ಎಲ್ಲಾ ಧರ್ಮಗಳು ಬೇರೆ ಬೇರೆ ಯಾತ್ರೆಗಳಂತೆ: ಆತ್ಮಜ್ಞಾನಂದಜಿ


Team Udayavani, Sep 25, 2018, 5:40 PM IST

dvg-1.jpg

ದಾವಣಗೆರೆ: ಮನುಷ್ಯ ಸ್ವಾರ್ಥ ಬಿಟ್ಟು ಆಧ್ಯಾತ್ಮದೊಂದಿಗೆ ಭಗವಂತನ ಸ್ಮರಣೆ ಮೂಲಕ ವಿಶ್ವವ್ಯಾಪಿ ಆದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಕಾಣಲು ಸಾಧ್ಯ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಆತ್ಮಜ್ಞಾನಂದಜಿ ಮಹಾರಾಜ್‌ ಹೇಳಿದ್ದಾರೆ.

ಸೋಮವಾರ, ನಗರದ ಎಂಸಿಸಿ ಎ ಬ್ಲಾಕ್‌ನ ರಾಮಕೃಷ್ಣ ಆಶ್ರಮದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 125ನೇ ವರ್ಷದ ಸಂಸ್ಮರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಭಕ್ತ ಸಮಾವೇಶದಲ್ಲಿ ವಿವೇಕಾನಂದರು ಪರಿಚಯಿಸಿದ ಹಿಂದೂ ಧರ್ಮ ಕುರಿತು ಮಾತನಾಡಿದ ಅವರು, ಧರ್ಮಗಳು ವಿಶಾಲವಾದ ವ್ಯಾಪ್ತಿ ಹೊಂದಿದ್ದು ಭಗವಂತನ ಪ್ರತಿರೂಪಗಳಾಗಿವೆ. ಮನುಷ್ಯ ಆಧ್ಯಾತ್ಮಿಕತೆ
ಅರ್ಥೈಸಿಕೊಂಡಾಗ ಮಾತ್ರ ಧರ್ಮದ, ಆಚರಣೆಗಳ ಬಗ್ಗೆ ಅರಿವು ಆಗಲು ಸಾಧ್ಯ ಎಂದರು.

ನಾವು ಮಾಡುವ ಕಾಯಕವನ್ನು ಭಗವಂತನಿಗೆ ಅರ್ಪಿಸುವ ಮೂಲಕ ಅವನ ಪ್ರೀತಿಗೆ ಪಾತ್ರರಾಗಬೇಕು. ಅದರಿಂದ ಬದುಕಿನಲ್ಲಿ ಸಾಕ್ಷಾತ್ಕಾರ, ಅನುಭೂತಿ ಪಡೆಯಬಹುದು. ಪ್ರೀತಿ, ಆರಾಧನೆ ಮೂಲಕ ಭಗವಂತನನ್ನು ಕಾಣಬಹುದು ಎಂಬುದಾಗಿ
ವಿವೇಕಾನಂದರು ಹೇಳಿದ್ದಾರೆ ಎಂದು ತಿಳಿಸಿದರು. ಯಾವುದೇ ಧರ್ಮದ ಆಚರಣೆಗಳನ್ನು ತಿರಸ್ಕಾರ ಭಾವನೆಯಿದ ಕಾಣುವುದು ಸರಿಯಲ್ಲ. ಎಲ್ಲಾ ಧರ್ಮಗಳು ಬೇರೆ ಬೇರೆ ಯಾತ್ರೆಗಳಂತೆ. ಹಾಗಾಗಿ ಎಲ್ಲವನ್ನು ವಿವೇಕಶಾಲಿಯಾದ ಮನುಷ್ಯ ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಹಿಂದೂ ಧರ್ಮ ಎಲ್ಲವನ್ನೂ ಒಗಟ್ಟಿನಿಂದಲೇ ಕಾಣುತ್ತಾ ಬಂದಿದೆ. ಅದು ಯಾರನ್ನು, ಯಾವ ಧರ್ಮವನ್ನು ತಿರಸ್ಕಾರ ಭಾವನೆಯಿಂದ ಕಂಡಿಲ್ಲ ಎಂದರಲ್ಲದೇ, ಪುಸ್ತಕದ ವಿಚಾರ, ತತ್ವದ ಮೇಲೆ ಹಿಂದೂ ಧರ್ಮ ನಿಂತಿಲ್ಲ. ಬದಲಾಗಿ ಅನುಭೂತಿ ಮೇಲೆ ನಿಂತಿದೆ. ವಿಶ್ವಧರ್ಮ ಅಂದರೆ ಅದಕ್ಕೆ ಯಾವುದೇ ದೇಶ, ಕಾಲ, ಮತ, ಪಂಥಗಳ ಮಿತಿಯಿಲ್ಲ. ಅಲ್ಲಿ ನಿಂದನೆ, ಅಸಹನೆಗೆ ಅವಕಾಶವಿಲ್ಲ. ತಮ್ಮ ವಿಚಾರಗಳನ್ನು ಒಪ್ಪದವರಿಗೆ ಯಾವುದೇ ರೀತಿ ಹಿಂಸೆ ನೀಡುವುದಿಲ್ಲ ಎಂದು ಹೇಳಿದರು.

