Lok Sabha Election: ಬಿಜೆಪಿಗೆ ಸ್ಪಷ್ಟ ಬಹುಮತ: ಸಂಸದ ಬಿ.ವೈ.ರಾಘವೇಂದ್ರ
Team Udayavani, Apr 12, 2024, 10:43 AM IST
ಆನವಟ್ಟಿ: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸ್ಪಷ್ಟ ಬಹುಮತದೊಂದಿಗೆ ಕೇಂದ್ರ ಸರ್ಕಾರವನ್ನು ಮೋದಿ ನೇತೃತ್ವದಲ್ಲಿ ರಚನೆಯಾಗಲಿದೆ. ಈ ಮೂಲಕ ಸದೃಢ ಭಾರತಕ್ಕೆ ಮುನ್ನುಡಿ ಬರೆಯಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಸ್ಪಷ್ಟಪಡಿಸಿದರು.
ಗುರುವಾರ ಆನವಟ್ಟಿಯ ವೀರಶೈವ ಕಲ್ಯಾಣ ಮಂದಿರದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಏಕಾಏಕಿ ಅಧಿಕಾರಕ್ಕೆ ಬಂದಿಲ್ಲ. ನಗರಕ್ಕೆ ಸೀಮಿತವಾದ ಪಕ್ಷವನ್ನು ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಾದ್ಯಂತ ಸೈಕಲ್ ತುಳಿದು ಗ್ರಾಮಾಂತರ ಪ್ರದೇಶದಲ್ಲೂ ಕಮಲದ ಬಾವುಟ ಹಾರಿಸಿದ್ದಾರೆ.
ಯಡಿಯೂರಪ್ಪನವರು ಒಂದು ಬಾರಿಯೂ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿಲ್ಲ. ಒಂದು ವೇಳೆ ಬಿಜೆಪಿಗೆ ಸ್ಪಷ್ಟ ಬಹುಮತ ಬಂದು ರಾಜ್ಯದಲ್ಲಿ ಆಡಳಿತ ನಡೆಸಿದ್ದರೆ ಅಭಿವೃದ್ಧಿಗಳ ಮಹಾಪೂರವೇ ಹರಿದುಬರುತ್ತಿತ್ತು. ಬಿಎಸ್‌ವೈ ಶಿಕಾರಿಪುರ ಹಾಗೂ ಸೊರಬವನ್ನು ನನ್ನ ಎರಡು ಕಣ್ಣಗಳು ಎಂದು ಹೇಳಿದ್ದನ್ನು ನೆನಪಿಸಿ ಸೊರಬ ತಾಲೂಕಿಗೆ ಹಾಗೂ ಶಿಕಾರಿಪುರ ತಾಲೂಕಿಗೆ ನೀರಾವರಿಗಾಗಿ ಹೋರಾಟ ಮಾಡಿ ಮೂಗೂರು ಮತ್ತು ಮೂಡಿ ಏತ ನೀರಾವರಿ ಯೋಜನೆಯನ್ನು ನಿರ್ಮಿಸುವುದರ ಮೂಲಕ ರೈತರ ಪಾಲಿಗೆ ಭಾಗ್ಯೋದಯರಾಗಿದ್ದಾರೆ. ಇದರ ಫಲವಾಗಿ ಕೆರೆಗಳಿಗೆ ನೀರು ಹಾಯಿಸಿದ್ದರಿಂದ ಇಂಥ ಬರಗಾಲದಲ್ಲೂ ಕೆರೆಗಳಲ್ಲಿ ನೀರಿದ್ದು ಪಶು ಪಕ್ಷಿಗಳು, ಜಾನುವಾರುಗಳು ದಾಹದಿಂದ ಮುಕ್ತರಾಗಲು ಸಾಧ್ಯವಾಗಿದೆ. ಬಿಜೆಪಿ ಸರ್ಕಾರ ಮಹಿಳೆಯರಿಗಾಗಿ ಉಜ್ವಲ್ ಭಾರತ್ ಯೋಜನೆ, ಭಾಗ್ಯಲಕ್ಷ್ಮಿ, ಸ್ವ ಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಮಹಿಳೆಯರನ್ನು ಸಬಲೀಕರಣಗೊಳಿಸಿದೆ.
