ಶಾಲಾ-ಕಾಲೇಜು ಓಪನ್: ಡಿಸಿ ಮಾಲಪಾಟಿ
Team Udayavani, Jan 23, 2022, 8:15 PM IST
ಬಳ್ಳಾರಿ: ಗಣಿನಾಡು ಬಳ್ಳಾರಿ, ಸಂಡೂರುತಾಲೂಕುಗಳಲ್ಲಿ ದಿನೇದಿನೆ ಹೆಚ್ಚುತ್ತಿದ್ದ ಕೋವಿಡ್‌ಸೋಂಕು ಮೂರನೇ ಅಲೆಯನ್ನು ನಿಯಂತ್ರಿಸಲುವೀಕೆಂಡ್ ಕರ್ಫ್ಯೂ, ಶಾಲಾ-ಕಾಲೇಜುಗಳಬಂದ್ ಮಾಡಿ ಹೊರಡಿಸಲಾಗಿದ್ದ ಆದೇಶವನ್ನುರದ್ದುಗೊಳಿಸಿರುವ ಜಿಲ್ಲಾ ಧಿಕಾರಿ ಪವನ್‌ಕುಮಾರ್‌ಮಾಲಪಾಟಿ, ಕೆಲವೊಂದು ನಿಯಮಗಳನ್ನುಬದಲಾವಣೆ ಮಾಡಿ ಶುಕ್ರವಾರ ರಾತ್ರಿ ಹೊಸದಾಗಿಮರು ಆದೇಶ ಹೊರಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಸೋಂಕುಪ್ರಕರಣಗಳ ಸಂಖ್ಯೆ ಗಣನೀಯವಾಗಿಏರಿಕೆಯಾಗುತ್ತಿದ್ದರೂ, ಕಳೆದ ವರ್ಷ 2ನೇಅಲೆಯಲ್ಲಿ ವರದಿಯಾಗಿದ್ದ ಸಾವಿನ ಸಂಖ್ಯೆ,ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಗೆ ಹೋಲಿಸಿದಲ್ಲಿಪ್ರಸಕ್ತ 3ನೇ ಅಲೆಯಲ್ಲಿ ಸಾವಿನ ಸಂಖ್ಯೆ, ಆಸ್ಪತ್ರೆಗೆದಾಖಲಾಗುವವರ ಸಂಖ್ಯೆ ತೀರಾ ಕಡಿಮೆಯಾಗಿದೆ.ಪರಿಣಾಮ ರಾಜ್ಯ ಸರ್ಕಾರದ ನಿರ್ದೇಶನದಂತೆಬಳ್ಳಾರಿ ಜಿಲ್ಲೆಯ ಸಾರ್ವಜನಿಕರಹಿತದೃಷ್ಟಿಯಿಂದ ಹಿಂದಿನ ಆದೇಶದಲ್ಲಿಜಾರಿಗೊಳಿಸಲಾಗಿದ್ದ ಕೋವಿಡ್ ನಿಯಂತ್ರಣಕ್ರಮಗಳಲ್ಲಿ ಕೆಲವೊಂದು ಬದಲಾವಣೆಮಾಡಿ ಜ.31ರವರೆಗೆ ಕಟ್ಟುನಿಟ್ಟಾಗಿಜಾರಿಗೊಳಿಸುವಂತೆ ಹೊಸದಾಗಿಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 10ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆವಿ ಧಿಸಲಾಗಿದ್ದ ವೀಕೆಂಡ್ ಕರ್ಫ್ಯೂನ್ನು ರದ್ದುಗೊಳಿಸಿ,ಎಲ್ಲ ದಿನಗಳಲ್ಲೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ5 ಗಂಟೆವರೆಗೆ ಮುಂದುವರೆಸಿ ಜ.31ರವರೆಗೆಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದಾರೆ. ಜಿಲ್ಲೆಯ ಎಲ್ಲತರಹದ ಪ್ರಾರ್ಥನಾ ಮಂದಿರಗಳಾದ ದೇವಸ್ಥಾನ,ಮಸೀದಿಗಳು, ಚರ್ಚ್‌ಗಳು, ಜೈನ್ ಮಂದಿರಇತ್ಯಾದಿಗಳಲ್ಲಿ ಕೇವಲ ದರ್ಶನಕ್ಕೆ ಮಾತ್ರಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಸೇವೆ,ವಿಶೇಷ ಪೂಜೆಗಳನ್ನು ಮಾಡುವುದನ್ನುಸಂಪೂರ್ಣವಾಗಿ ನಿಷೇ ಧಿಸಲಾಗಿದೆ. ನಿರ್ದಿಷ್ಟಸಮಯದಲ್ಲಿ ಪೂರ್ಣಪ್ರಮಾಣದ ಕೋವಿಡ್‌ಲಸಿಕೆ ಪಡೆದಿರುವ 50 ಜನರು ಮಾತ್ರಕೋವಿಡ್ ಸಮುಚಿತ ವರ್ತನೆಗಳನ್ನು ಪಾಲಿಸುವಷರತ್ತಿಗೆ ಒಳಪಟ್ಟು ಅನುಮತಿ ನೀಡಲಾಗಿದೆ ಎಂದುತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Davanagere: ಮುಂಬರುವ ಫೆಬ್ರವರಿಯಲ್ಲಿ ಬಿಎಸ್‌ವೈ ಜನ್ಮದಿನ ಅದ್ಧೂರಿ ಆಚರಣೆ: ರೇಣುಕಾಚಾರ್ಯ
BJP ವಿಜಯೇಂದ್ರ ಪರ ಬಣದ ಮಹತ್ವದ ಸಭೆ ; ಯಾರ‍್ಯಾರು ಭಾಗಿ ..?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.