ಅಡಕೆ ತೋಟ ಉಳಿಸಲು ರೈತರ ಹರಸಾಹಸ


Team Udayavani, Mar 14, 2017, 2:49 PM IST

dvg7.jpg

ಹೊನ್ನಾಳಿ: ಕಳೆದ ವರ್ಷ ಮಳೆ ಇಲ್ಲದೆ ಭೀಕರ ಬರಗಾಲ, ಮತ್ತೂಂದು ಕಡೆ ಕೊಳವೆಬಾವಿಯಲ್ಲಿ ನೀರಿಲ್ಲದೇ ಬತ್ತಿ ಹೋಗಿರುವ ಈ ಸಂದರ್ಭದಲ್ಲಿ ತಾಲೂಕಿನ ಅಡಕೆ ಬೆಳೆಯುವ ರೈತರು ಕಂಗಾಲಾಗಿದ್ದಾರೆ. ಹೇಗಾದರೂ ಮಾಡಿ ಮುಂಗಾರು ಆರಂಭವಾಗುವವರೆಗೆ ಅಡಕೆ ಮರಗಳನ್ನುಉಳಿಸಿಕೊಳ್ಳಲು ನೀರಿನ ಮೂಲ ಹುಡುಕಿಕೊಂಡು ಹೋಗಿ ತಮ್ಮ ಅಡಕೆ ತೋಟಗಳಿಗೆ ನೀರುಣಿಸುವ ಹರಸಾಹಸ ಮಾಡುವ ದೃಶ್ಯ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಾಣ ಸಿಗುತ್ತದೆ.

ತಾಲೂಕಿನ ಅರಕೆರೆ, ಮಾಸಡಿ, ನರಸಗೊಂಡನಹಳ್ಳಿ, ತರಗನಹಳ್ಳಿ, ಸಿಂಗಟಗೇರಿ  ಗ್ರಾಮಗಳು ಸೇರಿದಂತೆ ಇತರ ಗ್ರಾಮಗಳ ರೈತರಿಂದ ತಮ್ಮ ಅಡಕೆ ಮರಗಳನ್ನು ಹೇಗಾದರೂ ಮಾಡಿಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳವರೆಗೆ  ಲಭ್ಯವಿರುವ ನೀರಿನ ಮೂಲಗಳಿಂದ ತಂದು ತೋಟಕ್ಕೆ ನೀರುಣಿಸುವ ಕಾರ್ಯ ಈಗ ಭರದಿಂದ ಸಾಗಿದೆ. 

ತುಂಗಭದ್ರಾ ನದಿಯಿಂದ ಸುಮಾರು 6ರಿಂದ 8ಕಿ.ಮೀ ದೂರವಿರುವ ಅರಕೆರೆ, ಮಾಸಡಿ, ನರಸಗೊಂಡನಹಳ್ಳಿ, ತರಗನಹಳ್ಳಿ, ಸಿಂಗಟಗೇರಿಗ್ರಾಮಗಳ ರೈತರು ಪ್ರತಿ ನಿತ್ಯ ನದಿಯಿಂದ ಬಾಡಿಗೆ ಟ್ರ್ಯಾಕ್ಟರ್‌ ಮಾಡಿಕೊಂಡು ತಮ್ಮ ತೋಟಗಳಿಗೆ  ನೀರನ್ನು ತೆಗೆದುಕೊಂಡು ಹೋಗಿ ಡಂಪ್‌ ಮಾಡಿ ಪುನಃ ತಮ್ಮ ಡ್ರಿಪ್‌ ನೀರಾವರಿಗೆ ಸಂಪರ್ಕ ಕೊಟ್ಟು ಅಡಕೆ ಮರಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿದ್ದಾರೆ.

