ಬಸವಣ್ಣ ಓರ್ವ ವಿಸ್ಮಯ ವ್ಯಕ್ತಿಯಾಗಿದ್ದರು
Team Udayavani, Apr 24, 2017, 1:16 PM IST
ದಾವಣಗೆರೆ: ಬಸವಣ್ಣ ಎಂದರೆ ವಿಸ್ಮಯ ವ್ಯಕ್ತಿ. 12ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಿಸಿ, ಕ್ರಾಂತಿ ಮಾಡಿದರು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ವಿರಕ್ತ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಭಾತ್ ಪೇರಿ ಶತಮಾನೋತ್ಸವಕ್ಕೆ ಚಾಲನೆನೀಡಿ ಮಾತನಾಡಿದರು.
ಬಸವಣ್ಣನವರ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಕಾಯಕ ದಿನಾವನ್ನಾಗಿ ಆಚರಣೆ ಮಾಡುವುದರ ಜೊತೆಗೆ ಆ ದಿನದ ರಜೆಯನ್ನು ರದ್ದುಮಾಡಿ ಒಂದು ಗಂಟೆ ಹೆಚ್ಚು ಕಾಲ ಕಾಯಕ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕೆಂದು ಎಂದರು. ವಿವಿಧ ಮಹಾತ್ಮರ ಜಯಂತಿ ಹೆಸರಿನಲ್ಲಿ ಸರ್ಕಾರ ರಜೆ ಘೋಷಿಸಿ, ಕಾಯಕಕ್ಕೆ ಇರುವ ಮಹತ್ವವನ್ನು ಹಾಳು ಮಾಡುತ್ತಿದೆ.
ಇದರಿಂದ ದೇಶದ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ ಎಂದು ವಿಷಾದಿಸಿದರು. ಬಸವಣ್ಣನ ತತ್ವಗಳು ಎಂದರೆ ಕೇವಲ ಒಂದು ಸಮಾಜದ, ರಾಜ್ಯದ, ದೇಶದ ಉದ್ದಾರಕ್ಕಾಗಿ ಇಲ್ಲ. ಅವು ವಿಶ್ವದ ಉದ್ಧಾರಕ್ಕೆ ಸಂಬಂಧಿಸಿದ್ದರಿಂದ ಈ ಬಗ್ಗೆ ಪ್ರಮುಖವಾದ ಹೆಜ್ಜೆಯನ್ನಿಟ್ಟು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಸವಣ್ಣನವರ ಜಯಂತಿ ಆಚರಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಒತ್ತಡ ತರಬೇಕು ಎಂದು ತಿಳಿಸಿದರು.
ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಅಂದರೆ 1913ರಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಿದ ಕೀರ್ತಿ ದಾವಣಗೆರೆಯ ವಿರಕ್ತಮಠಕ್ಕೆ ಸಲ್ಲುತ್ತದೆ. ಅದೇ ರೀತಿಯಾಗಿ ಇದೇ ಮಠದಿಂದ 1917ರಲ್ಲಿ ಶ್ರೀ ಮೃತ್ಯುಂಜಯ ಅಪ್ಪಗಳು, ಹಡೇìಕರ್ ಮಂಜಪ್ಪನವರು ಬಸವ ಪ್ರಭಾತ್ ಫೇರಿಯನ್ನು ಪ್ರಾರಂಭಿಸಿದರು.
ನಂತರ ಚಿತ್ರದುರ್ಗ ಜಗದ್ಗುರುಗಳ ಅಪ್ಪಣೆಯಂತೆ ಕಣಕುಪ್ಪಿ ಕೊಟ್ರಬಸಪ್ಪ, ಗುರುಪಾದಪ್ಪನವರು ಯಶಸ್ವಿಯಾಗಿ ನಡೆಸಿಕೊಂಡು ಬಂದರು. ಈಗ ನೂರು ವರ್ಷಗಳು ಸಂದಿವೆ ಎಂದು ಸ್ಮರಿಸಿದರು. ಚಿತ್ರದುರ್ಗ ಮೇದಾರ ಕೇತೇಶ್ವರ ಮಠದ ಶ್ರೀ ಬಸವ ಕೇತೇಶ್ವರ ಹಣಮಂತಯ್ಯ ಸ್ವಾಮೀಜಿ, ಮುಖಂಡರಾದ ಕಣಕುಪ್ಪಿ ಮುರುಗೇಶಪ್ಪ,
ಬೂಸನೂರು ಗುರುಬಸಪ್ಪ, ಚಿತ್ರನಟ ಜ್ಯೂನಿಯರ್ ನರಸಿಂಹರಾಜ್, ಎಂ.ಜಯಕುಮಾರ್, ಪಲ್ಲಾಗಟ್ಟಿ ಕೊಟ್ರೇಶಪ್ಪ, ಬಾಳೆಕಾಯಿ ಮುರಿಗೇಶ, ಬಾವಿಕಟ್ಟಿ ಜಗದೀಶ, ಶಾಂತಕುಮಾರ ಸೋಗಿ, ಬಿ.ಎಸ್.ಹಿರೇಮಠ, ಮೈಸೂರು ಮಠದ ಮುಪ್ಪಯ್ಯ, ಎಂ.ಕೆ.ಬಕ್ಕಪ್ಪ, ತಿಪ್ಪಣ್ಣ, ವೀರೇಶ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.