ಮೋದಿ ಪ್ರಧಾನಿಯಾದ ಬಳಿಕ ದೇಶದ ಚಿತ್ರಣವೇ ಬದಲು
Team Udayavani, Feb 24, 2019, 7:09 AM IST
ದಾವಣಗೆರೆ: ಕಳೆದ ಐದು ವರ್ಷದಲ್ಲಿ ಭಾರತ ಸುರಕ್ಷಿತ ದೇಶವಾಗಿ ನಿರ್ಮಾಣವಾಗಿದೆ ಎಂದು ಬೆಂಗಳೂರಿನ ಚಿಂತಕ ರಾಧಕೃಷ್ಣ ಹೊಳ್ಳ ಹೇಳಿದರು. ನಗರದ ಶಾಂತಿ ರಾಯಲ್ ಸಭಾಂಗಣದಲ್ಲಿ ಶನಿವಾರ ವರ್ತಮಾನ ಇಂಟಲೆಕುcಯಲ್ ಡಿಬೆಟ್ಸ್ ಪೋರಂ ವತಿಯಿಂದ ಆಯೋಜಿಸಿದ್ದ ಭಾರತ ಅಂದು-ಇಂದು 2014-19 ರ ಒಂದು ಅವಲೋಕನ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಭವ್ಯ ಭಾರತದಲ್ಲಿ ಮೂರ್‍ನಾಲ್ಕು ದಶಕಗಳ ನಂತರ ಅಂದರೆ, 2014ರ ನಂತರ ಉತ್ತಮ ಸರ್ಕಾರ ಆಡಳಿತಕ್ಕೆ ಕೇಂದ್ರದಲ್ಲಿ ಬಂದಿದೆ. ಈ ಹಿಂದೆ ದೀಪಾವಳಿ, ಸ್ವಾತಂತ್ರ್ಯಾ ದಿನೋತ್ಸವ ಬಂದರೆ ಬಾಂಬ್ ಬೀಳಬಹುದಾ ಎಂಬ ಹೆದರಿಕೆ ಇತ್ತು. ಪ್ರತಿಷ್ಠೆಯ, ಸಾರ್ವಭೌಮತ್ವದ ಸಂಕೇತವಾದ ಸಂಸತ್ತಿನ ಮೇಲೂ ದಾಳಿ ನಡೆದ ಭೀತಿ ನೆನಪಿನಲ್ಲಿತ್ತು. ಆದರೆ, ಉತ್ತಮ ನಾಯಕ ದೇಶದ ಪ್ರಧಾನಿ ಆದ ಬಳಿಕ ದೇಶದ ಚಿತ್ರಣ ಬದಲಾಗಿದೆ ಎಂದರು.
ದೇಶದ ಜನ ನಿರ್ಭಯ ಹಾಗೂ ನೆಮ್ಮದಿಯಿಂದ ಬದುಕುವ ಪೂರಕ ವಾತಾವರಣ ನಿರ್ಮಾಣವಾಗಿದೆ. 2014ರ ಆರಂಭದ ದಿನಗಳಲ್ಲಿ 2ಜಿ ಹಗರಣ, ಆದರ್ಶ ಹೌಸಿಂಗ್ ಹಗರಣ, ಕಾಮನ್ ವೆಲ್ತ್ ಹಗರಣಗಳದ್ದೇ ಸುದ್ದಿ ದೇಶದಲ್ಲಿ ನಡೆಯುತ್ತಿತ್ತು. ಪ್ರಧಾನಮಂತ್ರಿ ಆದವರೂ ಕೈ ಕಟ್ಟಿಕೊಂಡು ನಿಲ್ಲುವ ಪರಿಸ್ಥಿತಿ ಇತ್ತು. ನಮ್ಮ ನಾಯಕನನ್ನು ನಾಯಕ ಎನ್ನುವ ಹೆಮ್ಮೆಯ ಪರಿಸ್ಥಿತಿ ಇರಲಿಲ್ಲ. ಜಾಪ್ರಭುತ್ವದಲ್ಲಿರುವ ಪ್ರಜೆಗಳು ನಮಗೆ ಎಂತಹ ನಾಯಕ ಬೇಕುಎಂಬುದನ್ನು ಸ್ಪಷ್ಟವಾಗಿ ಜನರು ಹೇಳಿದರು.
30 ವರ್ಷದ ನಂತರ ದೇಶದಲ್ಲಿ ಸ್ಪಷ್ಟ ಬಹುಮತ ಇರುವ ಸರ್ಕಾರ ಬಂತು. ನರೇಂದ್ರಮೋದಿ ಸಂಸತ್‌ಗೆ ಪ್ರವೇಶ ಮಾಡುವ ಮುಂಚೆ ಮಂಡಿಯೂರಿ ನಮಿಸಿದ್ದು ಅದಕ್ಕೆ ಸಂಕೇತವಾಗಿತ್ತು. ಪ್ರಧಾನಿ ನರೇಂದ್ರಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಸುರಕ್ಷತೆ, ಸ್ವಾವಲಂಬನೆ, ಸ್ವಾಭಿಮಾನ, ಸ್ವತ್ಛತೆಗೆ ಮೊದಲ ಆದ್ಯತೆ ನೀಡಿದ್ದಾರೆ. ಇದರಿಂದಾಗಿ 10 ವರ್ಷಗಳ ಹಿಂದೆ ಭಾರತೀಯರನ್ನು ಇತರೆ ದೇಶದವರು ಈಗ ನೋಡುವ ನೋಡುವ ಸ್ಥಿತಿ ಬದಲಾಗಿದೆ. ಇದು ಹೆಮ್ಮೆಯ ಸಂಗತಿ ಎಂದರು.
