ಟೀ-ಬೀಡಾ ಸ್ಟಾಲ್‌ಗಳಿಗೆ ಎಡಿಸಿ ನೇತೃತ್ವದಲ್ಲಿ ದಾಳಿ
Team Udayavani, Dec 15, 2018, 3:16 PM IST
ದಾವಣಗೆರೆ: ತಂಬಾಕು ನಿಯಂತ್ರಣ ವಿಶೇಷ ತಂಡ ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಚರಣೆಗೆ ಶುಕ್ರವಾರ ಅಪರ ಜಿಲ್ಲಾಧಿಕಾರಿ ಪದ್ಮಾಬಸವಂತಪ್ಪ ಚಾಲನೆ ನೀಡಿದರು.
ಬಡಾವಣೆ ಠಾಣೆ ಆವರಣದಲ್ಲಿ ಆಟೋರಿಕ್ಷಾಗಳ ಹಿಂಬದಿಗೆ ಗುಟಕಾ, ಸಿಗರೇಟ್‌ನಂತಹ ತಂಬಾಕುಯಕ್ತ ವಸ್ತುಗಳ ಬಳಕೆಯಿಂದ ಜನರ ಆರೋಗ್ಯದ ಮೇಲೆ ಆಗುವಂತಹ ದುಷ್ಪರಿಣಾಮ ಕುರಿತ ಭಿತ್ತಿಪತ್ರ ಅಂಟಿಸುವ ಮೂಲಕ ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದರು.
ನಂತರ ಅಪರ ಜಿಲ್ಲಾಧಿಕಾರಿ, ಜಿಲ್ಲಾ ತಂಬಾಕು ನಿಯಂತ್ರಣ ತಂಡದೊಂದಿಗೆ ಜಯದೇವ ವೃತ್ತದ ಭಾವಸಾರ ಕ್ಷತ್ರಿಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ರಸ್ತೆ ಬದಿಯ 100 ಯಾರ್ಡ್ ವ್ಯಾಪ್ತಿಯ ಟೀ, ಬೀಡಾ ಸ್ಟಾಲ್‌ಗಳಿಗೆ ದಾಳಿ
ನಡೆಸಿ, ನಿಯಮ ಉಲ್ಲಂಘನೆ ಸಂಬಂಧ ದಂಡ ವಿಧಿಸಿದರು.
ಇದೇ ವೇಳೆ ಅಪರ ಜಿಲ್ಲಾಧಿಕಾರಿ ಪದ್ಮಾಬಸವಂತಪ್ಪ, ಶಾಲಾ-ಕಾಲೇಜುಗಳ ವ್ಯಾಪ್ತಿಯಿಂದ 100 ಯಾರ್ಡ್ (91.44 ಮೀಟರ್) ಅಂತರದಲ್ಲಿ ಗುಟಕಾ, ಸಿಗರೇಟು ಮಾರಾಟ ಮಾಡಬಾರದು ಎಂದೆಲ್ಲಾ ನಿಮಗೆ ಗೊತ್ತಿಲ್ಲವೇ? ಈ ಹಿಂದೆಯೂ ಹಲವಾರು ಬಾರಿ ಹೇಳಿದರೂ ಪುನಃ ಈ ರೀತಿ ತಪ್ಪು ಮಾಡುವುದು ಸರಿಯಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಮತ್ತೂಮ್ಮೆ ಏನಾದ್ರು ಈ ರೀತಿ ತಪ್ಪು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಸಿದರು.
ಕಳೆದ ನಾಲ್ಕು ದಿನಗಳಿಂದ ಬಸವನಗರ, ಗಾಂಧಿ ನಗರ, ಆಜಾದ್ ನಗರ, ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ ಕಾರ್ಯಾಚರಣೆ ತಂಡದಿಂದ 242 ಪ್ರಕರಣ ದಾಖಲಿಸಿಕೊಂಡು, 24,550 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು. ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ, ಸಿಪಿಐ ಇ. ಆನಂದ್, ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕ ಮಹಾಂತೇಶ್ ಇತರೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತಾಲೂಕುವಾರು ಕಾರ್ಯಾಚರಣೆ ಸಿಗರೇಟು, ಗುಟುಕಾ ಉತ್ಪನ್ನವನ್ನು ಸಂಪೂರ್ಣ ಬಂದ್ ಮಾಡುವ ಬಗ್ಗೆ ನಮಗೆ ನಿರ್ದೇಶನವಿಲ್ಲ. ಕಳೆದ ತಿಂಗಳು ಸಭೆ ನಡೆಸಿ ಹೋಲ್‌ಸೇಲ್ ಸಿಗರೇಟು, ಗುಟಕಾ ಉತ್ಪನ್ನ ಮಾರಾಟಗಾರರಿಗೆ ಬಿಡಿಯಾಗಿ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದೇವೆ.
ತಂಡದಿಂದ 60 ಜನರಿಗೆ ತರಬೇತಿ ಸಹ ನೀಡಲಾಗಿದೆ. ಕೆಲವೆಡೆ ಕಾರ್ಯಾಚರಣೆ ವೇಳೆ ಹೋಲ್‌ಸೇಲ್ ಮಾರಾಟಗಾರರಿಗೆ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-2003ರ (ಕೋಟಾ)ದ ಸೆಕ್ಷನ್ 7, 8, 9 ರ ಅಧಿನಿಯಮದಡಿ ಇರುವ ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ. ತಾಲೂಕುವಾರು ಕೂಡ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ.
