ಕಲಾವಿದರು ಉಳಿದರಷ್ಟೇ ಕಲೆ ಜೀವಂತ
Team Udayavani, Mar 31, 2018, 4:52 PM IST
ಹರಪನಹಳ್ಳಿ: ಕಲಾವಿದರಿಗೆ ತಿಂಗಳ ಕಾರ್ಯಕ್ರಮಗಳಾಗಿ ಉತ್ಸವ ನಡೆಸಬೇಕು. ಸರ್ಕಾರ ಹಣ ಒದಗಿಸಿದಲ್ಲಿ ಕಲಾವಿದರ ಆರ್ಥಿಕ ಸ್ಥಿತಿ ಉತ್ತಮವಾಗಲು ಸಾಧ್ಯವಾಗುತ್ತದೆ. ಕಲಾವಿದರು ಉಳಿದರೆ ಮಾತ್ರ ಕಲೆಗಳು ಜೀವಂತವಾಗಿರಲು ಸಾಧ್ಯ ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧಿಪತಿ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ನಟರಾಜ ಕಲಾಭವನದಲ್ಲಿ ಗುರುವಾರ ರಾತ್ರಿ ಕರ್ನಾಟಕ ರಾಜ್ಯ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘ, ಹಗಲು ವೇಷ ಕಲಾ ತಂಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಸಂಜೆ ಜನಪದ ಹಾಗೂ ಹಗಲುವೇಷ ಉತ್ಸವದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ವೈಜ್ಞಾನಿಕವಾಗಿ ನಾವು ಎಷ್ಟೆ ಮುಂದುವರೆದರೂ ನಮ್ಮ ಪರಂಪರೆ, ಕಲೆ, ಸಂಸ್ಕೃತಿ ಬೆಳೆಯುತ್ತಿಲ್ಲ, ಅದರಲ್ಲೂ ನಗರ, ಪಟ್ಟಣಗಳಲ್ಲಿ ಸಂಸ್ಕೃತಿ, ಕಲೆಯನ್ನು ಜನ ಮರೆಯುತ್ತಿದ್ದಾರೆ. ಕೋಲಾಟ, ಬಯಲಾಟ, ಜಾನಪದ, ಹಗಲುವೇಷ ಸೇರಿದಂತೆ ಅನೇಕ ಕಲೆಗಳು ಇದ್ದರೂ ಜಾನಪದ ಕಲೆಗಳಿಗೆ ದಾಖಲೆಗಳು ಇಲ್ಲ. ಹಗಲು ವೇಷ ಕಲೆಯನ್ನು ದಾವಣಗೆರೆ, ಬಳ್ಳಾರಿಯಲ್ಲಿ ಮಾತ್ರ ಕಾಣುತ್ತೇವೆ. ಕಲೆಗೆ ಬೆಲೆ ಕಟ್ಟಲಾಗದು. ಹೊಟ್ಟೆಪಾಡಿಗೆ ವೇಷ ಹಾಕಿಕೊಂಡು ಕಲೆಯನ್ನು ಜೀವಂತವಾಗಿಸಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಾನಪದ ಅಕಾಡೆಮಿ ಸದಸ್ಯೆ ಮರಿಯಮ್ಮನಹಳ್ಳಿ ಬಿ. ನಂಜಮ್ಮ ಜೋಗುತಿ ಮಾತನಾಡಿ, ಸಿನಿಮಾ-ನಾಟಕಕ್ಕೂ ಮೊದಲು ಜಾನಪದ ಕಲೆಗಳು ಇದ್ದವು. ಇಂದು ಅವು ಕಣ್ಮರೆಯಾಗುತ್ತಿವೆ. ಅವುಗಳನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಜಾನಪದ ಕಲೆ ಹಾಗೂ ಕಲಾವಿದರನ್ನು ಉಳಿಸಲು ಸರಕಾರ ಎಲ್ಲ ಶಾಲೆಗಳಲ್ಲಿ ಜಾನಪದ ಶಿಕ್ಷಕರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.
