ಬಸವಣ್ಣನ ಚಿಂತನೆ ಪುಸ್ತಕಕ್ಕೆ ಸೀಮಿತವಾಗದಿರಲಿ: ಶಶಿಕಲಾ
Team Udayavani, Jun 17, 2017, 1:44 PM IST
ಚನ್ನಗಿರಿ: ಬಡವರು-ಶೋಷಿತರ ಪರವಾಗಿ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ಬಸವಣ್ಣವರ ಪರಿಕಲ್ಪನೆಗಳು ಪ್ರಸ್ತುತ ಸಮಾಜದಲ್ಲಿ ಜೀವಂತವಾಗಿ ಉಳಿದಿಲ್ಲ. ಕೇವಲ ಪುಸ್ತಕ-ಸಾರ್ವಜನಿಕ ಭಾಷಣಗಳಲ್ಲಿ ಮಾತ್ರ ಸೀಮಿತವಾಗುತ್ತಿದೆ ಎಂದು ಸಮಾಜ ಸೇವಕಿ ನಲ್ಕುದುರೆ ಎಂ.ಜಿ ಶಶಿಕಲಾ ವಿಷಾದ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ನಲ್ಕುದುರೆ ಗ್ರಾಮದಲ್ಲಿ ಶುಕ್ರವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಿಂದ ಆಯೋಜಿಸಲಾಗಿದ್ದ ಕೆಂಪನಹಳ್ಳಿ ಕಾಕನೂರು ಲಿಂ| ಬಸಪ್ಪ ರುದ್ರಮ್ಮ ದತ್ತಿ ಉಪನ್ಯಾಸ ಹಾಗೂ ಬಸವಣ್ಣನವರ ವಚನಗಳು ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿಯೇ ಬಸವಣ್ಣವರು ಶೋಷಿತರಲ್ಲಿ ಜೀವಂತವಾಗಿದ ಮೂಢನಂಬಿಕೆ-ಶೋಷಣೆ ಹಾಗೂ ಜಾತೀಯತೆ ವಿರುದ್ಧ ಧ್ವನಿ ಎತ್ತಿದವರು.
ಆದರೆ ಇಂದು ಸಮಾಜದ ಉದ್ಧಾರಕರ ಹೆಸರಿನಲ್ಲಿ ಜಾತಿ-ಧರ್ಮದ ಹೆಸರಲ್ಲಿ ವಿಷದ ಬೀಜ ಬಿತ್ತುತ್ತಿದ್ದಾರೆ ಎಂದು ವಿಷಾದಿಸಿದರು. ಸರ್ಕಾರಿ ಇಲಾಖೆಗಳಲ್ಲಿ ಬಡವರು-ಧಿನ ದಲಿತರು ಹೋದರೆ ಮೊದಲು ನೀವು ಯಾವ ಜಾತಿಯವರು ಎಂದು ಕೇಳಿ ಕೆಲಸವನ್ನು ಮಾಡಿಕೊಡುವಂತಹ ಅನಿಷ್ಠ ಪದ್ಧತಿ ಹುಟ್ಟಿಕೊಳ್ಳುತ್ತಿದೆ.
ಸಾಮಾಜಿಕ ಬದಲಾವಣೆಯ ಕನಸ್ಸನು ಕಂಡಿದ ಬಸವಣ್ಣನವರ ಪರಿಕಲ್ಪನೆಯನ್ನು ಹುಸಿಯಾಗಿಸುತ್ತಿದ್ದೇವೆ. ರಾಜಕಾರಣಿಗಳಿಂದ ಧಾರ್ಮಿಕ ಸಭೆ ವೇದಿಕೆಗಳಲ್ಲಿ ಬಸವಣ್ಣರವರ ಆದರ್ಶದ ಭಾಷಣ ಬಿಗಿಯುತ್ತಾರೆ. ನಂತರ ವೇದಿ ಕೆಯಿಂದ ಇಳಿದ ಮೇಲೆ ಮತಗಳಿಗಾಗಿ ಜಾತಿ ಲೆಕ್ಕಚಾರದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಕಾಯಕವೇ ಕೈಲಾಸ ವೆಂಬದು ಬಸವಣ್ಣವರ ಮಹಾಮಂತ್ರವಾದರೆ, ರಾಜಕೀಯದಲ್ಲಿ ಮತದಾರರೇ ಮೂಲ ಮಂತ್ರವೆಂಬುದು ರಾಜಕಾರಣಿಗಳ ಸಂಸ್ಕೃತಿಯಾಗಿದೆ ಎಂದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಮಾತನಾಡಿ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯು ಉಚಾಯಸ್ಥಿತಿಯಲ್ಲಿದ್ದ ಅವಧಿಯಲ್ಲಿಯೇ ಜಾತಿ ಪದ್ಧತಿಯನ್ನು ತೊಲಗಿಸಲು ಹಾಗೂ ಮಹಿಳೆಯರಿಗೆ ಸಮಾನತೆ ನೀಡಲು ಶ್ರಮಿಸಿದ ದೊಡ್ಡ ದಾರ್ಶನಿಕ.
ಅವರ ಕ್ರಾಂತಿಯ ಕಿಡಿ ವಿಶ್ವಮಾನ್ಯವಾಗಿದ್ದು, ಅವರ ಮಾನವೀಯತೆ, ಮಾನವೀಯ ಸಂಬಂಧಗಳು, ಕಾಯಕವೇ ಕೈಲಾಸವೆನ್ನುವ ತತ್ವ ಚಿಂತನೆಯನ್ನು ಅಳವಡಿಕೊಂಡಲ್ಲಿ ಮಾತ್ರ ಬದುಕು ಹಸನಾಗಲಿದೆ ಎಂದರು. ಮುಖ್ಯೋಪಾಧ್ಯಾಯ ಡಿ.ಆರ್. ಹಾಲಸಿದ್ದಪ್ಪ, ಉಷಾಚನ್ನಬಸಪ್ಪ, ರುದ್ರಯ್ಯ, ಮಹೇಂದ್ರಪ್ಪ, ರಾಜಪ್ಪ, ಜಯಶ್ರೀ, ಮಂಗಳ, ಬಿ.ರಾಜಪ್ಪ ಕೆ.ಬಿ. ಸೋಮಣ್ಣ, ಜಿ.ಎಂ. ಹಾಲೇಶಪ್ಪ, ನಾಗರಜ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
Davangere: ಮಹಿಳೆಯ ಮೇಲೆ ಕರಡಿ ದಾಳಿ
Congress Govt.,: ಅಬಕಾರಿ ಡೀಲರ್‌ಗಳಿಂದ ಸರ್ಕಾರಕ್ಕೆ 900 ಕೋಟಿ ರೂ. ಸಲ್ಲಿಕೆ: ಅಶೋಕ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.