ಬೆಳಗ್ಗೆ 8ಗಂಟೆಯಿಂದ ಸಂಜೆ 5ಗಂಟೆಯವರೆಗೆ ಟ್ರ್ಯಾಕ್ಟರ್‌ಗಳು ನದಿಯ ಉದ್ದಕ್ಕೂಸಾಲು ಸಾಲಾಗಿ ಬಂದು ನೀರನ್ನು ತೆಗೆದುಕೊಂಡು ಹೋಗುವ ದೃಶ್ಯ ರೈತರು ಪಡುವ ಕಷ್ಟ ಎಷ್ಟು ಎನ್ನುವುದು ವ್ಯಕ್ತವಾಗುತ್ತಿದೆ. ಒಂದು ಟ್ರ್ಯಾಕ್ಟರ್‌ಗೆ ಒಂದು ಟ್ರಿಪ್‌ಗೆ ರೂ.700 ಬಾಡಿಗೆ ಇದ್ದು ದಿನಕ್ಕೆ 6 ಟ್ರಿಪ್‌ ನೀರು ಸಾಗಿಸುವ ಕೆಲಸ ಮಾಡಿ ರೂ.4200 ಟ್ರ್ಯಾಕ್ಟರ್‌ ಮಾಲೀಕನಿಗೆ ಪಾವತಿಸಬೇಕು.

ಒಂದು ತಿಂಗಳಿನಿಂದ ನೀರನ್ನು ನದಿಯಿಂದ ಟ್ರ್ಯಾಕ್ಟರ್‌ ಮೂಲಕ ಸಾಗಿಸುತ್ತಿದ್ದೇವೆ. ಈಗಾಗಲೇ ಲಕ್ಷಗಟ್ಟಲೇ ಹಣವನ್ನು ಖರ್ಚು  ಮಾಡಿದ್ದೇವೆ ಎಂದು ನರಸಗೊಂಡನಹಳ್ಳಿ ರೈತವೆಂಕಟೇಶಗೌಡ ಹೇಳುತ್ತಾರೆ.  ಮಳೆಯಿಲ್ಲದೆ ಈ ಬಾರಿ ಅಡಕೆ ಫಸಲು ಸರಿಯಾಗಿ ಬರಲಿಲ್ಲ ಈಗ ಬಿಸಿಲಿನ ಹೊಡೆತಕ್ಕೆ ಮರಗಳು ಮತ್ತಷ್ಟೂ ಒಣಗಿ ಕ್ಷೀಣಿಸಿವೆ ಬೇಸಿಗೆಯಲ್ಲಿ ಏನಾದರೂ ಮಾಡಿ ಅಡಕೆ ಗಿಡಗಳನ್ನು ಸಂರಕ್ಷಿಸಿ ಮಳೆಗಾಲ ಪ್ರಾರಂಭವಾದರೆ ಬೋರ್‌ವೆಲ್‌ಗ‌ಳು ನೀರು ತುಂಬಿಕೊಂಡು ಮತ್ತೆ ಅಡಕೆ ಮರಗಳು ನಳ ನಳಿಸುತ್ತವೆ.

ಆದರೆ ಇನ್ನು ಮೂರು ತಿಂಗಳು ಪರಿಸ್ಥಿತಿ ತುಂಬಾ ಶೋಚನೀಯ ಎಂದು ಹೇಳಿದರು. ಮೂರು ತಿಂಗಳ ಹಿಂದೆಯೇ ನನ್ನ 2 ಎಕರೆ 3ಗುಂಟೆಯಲ್ಲಿದ್ದ ಸಾವಿರಾರು ಅಡಕೆ ಮರಗಳನ್ನುಕಡಿದು ಹಾಕಿದೇ ಇದಕ್ಕೆ ಕಾರಣ. 2 ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿದ್ದು ಎಂದು ನರಸಗೊಂಡನಹಳ್ಳಿ ರೈತ ಎನ್‌.ಡಿ. ಕೃಷ್ಣಪ್ಪ ತನ್ನ ಕಣ್ಣಂಚಿನಲ್ಲಿ ನೀರು ತಂದು ಹೇಳಿದರು. ಮುಂದಿನದಿನಗಳಲ್ಲಿ ಅಡಕೆ ಬೆಳೆದ ಹೊಲದಲ್ಲಿ ಮೆಕ್ಕೆಜೋಳ ಅಥವಾ ಇತರೆ ವಾಣಿಜ್ಯ ಬೆಳೆ ಬೆಳೆಯುತ್ತೇನೆ ಎಂದು ಹೇಳಿದರು. 

ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಇದನ್ನು ಮನಗಂಡ ಅಡಕೆ ಬೆಳೆಗಾರರು ಹೇಗಾದರೂ ಮಾಡಿ ಅಡಕೆ ಮರಗಳನ್ನು ಉಳಿಸಬೇಕು. ಮುಂದಿನ ದಿನಗಳಲ್ಲಿ ಮಳೆ ಚನ್ನಾಗಿ ಬರಬಹುದು ಎಂದು ನಂಬಿರುವ ರೈತರು ಪ್ರತಿ ನಿತ್ಯ ಟ್ರ್ಯಾಕ್ಟರ್‌ ಮೂಲಕ ನೀರು ಸಾಗಿಸುತ್ತಿದ್ದಾರೆ. 

* ಎಂಪಿಎಂ ವಿಜಯಾನಂದಸ್ವಾಮಿ

ಟಾಪ್ ನ್ಯೂಸ್

MUDA ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಇಡಿ

1-tt

1984 Anti Sikh Roits; ದೆಹಲಿ ಹೈಕೋರ್ಟ್ ಮೊರೆ ಹೋದ ಜಗದೀಶ್ ಟೈಟ್ಲರ್

1-isrelis

Sanskrit ಅಭ್ಯಾಸಕ್ಕೆ ಕಾಫಿನಾಡಿಗೆ ಆಗಮಿಸಿರುವ ಇಸ್ರೇಲ್‌ ವಿದ್ಯಾರ್ಥಿಗಳು

Maharashatra-Cm

Maharashtra: ದೇಸಿ ಹಸುಗಳು ʼರಾಜ್ಯಮಾತಾ ಗೋಮಾತೆʼ ಎಂದು ಘೋಷಿಸಿದ ರಾಜ್ಯ ಸರಕಾರ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

1-sadsd

VK Singh ವಿರುದ್ಧ ಮಾನಹಾನಿಕರ ಪೋಸ್ಟ್ : ಯೂಟ್ಯೂಬರ್ ಬಂಧನ

anjura-roll

Recipe: ಈ ಬಾರಿಯ ಹಬ್ಬಕ್ಕೆ ಸಕ್ಕರೆ-ಬೆಲ್ಲ ಬಳಸದೇ ಈ ಸಿಹಿ ಖಾದ್ಯ ತಯಾರಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

BJP: ವರಿಷ್ಠರ ಖಡಕ್‌ ಎಚ್ಚರಿಕೆ: ಬಿಜೆಪಿ ಭಿನ್ನರ ಸಭೆ ವಿಫ‌ಲ

pratp

MUDA Case: ಸಿಎಂ ಸಿದ್ದರಾಮಯ್ಯ 45 ವರ್ಷದ ರಾಜಕೀಯ ಜೀವನ ಅಂತ್ಯ: ಪ್ರತಾಪ್‌ ಸಿಂಹ

Renukacharya

BJP: ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ನೀಡೋದಿಲ್ಲ: ಎಂ.ಪಿ.ರೇಣುಕಾಚಾರ್ಯ

yathnal

BJP Politics: ರಾಜ್ಯಾಧ್ಯಕ್ಷ ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿಲ್ಲ: ಶಾಸಕ ಯತ್ನಾಳ್‌

Davanagere; Conspiracy to stop Ganeshotsava is going on: Yatnal

Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್‌ ಆರೋಪ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

MUDA ; ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಇಡಿ

1-tt

1984 Anti Sikh Roits; ದೆಹಲಿ ಹೈಕೋರ್ಟ್ ಮೊರೆ ಹೋದ ಜಗದೀಶ್ ಟೈಟ್ಲರ್

1-isrelis

Sanskrit ಅಭ್ಯಾಸಕ್ಕೆ ಕಾಫಿನಾಡಿಗೆ ಆಗಮಿಸಿರುವ ಇಸ್ರೇಲ್‌ ವಿದ್ಯಾರ್ಥಿಗಳು

Maharashatra-Cm

Maharashtra: ದೇಸಿ ಹಸುಗಳು ʼರಾಜ್ಯಮಾತಾ ಗೋಮಾತೆʼ ಎಂದು ಘೋಷಿಸಿದ ರಾಜ್ಯ ಸರಕಾರ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

Gadag; ಜನ್ಮದಿನದ ಸಂಭ್ರಮದಲ್ಲಿ ಇರಬೇಕಿದ್ದ ಬಾಲಕ ಶವವಾಗಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.