ಅಪರಾಧ ತಡೆ ಮಾಸಾಚರಣೆ ಜಾಗೃತಿ ಮೂಡಿಸಲು ಎಸ್ಪಿ ಸೈಕಲ್ ಸವಾರಿ
Team Udayavani, Dec 3, 2019, 2:51 PM IST
ದಾವಣಗೆರೆ: ರಸ್ತೆ ನಿಯಮಗಳನ್ನು ಪಾಲಿಸಿ ಅಪರಾಧಗಳನ್ನು ತಪ್ಪಿಸಿ, ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬೇಡಿ, ರಸ್ತೆಯಲ್ಲಿ ಪಾದಚಾರಿಗಳಿಗೆ ಮೊದಲ ಆದ್ಯತೆ ನೀಡಿ, ನಾಗರೀಕರ ನಿರ್ಲಕ್ಷತನ–ಕಳ್ಳರ ಚಾಣಾಕ್ಷತನ ಆಗುವುದು ಕಳ್ಳತನ, ನಾವು ಮೊದಲು ತಂಬಾಕು ತಿಂದರೆಅದು ನಮ್ಮನ್ನು ನಂತರ ತಿನ್ನುತ್ತದೆ….ಇವು, ನಗರದ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳು ಸೋಮವಾರ ಘೋಷಣಾಫಲಕಗಳೊಂದಿಗೆ ಮುಖ್ಯ ರಸ್ತೆಗಳಲ್ಲಿ ಸಾಗಿ ಜಾಗೃತಿ ಮೂಡಿಸಿದ ಪರಿ.
ನಗರದ ಹೈಸ್ಕೂಲ್ ಮೈದಾನದಲ್ಲಿ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಸೈಕಲ್ ಜಾಗೃತಿ ಜಾಥಾಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಡಿಸೆಂಬರ್‌ನಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಅಪರಾಧ ತಡೆ ಕುರಿತು ಹಾಗೂ ರಸ್ತೆ ಸುರಕ್ಷತೆ ಕುರಿತಾಗಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಈ ಮಾಸಾಚರಣೆ ಮುಖ್ಯ ಉದ್ದೇಶವಾಗಿದೆ ಎಂದರು.
ಡಿಸೆಂಬರ್ ಮಾಹೆಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳು, ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಅಪರಾಧ ತಡೆಕುರಿತಾಗಿ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗುವುದು. ಅಪರಾಧ ತಡೆ ಮಾಸಾಚರಣೆ ಆರಂಭದಲ್ಲಿ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಅಪರಾಧ ತಡೆ ಕುರಿತಾದ ಜಾಗೃತಿ ಫಲಕಗಳೊಂದಿಗೆ ನಗರದ ಮುಖ್ಯ ಭಾಗಗಳಲ್ಲಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ಮಾಸಾಚರಣೆಯಿಂದ ಜಾಗೃತರಾಗಿ ಅಪರಾಧ ತಡೆಯುವಲ್ಲಿ ಸಹಕರಿಸಬೇಕೆಂದು ಕೋರಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಾಲಾ ಮಕ್ಕಳೊಂದಿಗೆ ಸೈಕಲ್ ಸವಾರಿ ಮಾಡುವ ಮೂಲಕ ಜಾಥಾದಲ್ಲಿ ಪಾಲ್ಗೊಂಡರು.
ಜಾಥಾ ಹೈಸ್ಕೂಲ್ ಮೈದಾನದಿಂದ ಆರಂಭಗೊಂಡು ಹಳೇ ಪ್ರವಾಸಿ ಮಂದಿರ, ಬಿಎಸ್‌ಎನ್‌ಎಲ್ ಆಫೀಸ್, ಎಂ.ಜಿ.ಸರ್ಕಲ್, ಮಂಡಿಪೇಟೆ, ವಸಂತ ರಸ್ತೆ, ಅರುಣಾ ಸರ್ಕಲ್, ಎವಿಕೆ ರಸ್ತೆ, ಕೆಇಬಿ ಸರ್ಕಲ್, ಭಗತ್ ಸಿಂಗ್ ನಗರ ಆಟೋಸ್ಟ್ಯಾಂಡ್ ಮೂಲಕ ಕೆಟಿಜೆ ನಗರ ಪೊಲೀಸ್ ಠಾಣೆವರೆಗೆ ಸಾಗಿತು. ಜಾಥಾ ಕಾರ್ಯಕ್ರಮದಲ್ಲಿ ಎಎಸ್‌ಪಿ ರಾಜೀವ್, ನಗರ ಡಿವೈಎಸ್‌ಪಿ ನಾಗೇಶ್ ಐತಾಳ್, ಮಹಿಳಾ ಪೊಲೀಸ್ ಇಸ್ಸ್ ಪೆಕ್ಟರ್ ನಾಗಮ್ಮ, ಇನ್ಸ್‌ಪೆಕ್ಟರ್‌ಗಳಾದ ಗಜೇಂದ್ರಪ್ಪ, ಸತೀಶ್ ಕುಮಾರ್, ಕೆಟಿಜೆ ನಗರ ಪಿಎಸ್‌ಐ ವೀರೇಶ್, ಟ್ರಾಫಿಕ್ ಪಿಎಸ್‌ಐ ಮಂಜುನಾಥ, ಲಿಂಗಾರೆಡ್ಡಿ, ಇತರೆ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.