ಅಥಣಿ ಶಿವಯೋಗಿಗಳು ಅಧ್ಯಾತ್ಮ ಕ್ಷೇತ್ರದ ಮೇರು ಪರ್ವತ

Team Udayavani, Jun 26, 2017, 12:38 PM IST

dvg3.jpg

ದಾವಣಗೆರೆ: ಬಸವಾದಿ ಶರಣರ ತತ್ವಗಳನ್ನ ಆಚರಿಸಿ, ತೋರಿಸಿದ ಅಥಣಿ ಶಿವಯೋಗಿಗಳು ಆಧ್ಯಾತ್ಮ ಕ್ಷೇತ್ರದ ಮೇರು ಪರ್ವತ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದ್ದಾರೆ. ಭಾನುವಾರ ಶ್ರೀ ಶಿವಯೋಗಿ ಮಂದಿರದಲ್ಲಿ ಲಿ| ಶ್ರೀ ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ 182ನೇ ಜಯಂತಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಥಣಿ ಶಿವಯೋಗಿಗಳು ಪ್ರತಿಯೊಬ್ಬರಲ್ಲೂ ದೇವರನ್ನ ಕಂಡವರು. ಅಥಣಿ ಮಠವನ್ನು ಕಾಯಕ-ದಾಸೋಹ- ಸಮಾನತೆಯ ಮಠವನ್ನಾಗಿ ಪರಿವರ್ತಿಸಿದ ಮಹಾನ್‌ ಪರಿವರ್ತನೆಯ ಹರಿಕಾರರು ಎಂದು ತಿಳಿಸಿದರು. ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳು ಪ್ರತಿ ದಿನ ಶಿವಯೋಗ ಮಾಡುವ ಮೂಲಕ ಮಹಾನ್‌ ಶಿವಯೋಗಿಗಳಾದವರು. ಅವರಲ್ಲಿ ಬೇಡಿ ಬಂದವರ ಸಮಸ್ಯೆಗೆ ಪರಿಹಾರ ನೀಡಿದವರು.

ಅಂತವರು ಸಾಗಿ ಬಂದ ಶಿವಯೋಗದ ಹಾದಿಯಲ್ಲಿ ಮುನ್ನಡೆದರೆ ಮನಸ್ಸಿಗೆ ಶಾಂತಿ ದೊರಕುತ್ತದೆ. ವಿಶೇಷವಾಗಿ ಏಕಾಗ್ರತೆ ಲಭಿಸುತ್ತದೆ ಎಂದು ತಿಳಿಸಿದರು. ಪ್ರತಿಭೆ ಎನ್ನುವುದು ಸಾಧಕರ ಸ್ವತ್ತು. ಪ್ರತಿಯೊಬ್ಬರೂ ಪ್ರತಿಭಾವಂತರು. ಅದನ್ನು ನಾವೇ ಗುರುತಿಸಿಕೊಂಡು ನಮಗೆ ಆಸಕ್ತಿ ಇರುವ ಕಡೆ ಅಧ್ಯಯನದಲ್ಲಿ ತೊಡಗುವ ಮೂಲಕ ಬೆಳೆಯಬೇಕು.

ದರಿದ್ರತನ ದೂರ ಮಾಡಿ ಸತತ ಅಧ್ಯಯನ ನಡೆಸುವುದರಿಂದ ಜೀವನದ ಗುರಿ ತಲುಪಬಹುದು ಎನ್ನುವುದಕ್ಕೆ ಕೆಎಎಸ್‌ನಲ್ಲಿ 7ನೇ ರ್‍ಯಾಂಕ್‌ ಪಡೆದಿರುವ ಪ್ರಿಯದರ್ಶಿನಿ ಸಾಣಿಕೊಪ್ಪಅವರೇ ಸಾಕ್ಷಿ. ಎಲ್ಲಾ ಮಕ್ಕಳು ಉನ್ನತ ಸಾಧನೆ ಮಾಡಲಿಕ್ಕೆ ಸಾಧ್ಯ ಎಂದು ತಿಳಿಸಿದರು. ವಿಧಾನ ಪರಿಷತ್‌ ಸದಸ್ಯ ಕೆ. ಅಬ್ದುಲ್‌ ಜಬ್ಟಾರ್‌ ಮಾತನಾಡಿ, ಡಾ| ಶಿವಮೂರ್ತಿ ಮುರುಘಾ  ಶರಣರು ಪ್ರಗತಿಪರ ಚಿಂತನೆಯವರು ನುಡಿದಂತೆನಡೆಯುತ್ತಿರುವರು.

