ವಿಶ್ವಶಾಂತಿಗೆ ಬಸವಣ್ಣ ಮತ್ತೆ ಹುಟ್ಟಿ ಬರಬೇಕಿದೆ
Team Udayavani, Apr 30, 2017, 12:44 PM IST
ದಾವಣಗೆರೆ: ಪ್ರಸ್ತುತ ಕಾಲಮಾನ 12ನೇ ಶತಮಾನಕ್ಕಿಂತಲೂ ಹೀನವಾಗಿದ್ದು, ಇದನ್ನು ಸರಿಪಡಿಸಲು ಸಮಾಜ ಸುಧಾರಕ ಬಸವಣ್ಣ ಮತ್ತೆ ಹುಟ್ಟಿ ಬರಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಟಾರ್ ಅಭಿಪ್ರಾಯಪಟ್ಟರು. ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಜಗತ್ತಿನ ಸ್ಥಿತಿಗತಿ 12ನೇ ಶತಮಾನಕ್ಕಿಂತ ಕಡಿಮೆ ಇಲ್ಲ. ಪ್ರಪಂಚದ ಎಲ್ಲೂ ಈಗ ಶಾಂತಿ ಇಲ್ಲ. ಶಾಂತಿ ನೆಲೆಸಲು ಮತ್ತೆ ಬಸವಣ್ಣನವರು ಹುಟ್ಟಿ ಬರಬೇಕಿದೆ ಎಂದರು. ನಮ್ಮ ಸಮಾಜದಲ್ಲಿ ದೊಡ್ಡ ಅನಾಹುತಗಳು ಘಟಿಸುತ್ತಿವೆ. ಇಲ್ಲಿ ಲಂಚ ಕೊಡುವುದು ಮತ್ತು ಪಡೆಯುವುದು ಎರಡೂ ಹೇಯ ಕೃತ್ಯವೆಂದು ಎಲ್ಲರೂ ಅರಿಯಬೇಕು.
ಸಮಾಜವನ್ನೇ ಭ್ರಷ್ಟವಾಗಿಸಿದ್ದೇವೆ ಎಂದ ಅವರು, ಬಸವಣ್ಣ ಹೇಳಿದಂತೆ ಕಾಯಕವೇ ಕೈಲಾಸವೆಂಬುದನ್ನು ನಾವು ಅರಿಯಬೇಕು. ಎಲ್ಲರೂ ತಮ್ಮ ಕೆಲಸ ಪ್ರಾಮಾಣಿಕವಾಗಿ ಮಾಡಿದರೆ ಬಸವಣ್ಣನವರ ಆಶಯದ ಸಮ ಸಮಾಜ ನಿರ್ಮಾಣ ಆಗುತ್ತದೆ ಎಂದು ಆವರು ತಿಳಿಸಿದರು. ಬಸವತತ್ವದ ಆಧಾರದ ಮೇಲೆ ನಾವು ಜೀವನ ನಡೆಸಿದರೆ ಯಾವುದೇ ದೊಂಬಿ-ಗಲಭೆ ನಡೆಯುವುದಿಲ್ಲ.
ಅಂತಹ ಮಹಾನ್ ತತ್ವಗಳನ್ನು ಸಾರಿದ ಬಸವಣ್ಣ ನಮ್ಮ ನಾಡಿನಲ್ಲಿ ಜನಿಸಿದ್ದು ನಮ್ಮ ಪುಣ್ಯ. ಬಸವಣ್ಣನವರ ಹಾದಿಯೇನು ಸುಗಮವಾಗಿರಲಿಲ್ಲ. ಹಲವಾರು ಕಷ್ಟ ಅನುಭವಿಸಿದರು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗೋಣ ಅವರು ಹೇಳಿದರು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ಕಾಯಕವೇ ಕೈಲಾಸ. ಮಾತನಾಡುವುದಕ್ಕಿಂತ ಕೆಲಸ ಮಾಡಬೇಕು.
ಇದೇ ಬಸವ ತತ್ವ. ಅಂದಿನ ಅನುಭವ ಮಂಟಪ ಹೆಸರೇ ಸೂಚಿಸುವಂತೆ ಅದು ಅನುಭವದ ಹಿನ್ನೆಲೆಯಲ್ಲಿನ ಚರ್ಚೆಗೆ ವೇದಿಕೆಯಾಗಿತ್ತು. ಆದ್ದರಿಂದಲೇ ಅನುಭವದ ಸಾರ ಮತ್ತು ಸತ್ಯದಿಂದ ಹೊರಹೊಮ್ಮಿದ ವಚನಗಳಿಗೆ ಜಗತ್ತನ್ನೇ ತನ್ನೆಡೆ ಸೆಳೆಯುವ ಶಕ್ತಿ ಇದೆ ಎಂದರು.