ಹೋಲ್‌ಸೇಲ್ ವ್ಯಾಪಾರ ನಿಲ್ಲಿಸಲಿ ಗುಟಕಾ, ಸಿಗರೇಟು ಮಾರಾಟ ಮಾಡಬೇಡಿ ಅಂತ ನಮ್ಮಂತ ಸಣ್ಣಪುಟ್ಟ
ಗಡಿಗಳಿಗೆ ದಂಡ ವಿಧಿಸುತ್ತಾರೆ. ಮೊದಲು ಗುಟಕಾ, ಸಿಗರೇಟ್ ಉತ್ಪನ್ನಗಳನ್ನ ಹೋಲ್‌ಸೇಲ್ ಮಾರಾಟ ಮಾಡುವುದನ್ನು ಬಂದ್ ಮಾಡಿಸಿ. ಅಲ್ಲಿ ಮಾರಾಟ ನಿಲ್ಲಿಸಿದರೆ, ನಾವೂ ಸಹ ಮಾರಾಟ ಮಾಡಲ್ಲ. ಆಗ ಈ ಕಾರ್ಯಕ್ರಮ ಯಶಸ್ವಿ ಆಗುತ್ತದೆ. ಈ ಉತ್ಪನ್ನಗಳ ಮಾರಾಟದಿಂದ ನಾವೇನು ಸಾವಿರಾರು ರೂಪಾಯಿ ಲಾಭ ಪಡೆಯುತ್ತಿಲ್ಲ. ಮೊದಲು ಹೋಲ್‌ಸೇಲ್ ವ್ಯಾಪಾರ ಬಂದ್ ಮಾಡಿಸಲು ಕ್ರಮ ಕೈಗೊಳ್ಳಲಿ.
ಬಸವರಾಜ್, ಬೀಡಾ ಸ್ಟಾಲ್ ಮಾಲೀಕ.
ತಂಬಾಕು ವ್ಯಸನಮುಕ್ತ ಕೇಂದ್ರ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ನ. 2 ರಂದು ತಂಬಾಕು ವ್ಯಸನಮುಕ್ತ ಕೇಂದ್ರ ತೆರೆಯಲಾಗಿದೆ. ಅಲ್ಲಿ ಸಾಮಾಜಿಕ ಕಾರ್ಯಕರ್ತರು, ಆಪ್ತ ಸಮಾಲೋಚಕರು ತಂಬಾಕು, ಸಿಗರೇಟ್ ಉತ್ಪನ್ನಗಳ
ಬಳಕೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವರು. ತಂಬಾಕು ವ್ಯಸನಿಗಳಿಗೆ ನಿಕೋಟಿನ್ ಚ್ಯುಯಿಂಗ್ ಗಮ್ ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ ಜಿಲ್ಲಾ ತಂಬಾಕು ನಿಯಂತ್ರಣ ವಿಶೇಷ ತಂಡದಿಂದ ಈಗಾಗಲೇ ಜಿಲ್ಲೆಯಾದ್ಯಂತ ವಿವಿಧ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಒಟ್ಟು ಈ ರೀತಿಯ 100 ಕಾರ್ಯಕ್ರಮ ಆಯೋಜಿಸುವ ಗುರಿಯಿದೆ.
ಸತೀಶ್ ಕಲಹಾಳ, ಕಾರ್ಯಕ್ರಮದ ಜಿಲ್ಲಾ ಸಲಹೆಗಾರ
ನಿನ್ನೆ 112 ಪ್ರಕರಣ
ಜಿಲ್ಲಾ ತಂಬಾಕು ನಿಯಂತ್ರಣ ವಿಶೇಷ ತಂಡ ಶುಕ್ರವಾರ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಟೇಲ್, ಬಾರ್ ಮತ್ತು ರೆಸ್ಟೋರೆಂಟ್, ಪಾನ್‌ಶಾಪ್, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವರನ್ನು ಪತ್ತೆ ಹಚ್ಚಿ ಒಟ್ಟಾರೆ 112 ಪ್ರಕರಣ ದಾಖಲಿಸಿ, ಸ್ಥಳದಲ್ಲೇ 12,100 ರೂಪಾಯಿ ದಂಡ ವಸೂಲಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
Dinner Politics: ಮುಖ್ಯಮಂತ್ರಿ ಊಟಕ್ಕೆ ಹೋದ್ರೆ ತಪ್ಪೇನಿದೆ?: ಸಚಿವ ಎಂ.ಬಿ.ಪಾಟೀಲ್
Assault: ನಾಗಮಂಗಲದಲ್ಲಿ ಎಎಸ್‌ಐಯ ಹಿಡಿದು ಎಳೆದಾಡಿ, ಹಲ್ಲೆ ಮಾಡಿದ ಆರೋಪಿ!
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Congress Gurantee: ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತ: ಕಾಂಗ್ರೆಸ್ ಶಾಸಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.