ಸಮಾಜ ಒಡೆದರೆ ಬಸವಣ್ಣನಿಗೆ ಅಪಚಾರ
Team Udayavani, Jun 17, 2017, 1:44 PM IST
ದಾವಣಗೆರೆ: ಜಾತಿ ಹೆಸರಲ್ಲಿ ಕೋಮುವಾದದ ಮೂಲಕ ಸಮಾಜ ಒಡೆಯುವಂತಹ ಕೆಲಸ ಬಸವಣ್ಣನವರಿಗೆ ಮಾಡುವ ಅಪಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪನವರ 87ನೇ ಜನ್ಮದಿನ ಅಂಗವಾಗಿ ಶುಕ್ರವಾರ ಶ್ರೀ ಡಾ| ಶಾಮನೂರು ಶಿವಶಂಕರಪ್ಪ ಅಭಿಮಾನಿಗಳ ಬಳಗ ಆಯೋಜಿಸಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಬಸವಣ್ಣನವರ ಹೆಸರು ಹೇಳಿದರೆ ಸಾಲದು. ಅವರು ಬಸವಣ್ಣ ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗಬೇಕು. ಅದುವೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು. ರಾಜ್ಯ ಸರ್ಕಾರ ಎಲ್ಲರ ಅಭಿವೃದ್ಧಿ… ಎಂಬ ತತ್ವದೊಂದಿಗೆ ಬಜೆಟ್‌ನಲ್ಲಿ ಸರ್ವ ಜಾತಿ, ವರ್ಗದವರಿಗೆ ಸಮಾನ ಆದ್ಯತೆ ನೀಡುತ್ತಿದೆ. ಎಲ್ಲರಿಗೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ವಾತಂತ್ರÂ ದೊರೆಯುವ ದಿಕ್ಕಿನಲ್ಲಿ ಮುನ್ನಡೆಯುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದರು.
ಬಸವಣ್ಣನವರು ವಿಶ್ವಗುರು. ಬಸವಣ್ಣನವರು ಬ್ರಾಹ್ಮಣ ಸಮಾಜದಲ್ಲಿ ಜನಿಸಿದ್ದರೂ ಅವರು ಯಾವುದೇ ಜಾತಿ, ವರ್ಗಕ್ಕೆ ಸೀಮಿತವಾದವರಲ್ಲ. ಜಾತಿ, ವರ್ಗರಹಿತ ಮಾದರಿ ಸಮಾಜ ಕಟ್ಟಬೇಕು ಎಂಬುದನ್ನು ಬಯಸಿದ್ದರು. ನಮ್ಮ ಸರ್ಕಾರ ಸಹ ಬಸವಣ್ಣನವರ ತತ್ವ, ಆದರ್ಶ, ಮೌಲ್ಯಗಳ ಹಾದಿಯಲ್ಲಿ ಸಾಗುತ್ತಿದೆ. ಬಸವಣ್ಣ, ಅಂಬೇಡ್ಕರ್, ಗಾಂಧೀಜಿಯವರ ಸಮ ಸಮಾಜ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ಸವಣ್ಣನವರು ಇವನಾರವ… ಇವನಾರವ… ಎಂದೆನೆಸಿದರಯ್ಯ…. ಇವ ನಮ್ಮವ… ಇವ ನಮ್ಮವ… ಎನ್ನುವ ಸಂದೇಶದಂತೆ ನಮ್ಮ ಸರ್ಕಾರ ಸಹ ಎಲ್ಲರನ್ನೂ ನಮ್ಮವರೇ ಎಂಬ ಭಾವನೆಯೊಂದಿಗೆ ಕೆಲಸ ಮಾಡುತ್ತಿದೆ. ಎಲ್ಲ ಜಾತಿ, ವರ್ಗದ ಬಡವರು, ರೈತರು, ಮಹಿಳೆಯರಿಗೆ ನ್ಯಾಯ ದೊರೆತಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಪ್ರತಿಪಾದಿಸಿದರು.
ಕನಿಷ್ಟ 125 ವರ್ಷ ಬಾಳಲಿ…
ಮಹಾತ್ಮಗಾಂಧೀಜಿಯವರಿಗೆ ಅವರ ಅಭಿಮಾನಿಯೊಬ್ಬ 100 ವರ್ಷ ಬಾಳುವಂತೆ ಆಶಿಸಿ ಪತ್ರ ಬರೆದಿದ್ದಕ್ಕೆ ಪ್ರತಿಯಾಗಿ ಗಾಂಧೀಜಿಯವರು ತಾವು ಕನಿಷ್ಠ 125 ವರ್ಷ ಬಾಳಲು ಬಯಸಿರುವುದಾಗಿ ಮರು ಪತ್ರ ಬರೆದಿದ್ದರಂತೆ. ಶಾಸಕ ಶಾಮನೂರು ಶಿವಶಂಕರಪ್ಪನವರು ಸಹ ಇಷ್ಟೇ ವರ್ಷ ಬಾಳಲಿ ಎಂದು ನಾನು ಹೇಳುವುದಿಲ್ಲ. ಕನಿಷ್ಟ 125 ವರ್ಷ ಬಾಳಲಿ. ಅಲ್ಲಿಯವರೆಗೆ ಆರೋಗ್ಯದಿಂದ ಇರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಿಸಿದರು.
ಬರೀ ದುಡ್ಡಿದ್ರೆ ಜನ ಬರೋಲ್ಲ
ಶಾಮನೂರು ಶಿವಶಂಕರಪ್ಪ ಮಾನವೀಯತೆ, ಸರಳ, ಸಜ್ಜನಿಕೆಯ ಜೀವನ ನಡೆಸಿದ್ದರಿಂದಲೇ ಇಡೀ ದಾವಣಗೆರೆ ಜನರ ಪೀÅತಿ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾನು ಬಹುದಿನಗಳಿಂದ ಶಾಮನೂರು ಅವರ ಒಡನಾಟದಲ್ಲಿದ್ದೇನೆ. ಅವರು ನನಗೆ ಉತ್ತಮ ಮಾರ್ಗದರ್ಶಕರು. ಕೇವಲ ದುಡ್ಡಿದ್ದರೆ ಜನ ಬರುವುದಿಲ್ಲ. ಡೊನಾಲ್ಡ್ ಟ್ರಂಪ್, ಬಿಲ್ ಗೇಟ್ಸ್ ಬಳಿ ದುಡಿದೆ ಅಂದಾಕ್ಷಣ ಜನ ಅವರ ಹಿಂದೆ ಹೋಗಲ್ಲ. ಆದರೆ, ಸಜ್ಜನಿಕೆ, ಸಹೋದರತೆ ಮನೋಭಾವ ಇದ್ದಾಗ ಮಾತ್ರ ಜನ ಬರ್ತಾರೆ. ಶಾಮನೂರು ಶಿವಶಂಕರಪ್ಪ ಇದಕ್ಕೆ ಸೂಕ್ತ ಉದಾರಹರಣೆ. ಅವರಿಗೆ ಬೆನ್ನುಲುಬಾಗಿ ಅವರ ಮಕ್ಕಳು ನಿಂತಿದ್ದಾರೆ. ಅವರ ಎಲ್ಲಾ ಮಕ್ಕಳನ್ನು ನಾನು ಬಲ್ಲೆ, ಎಲ್ಲರೂ ಸಹ ಸಜ್ಜನರು.
-ಅಂಬರೀಷ್, ಚಿತ್ರನಟ, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ
Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Bengaluru: 54 ಪಾಲಿಕೆ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.