ಇಂದಿನ ವಾತಾವರಣದಲ್ಲಿ ವಿದ್ಯಾರ್ಥಿ ನಿಯರು ಚೆನ್ನಾಗಿ ಓದುತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ದುಖಃಕರ ವಿಚಾರ. ಒಂದರ್ಥದಲ್ಲಿ ಮಹಿಳೆಯರು ಕಾರಣವಾಗುತ್ತಿದ್ದಾರೆ. ಸೊಸೆ ಅತ್ತೆ-ಮಾವನನ್ನು ತಂದೆ-ತಾಯಿ ಎಂದು ಭಾವಿಸದೇ ಇರುವುದು. ಅತ್ತೆ-ಮಾವ ಸೊಸೆಯನ್ನು ಮಗಳಂತೆ ನೋಡಿಕೊಳ್ಳದೇ ಇರುವಂತಹ ಭಾವನೆಯಿಂದ ಸಾಕಷ್ಟು ಜಗಳ ಆಗುತ್ತಿವೆ.

ತಂದೆ-ತಾಯಂದಿರು ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸಬೇಕು ಎಂದು ತಿಳಿಸಿದರು. ಸನ್ಮಾನ ಸೀÌಕರಿಸಿದ 2014ನೇ ಸಾಲಿನ 7ನೇ ರ್‍ಯಾಂಕ್‌ ವಿಜೇತ ಪ್ರಿಯದರ್ಶಿನಿ ಸಾಣಿಕೊಪ್ಪ ಮಾತನಾಡಿ, ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಪಡೆಯುತ್ತಿರುವ 42ನೇ ಸನ್ಮಾನ ತಮಗೆ ತುಂಬಾ ಖುಷಿ ತಂದಿದೆ. ನಾನು 9ನೇ ತರಗತಿಯಿಂದಲೇ ಶಿವಯೋಗದಲ್ಲಿ ತೊಡಗಿಸಿಕೊಂಡಿದ್ದರಿಂದ ಇಷ್ಟೆಲ್ಲಾ ಸಾಧನೆಗೆ ಕಾರಣವಾಯಿತು.

ಶಿವಯೋಗ ಎನ್ನುವುದು ಯಾವುದೇ ಜಾತಿ, ಧರ್ಮಕ್ಕೆ ಸಂಬಂಧಪಟ್ಟಿದ್ದಲ್ಲ. ಅದೊಂದು ವೈಜ್ಞಾನಿಕ ಮಾರ್ಗ. ಪ್ರತಿ ದಿನ ಶಿವಯೋಗ ಮಾಡಿದ್ದರ ಫಲವಾಗಿಯೇ ದಿನಕ್ಕೆ 16-18 ಗಂಟೆ ನಿರಂತರವಾಗಿ ಓದಲಿಕ್ಕೆ ಸಾಧ್ಯವಾಯಿತು. ತಮ್ಮ ಸಾಧನೆಗೆ ಬಸವತತ್ವವೇ ಕಾರಣ ಎಂದು ತಿಳಿಸಿದರು. 

ಇಂಜಿನಿಯರ್‌, ಡಾಕ್ಟರ್‌, ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿ ಏನೇ ಆಗಿರಲಿ ಮೊದಲು ಮಾನವೀಯತೆಯುಳ್ಳವರಾಗಿರಬೇಕು. 2016ರ ಸಮೀಕ್ಷೆ ಪ್ರಕಾರ ದೇಶದಲ್ಲಿ 68 ಸಾವಿರ ವೃದ್ಧಾಶ್ರಮ ಇವೆ. ಅವುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತಹವರು ಉನ್ನತ ಹುದ್ದೆ, ಅಧಿಕಾರದಲ್ಲಿದ್ದಂತಹವರ ತಂದೆ-ತಾಯಿ ಎಂಬುದು ನಿಜಕ್ಕೂ ಆತಂಕ ಪಡಬೇಕಾದ ವಿಚಾರ. ಏನೇ ಆಗಲಿ ಮಾನವೀಯತೆ ಮರೆಯಬಾರದು ಎಂದರು.

ಶ್ರೀ ಹಾಲಸ್ವಾಮಿ, ಶ್ರೀ ಬಸವ ಕೇತೇಶ್ವರ ಸ್ವಾಮೀಜಿ, ಡಾ| ಜಿ.ಸಿ. ಬಸವರಾಜ್‌, ಪಲ್ಲಾಗಟ್ಟೆ ಕೊಟ್ರೇಶ್‌, ಜೆ. ಸೋಮನಾಥ್‌ ಇತರರು ಇದ್ದರು. ಬಸವ ಕಲಾ ಲೋಕದ ಕಲಾವಿದರು ಪ್ರಾರ್ಥಿಸಿದರು. ದಮಯಂತಿಗೌಡ ಸ್ವಾಗತಿಸಿದರು. ಶಿವಕುಮಾರ್‌ ನಿರೂಪಿಸಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

ಟಾಪ್ ನ್ಯೂಸ್

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Omission in egg distribution, head teacher, physical education teacher suspended

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

3-hunsur

Hunsur: ಚಿನ್ನದ ಸರ ಅಪಹರಿಸಿದ್ದ ಇಬ್ಬರು ಆರೋಪಿಗಳ ಬಂಧನ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.