ದೇಶಕ್ಕೆ ಕಲಾವಿದರ ಕೊಡುಗೆ ಅಪಾರ: ಮಾಡಾಳ್
Team Udayavani, Mar 5, 2019, 9:33 AM IST
ಚನ್ನಗಿರಿ: ಕಲೆ-ಕಲಾವಿದರು ಇಲ್ಲದಿದ್ದರೆ ಜೀವನ ಸಂಘರ್ಷ, ಒತ್ತಡ, ಸಮಸ್ಯೆಗಳಲ್ಲಿಯೇ ಅಂತ್ಯ ಕಾಣುತ್ತಿತ್ತು. ಜೀವನದಲ್ಲಿ ಮುಕ್ತಿಯನ್ನು ಕಾಣಬೇಕಾದರೆ ಕಲೆ, ಸಾಹಿತ್ಯ, ಕಲಾವಿದರ ಅವಶ್ಯವಿದೆ ಎಂದು ಹಾಲಸ್ವಾಮಿ ವಿರಕ್ತಮಠದ ಶ್ರೀ ಜಯದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.
ರಾಮಮನೋಹರ ಲೋಹಿಯಾ ಭವನದಲ್ಲಿ ಕರ್ನಾಟಕ ರಾಜ್ಯ ನಾಮಫಲಕ ಕಲಾವಿಧರ ಸಂಘ ಆಯೋಜಿಸಿದ್ದ ಕಲಾವಿದರ ಸಮ್ಮಿಲನ ಹಾಗು ಚನ್ನಗಿರಿ ಶಾಖೆ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಸದ್ಯ ಗ್ರಾಮೀಣ ಕಲೆಗಳು ನಶಿಸಿ ಸಾಹಿತ್ಯದ ಅಭಿರುಚಿಯಿಲ್ಲದ ಆಧುನಿಕ ಕಲೆಗಳು ನಮ್ಮನ್ನು ಅಕರ್ಷಿಸುತ್ತಿರುವುದು ಅಪಾಯಕಾರಿ ಅಂಶವಾಗಿದೆ ಎಂಬುದನ್ನು ನಾವು ಮನಗಾಣಬೇಕು. ಇಲ್ಲವಾದರೆ ಸಾಹಿತ್ಯವನ್ನು ಮರೆಯುವಂತಹ ಕಾಲ ದೂರವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ದೇಶವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಯುವ ಸಮೂಹವು ಪ್ರಚಲಿತ ವಿದ್ಯಮಾನಗಳ ಅರಿವಿಲ್ಲದೇ ಮುನ್ನಡೆಯುತ್ತಿದ್ದಾರೆ. ಭಾರತೀಯ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯುತ್ತಿರುವುದು ದುರಂತದ ಸಂಗತಿ ಎಂದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ದೇಶಕ್ಕೆ ಕಲಾವಿದರ ಕೊಡುಗೆ ಅಪಾರವಾಗಿದ್ದು, ರಾಜಮಹಾರಾಜರುಗಳ ಹಾಗೂ ದೇವರುಗಳ ಚಿತ್ರಗಳು ಕಲಾವಿದನ ಕುಂಚದಿಂದ ಹೊರಬರದಿದ್ದರೆ ಸಾಮಾನ್ಯ ಜನರಿಗೆ ಚರಿತ್ರೆಯ ಕಲ್ಪನೆಯೇ ಇರುತ್ತಿರಲಿಲ್ಲ. ಕಲಾವಿದನ ಕಲ್ಪನೆಯೆ ನಮಗೆ ಜ್ಞಾನಗಳ ಗುತ್ಛವಾಗಿದೆ ಎಂದರು.
ಕಲಾವಿದರು ಸಂಘಟಿತರಾಗುತ್ತಿರುವುದು ಸಂತೋಷ ತಂದಿದೆ. ಸಂಘಟನೆಯಲ್ಲಿ ಬಲವಿದೆ. ಸರ್ಕಾರದಿಂದ ನಾಮಫಲಕ ಕಲಾವಿದರಿಗೆ ಸವಲತ್ತುಗಳನ್ನು ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಯು. ಚನ್ನಬಸಪ್ಪ ಮಾತನಾಡಿ. ಕಲೆಯನ್ನೇ ನಂಬಿಕೊಂಡು ಬದುಕುತ್ತಿರುವ ಕಲಾವಿದರಿಗೆ ಸರ್ಕಾರಗಳು ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು.
ವೃತ್ತ ನಿರೀಕ್ಷಕ ಆರ್.ಆರ್. ಪಾಟೀಲ್, ಸಂಘದ ರಾಜ್ಯಾಧ್ಯಕ್ಷ ಬಿ.ಕೆ. ಗುರುರಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನೆನಪು ಲೋಕೇಶ್, ಜಿಲ್ಲಾ ಉಪಾಧ್ಯಕ್ಷ ಎನ್.ಧರ್ಮಲಿಂಗಂ, ತಾಲೂಕು ಅಧ್ಯಕ್ಷ ಎಸ್.ಎಂ.ಶಿವಪ್ರಕಾಶ್, ಗೌರವಾಧ್ಯಕ್ಷ ಕೆ.ಪಿ.ಎಂ.ವಾಗೇಶ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್ .ಡಿ. ನಾಗರಾಜ್, ಸತೀಶ್, ರಂಗಸೌರಭ ಕಲಾಸಂಘದ ಅಧ್ಯಕ್ಷ ಎಂ.ಅಣ್ಣೋಜಿರಾವ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸೈಯ್ಯದ್ ಗೌಸ್ ಪೀರ್, ಅಮಾನುಲ್ಲಾ, ಸುರೇಶ್, ರಾಜು. ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.