ಬುದ್ಧ, ಮಹಾವೀರ, ಏಸುಕ್ರಿಸ್ತ, ಪೈಗಂಬರ್ ಯಾರೇ ಮಹಾನ್ ಪುರುಷರನ್ನು ತೆಗೆದುಕೊಂಡರೂ ಆಯಾ ಕಾಲಘಟ್ಟದ ಒಬ್ಬರನ್ನು ಹೆಸರಿಸುತ್ತೇವೆ. ಆದರೆ 12ನೇ ಶತಮಾನವೆಂದರೆ ಶರಣ ಬಸವಾದಿ ಪ್ರಮಥರು ಎನ್ನುತ್ತೇವೆ. ಅಂದರೆ ಅಲ್ಲಿ ಒಬ್ಬ ನಾಯಕ ಅಥವಾ ಮಹಾನ್ ಪುರುಷರಿರಲಿಲ್ಲ. ಬದಲಾಗಿ ಬಸವಣ್ಣ ತಮ್ಮೊಟ್ಟಿಗೆ ಇಡೀ ಸಮಾಜವನ್ನು ಕೊಂಡೊಯ್ದರು.
ಚನ್ನಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ ಹೀಗೆ ಬಡವ-ಬಲ್ಲಿದ, ಹೆಣ್ಣು-ಗಂಡು ಎನ್ನದೇ ಎಲ್ಲರೂ ಒಂದೇ ರೀತಿ ಆಲೋಚಿಸುವಂತೆ ಮಾಡಿದ ಬಸವಣ್ಣನವರಿಗೆ ಅಗಾಧ ಶಕ್ತಿ ಇತ್ತು ಎಂದು ಅವರು ತಿಳಿಸಿದರು. ಚಿತ್ರದುರ್ಗದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಪಿ. ರುದ್ರಪ್ಪ ಉಪನ್ಯಾಸ ನೀಡಿ, 12ನೇ ಶತಮಾನದಲ್ಲಿ ಚಾತುರ್ವರ್ಣ ಧರ್ಮ ಆಚರಣೆಯಲ್ಲಿತ್ತು.
ಕೆಳವರ್ಗದರಿಗೆ ಶಿಕ್ಷಣ, ಧಾರ್ಮಿಕ ಸ್ವಾತಂತ್ರ ಇರಲಿಲ್ಲ. ಅದರಲ್ಲೂ ಜನಸಂಖ್ಯೆಯ ಅರ್ಧದಷ್ಟಿದ್ದ ಮಹಿಳೆಗೆ ಶಿಕ್ಷಣ, ಧರ್ಮದ ಹಕ್ಕುಗಳಿರಲಿಲ್ಲ. ಮುಂದುವರೆದ ರಾಷ್ಟ್ರಗಳಲ್ಲಿಯೂ 18ನೇ ಶತಮಾನದವರೆಗೆ ಮಹಿಳೆಗೆ ಶಿಕ್ಷಣ, ಧಾರ್ಮಿಕ ಸ್ವಾತಂತ್ರವಿರಲಿಲ್ಲ. ಆದರೆ ಬಸವಾದಿ ಶರಣರು 12ನೇ ಶತಮಾನದಲ್ಲೇ ಈ ಬಗ್ಗೆ ಹೋರಾಟ ನಡೆಸಿ 33 ಮೌಲ್ಯಯುತ ವಚನಗಾರ್ತಿಯರನ್ನು ನಾಡಿಗೆ ನೀಡಿದ್ದರು.
ಕನ್ನಡ ಸಾಹಿತ್ಯ ಶ್ರೀಮಂತವಾಗಿದ್ದರೆ ಅದು ಬಸವಾದಿ ಶರಣರ ವಚನಗಳಿಂದ. ಆದರೆ ಬಸವಣ್ಣನವರನ್ನು ಒಂದು ಜಾತಿ ಮತ್ತು ಧರ್ಮಕ್ಕೆ ಸೀಮತಿಗೊಳಿಸುತ್ತಿರುವುದು ಸರಿಯಲ್ಲ ಎಂದರು. ಮೇಯರ್ ಅನಿತಾಬಾಯಿ ಮಾತನಾಡಿ, ಶರಣ ಬಸವಣ್ಣನವರು ಯಾವುದೇ ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ. ಬದಲಾಗಿ ಅವರು ಎಲ್ಲರ ಸ್ವತ್ತು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಉಪ ಮೇಯರ್ ಮಂಜುಳಮ್ಮ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಸಂತೋಷಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಂಜುನಾಥ ಕುರ್ಕಿ ವೇದಿಕೆಯಲ್ಲಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತರಲಾದ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.