ಹಿಂದೂ ಧರ್ಮದ ಎಲ್ಲಾ ಪಂಥಗಳಿಗೂ ಆತ್ಮ ವಸ್ತುವಿನ ಬಗ್ಗೆ ಒಮ್ಮತವಿದೆ. ಪರಮಾತ್ಮ ಮತ್ತು ಆತ್ಮ ಒಂದೇ, ಎರಡೇ ಎಂಬ ಚರ್ಚೆ ದ್ವೈತ, ಅದ್ವೈತದಲ್ಲಿ ಉಲ್ಲೇಖೀತವಾಗಿದೆ ಎಂದರು.

ವಿವೇಕಾನಂದರ ವ್ಯಕ್ತಿ ಚಿತ್ರ ಕುರಿತು ತಿಳಿಸಿದ ಶಾಸ್ತ್ರೀಹಳ್ಳಿ ಸತ್ಯಸಾಯಿ ವಿದ್ಯಾನಿಕೇತನದ ಮುಖ್ಯೋಪಾಧ್ಯಾಯ ಜಗನ್ನಾಥ್‌ ನಾಡಿಗೇರ್‌, ವ್ಯಕ್ತಿ, ಕಟ್ಟಡ, ಸಂಸ್ಥೆಗಳಿಗೆ ನೂರಾರು ವರ್ಷಗಳ ಆಚರಣೆ ಇರುವುದು ಸಹಜ. ಆದರೆ ಸ್ವಾಮಿ ವಿವೇಕಾನಂದರ
ಚಿಕಾಗೋ ಉಪನ್ಯಾಸಗಳಿಗೆ 125ನೇ ವರ್ಷದ ಆಚರಣೆ ಜಗತ್ತಿನ ಇತಿಹಾಸದಲ್ಲಿ ಇದೇ ಮೊದಲು. ಏಕೆಂದರೆ ಆ ಭಾಷಣಕ್ಕೆ ಅಂತಹ ಸತ್ವ, ವ್ಯಕ್ತಿಗೆ ಮಹತ್ವ , ಅಪಾರವಾದ ಪಾಂಡಿತ್ಯ ಇತ್ತು ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.

ವಿವೇಕಾನಂದ ಅವರು ದೇಶ ಕಂಡ ಶ್ರೇಷ್ಠ ಮಾನವತಾವಾದಿ, ದೇಶಪ್ರೇಮಿ. ಅವರಲ್ಲಿದ್ದ ಸಮಾಜಮುಖೀ ಗುಣಗಳೇ ಅವರನ್ನು ವಿಶ್ವವಿಜೇತರನ್ನಾಗಿ ಮಾಡಿತು. ಭಾರತದಲ್ಲಿ ಅಂದಿನ ಕಾಲಕ್ಕೆ ದಲಿತರ ಪ್ರಗತಿ ಬಗ್ಗೆ ಚಿಂತಿಸಿದವರು. ಸೀ¤Å ಶಿಕ್ಷಣಕ್ಕೆ ಮಹತ್ವ ಕೊಟ್ಟವರು ಅವರು. ಜಾತಿ, ಭೇದ, ಭಾವನೆಗಳನ್ನು ಬಿಟ್ಟು ರಾಮಕೃಷ್ಣ ಆಶ್ರಮ ಸಂಘಟನೆ ಸ್ಥಾಪಿಸಿದವರು. ಅವರ ಹೃದಯವಂತಿಕೆ, ಸರಳತೆ, ಮಾನವೀಯತೆ ನಾಡಿನ ಪ್ರತಿಯೊಬ್ಬರಿಗೂ ಮಾದರಿ ಎಂದು ಹೇಳಿದರು.

ಚಿಕಾಗೋದಲ್ಲಿ ವಿಶ್ವಧರ್ಮ ಕಲ್ಪನೆಯ ಉಗಮ ಕುರಿತು ಕೊಲ್ಕತ್ತಾ ಅದ್ವೈತ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್‌ ಉಪನ್ಯಾಸ ನೀಡಿದರು. ರಾಮಕೃಷ್ಣ ಆಶ್ರಮದ ಕಾರ್ಯದರ್ಶಿ ಸ್ವಾಮಿ ನಿತ್ಯಸ್ಥಾನಂದ, ತ್ಯಾಗೀಶ್ವರನಂದ ಸ್ವಾಮೀಜಿ,
ರಾಧಕೃಷ್ಣ ಗುಪ್ತ ಮತ್ತಿತರರು ಇದ್ದರು. 

ಟಾಪ್ ನ್ಯೂಸ್

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

Receive Kantraj report and reveal: Anjaney’s appeal to CM

Davanagere: ಕಾಂತರಾಜ್‌ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

2-davangere

Davangere: ಮಹಿಳೆಯ ಮೇಲೆ ಕರಡಿ ದಾಳಿ

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Darshan (2)

Darshan ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ: ಬಿ. ದಯಾನಂದ್‌

1-qaaa

T20; ಸಂಜು, ತಿಲಕ್‌ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ

Malai

Mangaluru: ಮಳಲಿ ಮಸೀದಿ ವಿವಾದ: ವಿಶ್ವ ಹಿಂದೂ ಪರಿಷತ್‌ ಅರ್ಜಿ ತಿರಸ್ಕೃತ

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.