ಔಷಧ ಸೇವನೆಯಿಂದ ಅಸ್ತಮಾ ನಿಯಂತ್ರಣ ಸಾಧ್ಯ
Team Udayavani, May 8, 2017, 1:06 PM IST
ದಾವಣಗೆರೆ: ನಿಯಮಿತ ಔಷಧ ಸೇವನೆಯಿಂದ ಅಸ್ತಮ ಕಾಯಿಲೆ ನಿಯಂತ್ರಣಮಾಡಬಹುದಾಗಿದ್ದು, ಜನರಿಗೆ ಯಾವುದೇ ಭಯ ಇಟ್ಟುಕೊಳ್ಳಬಾರದು ಎಂದು ಅಮೆರಿಕಾದ ಶ್ವಾಸಕೋಶ ತಜ್ಞ ಡಾ|ಗಿರಿರಾಜ ಬೊಮ್ಮ ಹೇಳಿದ್ದಾರೆ.
ವಿಶ್ವ ಅಸ್ತಮ ದಿನಾಚರಣೆ ನಿಮಿತ್ತ ಭಾನುವಾರ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಸ್ತಮಾ ಸಮ್ಮೇಳನ, ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಅಸ್ತಮ ಬಗೆಗಿನ ಭಯ ಕೈಬಿಡಿ. ನಿಯಮಿತ ಔಷಧಿಧ ಸೇವಿಸಿ ಕಾಯಿಲೆ ದೂರ ಮಾಡಿ ಎಂದರು.
ನೆಗಡಿಯಾದಾಗಲೇ ಜಾಗ್ರತೆ ವಹಿಸುವುದರಿಂದ ಅಸ್ತಮ ನಿಯಂತ್ರಿಸಬಹುದು. ಮೂಲತಃ ಅಸ್ತಮ ಅಂದರೆ ಅಲರ್ಜಿಯ ದೊಡ್ಡ ಪ್ರಮಾಣ ಆಗಿದೆ. ಶೀತ, ನೆಗಡಿ ಮೂಗಿನ ಮೂಲಕ ನೇರ ಶ್ವಾಸಕೋಶಕ್ಕೆ ಆವರಿಸಿಕೊಳ್ಳುವುದೇ ಅಸ್ತಮಾ ಕಾಯಿಲೆಯಾಗಿದೆ. ನೆಗಡಿ ಆದಾಗಲೇ ಸೂಕ್ತ ಚಿಕಿತ್ಸೆ, ಜಾಗ್ರತೆ ವಹಿಸಿದರೆ ಅಸ್ತಮಾ ಬಾರದಂತೆ ತಡೆಯಬಹುದಾಗಿದೆ ಎಂದು ಹೇಳಿದರು.
ಸೀನುವಿಕೆ, ನೆಗಡಿ, ಕೆಮ್ಮು ದಮ್ಮು ಮೊದಲಾದ ಅಸ್ತಮ ಲಕ್ಷಣಗಳಾಗಿದ್ದು, ಈ ಕಾಯಿಲೆ ಬರಲು ವಯಸ್ಸಿನ ಬೇಧವಿಲ್ಲ. ಸಣ್ಣ ಮಕ್ಕಳಲ್ಲಿ ಬರುವ ಕಾಯಿಲೆಗೆ ಸರಿಯಾದ ಚಿಕಿತ್ಸೆ ಪಡೆದಲ್ಲಿ ಉಪಶಮನ ಮಾಡಬಹುದು. ಆದರೆ, ನಿಗದಿತ ವಯಸ್ಸಿನ ನಂತರದ ಅಸ್ತಮಾವನ್ನು ಕೇವಲ ನಿಯಂತ್ರಣೆ ಮಾಡಬಹುದು.
ಅಸ್ತಮಾ ಪೀಡಿತರು ಕರಿದ ತಿಂಡಿ, ಹುಳಿ ಪದಾರ್ಥ ಸೇವನೆ ತ್ಯಜಿಸಬೇಕು ಎಂದು ತಿಳಿಸಿದರು. ನಮ್ಮ ದೇಶದಲ್ಲಿ ವರ್ಷಕ್ಕೆ 2.5 ಲಕ್ಷ ಜನರು ಅಸ್ತಮಾದಿಂದಾಗಿ ಅವಧಿಗಿಂತ ಮುಂಚೆ ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಮೂಲಕ ಕಾರಣ ಕಾಯಿಲೆ ಕುರಿತು ಮಾಹಿತಿ, ಸೂಕ್ತ ಚಿಕಿತ್ಸೆ ಇಲ್ಲದೇ ಇರುವುದೇ ಆಗಿದೆ.
ರಕ್ತದೊತ್ತಡ, ಮಧುಮೇಹಕ್ಕೆ ಪಡೆಯುವ ರೀತಿಯಲ್ಲಿಯೇ ನಿಯಮಿತವಾದ ಔಷಧ ಸೇವನೆಮಾಡುವುದರಿಂದ ಕಾಯಿಲೆ ನಿಯಂತ್ರಿಸಬಹುದು. ಇತರೆ ಆರೋಗ್ಯವಂತ ಮನುಷ್ಯರಂತೆ ಜೀವನ ನಡೆಸಬಹುದು ಎಂದು ತಿಳಿಸಿದರು.
ಅಸ್ತಮ ಸಲಹಾ ವೈದ್ಯ, ಆಯೋಜಕ ಡಾ| ಎನ್.ಎಚ್. ಕೃಷ್ಣ ಮಾತನಾಡಿ, ಅಸ್ತಮಪೀಡಿತರು ಅಲರ್ಜಿಯನ್ನು ನಿಯಂತ್ರಣದಲ್ಲಿ ಇರಿಸಿಕೊಂಡರೆ ಯಾವ ತೊಂದರೆ ಇಲ್ಲ. ಅಲರ್ಜಿ ಪದಾರ್ಥಗಳನ್ನು ವರ್ಜಿಸಬೇಕು. ಧೂಳು, ಹೊಗೆ, ಘಾಟಿನಿಂದ ದೂರವಿರಬೇಕು. ಔಷಧಿಧವನ್ನು ಕ್ರಮವಾಗಿ ಪಡೆಯಬೇಕುಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಭೀಮಾಶಂಕರ ಎಸ್. ಗುಳೇದ್, ದಾವಣಗೆರೆ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ| ಎಚ್.ವಿಶ್ವನಾಥ್, ನಗರಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ, ವರದಿಗಾರರ ಕೂಟದ ಅಧ್ಯಕ್ಷ ಬಸವರಾಜ್ ದೊಡ್ಮನಿ ಅವರನ್ನು ಸನ್ಮಾನಿಸಲಾಯಿತು. ಹಾಸ್ಯ ವಾಗ್ಮಿಗಳಾದ ಗಂಗಾವತಿ ಪ್ರಾಣೇಶ್, ಬಸವರಾಜ್ ಮಹಾಮನಿ, ನರಸಿಂಹ ಜೋಶಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.