ಅಶೋಕ ರೈಲ್ವೆ ಗೇಟ್ ಸಮಸ್ಯೆ ಪರಿಹಾರದ ಭರವಸೆ
Team Udayavani, Dec 17, 2018, 4:09 PM IST
ದಾವಣಗೆರೆ: ಕೆಲಸ ಮಾಡಿ, ಇಲ್ಲವೇ ನಿರ್ಗಮಿಸಿ.. ಇದು ರೈಲ್ವೆ ಸಚಿವರು ನೀಡಿರುವ ಖಡಕ್ ಎಚ್ಚರಿಕೆ. ಅದರಂತೆ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗದಂತೆ ಕೆಲಸ ಮಾಡಬೇಕು ಎಂದು ನೈರುತ್ಯ ರೈಲ್ವೆಯ ಮಹಾ ಪ್ರಬಂಧಕ ಅಜಯ್‌ಕುಮಾರ್‌ಸಿಂಗ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಭಾನುವಾರ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ಎ. ರವೀಂದ್ರನಾಥ್ ಇತರೊಡಗೂಡಿ ಡಿಸಿಎಂ ಟೌನ್‌ಶಿಪ್ ಕೆಳ
ಸೇತುವೆ, ರೈಲ್ವೆ ನಿಲ್ದಾಣ ಮತ್ತು ಅಶೋಕ ಚಿತ್ರಮಂದಿರ ಬಳಿ ರೈಲ್ವೆ ಗೇಟ್ ಸಮಸ್ಯೆ ಪರಿಶೀಲನೆ ನಡೆಸಿದರು. ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಬಳಿ ಸಂಸದ ಜಿ.ಎಂ. ಸಿದ್ದೇಶ್ವರ್, 30 ವರ್ಷದಿಂದ ಈ ರೈಲ್ವೆ ಗೇಟ್ ಸಮಸ್ಯೆ ಇದೆ ಎಂದು ಗಮನ ಸೆಳೆದರು.
ಈ ಸಂದರ್ಭದಲ್ಲಿ ನೈರುತ್ಯ ರೈಲ್ವೆಯ ಮಹಾ ಪ್ರಬಂಧಕ ಅಜಯ್‌ಕುಮಾರ್ ಸಿಂಗ್, ನಿಮ್ಮ ಮೇಲೆ ಬಹಳ ದೂರು
ಇವೆ. ರೈಲ್ವೆ ಸಚಿವರು ಹೇಳಿರುವಂತೆ ಕೆಲಸ ಮಾಡಿ, ಇಲ್ಲವೇ ನಿರ್ಗಮಿಸಿ. ಇನ್ನು ಮುಂದೆ ಯಾವುದೇ ಜನಪ್ರತಿನಿಧಿಗಳಿಂದ ದೂರು ಬರದಂತೆ ಕೆಲಸ ಮಾಡಬೇಕು.
ಮೇಲ್ಸೇತುವೆ, ಕೆಳಸೇತುವೆಯೋ ಒಟ್ಟಾರೆ ಜನಪ್ರತಿನಿಧಿಗಳು ಏನು ಹೇಳುತ್ತಾರೋ ಅ ರೀತಿ ಕೆಲಸ ಮಾಡುವುದನ್ನ ಕಲಿಯಿರಿ… ಎಂದು ಮುಖ್ಯ ಲೆಕ್ಕಾಧಿಕಾರಿ(ನಿರ್ಮಾಣ) ಅವರಿಗೆ ಖಡಕ್ ಎಚ್ಚರಿಕೆ ನೀಡಿದರು. ರೈಲ್ವೆ ಗೇಟ್ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಡಿಸಿಎಂ ಟೌನ್‌ಶಿಪ್ ಕೆಳ ಸೇತುವೆ ಪರಿಶೀಲನೆ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್, ಡಬ್ಲಿಂಗ್ ಯೋಜನೆಯಡಿ
ಒಂದು ಹಳಿಗೆ ಮಾತ್ರ 61 ಮೀಟರ್ ಸೇತುವೆ ಮಾಡಲಾಗುತ್ತಿದೆ. ಎರಡೂ ಹಳಿಗಳಿಗೆ 61 ಮೀಟರ್ ಸೇತುವೆ ಮಾಡಬೇಕು. ಮೊದಲಿನ ಸೇತುವೆಯನ್ನು ಪುನರ್ ನಿರ್ಮಾಣ ಮಾಡಿ, ರಸ್ತೆ ನೇರವಾಗುತ್ತದೆ ಎಂದು ತಾಕೀತು
ಮಾಡಿದರು.
ಎರಡೂ ಹಳಿಗಳಿಗೆ 61 ಮೀಟರ್ ಸೇತುವೆ ನಿರ್ಮಾಣ ಮಾಡಲಾಗುವುದು. 10 ಕೋಟಿ ವೆಚ್ಚದ ಸೇತುವೆ ಪುನರ್‌ನಿರ್ಮಾಣ ಕಾಮಗಾರಿ ಟೆಂಡರ್ ಕರೆಯಲಾಗಿದೆ. 2019ರ ಜೂನ್‌ಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಹಾ ಪ್ರಬಂಧಕ ಅಜಯ್‌ಕುಮಾರ್‌ಸಿಂಗ್ ತಿಳಿಸಿದರು.
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ 2ನೇ ಟಿಕೆಟ್ ಕೌಂಟರ್ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಲಾಯಿತು. 2ನೇ ಕೌಂಟರ್ ನಿರ್ಮಾಣ, ಅಭಿವೃದ್ಧಿಗೆ 4.5 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಲಾಗುವುದು. ಜನರು ಬಂದು-ಹೋಗಲು ಅನುಕೂಲ ಆಗುವಂತೆ ಜಾಗದ ಸೌಲಭ್ಯ ಮಾಡಿಕೊಡಬೇಕು ಎಂದು ಮಹಾ ಪ್ರಬಂಧಕ ಅಜಯ್‌ಕುಮಾರ್‌ಸಿಂಗ್ ಮನವಿ ಮಾಡಿದರು.
ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್ ಮಹಾನಗರ ಪಾಲಿಕೆ ಮುಖ್ಯ ಅಭಿಯಂತರ ಸತೀಶ್‌ಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.