್ನು ತೆಗೆಯಲು ಆರೋಗ್ಯ ಇಲಾಖೆ, ಸಂಬಂಧಿತಸಂಸ್ಥೆಯಿಂದ ಪರವಾನಗಿ ಅತ್ಯವಶ್ಯವಾಗಿದ್ದು ಜಿಲ್ಲೆಯಲ್ಲಿ ಬಾಪೂಜಿಹಾಗೂ ನಯನ ನೇತ್ರ ಆಸ್ಪತ್ರೆಗಳು ಮಾತ್ರ ಪರವಾನಗಿ ಪಡೆದಿವೆ.ಈ ಎರಡು ಆಸ್ಪತ್ರೆಗಳಲ್ಲಿ ಕಣ್ಣುಗಳನ್ನು ಸಂಗ್ರಹಿಸಿಡುವ ವ್ಯವಸ್ಥೆಯೂ ಇದೆ.

ಪ್ರಸ್ತುತ ದಾನಿಗಳಿಂದ ಕಣ್ಣುಗಳನ್ನು ಈ ಎರಡು ಆಸ್ಪತ್ರೆಗಳಿಂದಸಂಗ್ರಹಿಸುತ್ತಿದ್ದು ಜಿಲ್ಲಾಸ್ಪತ್ರೆ ಚಿಗಟೇರಿಯಲ್ಲಿಯೂ ಕಣ್ಣುಗಳನ್ನುಸಂಗ್ರಹಿಸಿಡುವ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರಸ್ತುತ ನೂರಕ್ಕೂಹೆಚ್ಚು ಜನ ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದು ಈ ಸಂಖ್ಯೆದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ನೇತ್ರದಾನವನ್ನು ಇನ್ನಷ್ಟುಪ್ರೋತ್ಸಾಹಿಸಿದಂತಾಗಿದೆ.

ದಾನಿಗಳು ಏನು ಮಾಡಬೇಕು?: ತಮ್ಮ ಮರಣಾನಂತರಕಣ್ಣುಗಳನ್ನು ದಾನ ಮಾಡಲು ಇಚ್ಛಿಸುವವರು ನೇತ್ರಗಳನ್ನುಸಂಗ್ರಹಿಸುವ ಬಾಪೂಜಿ ಇಲ್ಲವೇ ನಯನ ಕಣ್ಣಿನ ಆಸ್ಪತ್ರೆ ಅಥವಾಜಿಲ್ಲಾಸ್ಪತ್ರೆಯಲ್ಲಿ ನೇತ್ರದಾನ ಪತ್ರದ ನಮೂನೆಯನ್ನು ಪಡೆದುಭರ್ತಿ ಮಾಡಿ ನೀಡಬೇಕಾಗುತ್ತದೆ. ಅದರಲ್ಲಿ ಕೇಳಿದ ಎಲ್ಲವಿವರಗಳನ್ನು ತುಂಬಿ ಸಹಿ ಮಾಡಿ ಕೊಟ್ಟರೆ ನೇತ್ರದಾನಕ್ಕೆ ನೋಂದಣಿಮಾಡಿಕೊಂಡಂತಾಗುತ್ತದೆ. ಕಣ್ಣು ದಾನ ಮಾಡಿರುವ ವಿಷಯವನ್ನುದಾನಿಯು ತಮ್ಮ ಕುಟುಂಬದವರು ಹಾಗೂ ಸಂಬಂಧಿಕರು,ಸ್ನೇಹಿತರಿಗೆ ಮಾಹಿತಿ ನೀಡಬೇಕು.

ದಾನಿ ಮೃತಪಟ್ಟ ತಕ್ಷಣಸ್ಥಳದಲ್ಲಿದ್ದವರು ಕಣ್ಣು ರೆಪ್ಪೆಗಳನ್ನು ಮೊದಲು ಮುಚ್ಚಬೇಕು.ಮೃತಪಟ್ಟ ಆರು ತಾಸಿನೊಳಗೆ ನೇತ್ರದಾನ ನೋಂದಣಿಸಮಯದಲ್ಲಿ ನೀಡಿದ ದೂರವಾಣಿಗೆ ಕರೆ ಮಾಡಿ ಮಾಹಿತಿನೀಡಬೇಕು. ತಜ್ಞ ವೈದ್ಯರು ಆಗಮಿಸಿ ಕಣ್ಣುಗಳನ್ನು ಸಂಗ್ರಹಿಸುತ್ತಾರೆ.

ಎಲ್ಲೆಡೆ ಜಾಗೃತಿ: ಜನರಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲುಆರೋಗ್ಯ ಇಲಾಖೆ ಪಾಕ್ಷಿಕವಾಗಿ ವಿವಿಧ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳುತ್ತಿದೆ. ಇದರ ಜತೆಗೆ ಮೂರ್‍ನಾಲ್ಕು ಸರ್ಕಾರೇತರಸಂಘ ಸಂಸ್ಥೆಗಳು ಸಹ ನೇತ್ರದಾನ ಜಾಗೃತಿ ಮೂಡಿಸುವ,ನೇತ್ರ ತಪಾಸಣೆ ಶಿಬಿರಗಳನ್ನು ನಡೆಸುತ್ತಿವೆ. ನೇತ್ರಾಧಿಕಾರಿಗಳಮೂಲಕ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಜಾಗೃತಿಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ. ಒಟ್ಟಾರೆ ಪ್ರಸಿದ್ಧ ವ್ಯಕ್ತಿಗಳು, ಖ್ಯಾತನಾಮರು ಮಾಡುವ ನೇತ್ರದಾನ ಇತರರಿಗೂಪ್ರೇರಣಾದಾಯಕವಾಗಿರುವುದು ಉತ್ತಮ ಬೆಳವಣಿಗೆ.

ಎಚ್‌.ಕೆ. ನಟರಾಜ 

ಟಾಪ್ ನ್ಯೂಸ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.