24 ವರ್ಷವಾದರೂ 272 ಫಲಾನುಭವಿಗೆ ಸಿಕ್ಕಿಲ್ಲ ಹಕ್ಕುಪತ್ರ
Team Udayavani, Jul 11, 2017, 12:23 PM IST
ದಾವಣಗೆರೆ: ಜಗಳೂರು ಪಟ್ಟಣದಲ್ಲಿ 1993-94ನೇ ಸಾಲಿನ ಆಶ್ರಯ ಯೋಜನೆಯಡಿ ಮಂಜೂರಾಗಿರುವ ನಿವೇಶನಗಳ ಹಕ್ಕುಪತ್ರ
ವಿತರಣೆಗೆ ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದಾರೆ.
ಜಗಳೂರು ಈ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿದ್ದಾಗ 1993-94ನೇ ಸಾಲಿನ ಆಶ್ರಯ ಯೋಜನೆಯಡಿ ಸರ್ವೇ ನಂ. 99ರಲ್ಲಿ 272 ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಲಾಗಿತ್ತು. ಅದರಲ್ಲಿ ಅನೇಕರು ಕಂದಾಯ ಪಾವತಿಸಿದ್ದಾರೆ. ಆದರೆ, ಈವರೆಗೆ ಯಾವುದೇ ಫಲಾನುಭವಿಗೆ ಹಕ್ಕುಪತ್ರ ನೀಡಿಲ್ಲ ಎಂಬುದು ಆಶ್ಚರ್ಯವಾದರೂ ಸತ್ಯ. ನಿವೇಶನ ಮಂಜೂರಾಗಿ 25 ವರ್ಷವೇ
ಕಳೆದರೂ ಈ ಕ್ಷಣಕ್ಕೂ ಅನೇಕರು ಹಕ್ಕುಪತ್ರಕ್ಕೆ ಅಲೆಯುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಆಶ್ರಯ ಯೋಜನೆಯಡಿ 272 ಫಲಾನುಭವಿಗಳಿಗೆ ಮಂಜೂರಾಗಿದ್ದ ನಿವೇಶನಕ್ಕೆ ಅಲೆಯುವ ಸಂದರ್ಭದಲ್ಲಿ ಕೆಲವಾರು
ಜನಪ್ರತಿನಿಧಿಗಳು ನಿಮಗೆ ನೀಡಿರುವ ಜಾಗ ಊರಿಗೆ ದೂರವಾಗುತ್ತದೆ. ಕುಡಿಯುವ ನೀರು ಮತ್ತಿತರ ಸೌಲಭ್ಯ ಇಲ್ಲ. ಬೇರೆಯ
ಕಡೆ ಕೊಡುತ್ತೇವೆ ಎಂದು ಹೇಳುತ್ತಲೇ ಕಾಲದೂಡಿದರು. ಒಂದು ಕಡೆ ಹಕ್ಕುಪತ್ರ ಇಲ್ಲ. ಇನ್ನೊಂದು ಕಡೆ ಜನಪ್ರತಿನಿಧಿಗಳು
ಹೇಳಿದಂತೆ ಜಾಗವೂ ಸಿಗದೇ ಸಾರ್ವಜನಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಆದರೆ, ಈವರೆಗೆ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿಗಳು ಈ ಫಲಾನುಭವಿಗಳ ಬಗ್ಗೆ ಗಮನ ನೀಡುತ್ತಿಲ್ಲ ಎಂದು ದೂರಿದರು.
ನಿವೇಶನ ಮಂಜೂರಾದ ನಂತರ ಹಕ್ಕುಪತ್ರ ಕೇಳಲಿಕ್ಕೆ ಹೋದಾಗ ಅಧಿಕಾರಿಗಳು ಸಂಬಂಧಿತ ಜಾಗದ ಬಗ್ಗೆ ದಾಖಲೆ ಇಲ್ಲ ಎಂಬ ಕಾರಣ ಹೇಳಿ ಕಳಿಸುತ್ತಿದ್ದರು. ಅದೇ ಜಾಗದಲ್ಲಿ ಕ್ರೀಡಾಂಗಣ, ಪ್ರಥಮ ದರ್ಜೆ ಕಾಲೇಜು ಮತ್ತಿತರದ್ದಕ್ಕೆ ಅನುಮತಿ ನೀಡಲಾಗಿದೆ. ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಇರದ ದಾಖಲೆ ಕ್ರೀಡಾಂಗಣ, ಪ್ರಥಮ ದರ್ಜೆ ಕಾಲೇಜು ಮತ್ತಿತರೆ ಕಟ್ಟಡಕ್ಕೆ ದಾಖಲೆ ಹೇಗೆ ದೊರೆಯುತ್ತವೆ ಎಂದು ಪ್ರಶ್ನಿಸಿದರು.
ಫಲಾನುಭವಿಗಳು ಹಕ್ಕುಪತ್ರಕ್ಕೆ ಹೋರಾಟ ಮಾಡುತ್ತಲೇ ಇದ್ದಾರೆ. ಜಿಲ್ಲಾಡಳಿತ ಕೂಡಲೇ ಸೂಕ್ತ ಕ್ರಮ ತೆಗೆದುಕೊಂಡು ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಸಂಚಾಲಕ ಕೆ.ಎಲ್. ರಾಘವೇಂದ್ರ, ಆದಿಲ್‌ಖಾನ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.