
ಮಾಜಿ ಸೈನಿಕರಿಗೆ ಜಮೀನು-ನಿವೇಶನ ನೀಡಿ
Team Udayavani, Dec 9, 2021, 2:16 PM IST

ಬಳ್ಳಾರಿ: ಸರ್ಕಾರದ ಆದೇಶದಂತೆ ಮಾಜಿಸೈನಿಕರಿಗೆ ಕೃಷಿ ಚಟುವಟಿಕೆಗೆ ಜಮೀನು,ನಿವೇಶನ ನೀಡಬೇಕು ಎಂದು ಮಾಜಿಸೈನಿಕ ಮಲ್ಲಪ್ಪ ಚಂದರಗಿ ಜಿಲ್ಲಾಡಳಿತವನ್ನುಒತ್ತಾಯಿಸಿದರು.ನಗರದ ಪತ್ರಿಕಾ ಭವನದಲ್ಲಿ ಬುಧವಾರ ಕುಟುಂಬದ ಸದಸ್ಯರೊಡನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಸಂಡೂರು ತಾಲೂಕಿನತಾಳೂರು ಗ್ರಾಮದ ನಾನು (ಮಲ್ಲಪ್ಪಚಂದರಗಿ) ಭಾರತೀಯ ಸೈನ್ಯದಲ್ಲಿ 7 ವರ್ಷ,ನಿವೃತ್ತಿಯಾಗಿದ್ದೇನೆ.
ಮಾಜಿ ಸೈನಿಕರಿಗೆ ಕೃಷಿಚಟುವಟಿಕೆಗೆ ಜಮೀನು ನೀಡಲು ಸರ್ಕಾರಿಆದೇಶವಿದೆ. ಆದರೆ, ಈ ವಿಷಯದಲ್ಲಿಮಾಜಿ ಸೈನಿಕರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೃಷಿ ಚಟುವಟಿಕೆಗಾಗಿ ಜಮೀನು ನೀಡುವಂತೆಕಳೆದ ಏಳು ವರ್ಷಗಳಿಂದ ಗ್ರಾಮದ ಪಿಡಿಒಅವರಿಂದ ಹಿಡಿದು ಮುಖ್ಯಮಂತ್ರಿಗಳವರೆಗೆಎಲ್ಲರ ಗಮನಕ್ಕೆ ತಂದಿದ್ದೇನೆ. ಕಚೇರಿಯಿಂದಕಚೇರಿಗೆ ಅಲೆದು ಅಲೆದು ಸಾಕಾಗಿದೆ.
ಆದರೆ,ಯಾವೊಬ್ಬರಿಂದಲೂ ಮಾಜಿ ಸೈನಿಕನಾದನನಗೆ ನ್ಯಾಯ ಸಿಕ್ಕಿಲ್ಲ. ಸರ್ಕಾರಿ ಅಧಿ ಕಾರಿಗಳು,ರಾಜಕೀಯ ನಾಯಕರಿಂದಲೂ ಯಾವುದೇಪರಿಹಾರ ಸಿಗುವ, ಕೊಡಿಸುವ ಭರವಸೆಯೂಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈವರೆಗೂ ಬಾಡಿಗೆ ಮನೆಯಲ್ಲೆ ಜೀವನಸಾಗಿಸುತ್ತಿದ್ದೇನೆ. ಇದರ ಜತೆ ಎಂಟು ಜನಮಕ್ಕಳು, ಮೊಮ್ಮಕ್ಕಳು ಇದ್ದಾರೆ.
ಇನ್ನದರೂಜಿಲ್ಲಾಧಿ ಕಾರಿಗಳು ನಮ್ಮ ಕಡೆ ಗಮನವಹಿಸಿಕೃಷಿ ಭೂಮಿಯ ಹಕ್ಕು ಪತ್ರವನ್ನು ನೀಡಿದರೇಕೃಷಿ ಚಟುವಟಿಕೆ ಆರಂಭಸಿ ಬದುಕುಕಟ್ಟಿಕೊಳ್ಳುತ್ತೇವೆ ಎಂದು ಅಳಲು ತೋಡಿಕೊಂಡಅವರು, ನನ್ನದು ವೃದ್ಧಾಪ್ಯದ ಬದುಕು.ದುಡಿಯಲು ಶಕ್ತಿಯಿಲ್ಲದಂತಾಗಿದೆ. ಮಕ್ಕಳಿಗೂಕಾಯಂ ಕೆಲಸವಿಲ್ಲದೆ ಬದುಕು ಕಷ್ಟವಾಗಿದೆ.ಹಾಗಾಗಿ ನನ್ನ ಸಾವಿನ ಇತಿಹಾಸದಿಂದಾದರೂಮುಂಬರುವ ದಿನಗಳಲ್ಲಿ ನಮ್ಮ ಸಹೋದ್ಯೋಗಿಸೈನಿಕರಿಗೆ ನ್ಯಾಯ ದೊರೆಯಬಹುದೇನೋಎಂದು ನೋವಿನಿಂದ ನುಡಿದರು.
ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಅವರಲ್ಲಿ ನನಗೆ ನ್ಯಾಯ ಒದಗಿಸಿ ಕೊಡಿ ಎಂದುಮತ್ತೂಮ್ಮೆ ಮನವಿ ಮಾಡುತ್ತೇನೆ ಎಂದರು.ಸುದ್ದಿಗೋಷ್ಠಿಯಲ್ಲಿ ಕುಟುಂಬ ಸದಸ್ಯರಾದಭೀಮಣ್ಣ, ರಾಜೇಶ್ವರಿ, ರುದ್ರೇಗೌಡ, ರುದ್ರಮ್ಮ,ಆಶ್ವಿನಿ, ಎಂ. ಕವಿತ, ತಿಪ್ಪೇಸ್ವಾಮಿ ಇತರರಿದ್ದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ

Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ

Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.