ಸಾಹಿತಿ ಇಸ್ಮಾಯಿಲ್ ಯಲಿಗಾರ ಉಪನ್ಯಾಸ ನೀಡಿ, ಪರಂಪರಾಗತ ಕಲೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಮಧ್ಯ ಕರ್ನಾಟಕದಲ್ಲಿ ಕಾಣುವ ಹಗಲು ವೇಷಗಾರರು ಸಾಂಸ್ಕೃತಿಕ ಯಭಾರಿಗಳಾಗಿದ್ದಾರೆ. ಸರ್ಕಾರ ಪ್ರಾಥಮಿಕ ಶಾಲಾ ಹಂತದಲ್ಲಿ ಪ್ರದರ್ಶಕ ಕಲೆಗಳ ಬಗ್ಗೆ ಪಠ್ಯ ಪುಸ್ತಕದಲ್ಲಿ ಅಳವಡಿಸುವ ಮೂಲಕ ಕಲೆ ಉಳಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಎಚ್. ಮಲ್ಲಿಕಾರ್ಜುನ್ ಮಾತನಾಡಿ, ಮಹಿಳೆಯರು ಕುಟುಂಬ ಒಡೆಯುವ ಧಾರಾವಾಹಿಗಳನ್ನು ನೋಡುವುದನ್ನು ಮೊದಲು ಬಿಡಬೇಕು. ಮಕ್ಕಳಿಗೆ ಮೊಬೈಲ್ ಕೊಡದೇ ಪುಸ್ತಕ ಓದುವ ಹವ್ಯಾಸ ಬೆಳೆಸಬೇಕು. ಕನ್ನಡ ಭಾಷೆ, ಕಲೆಗಳನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದು ಹೇಳಿದರು.
ಕಲಾವಿದರಾದ ಎಂ. ಮಾರುತಿ ಮತ್ತು ಸಂಗಡಿಗರು ಹಲಗೆ ನುಡಿಸಿದರು. ಹಾದಿಮನಿ ನಾಗರಾಜ್, ಚಿನ್ನಸಮುದ್ರದ ಸಿ.ಎಚ್.ಉಮೇಶ್ ಅವರಿಂದ ಜಾನಪದ ಹಾಡುಗಳು, ಹಗಲುವೇಷ, ಸಂಗೀತ ಕಾರ್ಯಕ್ರಮ ಜರುಗಿದವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ರವೀಂದ್ರ ಅಧಿಕಾರ, ಡಾ| ಸಂಗೀತ, ಹಿರಿಯ ಕಲಾವಿದ ನಿಚ್ಚನಹಳ್ಳಿ ಭೀಮಪ್ಪ, ಬಿ.ಎ. ರಾಮಣ್ಣ, ವೆಂಕಟೇಶಪ್ಪ, ವೇಷಗಾರ ಮೋತಿ ಮಾರುತಿ, ಬಾಗಳಿ ಶಿವಕುಮಾರ, ಶಿಲ್ಪಾಗೌಡರ, ಶ್ವೇತಾ, ಆರ್.ಗಿರೀಶ್, ಮೋತಿ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ರಾ.ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್; ಇಬ್ಬರ ಬಂಧನ, 2 ಬೈಕ್ ವಶ
Davanagere: ಸಿದ್ದಗಂಗಾ ಶ್ರೀ ರಾಷ್ಟ್ರಸಂತನೆಂದು ಘೋಷಿಸಿ: ಕೂಡಲಸಂಗಮ ಶ್ರೀ
Davanagere: ಮೀಸಲಾತಿಗಾಗಿ ಇನ್ನು ಮುಂದೆ ಈ ಸರ್ಕಾರದ ಮುಂದೆ ಹೋಗುವುದಿಲ್ಲ: ಪಂಚಮಸಾಲಿ ಶ್ರೀ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
BJP Rift; ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ ಶಾಸಕ ಬಿ.ಪಿ. ಹರೀಶ್
MUST WATCH
ಹೊಸ ಸೇರ್ಪಡೆ
Rohit, Pant, Jaiswal, Gill: ರಣಜಿ ಪುನರಾಗಮನದಲ್ಲಿ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್ಸ್
UV Fusion: ಸ್ವಾಮಿ ವಿವೇಕಾನಂದರ ಕನಸಿನ ರಾಷ್ಟ್ರನಿರ್ಮಾಣದಲ್ಲಿ ಯುವಜನತೆಯ ಪಾತ್ರ
Tumkur: ತುಮುಲ್ ಅಧ್ಯಕರಾಗಿ ಕೈ ಬೆಂಬಲಿತ ಅಭ್ಯರ್ಥಿ ಗೆಲುವು
Tollywood: ಹಾಲಿವುಡ್‌ಗೆ ಜೂ. ಎನ್‌ಟಿಆರ್ ಎಂಟ್ರಿ? ಖ್ಯಾತ ನಿರ್ದೇಶಕ ಹೇಳಿದ್ದೇನು?
Shiva Rajkumar: ಜ.26ಕ್ಕೆ ಶಿವಣ್ಣ ವಾಪಸ್: ಸ್ವಾಗತಕ್ಕೆ ಅದ್ಧೂರಿ ತಯಾರಿ