174 ಕ್ವಿಂಟಲ್ ಪಡಿತರ ವಶ
Team Udayavani, Jul 18, 2017, 1:37 PM IST
ಹರಿಹರ: ಬಡವರಿಗೆ ವಿತರಿಸಬೇಕಾದ ಪಡಿತರ ಧಾನ್ಯಗಳ ಅಕ್ರಮ ದಾಸ್ತಾನಿನ ಮೇಲೆ ಭಾನುವಾರ ರಾತ್ರಿ ಹಾಗೂ ಸೋಮವಾರ ಸಂಜೆ ದಾಳಿ ನಡೆಸಿರುವ ಅಧಿಕಾರಿಗಳು ಒಟ್ಟು 174 ಕ್ವಿಂಟಲ್ ಅನ್ನಭಾಗ್ಯ ಧಾನ್ಯ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ್ ಗಂಗಲ್ ನೇತೃತ್ವದ ತಂಡ ಭಾನುವಾರ ರಾತ್ರಿ ಕೈಗಾರಿಕಾ ಪ್ರದೇಶದ ಗೋದಾಮಿನ ಮೇಲೆ ದಾಳಿ ನಡೆಸಿದಾಗ 330 ಚೀಲ ಅಕ್ಕಿ, 14 ಚೀಲ ಗೋಧಿ ಪತ್ತೆಯಾಗಿದೆ. 2.15 ಲಕ್ಷ ಅಕ್ಕಿ, 6200 ರೂ. ಗೋಧಿ ಸೇರಿದಂತೆ ಒಟ್ಟು 15290 ಕಿಲೋ ಅನ್ನಭಾಗ್ಯ ಧಾನ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಡಿತರ
ಧಾನ್ಯದ ಈ ಅಕ್ರಮ ದಂದೆಕೋರ ಎನ್ನಲಾದ ಆರೋಪಿ ತಾಜುದ್ದೀನ್ ದಾಳಿ ವೇಳೆ ಪರಾರಿಯಾಗಿದ್ದು, ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆ ಮೇಲೂ ದಾಳಿ: ಪ್ರಭಾವಿಯಾಗಿರುವ ತಾಜುದ್ದೀನ್ ಮನೆಯಲ್ಲೂ ಅಕ್ರಮ ಧಾನ್ಯ ಸಂಗ್ರಹಿಸಿದ್ದಾನೆ ಎಂಬ ಮಾಹಿತಿ ಮೇರೆಗೆ ಮತ್ತೆ ಸೋಮವಾರ ಸಂಜೆ 6-30ಕ್ಕೆ ನಗರದ ಗೌಸಿಯಾ ಕಾಲೋನಿ ಮನೆ ಮೇಲೆ ದಾಳಿ ನಡೆಸಿದ ಪೊಲೀಸರಿಗೆ ಮನೆ ಎದುರಿನ ಗೋಡೌನ್‌ನಲ್ಲಿ 30 ಸಾವಿರ ರೂ ಬೆಲೆಯ, ತಲಾ 40 ಕೆ.ಜಿ.ಯ 56 ಚೀಲ ಅನ್ನಭಾಗ್ಯ ಅಕ್ಕಿ ಪತೆಯಾಗಿದ್ದು, ಜಪು¤ ಮಾಡಲಾಗಿದೆ.
ಸರ್ಕಾರ ಪಡಿತರ ಚೀಟಿದಾರರಿಗೆ ವಿತರಿಸುವ ಅಕ್ಕಿಯನ್ನು ಪಾಲೀಶ್ ಮಾಡಿ, ನಕಲಿ ಬ್ರಾಂಡ್ ಮುದ್ರಿತವಾದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸಿಪಿಐ ಲಕ್ಷಣ್ ನಾಯ್ಕ, ಪಿಎಸ್‌ಐ ಸಿದ್ದೇಗೌಡ, ಎಎಸ್‌ಐ ಮಾರಣ್ಣ, ಆಹಾರ ನಿರೀಕ್ಷಕ ಯು.ಎಚ್.ರಮೇಶ್ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.
ಇದು ಎರಡನೇ ದಾಳಿ
ಕಳೆದ ಒಂದೂವರೆ ತಿಂಗಳ ಹಿಂದಷ್ಟೆ ಇದೆ ಆರೋಪಿ ತಾಜುದ್ದೀನ್ ಎಂಬಾತನಿಗೆ ಸೇರಿದ್ದೆನ್ನಲಾದ ನಗರದ ಲಕ್ಷ್ಮೀ ಫೌಂಡ್ರಿ ಪಕ್ಕದ ಗೋದಾಮಿನಲ್ಲಿ ದಾಳಿ ನಡೆಸಿ, ಅಂದಾಜು 2.5 ಲಕ್ಷ ಬೆಲೆಯ, 139 ಕ್ವಿಂಟಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿತ್ತು. ದಾಳಿ ವೇಳೆ ತಾಜುದ್ದೀನ್ ಮತ್ತು ಸೈಯದ್ ನುರಾನ್ ಎಂಬುವರನ್ನು ಬಂದಿಸಲಾಗಿತ್ತಾದರೂ, ಜಾಮೀನಿನ ಮೇಲೆ ಹೊರಬಂದ ಆರೋಪಿ ಮತ್ತೆ ಅದೇ ಚಾಳಿ ಮುಂದುವರಿಸಿದ್ದಾನೆ. ಆರೋಪಿಗಳ ಹಿಂದೆ ಹೊರರಾಜ್ಯಗಳಿಗೆ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡುವ ದೊಡ್ಡ ಜಾಲವೇ ಇದೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
Davanagere: ವಿಶೇಷ ತೆರಿಗೆ ಕಾರ್ಯಾಚರಣೆ: ಒಂದೇ ದಿನ 1.65 ಕೋಟಿ ತೆರಿಗೆ ಸಂಗ್ರಹ
Davanagere: ಅಸೆಂಬ್ಲಿ ಅಧಿವೇಶನಕ್ಕೆ ಮೊದಲು ಸಿದ್ದರಾಮಯ್ಯ ರಾಜೀನಾಮೆ: ಆರ್.ಅಶೋಕ್
Waqf issue: ರಾಜ್ಯ ಸರ್ಕಾರದ ಆದೇಶ ಕೇವಲ ಜನರ ಕಣ್ಣೊರೆಸುವ ತಂತ್ರ: ಪ್ರಹ್ಲಾದ್ ಜೋಶಿ
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.