ಈಗಾಗಲೇ ಕೇಂದ್ರ ಹಾಗೂ ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಜಿಲ್ಲೆಗೆ ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜು, ಪಶು ವೈದ್ಯಕೀಯ ಕಾಲೇಜು, ಸ್ಮಾರ್ಟ ಸಿಟಿ, ಉಡುಗಣಿ ಕ್ಷೇತ್ರದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಅಲ್ಲಮ ಪ್ರಭು ಹಾಗೂ ಅಕ್ಕಮಹಾದೇವಿಯವರ ಬೃಹತ್ ಮೂರ್ತಿಯನ್ನು ತೆರೆಯಲಾಗಿದ್ದು ಜಿಲ್ಲೆಗೆ ಕಳೆ ತಂದಿದೆ. ಶಿವಮೊಗ್ಗ-ತಡಸ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅನುಮೋದನೆ, ರೈಲ್ವೇ ಬ್ರಾಡ್‌ಗೆàಜ್, ಶಿವಮೊಗ್ಗದಿಂದ ಅಯೋಧ್ಯೆಗೆ ನೇರ ರೈಲ್ವೆ ಸಂಪರ್ಕ ಇನ್ನೂ ಹಲವಾರು ಸಾವಿರಾರು ಕೋಟಿ ರೂಗಳ ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ನೆರವು ತಂದಿದ್ದು ಜಿಲ್ಲೆ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸಲಾಗಿದೆ.
ಜಿಲ್ಲೆಯ ಸಚಿವರೊಬ್ಬರು ನನ್ನ ಹಾಗೂ ಯಡಿಯೂರಪ್ಪರವರ ಬಗ್ಗೆ ಹಗುರವಾದ ಮಾತುಗಳನ್ನಾಡುತ್ತಿರುವುದು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಚೇಲಾಗಳು ಎಂದು ಸಂಬೋಧಿಸಿರುವುದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಸಂಸ್ಕಾರಯುತವಾಗಿ ಬೆಳೆದಿರುವ ನಾನು ಅವರು ಮಾತನಾಡುವ ಭಾಷೆ ಮಟ್ಟಿಗೆ ಇಳಿಯಲಾರೆ. ಮುಂದಿನ ದಿನಗಳಲ್ಲಿ ಇದೇ ರೀತಿ ನಾಲಿಗೆಯನ್ನು ಹರಿ ಬಿಟ್ಟರೆ ಜಿಲ್ಲೆಯ ಜನತೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏ. 18ರಂದು ಶಿವಮೊಗ್ಗದಲ್ಲಿ ನಾನು ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿನಂತಿಸಿದರು.
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಬಿಜೆಪಿ ಸರ್ಕಾರವಿದ್ದಾಗ ಶಾಲಾ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಸೈಕಲ್‌ಗಳನ್ನು ವಿತರಿಸಲಾಗುತ್ತಿತ್ತು. ಆದರೆ ಈಗ ಬಸ್‌ನ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲಾಗುತ್ತಿಲ್ಲವೆಂದು ಬೇಸರ
ವ್ಯಕ್ತಪಡಿಸಿದರು. ಹೊಳಿಯಮ್ಮ ಈಶ್ವರ ಚನ್ನಪಟ್ಟಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷರಾದ ಟಿ.ಡಿ. ಮೇಘರಾಜ, ತಾಲೂಕು ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಜಿಲ್ಲಾ ಮಹಿಳಾ ಅಧ್ಯಕ್ಷೆ ಗಾಯಿತ್ರಿ ಮಲ್ಲಪ್ಪ, ಉಪಾಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಸುಧಾ ಶಿವಪ್ರಸಾದ್, ಕಸ್ತೂರಿ ಪೂಂಜಾ, ಕುಸುಮಾ ಪಾಟೀಲ್, ಶಿಲ್ಪಾ ರವಿ, ಸುಧಾ ಸೋಮಶೇಖರ್, ಗೌರಮ್ಮ ಭಂಡಾರಿ, ಮಮತಾ ಪಾಟೀಲ್, ಮನಸ್ವಿನಿ, ಪ್ರಕಾಶ್ ಅಗಸನಹಳ್ಳಿ, ಕೊಟ್ರೇಶ್ ಸ್ವಾಮಿ, ಶಿವನ ಗೌಡ, ಭಾರಂಗಿ ಬಸಣ್ಣ ಮಲ್ಲಿಕಾರ್ಜುನ ಗುತ್ತೇರ, ಎ.ಎಲ್. ಅರವಿಂದ, ರಾಜು ಬಡಗಿ, ಕೆ.ಶಿವಪ್ರಸಾದ್, ಶಿವರಾಜ್, ಕೆರಿಯಪ್ಪ, ಮಂಜಣ್ಣ ಲಕ್ಕವಳ್ಳಿ ಇನ್ನೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.