ಮಾಹಿತಿ ಹಂಚಿಕೆ ಅವಕಾಶ: ದೇಶವು ಸಾಂಸ್ಕೃತಿಕ, ಶೈಕ್ಷಣಿಕ, ಗ್ರಾಮಾಭಿವೃದ್ಧಿ, ಆರ್ಥಿಕತೆ ಹೀಗೆ ಎಲ್ಲ ವಿಷಯಗಳಲ್ಲಿಯೂ ಮುನ್ನುಗ್ಗುತ್ತಿದೆ. ಸುರಕ್ಷತೆಗೆ ಸಂಬಂಧಿಸಿದಂತೆ ಗುಪ್ತಚರ, ಸೈನಿಕ, ಪೊಲೀಸ್ ವಲಯದಲ್ಲಿ ಸಮನ್ವಯತೆ ಕೊರತೆ ಇತ್ತು. ಮಾಹಿತಿ ಬಹಳ ವಿಳಂಬವಾಗಿ ತಲುಪುತ್ತಿತ್ತು. ಈಗ ಸ್ಥಳೀಯವಾಗಿ ಮಾಹಿತಿ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ, 1500ಕ್ಕೂ ಹೆಚ್ಚು ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಹತರಾಗಿದ್ದಾರೆ ಎಂದು ಹೇಳಿದರು.
ದೇಶದ ಗಡಿಯಿಂದ 35 ಕಿ.ಮೀ. ಈಚೆಗೆ ಯಾವುದೇ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಇದು ಸಂಯುಕ್ತ, ಸಮನ್ವಯ ಕಾರ್ಯಾಚರಣೆಯಿಂದ ಸಾಧ್ಯವಾಗಿದೆ. ಈಗ ಸುರಕ್ಷಿತ ಭಾರತವನ್ನು ಜನರು ನೋಡುವಂತಾಗಿದೆ. ಚೆನೈನಲ್ಲಿ 25 ವರ್ಷಗಳ ಹಿಂದೆ ಬಾಂಬ್
ಸ್ಫೋಟ ನಡೆಸಿದವರನ್ನು ಇತ್ತೀಚೆಗೆ ಹಿಡಿಯಲಾಯಿತು. ದೇಶದಲ್ಲಿ ಇಂಟಲಿಜೆನ್ಸಿ ಟ್ರೈನಿಂಗ್ ಅನ್ನುವುದೇ ಇರಲಿಲ್ಲ. ಅದೊಂದು ಪನಿಷ್‌ಮೆಂಟ್ ಎಂಬ ರೀತಿ ಇತ್ತು. ಈಗ ತರಬೇತಿ ನೀಡಲಾಗಿದೆ. ರಾಜ್ಯಗಳಲ್ಲೂ ಸಹ ಪರಿಸ್ಥಿತಿ ಬದಲಾಗಿದೆ ಎಂದರು.
ಮತಾಂತರಕ್ಕೆ ಕಡಿವಾಣ: ದೇಶದಲ್ಲಿ ಎಫ್‌ಸಿಆರ್‌ಎ ಕಾನೂನು ಬಲಪಡಿಸಿದ್ದರಿಂದ ವಿದೇಶಿ ದೇಣಿಗೆ ಪಡೆದು ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಎನ್‌ಜಿಒಗೆ ಸಂಸ್ಥೆಗಳಿಗೆ ಕಡಿವಾಣ ಹಾಕಲಾಗಿದೆ. ಗೃಹ ಇಲಾಖೆ ಈ ಹಿನ್ನೆಲೆ ಪರಿಶೀಲನೆ ಮಾಡುತ್ತಿದೆ. ಸಾಕಷ್ಟು ಎನ್‌ಜಿಒಗಳು ದೇಣಿಗೆ ಹಣದಲ್ಲಿ ಸಮಾಜ ಸೇವೆ ಹೆಸರಿನಲ್ಲಿ ಕ್ರಿಶ್ಚಿಯನ್ ಮತಾಂತರಕ್ಕೆ ಬಳಸುತ್ತಿದ್ದವು. ಸರ್ಕಾರದ ಕ್ರಮದಿಂದ ಮತಾಂತರಕ್ಕೆ ಕಡಿವಾಣ ಹಾಕಲಾಗಿದೆ ಎಂದರು.
ವರ್ತಮಾನದ ನವೀನ್ ಗಡ್ಡದಗೂಳಿ, ಹಿರಿಯ ಪತ್ರಕರ್ತ ಸಿ. ಕೇಶವಮೂರ್ತಿ ಉಪಸ್ಥಿತರಿದ್ದರು. ಪಿ.ಆರ್. ಐಸಿರಿ ಪ್ರಾರ್ಥಿಸಿದರು. ಮೇಘರಾಜ್ ಸ್ವಾಗತಿಸಿದರು, ಎಂ.ಸಿ. ಗಂಗಾಧರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.