ಅಪಾರ್ಟ್‌ಮೆಂಟ್-ಕಾಂಪ್ಲೆಕ್ಸ್, ಶೌಚಾಲಯ ನಿರ್ಮಿಸಿ
Team Udayavani, Mar 4, 2017, 1:15 PM IST
ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯ ನಿವೇಶನಗಳಲ್ಲಿ ವಾಣಿಜ್ಯ ಸಂಕೀìಣ, ಅಪಾರ್ಟ್‌ಮೆಂಟ್ ನಿರ್ಮಾಣ, ಕಂದಾಯ, ಸೇವಾ ಶುಲ್ಕ ವಸೂಲಿಗೆ ಬಿಗಿ ಕ್ರಮದ ಮೂಲಕ ಆದಾಯ ಕ್ರೂಢೀಕರಣ, ಸಾರ್ವಜನಿಕರ ಅನುಕೂಲಕ್ಕಾಗಿ ಅಲ್ಲಲ್ಲಿ ಸುಲಭ ಶೌಚಾಲಯ ನಿರ್ಮಾಣ, ಮಹಿಳಾ ಸಬಲೀಕರಣಕ್ಕೆ ಒತ್ತು…
ಇವು, ಶುಕ್ರವಾರ ಮೇಯರ್ ರೇಖಾ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರಪಾಲಿಕೆಯ 2017-18 ನೇ ಸಾಲಿನ ಆಯ-ವ್ಯಯ ತಯಾರಿಸುವ ಬಗ್ಗೆ ಸಂಘ ಸಂಸ್ಥೆಗಳು ಮತ್ತು ಆಸಕ್ತ ಸಾರ್ವಜನಿಕರು ನೀಡಿದ ಸಲಹೆ.
ಪೌರ ಕಾರ್ಮಿಕರ ಸಂಘದ ಕಾರ್ಯಾಧ್ಯಕ್ಷ ಎನ್. ನೀಲಗಿರಿಯಪ್ಪ ಮಾತನಾಡಿ, ಮಾರುಕಟ್ಟೆಯಲ್ಲಿರುವ ಅಂಗಡಿಗಳಿಂದ ಸರಿಯಾಗಿ ಬಾಡಿಗೆ ಸಂಗ್ರಹವಾಗುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಪಾಲಿಕೆಯ ತುಂಡು ನಿವೇಶನಗಳು ಅನಧಿಧಿಕೃತವಾಗಿ ಪರರ ಪಾಲಾಗುತ್ತಿವೆ.
ತುಂಡು ನಿವೇಶನ ಗುರುತಿಸಿ, ಅನ್ಯರ ಪಾಲಾಗದಂತೆ ನಿಗಾ ವಹಿಸಬೇಕು. ಸುಲಭ ಶೌಚಾಲಯ ನಿರ್ಮಾಣ, ಶವ ಸಾಗಿಸುವ ವಾಹನ ವ್ಯವಸ್ಥೆಯಾಗಬೇಕು ಹಾಗೂ ಪೌರಕಾರ್ಮಿಕರ ಅಗತ್ಯ ಬಳಕೆ ವಸ್ತುಗಳಾದ ತಟ್ಟೆ, ಕೊಳಗ ಇತರೆ ಅಗತ್ಯ ವಸ್ತುಗಳಿಗೆ ಬಜೆಟ್‌ಲ್ಲಿ ಅನುದಾನ ಮೀಸಲಿಡಬೇಕು ಎಂದರು.
ನಗರಪಾಲಿಕೆ ಮಾಜಿ ಸದಸ್ಯ ಕೆ.ಜಿ. ಶಿವಕುಮಾರ್ ಮಾತನಾಡಿ, ಈಗ ನಗರಪಾಲಿಕೆಯ ಆದಾಯ 38- 40 ಕೋಟಿ ಇದೆ. 2017-18 ನೇ ಸಾಲಿನಲ್ಲಿ 60-70 ಕೋಟಿ ರೂ. ಸಂಗ್ರಹಕ್ಕೆ ಆದಾಯ, ಸಂಪನ್ಮೂಲ ಕ್ರೂಡೀಕರಿಸುವ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು. ಕಾಯ್ದೆ ಮೀರಿ ನಿರ್ಮಿಸುತ್ತಿರುವ ಕಟ್ಟಡಗಳಿಗೆ ಕಡಿವಾಣ ಹಾಕಬೇಕು.
ವಾಣಿಜ್ಯ ಮಳಿಗೆಗಳಲ್ಲಿರುವ ಅನಧಿಕೃತ ನಲ್ಲಿಗಳ ಸಂಪರ್ಕ ಕಡಿತಗೊಳಿಸಬೇಕು. ನರ್ಸಿಂಗ್ ಹೋಮ್‌ಗಳು ಒಂದರಿಂದ ಒಂದೂವರೆ ಸಾವಿರ ರೂ. ನೀಡಿ ಲೈಸನ್ಸ್ ತೆಗೆದುಕೊಂಡ ನಂತರ ಪಾಲಿಕೆಯೇ ಶುಚಿತ್ವದ ಸರ್ವ ಜವಾಬ್ದಾರಿ ವಹಿಸಬೇಕಿದೆ. ನಗರದಲ್ಲಿ 120 ರಿಂದ 150 ನರ್ಸಿಂಗ್ ಹೋಮ್‌ಗಳಿಂದ ವಾರ್ಷಿಕ 15 ಸಾವಿರ ಸೇವಾ ಶುಲ್ಕ ಸಂಗ್ರಹಿಸುವ ವ್ಯವಸ್ಥೆ ಆಗಬೇಕು.
ರಸ್ತೆ ಬದಿ ಸೈಕಲ್ ಮತ್ತು ವಾಕಿಂಗ್ ಪಾಥ್, ಶೌಚಾಲಯ, ಸಿಟಿ ಬಸ್ ನಿಲ್ದಾಣ ಪಾಯಿಂಟ್, ಪೌರಕಾರ್ಮಿಕರಿಗೆ ಅಗತ್ಯ ಸಾಮಗ್ರಿ, ಅಂಗವಿಕಲರಿಗೆ, ಕ್ರೀಡಾಪಡುಗಳಿಗೆ ಅನುಕೂಲವಾಗುವ ಬಜೆಟ್ ತಯಾರಿಸಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಸ್ಥಾಯಿಸಮಿತಿ ಅಧ್ಯಕ್ಷ ಎಂ. ಹಾಲೇಶ್ ಮಾತನಾಡಿ, ಪೌರಕಾರ್ಮಿಕರಿಗೆ ವಿಶೇಷ ಬಜೆಟ್ ತಯಾರಿಸಲಾಗುವುದು, ಸರ್ವ ಜನಾಂಗದವರ ಸ್ಮಶಾನ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಲ್ಲಕ್ಕಿಂತಲೂ ಮುಖ್ಯವಾಗಿ ಪೌರ ಕಾರ್ಮಿಕರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಗೆ ಇಳಿಯದಂತೆ ಎಲ್ಲಾ ಅಗತ್ಯ ಮೂಲಭೂತ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.