18 ಜಾನುವಾರುಗಳ ರಕ್ಷಣೆ
Team Udayavani, Mar 15, 2021, 8:40 PM IST
ದಾವಣಗೆರೆ: ಅಕ್ರಮವಾಗಿ ಸಾಗಿಸುತ್ತಿದ್ದ 18 ಜಾನುವಾರುಗಳನ್ನ ಬೆಂಗಳೂರಿನ ಪ್ರಾಣಿದಯಾ ಸಂಘದ ಪದಾಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ರಕ್ಷಿಸಿ, ದಾವಣಗೆರೆಯ ಮಹಾವೀರ ಗೋಶಾಲೆಗೆ ಬಿಟ್ಟಂತಹ ಘಟನೆ ಭಾನುವಾರ ನಡೆದಿದೆ. ಬೆಂಗಳೂರಿನ ಪ್ರಾಣಿ ದಯಾ ಸಂಘದವರು ಬೆಳಗ್ಗೆ 5ಕ್ಕೆ ರಾಣಿಬೆನ್ನೂರಿನ ಜಾನುವಾರು ಸಂತೆಗೆ ಭೇಟಿ ನೀಡಿದ್ದರು.
ಸಂತೆಯಲ್ಲಿ ಸುತ್ತಾಡಿ ಯಾರು ಜಾನುವಾರು ಕೊಳ್ಳುತ್ತಾರೆ ಎಂದು ಗಮನಿಸಿದರು. ಅದರಂತೆ ಅಲ್ಲೇ ಗೌಪ್ಯವಾಗಿ ಮಾಹಿತಿ ಕಲೆ ಹಾಕಿದ್ದರು. ಜಾನುವಾರುಗಳ ಹೊತ್ತ ವಾಹನ ಹೊರಟಾಗ ಅದು ಎಲ್ಲಿಗೆ ಹೋಗುತ್ತದೆ ಎಂದು ವಾಹನ ಹಿಂಬಾಲಿಸಿದರು. ಒಂದು ವಾಹನ ಹರಿಹರ ನಗರಕ್ಕೆ ಪ್ರವೇಶ ಮಾಡುತ್ತಿದ್ದಂತೆ ಸ್ಥಳಿಯ ಪೊಲೀಸ್‌ನವರಿಗೆ ಮಾಹಿತಿ ನೀಡಿ ನಂತರ ರಾಣಿಬೆನ್ನೂರಿಗೆ ತೆರಳಿದ್ದಾರೆ. ಎರಡು ವಾಹನಗಳು ದಾವಣಗೆರೆ ಬೈಪಾಸ್ ಮೂಲಕ ದಾವಣಗೆರೆ ಆವರಗೆರೆ ಕಡೆಯಿಂದ ನಗರ ಪ್ರವೇಶ ಮಾಡುವಾಗ ಜಿಲ್ಲಾ ಪೊಲೀಸ್ ಇಲಾಖೆ ಸಹಕಾರ ಪಡೆದು ಎರಡು ವಾಹನಗಳನ್ನು ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಸಿಬ್ಬಂದಿ ವಶಕ್ಕೆ ಪಡೆದರು. ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಗಜೇಂದ್ರಪ್ಪ ವಾಹನಗಳಲ್ಲಿದ್ದ ಜಾನುವಾರುಗಳನ್ನು ಮಹಾವೀರ ಗೋ ಶಾಲೆಯ ಮಾಲೀಕರನ್ನು ಸಂರ್ಪಕಿಸಿ ಗೋ ಶಾಲೆಗೆ ಬಿಡುವ ವ್ಯವಸ್ಥೆ ಮಾಡಿದರು.
ಪ್ರಾಣಿದಯಾ ಸಂಘದವರು ಸ್ಥಳೀಯರಾದ ಎಂ.ಜಿ. ಶ್ರೀಕಾಂತ್, ಹಿಂದೂ ಜಾಗರಣ ವೇದಿಕೆಯ ಸತೀಶ್ ಪೂಜಾರಿ ಹಾಗೂ ರಾಕೇಶ್, ವಿಕಾಸ್ ಇಟಗಿ, ಪುರುಷೋತ್ತಮ,ತಿಪ್ಪೇಶ್ ಇತರರ ನೆರವು ಪಡೆದರು. ಹರಿಹರದಲ್ಲಿ ವಶಕ್ಕೆ ಪಡೆದ ವಾಹನವನ್ನು ದಾಖಲೆ ಇದೆ ಎಂದು ನಮಗೆ ಮಾಹಿತಿ ನೀಡದೇ ವಾಹನ ಬಿಟ್ಟು ಕಳಿಸಿದ್ದಾರೆ ಬಿಟ್ಟು ಕಳಿಸಲಾಗಿದೆ ಎಂದು ಪ್ರಾಣಿ ದಯಾ ಸಂಘದವರು ಬೇಸರ ವ್ಯಕ್ತಪಡಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.